Shani Jayanti 2023: ಶನಿ ಕೋಪದಿಂದ ಮುಕ್ತರಾಗೋಕೆ ಇಲ್ಲಿದೆ ನೋಡಿ ಸುದಿನ

By Suvarna NewsFirst Published May 13, 2023, 11:04 AM IST
Highlights

ಈ ತಿಂಗಳಲ್ಲಿ ಶನಿ ಜಯಂತಿಯನ್ನು 19 ಮೇ 2023ರ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನ ಕೆಲವು ಕ್ರಮಗಳನ್ನು ಕೈಗೊಂಡರೆ ಶನಿಯ ಸಾಡೇಸಾತಿ, ಧೈಯ ಮತ್ತು ಮಹಾದಶಾದ ದುಷ್ಟ ಪರಿಣಾಮಗಳು ನಿವಾರಣೆಯಾಗುತ್ತವೆ.

ಈ ದಿನಗಳಲ್ಲಿ ನ್ಯಾಯದ ದೇವರು ಶನಿ ತನ್ನ ಮೂಲ ತ್ರಿಕೋನ ರಾಶಿ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. 2023ರ ಆರಂಭದಲ್ಲಿಯೇ, ಶನಿದೇವನು ಜನವರಿ 17ರಂದು ರಾಶಿಚಕ್ರವನ್ನು ಬದಲಾಯಿಸಿದ್ದಾನೆ. ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುವ ಅತ್ಯಂತ ನಿಧಾನಗತಿಯ ಗ್ರಹ. ಹೀಗಾಗಿ, ಒಂದೇ ರಾಶಿಗೆ ಆತ ಮತ್ತೆ ಮರಳಲು 30 ವರ್ಷಗಳು ಬೇಕು. ಆದ್ದರಿಂದ ಜ್ಯೋತಿಷ್ಯದಲ್ಲಿ ದೊಡ್ಡ ಸಂಕ್ರಮಣ ಅಂದರೆ ಶನಿಯ ರಾಶಿಚಕ್ರ ಬದಲಾವಣೆ. 

ಶನಿ ಜನವರಿಯಲ್ಲಿ ಕುಂಭ ರಾಶಿ ಪ್ರವೇಶಿಸಿದ್ದರಿಂದ ಹಲವು ರಾಶಿಗಳಿಗೆ ಶನಿಯ ಸಾಡೇಸಾತಿ, ಧೈಯ್ಯಾ ಇತ್ಯಾದಿಗಳು ಆರಂಭವಾದರೆ ಕೆಲವೆಡೆ ಮುಗಿಯಿತು. 5 ರಾಶಿಚಕ್ರ ಚಿಹ್ನೆಗಳ ಮೇಲೆ ಶನಿಯ ನಕಾರಾತ್ಮಕ ಪರಿಣಾಮಗಳು ಸಧ್ಯ ನಡೆಯುತ್ತಿವೆ. ಮಕರ, ಕುಂಭ ಮೀನ ಸಾಡೇಸಾತಿ ಅನುಭವಿಸುತ್ತಿದ್ದರೆ, ಶನಿಯ ಧೈಯವು ವೃಶ್ಚಿಕ, ಕರ್ಕ ರಾಶಿಯವರ ಮೇಲೆ ಓಡುತ್ತಿದೆ. ಈ ರಾಶಿಯವರಿಗೆ ಶನಿಯ ಕೋಪ ತಣಿಸಲು ಸುದಿನವೊಂದು ಎದುರಾಗುತ್ತಿದೆ. ಅದೇ ಶನಿ ಜಯಂತಿ. ಈ ವರ್ಷ ಶನಿ ಜಯಂತಿಯು ಯಾವಾಗ, ಆ ದಿನ ಶನಿಯ ದುಷ್ಪರಿಣಾಮ ತಗ್ಗಿಸಲು ಏನೆಲ್ಲ ಪರಿಹಾರಗಳನ್ನು ಕೈಗೊಳ್ಳಬಹುದು ಎಂಬುದನ್ನು ಇಲ್ಲಿ ಕೊಡಲಾಗಿದೆ. 

Latest Videos

ಶನಿ ಜಯಂತಿ 2023 ಶುಭ ಮುಹೂರ್ತ
ಜ್ಯೇಷ್ಠ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸುವುದು ವಾಡಿಕೆ. ಈ ಬಾರಿಯ ಜ್ಯೇಷ್ಠ ಅಮಾವಾಸ್ಯೆ ತಿಥಿಯು ಮೇ 18, 2023 ರಂದು ಬೆಳಿಗ್ಗೆ 9.42ರಿಂದ ಮೇ 19ರ ರಾತ್ರಿ 9.22 ರವರೆಗೆ ಇರುತ್ತದೆ. ಈ ದಿನ ಬೆಳಗ್ಗೆ 7.11 ರಿಂದ 10.35 ರವರೆಗೆ ಶನಿದೇವರ ಆರಾಧನೆಗೆ ಶುಭ ಮುಹೂರ್ತವಿರುತ್ತದೆ. ಮತ್ತೊಂದೆಡೆ, ಸಂಜೆ ಪೂಜೆಗೆ ರಾತ್ರಿ 5.25ರಿಂದ 7.7ರವರೆಗೆ ಉತ್ತಮ ಸಮಯ ಇರುತ್ತದೆ.

Name Astro: ಈ ಹೆಸರಿನ ಸೊಸೆಯರು ಅತ್ತೆಗೆ ಅದೃಷ್ಟ ತರ್ತಾರೆ!

ಶನಿ ಜಯಂತಿಯಂದು ಕೈಗೊಳ್ಳಬೇಕಾದ ಪರಿಹಾರ(Remedies on Shani Jayanti)
ಶನಿ ಮಹಾದಶಾ ಯಾರ ಜಾತಕದಲ್ಲಿ ಚಾಲನೆಯಲ್ಲಿದೆಯೋ ಅವರು ವಿಶೇಷವಾಗಿ ಶನಿ ಜಯಂತಿಯಂದು ಶನಿದೇವನನ್ನು ಮೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಶನಿಯ ಕೋಪ ಮತ್ತು ಸಂಕಟದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. 

ಮಕರ ರಾಶಿ(Capricorn)
ಈ ರಾಶಿಯ ಜನರು ಶನಿ ಜಯಂತಿಯಂದು 5 ಬಾರಿ ಶನಿ ಮೂಲ ಮಂತ್ರವನ್ನು ಪಠಿಸಬೇಕು. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಬರುತ್ತಿದ್ದ ಎಲ್ಲಾ ಸಮಸ್ಯೆಗಳು ದೂರವಾಗಲಿದ್ದು, ಪ್ರಗತಿಯೂ ದೊರೆಯಲಿದೆ.

ಕುಂಭ ರಾಶಿ(Aquarius)
ಕುಂಭ ರಾಶಿಯವರು ಪ್ರಸ್ತುತ ಶನಿಯ ಸಾಡೇಸಾತಿಯಲ್ಲಿ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದ್ಯೋಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಶನಿ ಜಯಂತಿಯಂದು ಕುಂಭ ರಾಶಿಯವರು ಶನಿದೇವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯಿಂದ ಶನಿಗೆ ಅಭಿಷೇಕ ಮಾಡಬೇಕು. ಒಂದು ಹಿಡಿ ಕಪ್ಪು ಎಳ್ಳನ್ನು ನೈವೇದ್ಯ ಮಾಡಬೇಕು. ನಿಮ್ಮ ತಂದೆ ತಾಯಿಯರಿಗೆ ನೀವು ಎಷ್ಟು ಹೆಚ್ಚು ಸೇವೆ ಮಾಡುತ್ತೀರೋ ಅಷ್ಟು ಶನಿಯು ನಿಮ್ಮಿಂದ ಸಂತುಷ್ಟನಾಗುತ್ತಾನೆ.

ಮೀನ ರಾಶಿ(Pisces)
ಮೀನ ರಾಶಿಯವರಿಗೆ ಮೊದಲ ಹಂತದ ಶನಿ ಸಾಡೇಸಾತಿ ನಡೆಯುತ್ತಿದ್ದು, ಇದರಿಂದ ಹಣ, ವ್ಯವಹಾರದಲ್ಲಿ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ತೊಂದರೆಗಳಿಂದ ಪರಿಹಾರವನ್ನು ಪಡೆಯಲು ಮೀನ ರಾಶಿಯ ಜನರು ಶನಿ ಜಯಂತಿಯ ದಿನ ಶನಿ ದೇವರಿಗೆ ಶಮಿ ಎಲೆಗಳನ್ನು ಅರ್ಪಿಸಿ. ಈ ದಿನ ಕಪ್ಪು ಎಳ್ಳು, ಕಪ್ಪು ಬಟ್ಟೆ, ಕಪ್ಪು ಛತ್ರಿಯನ್ನು ಕಷ್ಟದಲ್ಲಿರುವವರಿಗೆ ದಾನ ಮಾಡಿದರೆ ನಿಮಗೆ ಲಾಭವಾಗುತ್ತದೆ.

Sun Transit May 2023: ವೃಷಭ ಸಂಕ್ರಾಂತಿಯಿಂದ 4 ರಾಶಿಗಳ ಬಾಳಿನಲ್ಲಿ ಹೆಚ್ಚುವ ಸಂಭ್ರಮ

ಕರ್ಕ ಮತ್ತು ವೃಶ್ಚಿಕ ರಾಶಿ(Cancer and scorpio)
ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಶನಿ ಜಯಂತಿಯಂದು ಕಪ್ಪು ಎಳ್ಳಿನ ಉಂಡೆಗಳನ್ನು ಮಾಡಿ ಮೀನುಗಳಿಗೆ ತಿನ್ನಿಸಿ. ಅಲ್ಲದೆ, ಸಂಜೆಯ ಸಮಯದಲ್ಲಿ ಅಶ್ವತ್ಥ ಮರದ ಕೆಳಗೆ ಎಳ್ಳು ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ದೀಪವನ್ನು ಹಚ್ಚಿದ ನಂತರ ಶನಿ ಮಂತ್ರವನ್ನು 108 ಬಾರಿ ಜಪಿಸಿ. ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡ ದೂರವಾಗುತ್ತದೆ. ಇದರೊಂದಿಗೆ, ಹಣದ ನಷ್ಟದ ಸಾಧ್ಯತೆಗಳು ಸಹ ಕಡಿಮೆಯಾಗುತ್ತವೆ.

click me!