ಮನೆ ಇರಲಿ ಇಲ್ಲ ಅಂಗಡಿ ಇರಲಿ ವಾಸ್ತು ಬಹಳ ಮುಖ್ಯವಾಗುತ್ತದೆ. ಅಂಗಡಿ ಯಾವ ದಿಕ್ಕಿನಲ್ಲಿದೆ, ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದ್ರ ಮೇಲೆ ಲಾಭ, ನಷ್ಟ ನಿಂತಿರುತ್ತದೆ. ತಪ್ಪು ದಿಕ್ಕಿನಲ್ಲಿ ಅಂಗಡಿ ಇದ್ರೂ ಕೆಲ ಸಿಂಪಲ್ ಟಿಪ್ಸ್ ಪಾಲನೆ ಮಾಡಿ ನೀವು ಲಾಭ ಪಡೆಯಬಹುದು.
ಯಾವುದೇ ಮನೆ ಖರೀದಿ ಇರಲಿ ಇಲ್ಲ ಅಂಗಡಿ ಖರೀದಿ ಇರಲಿ ಮೊದಲು ಮನೆ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ನಾವು ಮೊದಲು ನೋಡ್ತೇವೆ. ವಾಸ್ತು ಪ್ರಕಾರ, ನೀವು ಮನೆ ದಿಕ್ಕನ್ನು ಗಮನಿಸದೆ ಇದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಇದು ಅಂಗಡಿ ಮೇಲೂ ಅನ್ವಯವಾಗುತ್ತದೆ. ನೀವು ತಪ್ಪು ದಿಕ್ಕಿನಲ್ಲಿರುವ ಅಂಗಡಿ ಖರೀದಿ ಮಾಡಿದ್ರೆ ಇದ್ರಿಂದ ನಷ್ಟವುಂಟಾಗುತ್ತದೆ.
ಜನರು ದಕ್ಷಿಣ (South) ದಿಕ್ಕಿನಲ್ಲಿರುವ ಅಂಗಡಿ (Shop) ಯನ್ನು ಖರೀದಿಸಲು ಇಷ್ಟಪಡೋದಿಲ್ಲ. ದಕ್ಷಿಣ ದಿಕ್ಕಿಗೆ ಅಂಗಡಿಯಿದ್ರೆ ಲಾಭದ ಬದಲು ನಷ್ಟವಾಗುತ್ತದೆ ಎಂದು ಜನರು ನಂಬುತ್ತಾರೆ. ಅನೇಕ ಬಾರಿ ಅನಿವಾರ್ಯವಾಗಿ ಅಥವಾ ನಿಮಗೆ ತಿಳಿಯದೇ ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿ ಖರೀದಿ ಮಾಡಿರುತ್ತೀರಿ. ನಿಮ್ಮ ಅಂಗಡಿಯೂ ದಕ್ಷಿಣ ದಿಕ್ಕಿನಲ್ಲಿದ್ದೂ ಲಾಭವಾಗ್ಬೇಕೆಂದ್ರೆ ಕೆಲವು ಸುಲಭವಾದ ವಾಸ್ತು ಪರಿಹಾರಗಳನ್ನು ನೀವು ಪಾಲನೆ ಮಾಡಬೇಕಾಗುತ್ತದೆ.
Zodiac Sign: ಸಂಬಂಧ ಹಾಳಾಗೋಕೆ ಒತ್ತಡವೇ ಕಾರಣವಾಗುತ್ತೆ ಈ ಮಂದಿಗೆ
ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿಗೆ ಈ ನಿಯಮ (Rule) ಪಾಲಿಸಿ :
ಅಂಗಡಿಯ ದಕ್ಷಿಣ ಭಾಗವನ್ನು ಎತ್ತರ ಮಾಡಿ : ನಿಮ್ಮ ಅಂಗಡಿ ದಕ್ಷಿಣ ದಿಕ್ಕಿನಲ್ಲಿದ್ದರೆ ನೀವು ದಕ್ಷಿಣ ಭಾಗವನ್ನು ಸ್ವಲ್ಪ ಎತ್ತರ ಮಾಡಬೇಕು. ದಕ್ಷಿಣದ ಜಾಗ ಉಳಿದ ಭಾಗಕ್ಕಿಂತ ಶೇಕಡಾ 15ರಿಂದ 20ರಷ್ಟು ಎತ್ತರದಲ್ಲಿರಬೇಕು. ಹೀಗೆ ಮಾಡಿದ್ರೆ ವ್ಯಾಪಾರ (Business) ದಲ್ಲಿ ನೀವು ಅಪಾರ ಲಾಭ ಗಳಿಸಬಹುದು. ದಕ್ಷಿಣ ಭಾಗದಲ್ಲಿ ನಿಮ್ಮ ಅಂಗಡಿಯಿದ್ದು, ಅಂಗಡಿ ಹಿಂದೆ ಖಾಲಿ ಜಾಗವಿದ್ದರೆ ಅದನ್ನು ಒಳ್ಳೆಯದು ಎನ್ನಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಖಾಲಿ ಜಾಗವಿದ್ದರೆ ಒಳ್ಳೆಯದು. ಅಂಗಡಿಗೆ ಒಂದೇ ಬಾಗಿಲಿದ್ದು, ಅದನ್ನೇ ನೀವು ಬಳಸುತ್ತಿದ್ದರೆ ದಕ್ಷಿಣ ದಿಕ್ಕಿನ ಬಾಗಿಲು ಶುಭ (Good Luck) ಎನ್ನಲಾಗುತ್ತದೆ.
ಅಂಗಡಿಯಲ್ಲಿ ನಗದು (Cash) ಕೌಂಟರ್ ಇಲ್ಲಿಡಿ : ನಗದು ಕೌಂಟರ್ ಅಂಗಡಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಂಗಡಿಯ ನಗದು ಕೌಂಟರ್ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಆಗ್ನೇಯ ದಿಕ್ಕನ್ನು ಭಗವಂತ ಅಗ್ನಿಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಇದು ತನ್ನ ಸುತ್ತ ಹಣವನ್ನು ಆಕರ್ಷಿಸುತ್ತದೆ. ನಿಮ್ಮ ಅಂಗಡಿ ದಕ್ಷಿಣಾಭಿಮುಖವಾಗಿದ್ದರೆ, ನಗದು ಕೌಂಟರನ್ನು ವಾಸ್ತು ಪ್ರಕಾರ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇಡಬೇಡಿ. ಈ ದಿಕ್ಕಿನಲ್ಲಿ ನಗದು ಕೌಂಟರ್ ಇದ್ರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Mirror Vastu: ಅಂಗಡಿಗಳಲ್ಲಿ ಇಂಥ ಕನ್ನಡಿ ಇರಿಸಿದ್ರೆ ವ್ಯಾಪಾರ ದ್ವಿಗುಣವಾಗೋದು ಖಚಿತ!
ಮಾಲಿಕರು ಕುಳಿತುಕೊಳ್ಳುವ ಸ್ಥಳ ಕೂಡ ಮುಖ್ಯ : ಅಂಗಡಿ ಮಾಲಿಕರು ಎಲ್ಲಿ ಕುಳಿತುಕೊಳ್ತಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಮಾಲಿಕನ ಮುಖ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಅಂಗಡಿಯ ಮಧ್ಯಭಾಗವನ್ನು ಬ್ರಹ್ಮ ಸ್ಥಾನ ಎಂದೂ ಕರೆಯುತ್ತಾರೆ. ಹಾಗೆಯೇ ದಕ್ಷಿಣಾಭಿಮುಖವಾಗಿರುವ ಅಂಗಡಿಯ ಮುಖ್ಯ ಬಾಗಿಲಲ್ಲಿ ಯಾವುದೇ ಕಾರಣಕ್ಕೂ ಭಾರವಾದ ವಸ್ತುವನ್ನು ಇಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ಅಂಗಡಿಯಲ್ಲಿರುವ ಕಪಾಟನ್ನು ನೀವು ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಮಾಲಿಕನ ಖುರ್ಚಿ ಹಾಗೂ ಕಪಾಟು ಎಲ್ಲವೂ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಅಂಗಡಿಯನ್ನು ದಕ್ಷಿಣ ಮತ್ತು ಉತ್ತರ ಎಂದು ಸಮಪಾಲಾಗಿ ವಿಂಗಡಿಸಿದ್ರೆ ಮಾಲಿಕರು ಕುಳಿತುಕೊಳ್ಳಲು ದಕ್ಷಿಣ ದಿಕ್ಕನ್ನು ಒಳ್ಳೆಯದು ಎಂದು ಭಾವಿಸಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿಯಲ್ಲಿ ಮಾಲಿಕರು ಪೂರ್ವ ದಿಕ್ಕಿಗೆ ಕುಳಿತುಕೊಳ್ಳಬೇಕು.
ಅಂಗಡಿಯಲ್ಲಿ ಈ ವಸ್ತುಗಳನ್ನು ಇಡಿ : ದಕ್ಷಿಣಾಭಿಮುಖವಾಗಿ ನಿಮ್ಮ ಅಂಗಡಿ ಇದ್ರೆ ಅಂಗಡಿಯಲ್ಲಿ ಕೆಲ ನೈಸರ್ಗಿಕ ವಸ್ತುಗಳನ್ನು ಇಡಬಹುದು. ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ಇಡಿ. ಅಂಗಡಿ ದ್ವಾರದಲ್ಲಿ ಗಿಡಗಳನ್ನು ಬೆಳೆಸಬೇಕು. ಆದ್ರೆ ಕೃತಕ ಗಿಡಗಳನ್ನು ಇಡಬೇಡಿ. ನೀವು ಬಯಸಿದ್ರೆ ಅಂಗಡಿಯ ಮುಖ್ಯ ಬಾಗಿಲಿನಲ್ಲಿ ಲಾಫಿಂಗ್ ಬುದ್ಧನನ್ನು ಇಡಬಹುದು.