ಪತಿ–ಪತ್ನಿ ಸಂಬಂಧ ಗಟ್ಟಿಗೊಳಿಸುತ್ತೆ ಕರ್ಪೂರ, ಹೇಗೆ ಬಳಸಿದರೊಳಿತು?

Published : Oct 13, 2022, 05:25 PM IST
ಪತಿ–ಪತ್ನಿ ಸಂಬಂಧ ಗಟ್ಟಿಗೊಳಿಸುತ್ತೆ ಕರ್ಪೂರ, ಹೇಗೆ ಬಳಸಿದರೊಳಿತು?

ಸಾರಾಂಶ

ಮನೆಯಲ್ಲಿ ನೆಮ್ಮದಿ ಇರಬೇಕು. ಕೆಲಸ ಮುಗಿಸಿ ಮನೆಗೆ ಬಂದಾಗ ಒತ್ತಡ ಕಡಿಮೆ ಮಾಡುವ ವಾತಾವರಣ ಮನೆಯಲ್ಲಿರಬೇಕು. ಪತಿ – ಪತ್ನಿ ಮಧ್ಯೆ ಪ್ರೀತಿ ಹೆಮ್ಮರವಾಗಿ ಬೆಳೆಯಬೇಕು ಅಂದ್ರೆ ತುಂಬಾ ಕಷ್ಟಪಡಬೇಕಾಗಿಲ್ಲ. ಚಿಕ್ಕ ಕರ್ಪೂರದಲ್ಲಿದೆ ಮಹಾನ್ ಶಕ್ತಿ.  

ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಖುಷಿಯಾಗಿರಬೇಕೆಂದು ನಾವೆಲ್ಲ ಬಯಸ್ತೇವೆ. ಅವರ ಸಂತೋಷಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡ್ತೇವೆ. ಆದ್ರೆ ಎಲ್ಲ ಪ್ರಯತ್ನದ ಮಧ್ಯೆಯೂ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಸದಾ ಗಲಾಟೆ, ಕಿರಿಕಿರಿ, ನೋವು ಕಾಡುತ್ತದೆ. ಇದರಿಂದ ವ್ಯಕ್ತಿ ಒತ್ತಡಕ್ಕೆ ಒಳಗಾಗ್ತಾನೆ. ಮನೆಯ ಶಾಂತಿ ನಾಶಕ್ಕೆ, ಮನೆ ಸದಸ್ಯರ ಮಧ್ಯೆ ಜಗಳ ನಡೆಯಲು ನಕಾರಾತ್ಮಕ ಶಕ್ತಿ ಕಾರಣವಾಗಿರುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿದ್ದರೆ ಆರ್ಥಿಕ ಸಮೃದ್ಧಿ, ಸಂತೋಷ, ಉತ್ತಮ ಆರೋಗ್ಯ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿಯನ್ನು ನಾವು ಕಾಣಬಹುದು. ಅದೇ ನಕಾರಾತ್ಮಕ ಶಕ್ತಿ ನೆಲೆಗೊಂಡಿದ್ದರೆ ಆರ್ಥಿಕ ನಷ್ಟ, ಕೆಲಸದಲ್ಲಿ ಅಡಚಣೆ, ರೋಗ ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗ್ಬೇಕು, ಧನಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ವಾಸ್ತು ಶಾಸ್ತ್ರದ ಕೆಲ ಟಿಪ್ಸ್ ಪಾಲನೆ ಮಾಡ್ಬೇಕು. ದೇವರ ಪೂಜೆಗೆ ಬಳಸುವ ಕರ್ಪೂರದಿಂದ ಕೂಡ ಪರಿಹಾರ ಕಾಣಬಹುದು. ರಾತ್ರಿ ಮಲಗುವ ಮುನ್ನ ಕೆಲವೊಂದು ಅಗತ್ಯ ಕೆಲಸ ಮಾಡಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ. ಮನೆ ಹಾಗೂ ಮನದಲ್ಲಿ ನೆಮ್ಮದಿ ನೆಲೆಸುತ್ತದೆ.

ರಾತ್ರಿ (Night) ಮಲಗುವ ಮುನ್ನ ಮಾಡಿ ಈ ಕೆಲಸ :
ಪತಿ – ಪತ್ನಿ ಸಂಬಂಧ ಗಟ್ಟಿಗೊಳಿಸುತ್ತೆ ಕರ್ಪೂರ (Camphor) :
ಜೀವನ ಪರ್ಯಂತ ಪತಿ – ಪತ್ನಿ ಒಟ್ಟಿಗೆ ಇರಬೇಕೆಂದ್ರೆ ಇಬ್ಬರ ಮಧ್ಯೆ ಪ್ರೀತಿ (Love) ಯಿರಬೇಕು. ಪತಿ ಹಾಗೂ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಕಾಣಿಸಿದ್ರೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ದಂಪತಿ ಮಧ್ಯೆ ಸದಾ ಪ್ರೀತಿ ಇರಬೇಕು ಎಂದಾದ್ರೆ ಮಲಗುವ ಮುನ್ನ ಮಲಗುವ ಕೋಣೆಯಲ್ಲಿ ಕರ್ಪೂರದ ದೀಪ ಬೆಳಗಬೇಕು. ಪ್ರತಿ ದಿನ ಕೋಣೆಯಲ್ಲಿ ಕರ್ಪೂರ ಹಚ್ಚಿದ್ರೆ ಅದ್ರ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಸಂಬಂಧದಲ್ಲಿ ಬಲಗೊಳ್ಳುತ್ತದೆ. ಕರ್ಪೂರದ ದೀಪ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. 

Diwali 2022: ಧನ ತ್ರಯೋದಶಿ ದಿನ ರಾಶಿ ನೋಡಿ ಖರೀದಿ ಮಾಡಿ

ಕುಟುಂಬದ ಸದಸ್ಯರ ಜೊತೆ ಪ್ರೀತಿ ಹೆಚ್ಚಾಗ್ಬೇಕೆಂದ್ರೆ ಹೀಗೆ ಮಾಡಿ : ಪತಿ – ಪತ್ನಿ ಮಧ್ಯೆ ಮಾತ್ರವಲ್ಲ, ಮಕ್ಕಳು, ಹಿರಿಯರು, ಕುಟುಂಬಸ್ಥರ ಮಧ್ಯೆ ಕೂಡ ಪರಸ್ಪರ ಪ್ರೀತಿ, ಗೌರವವಿರಬೇಕು. ಆಗ ಮಾತ್ರ ಜೀವನ ನೆಮ್ಮದಿಯಿಂದ ಸಾಗಲು ಸಾಧ್ಯ. ಮನೆಯಲ್ಲಿ ಅತ್ತೆ – ಸೊಸೆ, ಅಕ್ಕ – ತಮ್ಮ, ನಾದಿನಿ – ಅತ್ತಿಗೆ ಹೀಗೆ ಕುಟುಂಬಸ್ಥರು ಪರಸ್ಪರ ಜಗಳವಾಡ್ತಿದ್ದರೆ ಮನೆ ಮಾರ್ಕೆಟ್ ಆಗುತ್ತದೆ. ಅಲ್ಲಿ ನೆಮ್ಮದಿ ಸಿಗಲು ಅಸಾಧ್ಯ. ನಿಮ್ಮ ಮನೆಯಲ್ಲೂ ಗಲಾಟೆಯಾಗ್ತಿದೆ ಎಂದಾದ್ರೆ, ಕುಟುಂಬಸ್ಥರ ಮಧ್ಯೆ ಹೊಂದಾಣಿಕೆ ಕೊರತೆಯಿದೆ ಎಂದಾದ್ರೆ ಕರ್ಪೂರ ಹಚ್ಚಬೇಕು. ನೀವು ಸಂಜೆ ಮನೆಯಲ್ಲಿ ಕರ್ಪೂರ ಬೆಳಗಬೇಕು. ಕರ್ಪೂರದ ದೀಪವನ್ನು ಮನೆಯ ಮೂಲೆ ಮೂಲೆಗೆ ತೋರಿಸಬೇಕು. ಕರ್ಪೂರದ ಸುವಾಸನೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರಲ್ಲಿ ಸಮನ್ವಯತೆ ಸಾಧಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ ಕೆಲಸದಲ್ಲಿ ಕಾಣಿಸಿಕೊಳ್ಳುವ ಅಡೆತಡೆಗಳನ್ನು ದೂರ ಮಾಡುತ್ತದೆ. ಆರ್ಥಿಕ ಸಂಕಷ್ಟದಿಂದಲೂ ಪರಿಹಾರ ನೀಡುತ್ತದೆ. ಸಂಜೆ ಮಾತ್ರವಲ್ಲ ನೀವು ಬೆಳಿಗ್ಗೆ ಕೂಡ ಕರ್ಪೂರದ ಆರತಿಯನ್ನು ಮನೆಯಲ್ಲಿ  ಮಾಡಿದ್ರೆ ಇದ್ರ ಫಲ ದ್ವಿಗುಣಗೊಳ್ಳುತ್ತದೆ.

VASTU TIPS: ಅಡಿಗೆ ಉಪ್ಪು ಹೀಗೆ ಬಳ್ಸಿದ್ರೆ ಮನೆಯಲ್ಲಿ ಸದಾ ಇರುತ್ತೆ ಹಣಕಾಸು

ಸಮೃದ್ಧಿಗಾಗಿ ಕರ್ಪೂರ : ಮನೆಯಲ್ಲಿ ಆಹಾರಕ್ಕೆ ಕೊರತೆಯಾಗಬಾರದು, ಕಪಾಟಿನಲ್ಲಿ ಹಣ ತುಂಬಿ ತುಳುಕಬೇಕು ಎನ್ನುವವರು ಕರ್ಪೂರದ ಈ ಉಪಾಯ ಮಾಡಬೇಕು. ಒಂದು ಬೆಳ್ಳಿ ಬಟ್ಟಲಿನಲ್ಲಿ ಕರ್ಪೂರವನ್ನು ಹಚ್ಚಿ ಅದನ್ನು ಅಡುಗೆ ಮನೆಯಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಆಹಾರದ ಕೊರತೆ ಎಂದೂ ಕಾಡುವುದಿಲ್ಲ. ಆದ್ರೆ ಈ ಉಪಾಯ ಮಾಡುವ ಮುನ್ನ ನೀವು ಅಡುಗೆ ಮನೆಯನ್ನು ಸ್ವಚ್ಛಗೊಳಿಸಬೇಕು. ಆಹಾರ ಸೇವನೆ ಮಾಡಿದ ನಂತ್ರ ಸಿಂಕ್ ನಲ್ಲಿ ಪಾತ್ರೆಯಿಟ್ಟು ಕರ್ಪೂರ ಹಚ್ಚಿದ್ರೆ ಪ್ರಯೋಜನವಿಲ್ಲ. ಶುದ್ಧ ಸ್ಥಳದಲ್ಲಿ ಕರ್ಪೂರ ಹಚ್ಚುವುದು ಮುಖ್ಯ. 
 

PREV
Read more Articles on
click me!

Recommended Stories

100 ವರ್ಷ ನಂತರ ಮಹಾಲಕ್ಷ್ಮಿ ರಾಜಯೋಗ, ಈ ರಾಶಿಗೆ 2026 ರಲ್ಲಿ ಹಠಾತ್ ಆರ್ಥಿಕ ಲಾಭ
ಈ ರಾಶಿಗೆ ಶನಿಯ ಮಾರಕ ಅಂಶ ಪದವಿ ನಷ್ಟ, ಸಂಪತ್ತು ನಷ್ಟ ಮತ್ತು ಆರೋಗ್ಯಕ್ಕೆ ಹಾನಿ