ಮನೆ ಗೋಡೆ, ಮನೆಯಲ್ಲಿರುವ ವಸ್ತು, ಮನೆ ದಿಕ್ಕು ಮಾತ್ರವಲ್ಲ ನಾವು ಮಲಗುವ ದಿಕ್ಕು ಕೂಡ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆ. ತಪ್ಪಾದ ದಿಕ್ಕಿನಲ್ಲಿ ವಿವಾಹಿತೆಯರು ಕಾಲಿಟ್ಟು ಮಲಗಿದ್ರೆ ಕಥೆ ಮುಗಿದಂತೆ. ಮನೆಯಲ್ಲಿ ಜಗಳ ಗ್ಯಾರಂಟಿ ಎಂದ್ಕೊಳ್ಳಿ.
ಪ್ರೀತಿ ಉಸಿರಿನಂತೆ ಅಂದ್ರೆ ತಪ್ಪಾಗಲಾರದು. ಪ್ರೀತಿಯಿಲ್ಲದೆ ಬದುಕೋದು ಬಹಳ ಕಷ್ಟ. ದಾಂಪತ್ಯದಲ್ಲಿ ಕೂಡ ಪ್ರೀತಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಸಂಸಾರ ಪ್ರೀತಿಯಿಂದ ಕೂಡಿದ್ದರೆ ಎಂಥ ದೊಡ್ಡ ಸಮಸ್ಯೆ ಕೂಡ ಚಿಕ್ಕದಾಗಿ ಕಾಣುತ್ತದೆ. ಮನೆಯ ವಾಸ್ತು ಪ್ರೀತಿ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ದೋಷವಿದ್ರೆ ದಂಪತಿ ಮಧ್ಯೆ ಪ್ರೀತಿ ಕಡಿಮೆಯಾಗಬಹುದು. ಪ್ರೀತಿ, ಗೌರವ, ಕಾಳಜಿ ಇದು ಜೀವನದಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಪತಿ – ಪತ್ನಿ ಮಧುರ ಪ್ರೀತಿಯ ಮೇಲೆ ಮಲಗುವ ಕೋಣೆ, ಬೆಡ್ ಶೀಟ್, ಹಾಸಿಗೆ ಕೂಡ ಪ್ರಭಾವ ಬೀರುತ್ತದೆ. ವಾಸ್ತು ಪ್ರಕಾರ, ಮಲಗುವ ದಿಕ್ಕು ನಿಮ್ಮ ಜೀವನವನ್ನು ಬದಲಾಯಿಸಬಹುದು. ದಂಪತಿ ಸರಿಯಾದ ದಿಕ್ಕಿನಲ್ಲಿ ಮಲಗಿದ್ರೆ ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ದಾಂಪತ್ಯವನ್ನು ಗಟ್ಟಿಗೊಳಿಸುವಂತಹ ಮಲಗುವ ಕೋಣೆ (Bedroom) ಯನ್ನು ದಂಪತಿ ಹೊಂದಿರಬೇಕು. ದಂಪತಿ ಮನೆಯ ಮಾಲೀಕರಾಗಿದ್ದರೆ ಮಲಗುವ ಕೋಣೆ ನೈಋತ್ಯ (Southwest) ದಿಕ್ಕಿನಲ್ಲಿರಬೇಕು. ದಂಪತಿ ಹೊಸದಾಗಿ ಮದುವೆಯಾಗಿದ್ದರೆ ಮತ್ತು ಹಿರಿಯ ಸಹೋದರನಾಗಿದ್ದು, ಪಾಲಕರೊಂದಿಗೆ ಆತ ವಾಸವಾಗಿದ್ದರೆ ಮಲಗುವ ಕೋಣೆ ವಾಯುವ್ಯ ದಿಕ್ಕಿನಲ್ಲಿ ಇರಬೇಕು. ವಿವಾಹಿತ (Married) ದಂಪತಿ ಎಂದೂ ಈಶಾನ್ಯ ದಿಕ್ಕಿನಲ್ಲಿ ಮಲಗುವ ಕೋಣೆ ಹೊಂದಿರಬಾರದು. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವಿಂದು ವಿವಾಹಿತ ಮಹಿಳೆಯರು ಯಾವ ದಿಕ್ಕಿಗೆ ಮಲಗಿದರೆ ಶುಭ ಎಂದು ಹೇಳ್ತೇವೆ.
undefined
ವಿವಾಹಿತೆಯರ ಮಲಗುವ ವಿಧಾನ ಹೀಗಿರಲಿ :
ಮಲಗುವ ವೇಳೆ ಕಾಲನ್ನು ಈ ದಿಕ್ಕಿಗೆ ಹಾಕ್ಬೇಡಿ : ವಾಸ್ತು ಶಾಸ್ತ್ರದ ಪ್ರಕಾರ, ವಿವಾಹಿತೆಯರು ಮಲಗುವಾಗ ತಲೆ ಹಾಗೂ ಕಾಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನಿಸಬೇಕು. ವಿವಾಹಿತೆಯರು ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಬೇಕು. ಮಹಿಳೆಯರು ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ಕಾಲು ಹಾಕಿ ಮಲಗಬಾರದು. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ದೇಹದ ಶಕ್ತಿ ಕಡಿಮೆಯಾಗುತ್ತದೆ. ಇದ್ರಿಂದ ಅನಾರೋಗ್ಯ ಕಾಡಲು ಶುರುವಾಗುತ್ತದೆ.
ಈ ದಿಕ್ಕಿಗೆ ಕಾಲು ಹಾಕಿದ್ರೆ ಹಣ ನಷ್ಟ ನಿಶ್ಚಿತ : ಮನೆಯ ಲಕ್ಷ್ಮಿ ಅಂದ್ರೆ ಮನೆಯ ಮಹಿಳೆ. ಆಕೆ ಮನೆಯಲ್ಲಿ ಖುಷಿಯಾಗಿದ್ರೆ ಲಕ್ಷ್ಮಿ ನೆಲೆಸ್ತಾಳೆ ಎನ್ನಲಾಗುತ್ತದೆ. ಹಾಗೆಯೇ, ಆಕೆ ತಪ್ಪಾಗಿ ಮಲಗಿದ್ರೆ ಮನೆ ಬರಿದಾಗುತ್ತದೆ. ಯಾವಾಗ್ಲೂ ಮಹಿಳೆ ಉತ್ತರ ದಿಕ್ಕಿಗೆ ಕಾಲು ಹಾಕಿ ಮಲಗಬಾರದು. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಕರೆಯಲಾಗುತ್ತದೆ. ಉತ್ತರ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ಇದ್ರಿಂದ ಹಣ ನಷ್ಟವಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಡುತ್ತದೆ. ವ್ಯಾಪಾರ – ವಹಿವಾಟಿನಲ್ಲಿ ನಷ್ಟವಾಗುತ್ತದೆ.
Numerology Tips: ದಾಂಪತ್ಯದ ಗುಟ್ಟು ಬಿಚ್ಚಿಡುತ್ತೆ ನಿಮ್ಮ ಮದುವೆ ದಿನಾಂಕ
ಈ ದಿಕಿನಲ್ಲಿ ಕಾಲಿಟ್ಟು ಮಲಗಿದ್ರೆ ಹಳಸುತ್ತೆ ಸಂಬಂಧ : ದಕ್ಷಿಣ ಹಾಗೂ ಉತ್ತರ ದಿಕ್ಕು ಮಾತ್ರವಲ್ಲ ಮಹಿಳೆ ಕಾಲು ಹಾಕಿ ಮಲಗಬಾರದ ಮತ್ತೊಂದು ದಿಕ್ಕಿದೆ. ಅದೇ ವಾಯುವ್ಯ ದಿಕ್ಕು. ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಮಧ್ಯದಲ್ಲಿ ಇದು ಬರುತ್ತದೆ. ಈ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ದಾಂಪತ್ಯದಲ್ಲಿ ಮಹಿಳೆ ಆಸಕ್ತಿ ಕಳೆದುಕೊಳ್ತಾಳೆ. ಸಂಬಂಧ ಹಾಳಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಬೇಕಾಬಿಟ್ಟಿ ಶಾಪಿಂಗ್ ಮಾಡಿ ನಂತರ ಪಶ್ಚಾತ್ತಾಪ ಪಡ್ತೀರಾ? ಹಾಗಿದ್ರೆ ನಿಮ್ಮ ರಾಶಿ ಇದೇ ಇರ್ಬೇಕು!
ಅವಿವಾಹಿತ ಹುಡುಗಿಯರಿಗೆ ಕಿವಿ ಮಾತು : ವಿವಾಹಿತ ಮಹಿಳೆಯರ ಜೊತೆ ಅವಿವಾಹಿತ ಹುಡುಗಿಯರು ಕೂಡ ಮಲಗುವ ದಿಕ್ಕಿನ ಬಗ್ಗೆ ಹೆಚ್ಚು ಗಮನ ನೀಡಬೇಕು. ನೈಋತ್ಯ ದಿಕ್ಕಿಗೆ ಕಾಲಿಟ್ಟು ಹುಡುಗಿಯರು ಮಲಗಬಾರದು. ಉತ್ತರ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ಬೇಗ ಮದುವೆಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.