Vastu Tips: ಯಾರಾದ್ರೂ ಮನೆಯಿಂದ ಹೊರ ಹೋಗುವ ವೇಳೆ ಕಸ ಗುಡಿಸ್ಬೇಡಿ

Published : Jun 23, 2023, 02:18 PM IST
Vastu Tips: ಯಾರಾದ್ರೂ ಮನೆಯಿಂದ ಹೊರ ಹೋಗುವ ವೇಳೆ ಕಸ ಗುಡಿಸ್ಬೇಡಿ

ಸಾರಾಂಶ

ಮನೆ ಸ್ವಚ್ಛವಿದ್ರೆ ಆಯ್ತು, ಕ್ಲೀನಿಂಗ್ ಯಾವಾಗ ಮಾಡಿದ್ರೆ ಏನು ಎನ್ನುವವರಿದ್ದಾರೆ. ವಾಸ್ತು ಶಾಸ್ತ್ರ ಇದನ್ನು ಒಪ್ಪೋದಿಲ್ಲ. ಕೆಲ ಸಮಯದಲ್ಲಿ ನೀವು ಪೊರಕೆ ಹಿಡಿದು ಬಂದ್ರೆ ನಿಮಗೆ ಮಾತ್ರವಲ್ಲ ಕುಟುಂಬಕ್ಕೆ ಸಮಸ್ಯೆ ಬರುತ್ತದೆ ಎನ್ನುತ್ತೆ ಶಾಸ್ತ್ರ.   

ಬೆಳಗಾದೊಡನೆ ಮನೆಯ ಕಸಗುಡಿಸಿ ಸ್ವಚ್ಛಗೊಳಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಕಸ ತೆಗೆಯಲು ಆ ಸಮಯವೇ ಸೂಕ್ತ ಎಂದೇ ನಮ್ಮ ಪೂರ್ವಜರು ಆ ಪದ್ಧತಿಯನ್ನು ತಂದಿರಬಹುದು. ಏಕೆಂದರೆ ಪೊರಕೆಯನ್ನು ಅಶುಭ ಹಾಗೂ ಶುಭ ಎರಡೂ ದೃಷ್ಟಿಯಿಂದ ನೋಡಲಾಗುತ್ತದೆ. ಪೊರಕೆ ಕಣ್ಣಿಗೆ ಬಿದ್ರೆ ಅಶುಭ. ಆದ್ರೆ ಅದ್ರಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಬೇರೆಯವರ ಕಣ್ಣಿಗೆ ಪೊರಕೆ ಬೀಳ್ಬಾರದು ಅಂದ್ರೆ ಬೆಳಿಗ್ಗೆ ಮನೆ ಸ್ವಚ್ಛತೆ ಕೆಲಸ ಮುಗಿಯಬೇಕು ಎಂದರ್ಥ. ಅದೇನೇ ಇರಲಿ,  ಹಿಂದೂ ಧರ್ಮದಲ್ಲಿ ಮನೆಯ ಮಂದಿ ಹೊರಗಡೆ ಹೊರಟಾಗ ಅಥವಾ ಪೂಜೆ ನಡೆಯುವ ಸಮಯದಲ್ಲಿ ಪೊರಕೆ ಎದುರಾದರೆ ಅದು ಶುಭವಲ್ಲ ಎಂಬ ನಂಬಿಕೆಯಿದೆ.

ಪೊರಕೆ (Broom) ಯ ವಿಷಯದಲ್ಲಿ ಅನೇಕ ರೀತಿಯ ಶಾಸ್ತ್ರಗಳಿವೆ. ಯಾವ ಸಮಯದಲ್ಲಿ ಕಸ ಗುಡಿಸಬೇಕು, ಯಾವಾಗ ಗುಡಿಸಬಾರದು, ಮನೆ (House) ಯಲ್ಲಿ ಪೊರಕೆಯನ್ನು ಎಲ್ಲಿಡಬೇಕು, ಹೇಗಿಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಪೊರಕೆಗೆ ಸಂಬಂಧಿಸಿದ ಇಂತಹ ವಿಷಯಗಳನ್ನು ನಾವು ಪಾಲಿಸಬೇಕು. ಇಲ್ಲವಾದರೆ ಅದರ ಕೆಟ್ಟ ಪರಿಣಾಮ ನಮ್ಮ ಜೀವನದ ಮೇಲಾಗುತ್ತದೆ ಎಂದು ವಾಸ್ತು ನಿಯಮ ಹೇಳುತ್ತದೆ.  ಮನೆಯಲ್ಲಿ ಲಕ್ಷ್ಮಿ (Lakshmi) ನೆಲೆಸುವುದಿಲ್ಲ.  ಆರೋಗ್ಯ ಸಂಪತ್ತು ಮುಂತಾದ ಸಮಸ್ಯೆಗಳು ಉದ್ಭವವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ಕಸ ಗುಡಿಸಬಾರದು ಎನ್ನಲಾಗುತ್ತದೆ. ಮನೆಯವರು ಹೊರಗೆ ಹೋಗುವಾಗ ಅಥವಾ ಹೋದ ತಕ್ಷಣ ಪೊರಕೆ ಹಿಡಿದು ಬರೋದು ಒಳ್ಳೆಯ ಕೆಲಸವಲ್ಲ. ಅದಕ್ಕೆ ಕಾರಣವೇನು ಗೊತ್ತಾ? 

ರುದ್ರಾಕ್ಷಿ ಧರಿಸುವಾಗ ‘ಈ ನಿಯಮ’ ತಪ್ಪಿದರೆ ಶಿವನ ಕೆಂಗಣ್ಣಿಗೆ ಗುರಿಯಾಗುವಿರಿ..!

ಮನೆಯಿಂದ ಹೊರ ಹೋಗುವ ವೇಳೆ ಕಸ ಗುಡಿಸಿದ್ರೆ ಏನಾಗುತ್ತೆ? : ಮನೆಯಿಂದ ಯಾವುದೇ ವ್ಯಕ್ತಿ ಹೊರಗೆ ಹೋಗುವಾಗ್ಲೂ ಆತ ಸುರಕ್ಷಿತವಾಗಿ, ಯಶಸ್ವಿಯಾಗಿ ಮನೆಗೆ ವಾಪಸ್ ಬರಲಿ ಎಂದು ಮನೆಯವರೆಲ್ಲ ಪ್ರಾರ್ಥನೆ ಮಾಡ್ತಾರೆ. ನೀವು ಮನೆಯಿಂದ ಕುಟುಂಬದ ಸದಸ್ಯ ಹೊರಗೆ ಹೋಗುವ ಸಮಯದಲ್ಲಿ ಪೊರಕೆ ಹಿಡಿದು ಮನೆ ಕ್ಲೀನ್ ಮಾಡ್ತಿದ್ದರೆ ಅದು ಶುಭ ಸಂಕೇತವಲ್ಲ. ಅದರಿಂದ ಅವರು ಹೋದ ಕೆಲಸದಲ್ಲಿ ವಿಫಲರಾಗುತ್ತಾರೆ. ಅಪಘಾತವಾಗುವ ಅಪಾಯವೂ ಇರುತ್ತದೆ.  

ಕಸ ಗುಡಿಸಬೇಡಿ ಎನ್ನಲು ಇದೂ ಕಾರಣ : ಇದರ ಹಿಂದೆ ಇನ್ನೊಂದು ಕಾರಣವಿದೆ. ಒಬ್ಬ ವ್ಯಕ್ತಿ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಕಸ ಗುಡಿಸಿದರೆ ಅದೃಷ್ಟ ಮನೆಯಿಂದ ಹೊರ ಹಾಕುತ್ತದೆ ಎಂಬ ನಂಬಿಕೆ ಇದೆ. ಮನೆಯಿಂದ ಹೊರಗೆ ಹೋಗುವ ವ್ಯಕ್ತಿಯೊಂದಿಗೆ  ನಿಮ್ಮ ಅದೃಷ್ಟವೂ ಹೋಗುತ್ತದೆ ಎನ್ನಲಾಗುತ್ತದೆ. ಇದು ನಿಮ್ಮ ಹಿನ್ನಡೆಗೆ ಕಾರಣವಾಗುತ್ತದೆ.  ಮನೆಯ ಸದಸ್ಯರು ಹೊರಗಡೆ ಹೋಗುವಾಗ ಕಸ ಗುಡಿಸಬಾರದು ಎನ್ನುವುದರ ಹಿಂದೆ ಇರುವ ಮತ್ತೊಂದು ಕಾರಣ, ಪವಿತ್ರತೆ. ಪೊರಕೆಯು ಪವಿತ್ರತೆಯ ಸಂಕೇತವಾಗಿದೆ. ಆದ್ದರಿಂದ ಮನೆಯವರು ಕೆಲಸಕ್ಕೆ ಹೊರಟಾಗ ಪೊರಕೆಯಿಂದ ಕಸ ಗುಡಿಸಿದರೆ ಅದು ದೇವತೆಗಳಿಗೆ ನಾವು ಮಾಡುವ ಅವಮಾನ ಎಂದು ಹೇಳಲಾಗುತ್ತದೆ.

ಇವರದು ಸೂಜಿಗಲ್ಲಿನ ನೋಟ: ಈ ರಾಶಿಯವರು ಎಲ್ಲರನ್ನೂ ಆಕರ್ಷಿಸುತ್ತಾರೆ..!

ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ಎಂದೇ ತಿಳಿಯಲಾಗಿದೆ. ಪುರಾಣಗಳ ಪ್ರಕಾರ ,ಲಕ್ಷ್ಮಿದೇವಿಯು ವೈಕುಂಠಕ್ಕೆ ಹೋದಾಗ ಆ ಸ್ಥಳವನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿದಳು ಎಂಬ ಪ್ರತೀತಿ ಇದೆ. ಹಾಗಾಗಿ ಪೊರಕೆಯನ್ನು ದೇವಿಯ ಸಾಕಾರ ಎಂದೇ ಭಾವಿಸಲಾಗುತ್ತದೆ. ಪೊರಕೆಯನ್ನು ಕೂಡ ಗೌರವದಿಂದ ಕಾಣುವುದರಿಂದ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಇಡೋದ್ರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಮನೆಯವರು ಹೊರಗಡೆ ಹೊರಟಾಗ ಅವರ ಕಾಲಿಗೆ ಅಥವಾ ಮನೆಯಲ್ಲಿರುವವರ ಕಾಲಿಗೆ ಪೊರಕೆ ತಾಗದಂತೆ ಅದನ್ನು ಇಡಬೇಕು. ಪೊರಕೆ ಲಕ್ಷ್ಮಿಯ ರೂಪದವಾದ್ದರಿಂದ ನಾವು ಅದನ್ನು ಕಾಲಿನಲ್ಲಿ ಮುಟ್ಟಬಾರದು. ಲಕ್ಷ್ಮಿದೇವಿಯ ರೂಪವಾದ ಪೊರಕೆಯನ್ನು ತುಳಿಯುವುದು ಕೂಡ ಒಳ್ಳೆಯದಲ್ಲ.  
 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!