ಶನಿ ಅಂದ್ರೆ ಜನರು ಭಯಗೊಳ್ತಾರೆ. ಒಂದಾದ್ಮೇಲೆ ಒಂದರಂತೆ ಕಷ್ಟಗಳನ್ನು ಶನಿ ನೀಡ್ತಾನೆ ಎಂದು ಜನರು ನಂಬಿದ್ದಾರೆ. ಒಳ್ಳೆಯವರಿಗೆ ಸಹಾಯ ಮಾಡುವ ಶನಿ, ತನ್ನ ದಿಕ್ಕಿಗೆ ಡಿಸ್ಟರ್ಬ್ ಆದ್ರೆ ಮಾತ್ರ ಸಹಿಸೋದಿಲ್ಲ.
ವೈದಿಕ ಜ್ಯೋತಿಷ್ಯದಲ್ಲಿ, ಶನಿಯನ್ನು ಅತ್ಯಂತ ವಿಶೇಷ ಮತ್ತು ಪ್ರಭಾವಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯನ್ನು ನ್ಯಾಯ ಮತ್ತು ಕರ್ಮದ ಗ್ರಹವೆಂದು ನಂಬಲಾಗಿದೆ. ಜನರು ಮಾಡಿದ ಕೆಲಸದ ಆಧಾರದ ಮೇಲೆ ಶುಭ ಅಥವಾ ಅಶುಭ ಫಲಿತಾಂಶಗಳನ್ನು ಶನಿ ನೀಡುತ್ತಾನೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ನಾನಾ ರೀತಿಯ ಸಮಸ್ಯೆ ಉದ್ಭವಿಸುತ್ತವೆ. ಅದೇ ಶನಿ ಜಾತಕದಲ್ಲಿ ಮಂಗಳಕರ ಸ್ಥಳದಲ್ಲಿದ್ದರೆ ವ್ಯಕ್ತಿಗೆ ಎಲ್ಲಾ ರೀತಿಯ ಸೌಕರ್ಯ, ಐಷಾರಾಮಿ ಸೌಲಭ್ಯ ಸಿಗುತ್ತದೆ. ಶನಿ ಕೆಟ್ಟವನಲ್ಲ. ಆತನ ಸ್ಥಾನ, ಜನರಿಗೆ ಶುಭ – ಅಶುಭ ಫಲವನ್ನು ನೀಡುತ್ತದೆ.
ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ, ಶನಿದೇವ (Shanidev) ನ ದೃಷ್ಟಿಯನ್ನು ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಶನಿಯ ದೃಷ್ಟಿಗೆ ನೀವು ಬೀಳಬಾರದು ಎಂದಾದ್ರೆ ಶನಿ ಕೋಪಗೊಳ್ಳುವ ಕೆಲಸವನ್ನು ಮಾಡಬಾರದು. ನಾವಿಂದು ಶನಿಯ ದಿಕ್ಕು ಯಾವುದು, ಆ ದಿಕ್ಕಿನಲ್ಲಿ ನಾವು ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ಹೇಳ್ತೇವೆ.
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಹೆಚ್ಚು ಕೋಪ
ವಾಸ್ತು ಶಾಸ್ತ್ರ (Vastu Shastra) ದ ಪ್ರಕಾರ, ಶನಿ ಪಶ್ಚಿಮ ದಿಕ್ಕಿನ ಅಧಿಪತಿ. ದೇವರ (God) ಪೂಜೆ ಮಾಡುವಾಗ ದಿಕ್ಕಿಗೆ ಮಹತ್ವ ನೀಡಲಾಗುತ್ತದೆ. ದೇವರ ಪೂಜೆ ಮಾಡುವ ವೇಳೆ ಜನರು ಪೂರ್ವ ದಿಕ್ಕಿಗೆ ಮುಖ ಮಾಡಿ ಪೂಜೆ ಸಲ್ಲಿಸುತ್ತಾರೆ. ಆದ್ರೆ ಶನಿ ದೇವರಿಗೆ ಪೂಜೆ ಮಾಡುವಾಗ ನಮ್ಮ ಮುಖ ಪಶ್ಚಿಮ ದಿಕ್ಕಿಗೆ ಇರಬೇಕು.
ಶನಿ ದಿಕ್ಕಿನಲ್ಲಿ ಮಾಡ್ಬೇಡಿ ಈ ಕೆಲಸ : ಮನೆಯ ಮುಖ್ಯ ಬಾಗಿಲು ಪಶ್ಚಿಮ ದಿಕ್ಕಿನಲ್ಲಿ ಇರಬಾರದು. ಅದು ಮನೆಯಲ್ಲಿ ನಕಾರಾತ್ಮಕತೆ ಶಕ್ತಿಯನ್ನು (Negative Energy) ಹೆಚ್ಚಿಸುತ್ತದೆ. ಒಂದ್ವೇಳೆ ಪಶ್ಚಿಮಕ್ಕೆ ನಿಮ್ಮ ಮನೆಯ ಮುಖ್ಯ ಬಾಗಿಲನ್ನು ಇಡೋದು ಅನಿವಾರ್ಯ ಎಂದಾದರೆ ಶನಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ನೀವು ಮುಖ್ಯಬಾಗಿಲಿನ ಸುತ್ತಮುತ್ತ ಗಿಡಮರಗಳನ್ನು ಬೆಳೆಸಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಮನೆ ಇರಬಾರದು. ಅಡುಗೆ ಮನೆ ಪಶ್ಚಿಮ ದಿಕ್ಕಿನಲ್ಲಿದ್ದರೆ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ. ಮನೆಯಲ್ಲಿ ಸದಾ ಗಲಾಟೆ – ಜಗಳ ನಡೆಯುತ್ತಿರುತ್ತದೆ.
ನಿಮ್ಮ ಮನೆಯ ಪಶ್ಚಿಮ ದಿಕ್ಕಿಗೆ ಬೆಡ್ ರೂಮ್ (Bed Room) ಬರದಂತೆ ನೋಡಿಕೊಳ್ಳಿ. ಪಶ್ಚಿಮ ಭಾಗದಲ್ಲಿರುವ ಬೆಡ್ ರೂಮ್ ಪತಿ – ಪತ್ನಿ ಮಧ್ಯೆ ಜಗಳ ಹೆಚ್ಚಿಸುತ್ತದೆ. ಸದಾ ಇಬ್ಬರ ಮಧ್ಯೆ ಒಂದಲ್ಲ ಒಂದು ಟೆನ್ಷನ್ ಮನೆ ಮಾಡಿರುತ್ತದೆ. ನಿಮ್ಮ ಮನೆಯ ಪಶ್ಚಿಮ ಭಾಗದಲ್ಲಿ ಬೆಡ್ ರೂಮ್ ಇದ್ದಲ್ಲಿ ಶನಿ ಯಂತ್ರವನ್ನು ಸ್ಥಾಪಿಸಲು ಮರೆಯಬೇಡಿ.
ಮನೆಯ ಪಶ್ಚಿಮ ಭಾಗವನ್ನು ಖಾಲಿ ಬಿಡಿ. ಅಲ್ಲಿ ಹೆಚ್ಚು ಸಾಮಗ್ರಿ ತುಂಬಬೇಡಿ. ಪಶ್ಚಿಮ ಭಾಗ ಮುಚ್ಚಿದ್ದರೆ ಕುಟುಂಬಸ್ಥರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಪಶ್ಚಿಮ ಭಾಗದಲ್ಲಿ ಕಿಟಕಿ ಇರಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಒಂದ್ವೇಳೆ ಇದ್ದರೂ ಗೋಡೆ, ಕಿಟಕಿಗಿಂತ ಚಿಕ್ಕದಿರುವಂತೆ ನೋಡಿಕೊಳ್ಳಿ.
Zodiac Signs: ಒಬ್ಬರು ವಿಪರೀತ ಖರ್ಚು ಮಾಡಿದರೆ, ಮತ್ತೊಬ್ಬರ ಸೋಮಾರಿಗಳು!
ನಿಮ್ಮ ಮನೆಯ ಪಶ್ಚಿಮ ದಿಕ್ಕಿನಲ್ಲಿ ಕಸವನ್ನು ಹಾಕಬೇಡಿ. ಇದು ಶನಿಯ ಕೋಪಕ್ಕೆ ಕಾರಣವಾಗುತ್ತದೆ. ಶನಿ ಮನೆಯಲ್ಲಿ ಬಡತನವನ್ನುಂಟು ಮಾಡುತ್ತಾನೆ. ನಿಮ್ಮನ್ನು ಸಂಕಷ್ಟಕ್ಕೆ ನೂಕುತ್ತಾನೆ ಎಂದು ನಂಬಲಾಗಿದೆ. ಮನೆಯ ಪಶ್ಚಿಮ ದಿಕ್ಕಿಗೆ ಕುಳಿತು ಧ್ಯಾನ ಮಾಡಬೇಡಿ. ಇದು ನಿಮ್ಮ ಜೀವನದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಣಕಾಸಿನ ಸಮಸ್ಯೆ ನಿಮಗೆ ಕಾಡುವ ಸಾಧ್ಯತೆ ಇರುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ಎಂದಿಗೂ ಮುರಿದ ಕುರ್ಚಿ, ಹಾಳಾದ ವಸ್ತುಗಳನ್ನು ಇಡಲು ಹೋಗಬೇಡಿ. ಶನಿ ಇದ್ರಿಂದ ಕೋಪಗೊಳ್ಳುತ್ತಾನೆ. ಆತನ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದಲ್ಲಿ ನಿಮ್ಮ ಮನೆ ನೆಮ್ಮದಿ, ಆರ್ಥಿಕ ಸ್ಥಿತಿ ಹಾಳಾದಂತೆ.