ವೃಂದಾವನಗಳ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಪಂಡಿತರಿಂದ ಉಪನ್ಯಾಸ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗಂಗಾವತಿ(ಏ.27): ತಾಲೂಕಿನ ಆನೆಗೊಂದಿ ಐತಿಹಾಸಿಕ ನವವೃಂದಾವನ ಗಡ್ಡೆಯಲ್ಲಿ ಮಧ್ವ ಪರಂಪರೆಯ ಶ್ರೀ ವಾಗೀಶ ತೀರ್ಥರ ಪೂರ್ವಾರಾಧನೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ವೃಂದಾವನಗಳ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಪಂಡಿತರಿಂದ ಉಪನ್ಯಾಸ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
undefined
ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ
ಪವನ ಅಚಾರ್, ಹೊಸಪೇಟೆ, ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಸಾಮವೇದ ಗುರುರಾಜ ಆಚಾರ್, ಮಂತ್ರಾಲಯ ಇಡಪನೂರ್ ಸಂಜೀವ್ ಕುಲಕರ್ಣಿ, ವಾಜಿಂದ್ರ ರಾವ್, ಸಂಪ್ರತಿ ಮೋಹನ್, ಲಕ್ಷ್ಮಣ್ ರಾಜಪುರೋಹಿತ್, ಗುರುರಾಜ್, ಪ್ರಭಾಕರ್ ರಾವ್, ಲಕ್ಷ್ಮೀಕಾಂತ ಸಲಗುಂದಿ, ನವೀನ್ ಹೈದ್ರಾಬಾದ್, ವಿಜಯ ಕುಮಾರ, ಸಂಜೀವ, ಆನೆಗುಂದಿ ರಾಯರ ಮಠದ ಅರ್ಚಕ ವಿಜೇಂದ್ರಚಾರ ಚಳ್ಳಾರಿ, ಶ್ರೀನಿವಾಸ ಆಚಾರ್ಯ, ಆನೆಗುಂದಿ ಶಾಖಾಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಇದ್ದರು.