ದೇವರ ಪೂಜೆಯನ್ನು ಭಕ್ತಿಯಿಂದ ಮಾಡುವ ಜನರು ಪ್ರತಿ ದಿನ ನೈವೇದ್ಯ ಅರ್ಪಿಸೋದನ್ನು ಮರೆಯೋದಿಲ್ಲ. ಆದ್ರೆ ಈ ನೈವೇದ್ಯವನ್ನು ಯಾವ ಪಾತ್ರೆಯಲ್ಲಿ ನೀಡ್ಬೇಕು ಎನ್ನುವುದು ಅನೇಕರಿಗೆ ತಿಳಿದಿಲ್ಲ. ನಿಮ್ಮ ಪೂಜೆ ಫಲ ಸಂಪೂರ್ಣ ಸಿಗ್ಬೇಕೆಂದ್ರೆ ಇದನ್ನು ತಿಳಿದ್ಕೊಳ್ಳಿ.
ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರು ತಮ್ಮಿಷ್ಟದ ದೇವರಿಗೆ ತಮ್ಮದೇ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಆದ್ರೆ ದೇವರಿಗೆ ನೈವೇದ್ಯ ಮಾಡೋದನ್ನು ಮಾತ್ರ ತಪ್ಪಿಸೋದಿಲ್ಲ. ಪ್ರತಿ ದಿನ ಅನ್ನವನ್ನು ದೇವರಿಗೆ ಅರ್ಪಿಸುವವರಿದ್ದಾರೆ. ಮತ್ತೆ ಕೆಲವರು ಪ್ರತಿ ದಿನ ಸಕ್ಕರೆ, ಒಣ ಹಣ್ಣು, ಸಿಹಿ ತಿಂಡಿ ಸೇರಿದಂತೆ ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಅಥವಾ ಹಣ್ಣುಗಳನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ನೀವು ಯಾವ ಆಹಾರವನ್ನು ದೇವರಿಗೆ ಅರ್ಪಿಸುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು. ಆದ್ರೆ ಯಾವುದರಲ್ಲಿ ನೀಡುತ್ತೀರಿ ಎಂಬುದನ್ನು ಗಮನಿಸಬೇಕು.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಅನುಕೂಲಕ್ಕಾಗಿ ಪ್ಲಾಸ್ಟಿಕ್, ಪೇಪರ್ ಪ್ಲೇಟ್ ಸೇರಿದಂತೆ ಮನೆಯಲ್ಲಿರುವ ಯಾವುದೋ ಪಾತ್ರೆಯಲ್ಲಿ ಆಹಾರ (Food) ಇಟ್ಟು ಅದನ್ನು ದೇವರಿಗೆ ಅರ್ಪಿಸುತ್ತಾರೆ. ಆದರೆ ಪ್ಲಾಸ್ಟಿಕ್ ಅನ್ನು ಶುದ್ಧ ಎಂದು ಪರಿಗಣಿಸುವುದಿಲ್ಲ. ದೇವರು ಪಾತ್ರೆಗಳಲ್ಲಿ ಆಹಾರವನ್ನು ನೀಡುವುದಕ್ಕಿಂತ ಹೆಚ್ಚಾಗಿ ಎಲೆ (Leaves) ಗಳಲ್ಲಿ ಆಹಾರವನ್ನು ಸ್ವೀಕರಿಸಲು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಹಾಗಾದರೆ ನಿತ್ಯ ಪೂಜೆಯ ಸಮಯದಲ್ಲಿ ದೇವರಿಗೆ ಆಹಾರ ಅರ್ಪಿಸಲು ಯಾವ ಎಲೆಗಳನ್ನು ಉಪಯೋಗಿಸಬೇಕು ಎಂಬುದನ್ನು ನಾವು ಹೇಳ್ತೇವೆ.
Zodiac Signs: ಒಬ್ಬರು ವಿಪರೀತ ಖರ್ಚು ಮಾಡಿದರೆ, ಮತ್ತೊಬ್ಬರ ಸೋಮಾರಿಗಳು!
ದೇವರಿಗೆ ಈ ಎಲೆಯಲ್ಲಿ ಆಹಾರ ಅರ್ಪಿಸಿ :
ಬಾಳೆ ಎಲೆ : ಹಿಂದೂ ಧರ್ಮದಲ್ಲಿ ಬಾಳೆ ಎಲೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಯಾವುದೇ ಹಬ್ಬದಲ್ಲಿ ಊಟವನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ. ಬಾಳೆ ಎಲೆಯಲ್ಲಿ ವಿಷ್ಣು ನೆಲೆಸಿದ್ದಾನೆ ಎಂದು ನಂಬಲಾಗಿದೆ. ಆದ್ದರಿಂದ ಬಾಳೆ ಎಲೆಗಳಿಗೆ ಆಹಾರವನ್ನು ದೇವರಿಗೆ ನೈವೇದ್ಯವಾಗಿ ನೀಡುವುದರಿಂದ ಭಗವಂತ ವಿಷ್ಣುವಿನ ಆಶೀರ್ವಾದ ಸಿಗುತ್ತದೆ.
ಬಾಳೆ ಎಲೆ ವಿಷ್ಣುವಿನ ನೆಚ್ಚಿನ ಮರವಾಗಿದೆ. ಆದ್ದರಿಂದ ಭಗವಂತನು ಬಾಳೆ ಎಲೆಯಲ್ಲಿ ಅರ್ಪಿಸಿದ ಆಹಾರವನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಗೆ ಮತ್ತು ವಿಷ್ಣುವಿಗೆ ಬಾಳೆ ಎಲೆಯಲ್ಲಿ ಆಹಾರವನ್ನು ಅರ್ಪಿಸಿದ್ರೆ ಮನೆಯಲ್ಲಿ ಯಾವಾಗಲೂ ಆಹಾರದ ದಾಸ್ತಾನು ಇರುತ್ತದೆ ಮತ್ತು ಮನೆಯಲ್ಲಿ ಸದಾ ಪ್ರೀತಿ ಉಳಿಯುತ್ತದೆ.
ವೀಳ್ಯದೆಲೆ : ಪೂಜೆ ಅಂದ್ಮೇಲೆ ಅಲ್ಲಿ ವೀಳ್ಯದೆಲೆ ಇರಬೇಕು. ಹಾಗೆಯೇ ನೀವು ದೇವರಿಗೆ ನೈವೇದ್ಯ ಅರ್ಪಿಸುವಾಗ ವೀಳ್ಯದೆಲೆ ಬಳಸಬಹುದು. ವೀಳ್ಯದೆಲೆ ಮೇಲೆ ನೀವು ಯಾವುದೇ ಆಹಾರ ಇಟ್ಟರೂ ದೇವರು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ ಎಂಬ ನಂಬಿಕೆ ಇದೆ.
ಪಲಾಶ ಎಲೆ : ಮುತ್ತುಗ ಮರ ಅಥವಾ ಗಿಳಿ ಮರ ಎಂದು ಕರೆಯಲ್ಪಡುವ ಗಿಡದ ಎಲೆ ಇದು. ದೇವಾನುದೇವತೆಗಳಿಗೆ ಪಲಾಶದ ಹೂವನ್ನು ಹೆಚ್ಚು ಪ್ರಿಯ. ಅದೇ ರೀತಿ ಅದರ ಎಲೆಗಳನ್ನು ನೀವು ದೇವರಿಗೆ ಆಹಾರ ನೀಡಲು ಬಳಸಬಹುದು. ಚಿನ್ನದ ಪಾತ್ರೆಯಲ್ಲಿ ಆಹಾರವನ್ನಿಟ್ಟು ದೇವರಿಗೆ ಅರ್ಪಿಸಲು ಸಾಧ್ಯವಿಲ್ಲ ಎನ್ನುವವರು ಪಲಾಶದ ಎಲೆಯಲ್ಲಿ ಆಹಾರವಿಟ್ಟು ದೇವರಿಗೆ ಅರ್ಪಿಸಬೇಕು. ಇದಕ್ಕೆ ಚಿನ್ನದ ಪಾತ್ರೆಗಿದ್ದಷ್ಟೆ ಮಹತ್ವವಿದೆ.
ಹುಟ್ಟಿದ ದಿನಾಂಕದಿಂದ ನಿಮಗೆ ಅದೃಷ್ಟ ಯಾವ ವಯಸ್ಸಿನಲ್ಲಿ ಬರುತ್ತೆ ನೋಡಿ
ಮಾವಿನ ಎಲೆ (Mango Leaves) : ಹಬ್ಬಹರಿದಿನಗಳಲ್ಲಿ ಮಾವಿನ ತೋರಣ ಮನೆಯ ಮುಖ್ಯ ದ್ವಾರದಲ್ಲಿ ಕಂಗೊಳಿಸುತ್ತದೆ. ಮನೆಯೊಳಗೆ ಬರುವ ಕೀಟಗಳನ್ನು ಇದು ತಡೆಯುವುದಲ್ಲದೆ ನಕಾರಾತ್ಮಕ ಶಕ್ತಿ ಓಡಿಸುವ ಶಕ್ತಿ ಈ ಮಾವಿನ ಎಲೆಗಳಿಗಿದೆ. ನಿಮ್ಮ ಮನೆಯಲ್ಲಿ ಮೇಲೆ ಹೇಳಿದ ಯಾವುದೇ ಗಿಡದ ಎಲೆ ಇಲ್ಲ ಎಂದಾಗ ನೀವು ಮಾವಿನ ಎಲೆಯನ್ನು ಬಳಸಬಹುದು. ದೇವರಿಗೆ ನೀವು ಮಾಡಿದ ಆಹಾರವನ್ನು ಮಾವಿನ ಎಲೆಯಲ್ಲಿಟ್ಟು ಅರ್ಪಿಸಬಹುದು.
ಯಾವ ಪಾತ್ರೆ ಬಳಸಬೇಕು? : ಮೊದಲೇ ಹೇಳಿದಂತೆ ದೇವರಿಗೆ ನೈವೇದ್ಯ ಅರ್ಪಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಪ್ಲಾಸ್ಟಿಕ್ ಪಾತ್ರೆ ಬಳಸಬೇಡಿ. ಚಿನ್ನ, ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ, ಮಣ್ಣಿನ ಪಾತ್ರೆಯನ್ನು ಬಳಸಿ.