ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ವಸಂತ ಪಂಚಮಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಸರಸ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ಈ ಬಾರಿ ಜನವರಿ 26ರ ಗುರುವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಂದು ಸರಸ್ವತಿ ಪೂಜೆ ಮಾಡುವುದೇಕೆ?
ಹಿಂದೂ ಧರ್ಮದಲ್ಲಿ, ತಾಯಿ ಸರಸ್ವತಿಯನ್ನು ಜ್ಞಾನ, ಸಂಗೀತ ಮತ್ತು ಕಲೆಗಳ ದೇವತೆಯಾಗಿ ಪೂಜಿಸಲಾಗುತ್ತದೆ. ಯಾವುದೇ ಶಾಲೆ, ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳು ನಡೆದಾಗ ಸರಸ್ವತಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ವಸಂತ ಪಂಚಮಿ ಹಬ್ಬವನ್ನು ವರ್ಷಕ್ಕೊಮ್ಮೆ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ, ಈ ದಿನ ಸರಸ್ವತಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನವನ್ನು ಮಧುಮಾಸ, ಜ್ಞಾನ ಪಂಚಮಿ, ಶ್ರೀ ಪಂಚಮಿ ಎಂದೂ ಕರೆಯಲಾಗುತ್ತದೆ. ಈ ಬಾರಿ ಈ ದಿನಾಂಕ ಜನವರಿ 26, ಗುರುವಾರದಂದು ವಸಂತ ಪಂಚಮಿ ಬರುತ್ತಿದೆ. ಈ ವಸಂತ ಪಂಚಮಿ ಹಬ್ಬ ಏಕೆ ವಿಶೇಷವಾಗಿದೆ ಮತ್ತು ಈ ದಿನ ಸರಸ್ವತಿ ದೇವಿಯನ್ನು ಏಕೆ ವಿಶೇಷವಾಗಿ ಪೂಜಿಸಲಾಗುತ್ತದೆ ಎಂಬುದನ್ನು ತಿಳಿಯಿರಿ.
ವಸಂತ ಪಂಚಮಿ ಹಬ್ಬವನ್ನು ಏಕೆ ಆಚರಿಸುತ್ತೇವೆ?
ವಸಂತ ಪಂಚಮಿ ಹಬ್ಬದ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಒಂದು ಕಥೆಯ ಪ್ರಕಾರ, ಸೃಷ್ಟಿಯ ಪ್ರಾರಂಭದಲ್ಲಿ, ವಿಷ್ಣುವಿನ ಆದೇಶದಂತೆ, ಬ್ರಹ್ಮನು ಮೊದಲು ಭೂಮಿ ಮತ್ತು ಇತರ ಗ್ರಹಗಳನ್ನು ಸೃಷ್ಟಿಸಿದನು. ಇದರ ನಂತರ, ಮಾನವರು ಸೃಷ್ಟಿಯಾದರು. ಇಷ್ಟೆಲ್ಲಾ ಮಾಡಿದ ನಂತರವೂ ಬ್ರಹ್ಮದೇವನಿಗೆ ತನ್ನ ಸೃಷ್ಟಿಯಲ್ಲಿ ಏನೋ ಕೊರತೆಯಿದೆ ಎಂದು ಅನಿಸಿತು ಏಕೆಂದರೆ ಈ ಸೃಷ್ಟಿಯಲ್ಲಿ ಶಬ್ದವಿರಲಿಲ್ಲ. ಆಗ ಬ್ರಹ್ಮದೇವನು ತನ್ನ ಕಮಂಡಲದಿಂದ ನೀರನ್ನು ಚಿಮುಕಿಸಿದನು, ಅದರಿಂದ ದೇವತೆಯು ಜನಿಸಿದಳು.
ಆ ದೇವಿಯ ಒಂದು ಕೈಯಲ್ಲಿ ವೀಣೆ, ಎರಡನೇ ಕೈಯಲ್ಲಿ ಪುಸ್ತಕ, ಮೂರು ಮತ್ತು ನಾಲ್ಕನೇ ಕೈ ಮಾಲೆ ವರದ ಮುದ್ರೆಯಲ್ಲಿತ್ತು. ದೇವಿಯು ವೀಣೆಯನ್ನು ಮುಟ್ಟಿದ ಕೂಡಲೇ ಬ್ರಹ್ಮಾಂಡದಲ್ಲಿ ನಾದ ಅಂದರೆ ಶಬ್ದವು ಉಗಮವಾಯಿತು. ಆ ದೇವಿಗೆ ಸರಸ್ವತಿ ಎಂದು ಹೆಸರಿಡಲಾಯಿತು.
ರಾತ್ರಿಯೇಕೆ ಮರದ ಬಳಿ ಹೋಗ್ಬಾರದು? ದೆವ್ವ ಭೂತ ಇರೋದು ನಿಜಾನಾ?
ಆ ದಿನ ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿಯಾಗಿತ್ತು ಮತ್ತು ಅದು ವಸಂತ ಋತು. ಆದ್ದರಿಂದ ಆ ದಿನದಿಂದ ವಸಂತ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಸರಸ್ವತಿಯನ್ನಷ್ಟೇ ಅಲ್ಲದೆ, ಕಾಮ, ರತಿಯ ಪೂಜೆಯನ್ನೂ ಮಾಡಲಾಗುತ್ತದೆ. ಇದರಿಂದ ದಾಂಪತ್ಯ ಸಮಸ್ಯೆಗಳು ನೀಗುತ್ತವೆ.
ವಸಂತ ಪಂಚಮಿಯ ಮಹತ್ವ
ವಸಂತ ಪಂಚಮಿಯಂದು ಸರಸ್ವತಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಸರಸ್ವತಿ ದೇವಿಯು ಜ್ಞಾನವನ್ನು ನೀಡುವುದರ ಜೊತೆಗೆ ಲಲಿತಕಲೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಾಳೆ. ಸರಸ್ವತಿ ದೇವಿಯ ಜ್ಞಾನದ ಬಲದಿಂದ ಮಾತ್ರ ನಾವು ಜೀವನದಲ್ಲಿ ಮುಂದುವರಿಯುವ ಧೈರ್ಯವನ್ನು ಪಡೆಯುತ್ತೇವೆ. ಈ ದಿನದಂದು ಸರಸ್ವತಿ ದೇವಿಯ ಪೂಜೆಯಲ್ಲಿ ಹಳದಿ ವಸ್ತುಗಳನ್ನು ವಿಶೇಷವಾಗಿ ಬಳಸಲಾಗುತ್ತದೆ, ಏಕೆಂದರೆ ಹಳದಿ ಬಣ್ಣವು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಜೀವನದ ಪ್ರತಿಯೊಂದು ಸಂದರ್ಭದಲ್ಲೂ ನಾವು ಸಂತೋಷವಾಗಿರಬೇಕೆಂದು ಇದು ನಮಗೆ ಕಲಿಸುತ್ತದೆ.
undefined
Shani Amavasya 2023: ಇಂದು ಶನಿ ಚಾಲೀಸಾ ಪಠಣದಿಂದ ದೋಷಮುಕ್ತಿ.. ಇಲ್ಲಿದೆ ಶನಿ ಚಾಲೀಸಾ ಪಠ್ಯ
ವಸಂತ ಪಂಚಮಿ ತಿಥಿ
ಪಂಚಮಿ ತಿಥಿ ಜನವರಿ 25ರಂದು ಮಧ್ಯಾಹ್ನ 12:34ಕ್ಕೆ ಪ್ರಾರಂಭವಾಗುತ್ತದೆ. ಪಂಚಮಿ ತಿಥಿಯು ಜನವರಿ 26ರಂದು ಬೆಳಿಗ್ಗೆ 10:28ಕ್ಕೆ ಕೊನೆಗೊಳ್ಳುತ್ತದೆ. ಜನವರಿ 26ರ ಉದಯ ತಿಥಿಯಂದು ವಸಂತ ಪಂಚಮಿ ಮತ್ತು ಸರಸ್ವತಿ ಪೂಜೆ ನೆರವೇರಲಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.