ರಾತ್ರಿ ಹೊತ್ತು ಯಾವುದೇ ಮರದ ಕೆಳಗೆ ಹೋಗಬಾರದು ಅಥವಾ ಮರದ ಬುಡದಲ್ಲಿ ಮಲಗಬಾರದು ಅಂತಾರೆ ದೊಡ್ಡೋರು. ನಿಜಕ್ಕೂ ಈ ಮರಗಳಲ್ಲಿ ರಾತ್ರಿ ಹೊತ್ತಿನಲ್ಲಿ ದೆವ್ವ ಭೂತ ಇರುತ್ತಾ? ಅಥವಾ ಬೇರೇನಾದರೂ ಕಾರಣವಿದೆಯೇ?
ರಾತ್ರಿ ಯಾವುದೇ ಮರದ ಹತ್ತಿರ ಹೋಗಬಾರದು, ಅಪ್ಪಿತಪ್ಪಿಯೂ ಅದನ್ನು ಮುಟ್ಟಬಾರದು ಎಂದು ನಮ್ಮ ಕುಟುಂಬದ ಹಿರಿಯರಿಂದ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಈ ರೀತಿ ಮಾಡುವುದರಿಂದ ನಮಗೆ ಏನಾದರೂ ಅಶುಭ ಸಂಭವಿಸಬಹುದು ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳಿವೆ. ಕೆಲವು ಕಾರಣಗಳು ಖಂಡಿತವಾಗಿಯೂ ಈ ನಂಬಿಕೆಗಳು ಮತ್ತು ಸಂಪ್ರದಾಯಗಳ ಹಿಂದೆ ಅಡಗಿದೆ. ಆದರೆ ಕೆಲವೇ ಜನರಿಗೆ ಅವುಗಳ ಬಗ್ಗೆ ತಿಳಿದಿದೆ. ಅಂತಹ ಒಂದು ನಂಬಿಕೆಯೆಂದರೆ, ರಾತ್ರಿಯಲ್ಲಿ ತಪ್ಪಾಗಿಯೂ ಯಾವುದೇ ಮರದ ಬಳಿ ಹೋಗಬಾರದು ಮತ್ತು ಅದನ್ನು ಮುಟ್ಟಬಾರದು, ಯಾರಾದರೂ ಹಾಗೆ ಮಾಡಿದರೆ ಅವನು ದುಷ್ಟ ಶಕ್ತಿಯಿಂದ ಪ್ರಭಾವಿತನಾಗಬಹುದು. ಆದರೆ ಇದರ ಹಿಂದಿನ ಕಾರಣವನ್ನು ನಾವು ಇಂದು ನಿಮಗೆ ಹೇಳುತ್ತಿದ್ದೇವೆ ..
ಕಾರಣ ಇಲ್ಲಿದೆ..
ಮರಗಳು ಸಹ ಮನುಷ್ಯರಂತೆ ಉಸಿರಾಡುತ್ತವೆ ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ಈಗಾಗಲೇ ತಿಳಿದುಬಂದಿದೆ. ಆದರೆ ಮರಗಳು ಹಗಲಿನಲ್ಲಿ ಮಾತ್ರ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ರಾತ್ರಿಯಲ್ಲ. ಮರಗಳ ಉಸಿರಾಟದ ಪ್ರಕ್ರಿಯೆಯನ್ನು ದ್ಯುತಿ ಸಂಶ್ಲೇಷಣೆಯಿಂದ ಮಾಡಲಾಗುತ್ತದೆ. ಈ ದ್ಯುತಿ ಸಂಶ್ಲೇಷಣೆಗೆ ಸೂರ್ಯನ ಬೆಳಕು ಬೇಕೇ ಬೇಕು. ರಾತ್ರಿಯಲ್ಲಿ ಸೂರ್ಯನ ಬೆಳಕು ಲಭ್ಯವಿಲ್ಲದ ಕಾರಣ, ಈ ಸಮಯದಲ್ಲಿ ಮರಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮರದ ಸುತ್ತಲಿನ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತದೆ ಮತ್ತು ಕಾರ್ಬನ್-ಡೈ-ಆಕ್ಸೈಡ್ ಮಟ್ಟವು ಹೆಚ್ಚಾಗುತ್ತದೆ.
Shani Amavasya 2023: ಇಂದು ಶನಿ ಚಾಲೀಸಾ ಪಠಣದಿಂದ ದೋಷಮುಕ್ತಿ.. ಇಲ್ಲಿದೆ ಶನಿ ಚಾಲೀಸಾ ಪಠ್ಯ
ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಮರದ ಕೆಳಗೆ ದೀರ್ಘಕಾಲ ನಿಂತಿದ್ದರೆ, ಕಡಿಮೆ ಪ್ರಮಾಣದ ಆಮ್ಲಜನಕದಿಂದ ಅವನು ಮೂರ್ಛೆ ಹೋಗಬಹುದು ಅಥವಾ ಅವನಿಗೆ ಬೇರೆ ದೈಹಿಕ ಕಾಯಿಲೆ ಕಾಡಬಹುದು. ಇದನ್ನೇ ಕೆಲವರು ರಾತ್ರಿ ಹೊತ್ತು ಆ ಮರದ ಬಳಿ ಹೋಗಿ ಏನೋ ನೋಡಿ ಹೆದರಿ ಮೂರ್ಚೆ ಹೋಗಿದ್ದಾನೆ ಎಂದು ಭಾವಿಸುತ್ತಾರೆ. ಆದರೆ, ಅದು ನಿಜವಲ್ಲ. ಇದೊಂದೇ ಕಾರಣವಲ್ಲ, ಮರಗಳಲ್ಲಿ ಸಾಕಷ್ಟು ಪ್ರಾಣಿ ಪಕ್ಷಿ ಕೀಟಗಳು ಮನೆ ಮಾಡಿಕೊಂಡಿರುತ್ತವೆ. ರಾತ್ರಿ ಅವು ಕೂಡಾ ವಿಶ್ರಮಿಸುತ್ತಿರುತ್ತವೆ. ಮರದ ಬಳಿ ಹೋಗುವುದರಿಂದ ಅವುಗಳಿಗೂ ತೊಂದರೆಯಾಗುತ್ತದೆ. ಅವನ್ನೂ ನಮ್ಮಂತೆಯೇ ಜೀವಿಗಳು ಎಂದು ಪೂರ್ವಜರು ಪರಿಗಣಿಸಿ ಗೌರವಿಸುತ್ತಿದ್ದರು. ಆದ್ದರಿಂದಲೇ ನಮ್ಮ ಹಿರಿಯರು ರಾತ್ರಿ ವೇಳೆ ಮರದ ಹತ್ತಿರ ಹೋಗಬಾರದು ಎಂಬ ಸಂಪ್ರದಾಯವನ್ನು ರೂಢಿಸಿಕೊಂಡು ರಾತ್ರಿಯಲ್ಲಿ ಯಾರೂ ಭಯದಿಂದ ಮರದ ಕೆಳಗೆ ಹೋಗದಂತೆ ದೆವ್ವದೊಂದಿಗೆ ಕತೆ ಜೋಡಿಸಿದರು.
ಇನ್ನೂ ಒಂದು ಅಂಶವೆಂದರೆ ಅದು..
ನಮ್ಮ ಪೂರ್ವಜರು ಪ್ರಾಚೀನ ಕಾಲದಿಂದಲೂ ಪ್ರಕೃತಿಯ ಆರಾಧಕರು. ಅವರು ಮರಗಳು ಮತ್ತು ಗಿಡಗಳನ್ನು ಒಳಗೊಂಡಂತೆ ಪ್ರಕೃತಿಯನ್ನು ದೇವರಂತೆ ಪೂಜಿಸಿದರು. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ರಾತ್ರಿಯಲ್ಲಿ ನಾವು ಹೇಗೆ ಮಲಗುತ್ತೇವೆಯೋ ಅದೇ ರೀತಿಯಲ್ಲಿ ಸಸ್ಯಗಳು ಸಹ ವಿಶ್ರಾಂತಿ ಪಡೆಯುತ್ತವೆ ಎಂದು ಹೇಳಲಾಗುತ್ತದೆ. ನಾವು ಅವುಗಳ ಹತ್ತಿರ ಹೋದಾಗ ಅಥವಾ ಅವುಗಳನ್ನು ಮುಟ್ಟಿದಾಗ, ಅವು ಅಹಿತಕರ ಭಾವನೆ ಅನುಭವಿಸುತ್ತವೆ. ಯಾವುದೇ ದೇವತೆಯನ್ನು ನಿದ್ರೆಯಿಂದ ಎಬ್ಬಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಮರ-ಗಿಡಗಳೂ ಆತನ ರೂಪವೇ. ರಾತ್ರಿ ವೇಳೆ ಮರ-ಗಿಡಗಳ ಹತ್ತಿರ ಹೋಗದಿರುವುದು ಮತ್ತು ಅವುಗಳನ್ನು ಮುಟ್ಟದೇ ಇರುವುದಕ್ಕೆ ಇದೂ ಒಂದು ಕಾರಣ.
Shukra Gochar 2023: ಮಾಳವ್ಯ ರಾಜಯೋಗ ಈ 3 ರಾಶಿಗಳಿಗೆ ತರಲಿದೆ ಶುಕ್ರದೆಸೆ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.