Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!

Published : Feb 09, 2022, 12:49 PM IST
Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!

ಸಾರಾಂಶ

ನಾವಾಗಲೇ ವ್ಯಾಲೆಂಟೇನ್ಸ್ ವಾರದ ಮಧ್ಯದಲ್ಲಿದ್ದೀವಿ. ಆದರೆ ನೀವಿನ್ನೂ ನಿಮ್ಮ ಪ್ರೇಮಿಗೆ ಏನಪ್ಪಾ ಕೊಡೋದು ಅನ್ನೋ ಗೊಂದಲ್ದಲ್ಲೇ ಇದ್ದೀರಾ? ಇನ್ನು ತಡ ಮಾಡ್ಬೇಡಿ, ಅವರಿಗೆ ಏನ್ ಕೊಟ್ರೆ ಚೆನ್ನಾಗಿರತ್ತೆ ಅಂತ ನಾವ್ ಹೇಳ್ತೀವಿ. 

ವ್ಯಾಲೆಂಟೈನ್ಸ್ ಡೇ ಹತ್ರ ಬಂದೇ ಬಿಡ್ತು. ಇನ್ನೂ ನಿಮ್ಮ ಲವರ್‌ಗೆ ಏನಪ್ಪಾ ಕೊಡೋದಂತ ಆನ್‌ಲೈನ್ ವೆಬ್‌ಸೈಟ್ಸ್ ತಡಕಾಡ್ತಾನೇ ಇದೀರಾ? ಹೀಗೇ ತಡ ಮಾಡಿದ್ರೆ ವ್ಯಾಲೆಂಟೈನ್ಸ್ ಡೇ ಮುಗಿದೇ ಹೋಗುತ್ತಷ್ಟೇ. ತುಂಬಾ ತಲೆ ಕೆಡಿಸ್ಕೋಬೇಡಿ, ನಿಮ್ಮ ಪ್ರೇಮಿಯ ರಾಶಿ ಯಾವ್ದು ತಿಳುಕೊಳ್ಳಿ, ಅವರಿಗೇನ್ ಕೊಟ್ರೆ ಇಷ್ಟ ಆಗುತ್ತಂತ ನಾವ್ ಹೇಳ್ತೀವಿ. 

ಮೇಷ(Aries): ಇವರು ಸಾಹಸ(adventure) ಪ್ರವೃತ್ತಿಯವರು. ಹಾಗಾಗಿ ಇವರಿಗೆ ಅವರ ಸಾಹಸ  ಪ್ರವೃತ್ತಿಗೆ ಹೊಂದುವಂಥ ಉಡುಗೊರೆ ಇಷ್ಟವಾಗುತ್ತದೆ. ಉದಾಹರಣೆಗೆ ಟ್ರೆಕ್ಕಿಂಗ್ ಬ್ಯಾಗ್, ಶೂ, ಅಥವಾ ಗಾಗಲ್ಸ್ ಕೊಡಬಹುದು. ಗೋ ಕಾರ್ಟಿಂಗ್ ಕರೆದುಕೊಂಡು ಹೋಗುವುದೂ ಉತ್ತಮ ಐಡಿಯಾವೇ. 

ವೃಷಭ(Taurus): ಇವರಿಗೆ ಇಂದ್ರಿಯಗಳನ್ನು ಮೆಚ್ಚಿಸುವಂಥ ಉಡುಗೊರೆ ಒಪ್ಪುತ್ತದೆ. ಉತ್ತಮ ಪರ್ಫೂಮ್, ಲಕ್ಷುರಿ ಬಟ್ಟೆ, ಕಾಶ್ಮೀರ್ ಸ್ವೆಟರ್, ಚೆಂದದ ಮ್ಯೂಸಿಕ್, ಅಥವಾ ದೊಡ್ಡ ರೆಸ್ಟೋರೆಂಟ್‌ನಲ್ಲಿ ಸ್ಪೆಶಲ್ ಡಿನ್ನರ್ ಇವರಿಗೆ ಹೆಚ್ಚು ಖುಷಿ ತರುತ್ತದೆ. 

ಮಿಥುನ(Gemini): ಇವರಿಗೆ ವೆರೈಟಿ  ಇಷ್ಟ. ಜೊತೆಗೆ ಬೇಗ ಬೋರಾಗುವವರು. ಹಾಗಾಗಿ, ಸರ್ಪ್ರೈಸ್‌ಗಳ ಮಳೆ ಸುರಿಸಿ ಇವರನ್ನು ಫಿದಾವಾಗಿಸಿ. ಗ್ಯಾಡ್ಜೆಟ್ಸ್, ಟಾಯ್ಸ್, ಚಿಕ್ಕ ಚಿಕ್ಕ ಸರ್ಪ್ರೈಸ್ ಆಗಿ ಚಾಕೋಲೇಟ್ಸ್, ಕೀ ಚೈನ್ ಇತ್ಯಾದಿ ಇತ್ಯಾದಿ .. ಪುಟ್ಟದಾದರೂ ಪರವಾಗಿಲ್ಲ, ತುಂಬ ಉಡುಗೊರೆಗಳನ್ನು ದಿನವಿಡೀ ಒಂದೊಂದಾಗಿ ಕೊಡುತ್ತಿರಿ. 

ಕಟಕ(Cancer): ಕಟಕಕ್ಕೆ ಸುರಕ್ಷತಾ ಭಾವನೆ ಉಂಟು ಮಾಡುವುದು ಮುಖ್ಯ. ಮನೆಯ ಕಂಫರ್ಟ್ ಬಹಳಷ್ಟು ಇಷ್ಟ. ಹಾಗಾಗಿ, ಸಾಧ್ಯವಾದರೆ ಅವರ ಕೋಣೆಯನ್ನು ಚೆನ್ನಾಗಿ ಅಲಂಕರಿಸಿ. ಇಲ್ಲವೇ ಡೈಮಂಡ್ ಅಥವಾ ಗೋಲ್ಡ್ ಉಡುಗೊರೆಗಳನ್ನು ಕೊಡಿ. ಜೊತೆಗೆ ರೋಸ್ ಹಾಗೂ ಚಾಕೋಲೇಟ್ ಇಟ್ಟರೆ ಇಂಪ್ಯಾಕ್ಟ್ ಹೆಚ್ಚು. 

Expressing Rejection: ನೀವಿಷ್ಟ ಇಲ್ಲ ಎಂಬುದನ್ನು ಯಾವ ರಾಶಿಯವರು ಹೇಗೆ ತಿಳಿಸುತ್ತಾರೆ ನೋಡಿ..

ಸಿಂಹ(Leo): ಎಲ್ಲ ರಾಶಿಯವರಿಗೂ ತಮ್ಮನ್ನು ವಿಶೇಷವೆಂದು ಪರಿಗಣಿಸಿದರೆ ಇಷ್ಟವೇ. ಆದರೆ, ಆ ವಿಶೇಷವಾಗಿ ಪರಿಗಣಿಸುವುದನ್ನು ಸಿಂಹ ರಾಶಿಯವರು ಎಂಜಾಯ್ ಮಾಡುವಷ್ಟು ಮತ್ಯಾರೂ ಮಾಡಲಿಕ್ಕಿಲ್ಲ. ಅವರನ್ನೊಂದು ಸೆಲೆಬ್ರಿಟಿ ಎಂಬಂತೆ ಟ್ರೀಟ್ ಮಾಡಿ. ಚೆಂದದ ಆಭರಣ ಕೊಡಿ ಇಲ್ಲವೇ, ಗ್ಯಾಡ್ಜೆಟ್‌ಗಲು ಉತ್ತಮ ಆಯ್ಕೆ. ಅವಕ್ಕಿಂತ ಹೆಚ್ಚಾಗಿ ದೊಡ್ಡ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಕೊಡಿ. 

ಕನ್ಯಾ(Virgo): ಇವರಿಗೆ ಆರೋಗ್ಯ ಹಾಗೂ ತಮ್ಮನ್ನು ತಾವು ಇಂಪ್ರೂವ್ ಮಾಡಿಕೊಳ್ಳುವ ಬಗ್ಗೆ ವಿಶೇಷ ಕಾಳಜಿ. ಹಾಗಾಗಿ ಇವರಿಗೆ ಸ್ಪಾಗೆ ಕರೆದುಕೊಂಡು ಹೋಗಿ ಇಲ್ಲವೇ, ಪಾರ್ಲರ್‌ನಲ್ಲಿ ಮೇಕ್‌ಓವರ್ ಮಾಡಿಸಿ. ಹರ್ಬಲ್ ಉತ್ಪನ್ನಗಳನ್ನು ಉಡುಗೊರೆಯಾಗಿ ಕೊಡಿ. 

ತುಲಾ(Libra): ಇವರು ಬಹಳ ರೊಮ್ಯಾಂಟಿಕ್. ಹಳೆಯ ಫ್ಯಾಶನ್ ಆದರೂ ಗ್ರೀಟಿಂಗ್ ಕಾರ್ಡ್, ಲೆಟರ್ಸ್, ಬೊಕೆ, ಚೆಂದದ ಹಾಡುಗಳು ಇವರನ್ನು ಕರಗಿಸುತ್ತವೆ. ಇದರೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಕರೆದುಕೊಂಡು ಹೋಗಿ. 

Venus-Mars conjunction 2022: ನಿಮ್ಮ ವಿ ಡೇ ಯೋಜನೆಗೆ ಮಂಗಳ- ಶುಕ್ರ ಸಂಯೋಗ ಅಡ್ಡಗಾಲಾಗುವುದೇ?

ವೃಶ್ಚಿಕ(Scorpio): ಇವರಿಗೆ ಪರ್ಸ್‌ನಲೈಸ್ಡ್ ವಸ್ತುಗಳು ಉತ್ತಮ ಆಯ್ಕೆ. ಇವರ ಫೋಟೋ ಕೊಲ್ಯಾಜ್, ಅಥವಾ ಮಗ್ ಕೊಡಬಹುದು. ಅವಲ್ಲದೆ ಹಲವು ಕಸ್ಟಮೈಸ್ಡ್ ಉಡುಗೊರೆಗಳು ದೊರೆಯುತ್ತವೆ. ಯಾವುದು ಹೊಸತಾಗಿದೆ ಚೆಕ್ ಮಾಡಿ. ಇಲ್ಲದಿದ್ದಲ್ಲಿ ಬೆಳ್ಳಿಯ ಆಭರಣಗಳು ಉತ್ತಮ ಆಯ್ಕೆ. 

ಧನುಸ್ಸು(Sagittarius): ಧನು ರಾಶಿಯವರು ಸ್ವತಂತ್ರ ಪ್ರವೃತ್ತಿಯವರು ಜೊತೆಗೆ ಸಾಹಸಿಗಳು. ಇವರನ್ನು ಮಿಸ್ಟರಿ ಕೋಣೆಗೆ ಕರೆದುಕೊಂಡು ಹೋಗಬಹುದ. ಇಲ್ಲದಿದ್ದಲ್ಲಿ, ಟ್ರೆಕ್ಕಿಂಗೆ ಹೋಗುವುದು, ಕುದುರೆ ಓಡಿಸುವುದು, ಯಾವುದೇ ಸಾಹಸಿ ಕ್ರೀಡೆಗಳಿಗೆ ಕರೆದುಕೊಂಡು ಹೋದರೆ ಕರಗಿ ಹೋಗುತ್ತಾರೆ. 

ಮಕರ(Capricorn): ಇವರಿಗೆ ಡಿಸೈನರ್ ಲೆದರ್ ಬ್ಯಾಗ್ ಉತ್ತಮ ಆಯ್ಕೆ. ಮನೆಯಲ್ಲಿ ನೀವೇ ಆಹಾರ ತಯಾರಿಸಿ ತೆಗೆದುಕೊಂಡು ಹೋಗಿ ಕೊಟ್ಟರೂ ಬಹಳ ಖುಷಿಯಾಗುತ್ತಾರೆ. 

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

ಕುಂಭ(Aquarius): ಇವರ ಹೃದಯ ಗೆಲ್ಲಲು ಎರಡು ದಾರಿಗಳಿವೆ. ಒಂದು ಬುದ್ಧಿವಂತಿಕೆಯನ್ನು ಮೆಚ್ಚುವುದು ಇನ್ನೊಂದು ಸಾಮಾನ್ಯ ಉಡುಗೊರೆಗಳ ಹೊರತಾಗಿ ವಿಶೇಷವಾದುದನ್ನು ಯೋಜಿಸುವುದು. ಉತ್ತಮ ಪುಸ್ತಕ ಕೊಡಬಹುದು. ಇಲ್ಲದಿದ್ದಲ್ಲಿ ಇವರ ಹೆಸರಿನಲ್ಲಿ ನಕ್ಷತ್ರವೊಂದನ್ನು ದಾಖಲು ಮಾಡಿಸಿ ಸರ್ಟಿಫಿಕೇಟ್ ಉಡುಗೊರೆಯಾಗಿ ಕೊಡುವುದು ಅಥವಾ ಲಾಂಗ್ ಡ್ರೈವ್ ಕರೆದುಕೊಂಡು ಹೋಗುವುದು, ಇವರ ನೆಚ್ಚಿನ ಸೆಲೆಬ್ರಿಟಿಯನ್ನು ಮೀಟ್ ಮಾಡಿಸುವುದು - ಹೀಗೆ ಸ್ವಲ್ಪ ಜಾಸ್ತಿ ಯೋಜನೆ ರೂಪಿಸಿ. 

ಮೀನ(Pisces): ಇವರು ಬಹಳ ಭಾವಜೀವಿಗಳು. ಇವರಿಗಾಗಿ ನೀವು ಕವನವೊಂದನ್ನು ಬರೆಯಲು ಪ್ರಯತ್ನಿಸಬಹುದು, ಇಲ್ಲದಿದ್ದಲ್ಲಿ ಅವರು ನಿಮಗೇಕಿಷ್ಟ ಎಂದು ಉದ್ದದ ಪತ್ರ ಬರೆದು ಕೊಡಬಹುದು. ಚೆಂದದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಕೈ ಲ್ಯಾಂಟರ್ನ್ ಹಾರಿಸುವುದು ಕೂಡಾ ಉತ್ತಮ ಆಯ್ಕೆ
 

PREV
Read more Articles on
click me!

Recommended Stories

2026 ರ ಮೊದಲು ಸಮಸಪ್ತಕ ರಾಜಯೋಗ, 3 ರಾಶಿಗೆ ಅದೃಷ್ಟ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ
ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು