Expressing Rejection: ನೀವಿಷ್ಟ ಇಲ್ಲ ಎಂಬುದನ್ನು ಯಾವ ರಾಶಿಯವರು ಹೇಗೆ ತಿಳಿಸುತ್ತಾರೆ ನೋಡಿ..

By Suvarna News  |  First Published Feb 8, 2022, 6:05 PM IST

ಪ್ರೀತಿ ನಿವೇದನೆ ಮಾಡುವುದು ಕಷ್ಟವಲ್ಲ, ತಿರಸ್ಕಾರ ಎದುರಿಸುವುದು ಕಷ್ಟ. ಯಾವ ರಾಶಿಯವರು ಹೇಗೆ ನಿರಾಕರಿಸುತ್ತಾರೆ ಗೊತ್ತಾ?


ಬಹುತೇಕರಿಗೆ ಪ್ರಪೋಸ್ ಮಾಡುವುದು ಅತಿ ಕಷ್ಟದ ಕೆಲಸವಾಗಿದ್ದಕ್ಕೆ ಕಾರಣ, ತಿರಸ್ಕಾರದ ಭಯ. ತಾವಿಷ್ಟ ಪಟ್ಟವರ ಬಳಿ ತಮ್ಮ ಫೀಲಿಂಗ್ಸ್ ಹೇಳಿಕೊಂಡು ಕಡೆಗೆ ಅವರು ತಿರಸ್ಕರಿಸಿದರೆ ಅದರಿಂದ ಒಂದು ಸಂಬಂಧವನ್ನೂ ಕಳೆದುಕೊಳ್ಳಬೇಕು, ತಿರಸ್ಕಾರದ ಅವಮಾನವನ್ನೂ ಅನುಭವಿಸಬೇಕಾಗುತ್ತದೆ ಎಂಬ ಯೋಚನೆಯಲ್ಲೇ ಹೇಳದೆ ಕಳೆದುಕೊಳ್ಳುವವರಿದ್ದಾರೆ. ಈಗ ಒಂದು ವೇಳೆ ನೀವಿಷ್ಟಪಟ್ಟವರು ನಿಮ್ಮನ್ನು ತಿರಸ್ಕರಿಸುವ ಸಾಧ್ಯತೆಯನ್ನೇ ನೋಡೋಣ. ರಾಶಿ ಆಧಾರದಲ್ಲಿ ಅವರು ಹೇಗೆ ತಿರಸ್ಕರಿಸುತ್ತಾರೆ ಎಂಬುದನ್ನು ನಾವು ತಿಳಿಸುತ್ತೇವೆ. ಇದಕ್ಕೆ ಮೊದಲೇ ಮಾನಸಿಕವಾಗಿ ಸಿದ್ಧರಾಗಿ ಈ ವ್ಯಾಲೆಂಟೈನ್ಸ್ ಡೇ‌ಗೆ ಪ್ರೇಮ ನಿವೇದನೆ ಮಾಡಿ. ಒಪ್ಪಿಕೊಂಡರೆ ಹೆಚ್ಚೇ ಖುಷಿಯಲ್ಲವೇ? ನೀವಾಗಲೇ ಮಾನಸಿಕವಾಗಿ ಸಿದ್ಧರಿರುವುದರಿಂದ ತಿರಸ್ಕರಿಸಿದರೂ ಅಷ್ಟೊಂದು ಆಘಾತವಾಗುವುದಿಲ್ಲ. 

ಮೇಷ(Aries): ಒಮ್ಮೆ ನೀವು ಪ್ರಪೋಸ್ ಮಾಡಿಯೇ ಬಿಟ್ಟಿರಿ, ಆದರೆ ಇವರಿಗಿಷ್ಟ ಇಲ್ಲ ಎಂದರೆ, ಬೇರೇನೂ ಯೋಚಿಸದೆ ಇವರು ನಿಮ್ಮ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನೇ ಸಂಪೂರ್ಣ ಬಿಡುತ್ತಾರೆ. ನೀವೆಷ್ಟೇ ತಿಪ್ಪರಲಾಗ ಹಾಕಿದರೂ ಪ್ರತಿಕ್ರಿಯಿಸುವುದಿಲ್ಲ.

Tap to resize

Latest Videos

undefined

ವೃಷಭ(Taurus): ಇವರು ನಿಮಗೆ ಬೇಜಾರಾಗಬಾರದೆಂಬ ಕಾರಣಕ್ಕೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಗೊಂದಲಗೊಳಿಸುವಂತ ಸೂಚನೆ(mixed signals)ಗಳನ್ನು ನೀಡತೊಡಗುತ್ತಾರೆ. ಅದು ಪುರಸ್ಕಾರವೋ, ತಿರಸ್ಕಾರವೋ ತಿಳಿಯದೆ ನಿಮ್ಮನ್ನು ಗೊಂದಲದಲ್ಲಿ ಬೀಳಿಸುತ್ತಾರೆ.

ಮಿಥುನ(Gemini): ಇವರು ತಾವಿನ್ನೂ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಹೇಗೆ ಸಿದ್ದರಾಗಿಲ್ಲ ಎಂಬ ಬಗ್ಗೆ ಕಟ್ಟು ಕತೆಗಳನ್ನು ಹೇಳಿ ನಂಬಿಸಲು ಪ್ರಯತ್ನಿಸುತ್ತಾರೆ. ತಮ್ಮ ಮಾತನ್ನು ನಂಬಿಸಲು ಪದೇ ಪದೆ ಸಾಕಷ್ಟು ಕಾರಣಗಳನ್ನು ನೀಡುತ್ತಾರೆ. 

ಕಟಕ(Cancer): ಇವರು ನಿಮಗೆ ಬೇಜಾರಾಗಬಾರದೆಂದು ತಮ್ಮ ಮಾತುಗಳಿಗೆ ಹೆಚ್ಚಿನ ಸಿಹಿ ತುಂಬಿ, ನೀವೆಷ್ಟು ಅತ್ಯುತ್ತಮ ವ್ಯಕ್ತಿ, ನಿಮ್ಮಂಥವರಿಗೆ ತಾನು ತಕ್ಕವರಲ್ಲ, ತನಗಿಂತಾ ಉತ್ತಮರೇ ಸಿಗುತ್ತಾರೆ, ಸಿಗಬೇಕು ಎಂದೆಲ್ಲ ಹೇಳತೊಡಗುತ್ತಾರೆ. 

Faith And Reason: ರಂಗೋಲಿ ಹಾಕಿದರೆ ಯಮ ಮನೆಗೆ ಬರೋಲ್ಲವಂತೆ, ನಿಜವೇ?

ಸಿಂಹ(Leo): ಇವರು ತಮಗೆ ನಿಜವಾಗಿಯೂ ಆಸಕ್ತಿ ಇರುವ ವ್ಯಕ್ತಿಯ ಬಗ್ಗೆ ಮತ್ತೆ ಮತ್ತೆ ಹೇಳತೊಡಗುತ್ತಾರೆ. ಆ ಮೂಲಕ ತಮ್ಮ ಆಸಕ್ತಿ ನಿಮ್ಮಲ್ಲಿಲ್ಲ, ಬೇರೆ ಕಡೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. 

ಕನ್ಯಾ(Virgo): ತಮಗಿಷ್ಟ ಇಲ್ಲ ಎಂಬುದನ್ನು ನಿಮಗೆ ಸ್ಫಷ್ಟವಾಗಿ ಅರ್ಥ ಮಾಡಿಸಲು ಸಾಧ್ಯವಾದಷ್ಟು ನೇರಾನೇರ ಮಾತುಗಳನ್ನಾಡುತ್ತಾರೆ. 

ತುಲಾ(Libra): ಅವರು ಈ ಬಗ್ಗೆ ತಮಾಷೆ ಎಂಬಂತೆ ನಗುತ್ತಾ, ತಮಗೆ ನೀವು ಹೇಳಿದ ಸಂದೇಶ ತಲುಪುತ್ತಲೇ ಇಲ್ಲ ಎಂಬಂತೆ ನಟಿಸುತ್ತಾರೆ. ನೀವು ಫ್ಲರ್ಟ್ ಮಾಡಲು ಯತ್ನಿಸಿದಾಗೆಲ್ಲ ಮಾತು ಮರೆಸಿ ವಿಷಯ ಬದಲಿಸುತ್ತಾರೆ. 

Vastu Tips : ಊಟ ಮಾಡುವಾಗ ದಿಕ್ಕಿನ ಬಗ್ಗೆ ಗಮನವಿರಲಿ, ಅಪ್ಪಿತಪ್ಪಿಯೂ ಮಾಡ್ಬೇಡಿ ಈ ಕೆಲಸ

ವೃಶ್ಚಿಕ(Scorpio): ಇವರು ನಿಮಗೆ ಮಾತುಗಳಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ ಎಂದುಕೊಂಡು ನಿಮ್ಮೆದುರೇ ಬೇರೆಯವರ ಜೊತೆ ಸುತ್ತಾಡತೊಡಗುತ್ತಾರೆ. 

ಧನುಸ್ಸು(Sagittarius): ಇವರು ನಿಮ್ಮ ಮನಸ್ಸಲ್ಲಿ ಇನ್ನೂ ಹೆಚ್ಚಿನ ಭಾವನೆ ಬೆಳೆಸೋದು ಬೇಡ ಎಂದು ಸಂಪೂರ್ಣ ಸಂಬಂಧ ಕಡಿದುಕೊಳ್ಳುವ ಯೋಚನೆಯಲ್ಲಿ ನಿಮ್ಮನ್ನು ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಎಲ್ಲಡೆ ಬ್ಲಾಕ್ ಮಾಡಿಬಿಡುತ್ತಾರೆ. 

ಮಕರ(Capricorn): ಇವರು ನೇರಾನೇರ ನಿಮ್ಮ ಮುಖಕ್ಕೆ ಹೊಡೆದಂತೆ ತಮಗೆ ಇಷ್ಟವಿಲ್ಲ ಎಂಬುದನ್ನು ಹೇಳುತ್ತಾರೆ. 

ಕುಂಭ(Aquarius): ಒಮ್ಮೆ ನೀವು ವಿಷಯ ಹೇಳಿದ ಮೇಲೆ, ನಿಧಾನವಾಗಿ ನಿಮ್ಮನ್ನು ಅವಾಯ್ಡ್ ಮಾಡತೊಡಗುತ್ತಾರೆ. ನೀವೆಲ್ಲಿಗೇ ಕರೆದರೂ ಅಲ್ಲಿ ಬರದಿರಲು ಸಣ್ಣಪುಟ್ಟ ಕಾರಣಗಳನ್ನು ಹೇಳಲು ಆರಂಭಿಸುತ್ತಾರೆ. 

ಮೀನ(Pisces): ನಿಮಗೆ ಸೂಚನೆ ಸಿಗುವವರೆಗೂ ಮಾತು ಮಾತಿನಲ್ಲಿ ನೀವು ಅವರಿಗೆ ಉತ್ತಮ ಫ್ರೆಂಡ್ ಹಾಗೂ ಫ್ರೆಂಡ್ ಮಾತ್ರ ಎನ್ನುವುದನ್ನು ತರುತ್ತಾರೆ. 
 

click me!