Jaya Ekadashi 2022: ಶೈವ, ವೈಷ್ಣವರಿಬ್ಬರಿಗೂ ಮಹತ್ವದ ದಿನ ಜಯ ಏಕಾದಶಿ

By Suvarna News  |  First Published Feb 9, 2022, 12:12 PM IST

ಫೆ.12ರಂದು ಜಯ ಏಕಾದಶಿ. ಆ ದಿನ ವ್ರತ ಆಚರಿಸುವುದು ಹೇಗೆ, ಫಲಗಳೇನು ವಿವರಗಳು ಇಲ್ಲಿವೆ. 


ಇನ್ನೆರಡು ದಿನ ಕಳೆದರೆ ಜಯ ಏಕಾದಶಿ. ಮಾಘ ಮಾಸದ ಶುಕ್ಲ ಪಕ್ಷದ 11ನೇ ದಿವಸವೇ ಜಯ ಏಕಾದಶಿ. ಈ ದಿನ ಜಯ ಏಕಾದಶಿ ವೃತ ಆಚರಿಸುವವರು ಮಹಾವಿಷ್ಣುವನ್ನು ಪೂಜಿಸುತ್ತಾರೆ. ಮಹಾವಿಷ್ಣು ಈ ಭೂಮಿಯನ್ನು, ಇಲ್ಲಿನ ಚರಾಚರಗಳನ್ನು ಕಾಯುವವನು. ಜಯ ಎಂದರೆ ವಿಷ್ಣುವಿನ ವಾಸಸ್ಥಾನ ವೈಕುಂಠದ ದ್ವಾರಪಾಲಕನ ಹೆಸರು. ಯಾವುದೇ ಏಕಾದಶಿಗಾದರೂ ಉಪವಾಸ(Fasting) ಆಚರಣೆ ಪ್ರಮುಖವಾದುದು. ಈ ದಿನವಿಡೀ ವಿಷ್ಣು ಭಕ್ತರು 'ಶ್ರೀ ಹರಿ' ಎಂಬ ನಾಮಸ್ಮರಣೆ ಮಾಡುತ್ತಲೇ ಇರುತ್ತಾರೆ. ಬಹಳ ಕಟ್ಟುನಿಟ್ಟಾಗಿ ವ್ರತ ಆಚರಿಸುವವರಂತೂ ಏಕಾದಶಿಯ ರಾತ್ರಿ ಪೂರ್ತಿ ಜಾಗರಣೆ ಮಾಡಿ ವಿಷ್ಣು ಶ್ಲೋಕ(Vishnu mantras)ಗಳನ್ನು ಹೇಳಿಕೊಳ್ಳುತ್ತಾರೆ. 

ಜಯ ಏಕಾದಶಿ ತಿಥಿ(Tithi timings)
ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರಿನಂತೆ ಎರಡು ಪಕ್ಷಗಳು ಸೇರಿ ಒಂದು ತಿಂಗಳಾಗುತ್ತದೆ. ಪ್ರತಿ ಪಕ್ಷದಲ್ಲೊಮ್ಮೆ ಏಕಾದಶಿ ಬರುತ್ತದೆ. ಅಂದರೆ ವರ್ಷಕ್ಕೆ 24 ಏಕಾದಶಿ ವ್ರತ ಆಚರಿಸಲಾಗುತ್ತದೆ. ಅಧಿಕ ಮಾಸವಿದ್ದಾಗ 26 ಏಕಾದಶಿಗಳು ಬರುತ್ತವೆ. ಅದರಲ್ಲಿ ಮಾಘ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿ ಜಯ ಏಕಾದಶಿ. ಈ ಬಾರಿ ಫೆ.12(February 12)ರಂದು ಬರಲಿದೆ. ಏಕಾದಶಿ ತಿಥಿಯು ಫೆ.11ರ ಮಧ್ಯಾಹ್ನ 1.52ಕ್ಕೆ ಆರಂಭವಾಗಿ ಫೆ.12ರ ಸಂಜೆ 4.27ಕ್ಕೆ ಮುಕ್ತಾಯವಾಗುತ್ತದೆ. 

Latest Videos

undefined

ವ್ರತ ಆಚರಣೆ ಹೇಗೆ?
ಸಾಮಾನ್ಯವಾಗಿ ಭಕ್ತರು ಏಕಾದಶಿಯಂದು ಸಂಪೂರ್ಣ ವ್ರತ ಆಚರಿಸುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರಾದರೆ ಸ್ವಲ್ಪ ಹಾಲು, ಹಣ್ಣು ಸೇವಿಸಬಹುದು. ಏಕಾದಶಿಯ ಮರು ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಅಂದರೆ ಪ್ರಾತಃಕಾಲದಲ್ಲಿ ಉಪವಾಸ ಆಚರಣೆಗೆ ಅಂತ್ಯ ಹಾಡಿ ಆಹಾರ ಸೇವಿಸುತ್ತಾರೆ. ಹೀಗೆ ಉಪವಾಸ ಮುರಿವ ಸಮಯಕ್ಕೆ ಪರಾನ ಸಮಯ ಎನ್ನಲಾಗುತ್ತದೆ. ಈ ವ್ರತದ ಸಮಯದುದ್ದಕ್ಕೂ ವಿಷ್ಣುವಿನ ನಾಮ ಸ್ಮರಣೆಯಲ್ಲೇ ಕಾಲ ಕಳೆಯುತ್ತಾರೆ. ವಿಷ್ಣುವಿನ ಪೂಜೆ, ನೈವೇದ್ಯ ಕೈಗೊಳ್ಳುತ್ತಾರೆ. ಕೆಟ್ಟ ಯೋಚನೆ, ಕೆಟ್ಟ ಮಾತಿಗೆ ಅವಕಾಶವಿಲ್ಲ. ಹೀಗಾಗಿ, ಮನಸ್ಸಿಗೆ ಧ್ಯಾನದ ಫಲ ಸಿಗುತ್ತದೆ, ದೇಹದ ಜೀರ್ಣಾಂಗಗಳಿಗೆ ಕೊಂಚ ವಿಶ್ರಾಂತಿ ದೊರಕುತ್ತದೆ. 
ಜಯ ಏಕಾದಶಿಯ ವಿಶೇಷತೆ ಎಂದರೆ ಮಾಘ ಮಾಸವು ಶಿವನಿಗೆ ವಿಶೇಷವಾಗಿದೆ. ಇಂಥ ಸಂದರ್ಭದಲ್ಲಿ ಬರುವ ಏಕಾದಶಿ ವಿಷ್ಣುವಿಗೆ ಮೀಸಲಾಗಿದೆ. ಹಾಗಾಗಿ ಶಿವಭಕ್ತರು ಹಾಗೂ ವಿಷ್ಣುವಿನ ಭಕ್ತರೆಲ್ಲರಿಗೂ ಜಯ ಏಕಾದಶಿ ವಿಶೇಷವಾಗಿದೆ. ಮೊದಲೇ ಮಾಘ ಮಾಸ ಬಹಳ ಪವಿತ್ರವಾದುದಾಗಿದೆ. ಈ ತಿಂಗಳು ಭಕ್ತರು ಶಿವ ಹಾಗೂ ವಿಷ್ಣು ಇಬ್ಬರನ್ನೂ ಪೂಜಿಸುತ್ತಾರೆ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. 

Venus-Mars conjunction 2022: ನಿಮ್ಮ ವಿ ಡೇ ಯೋಜನೆಗೆ ಮಂಗಳ- ಶುಕ್ರ ಸಂಯೋಗ ಅಡ್ಡಗಾಲಾಗುವುದೇ?

ಭೀಷ್ಮ ಏಕಾದಶಿ(Bhishma Ekadashi)
ಮಹಾಭಾರತದಲ್ಲಿ ಭೀಷ್ಮನಿಗೆ ತಾನಿಷ್ಟಪಟ್ಟ ಸಮಯದಲ್ಲಿ ಸಾಯುವ ವರವಿತ್ತು. ಆತ ಜಯ ಏಕಾದಶಿಯ ದಿನವನ್ನು ತನ್ನ ಪ್ರಾಣಹರಣಕ್ಕಾಗಿ ಆಯ್ದುಕೊಂಡ. ಹಾಗಾಗಿ, ಈ ದಿನಕ್ಕೆ ಭೀಷ್ಮ ಏಕಾದಶಿ ಎಂಬ ಹೆಸರೂ ಇದೆ. 

ಜಯ ಏಕಾದಶಿಯ ಪ್ರಾಮುಖ್ಯತೆ(Significance)
ಜಯ ಏಕಾದಶಿಯ ವ್ರತ ಆಚರಣೆಯ ಪ್ರಾಮುಖ್ಯತೆ ಬಗ್ಗೆ ಪದ್ಮ ಪುರಾಣ ಹಾಗೂ ಭವಿಷ್ಯ ಪುರಾಣಗಳಲ್ಲಿ ವಿವರಿಸಲಾಗಿದೆ. ಆಸಕ್ತಿದಾಯಕ ವಿಷಯವೆಂದರೆ ಸ್ವತಃ ಶ್ರೀಕೃಷ್ಣನೇ ಈ ವ್ರತದ ಪ್ರಾಮುಖ್ಯತೆಯನ್ನು ಪಾಂಡವ ರಾಜ ಯುಧಿಷ್ಠಿರ(Yudhishthira)ನಿಗೆ ಹೇಳಿದ್ದಾನೆ. 

ಈ ವ್ರತ ಆಚರಣೆಯಿಂದ ಭಕ್ತರು ತಾವು ಪೂರ್ವಜನ್ಮ(previous birth)ದಲ್ಲಿ ಮಾಡಿರಬಹುದಾದ ಪಾಪ ಕರ್ಮಗಳ ಹೊರೆಯಿಂದ ಕಳಚಿಕೊಳ್ಳುತ್ತಾರೆ. ಏಕಾದಶಿ ದಿನದ ಉಪವಾಸವು ಭಕ್ತರನ್ನು ಅವರ ತಪ್ಪಿನ ಶಿಕ್ಷೆಯಿಂದ ತಪ್ಪಿಸುತ್ತದೆ. 

Unlucky Gifts: ವಾಸ್ತು ಪ್ರಕಾರ, ಈ ಉಡುಗೊರೆಗಳು ದುರದೃಷ್ಟ ತರುತ್ತವೆ!

ಇಷ್ಟೇ, ಅಲ್ಲದೆ, ಈ ಹುಟ್ಟು ಸಾವಿನ ಚಕ್ರದಿಂದ ಮುಕ್ತಿ ಬಯಸುವವರು ಕೂಡಾ ಏಕಾದಶಿಯಂದು ಉಪವಾಸ ಆಚರಿಸಿ ವಿಷ್ಣುವಿನಲ್ಲಿ ಮೋಕ್ಷ ಬೇಡುತ್ತಾರೆ. ಬದುಕಿನ ನಂತರ ವೈಕುಂಠಕ್ಕೆ ತಮ್ಮನ್ನು ಕರೆಸಿ ಇರಿಸಿಕೊಳ್ಳುವಂತೆ ಮನಸಾರೆ ಪ್ರಾರ್ಥನೆ ಮಾಡುತ್ತಾರೆ. 

ಜಯ ಏಕಾದಶಿ ವ್ರತದ ಆಚರಣೆಯಿಂದ ವ್ಯಕ್ತಿಯು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ. ಭಕ್ತನಿಗೆ ಮನಸ್ಸಿಗೆ ಶಾಂತಿ(peace of mind) ದೊರೆಯುತ್ತದೆ. ಒಂದು ದಿನದ ವ್ರತದಿಂದಾಗಿ ಆತನ ಯೋಚನೆಗಳು ಸ್ವಚ್ಛಗೊಳ್ಳುತ್ತವೆ. ಜೀರ್ಣಾಂಗಗಳಿಗೂ ಕೊಂಚ ಬಿಡುವು ದೊರೆತು ಅವು ಆರೋಗ್ಯಕರವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ. 

 

click me!