ಶುಕ್ರನ ಹಿಮ್ಮುಖ ಚಲನೆ; ನಿಮ್ಮಿಂದ 'ಭಾಗ್ಯಲಕ್ಷ್ಮಿ' ದೂರ..!

By Sushma Hegde  |  First Published Jul 29, 2023, 8:41 AM IST

ಸಂತೋಷ ಮತ್ತು ಸಂಪತ್ತಿನ ಪೂರೈಕೆದಾರನಾದ ಶುಕ್ರ ಗ್ರಹವು ಪ್ರಸ್ತುತ ಹಿಮ್ಮಖ ಸ್ಥಿತಿಯಲ್ಲಿದೆ. ಶುಕ್ರ (venus) ನ ಹಿಮ್ಮುಖ ಚಲನೆಯ ಕೆಲವು ರಾಶಿಚಕ್ರ ಚಿಹ್ನೆಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕುರಿತು ಇಲ್ಲಿದೆ ಡೀಟೇಲ್ಸ್...


ಸಂತೋಷ ಮತ್ತು ಸಂಪತ್ತಿನ ಪೂರೈಕೆದಾರನಾದ ಶುಕ್ರ ಗ್ರಹವು ಪ್ರಸ್ತುತ ಹಿಮ್ಮಖ ಸ್ಥಿತಿಯಲ್ಲಿದೆ. ಶುಕ್ರ (venus) ನ ಹಿಮ್ಮುಖ ಚಲನೆಯ ಕೆಲವು ರಾಶಿಚಕ್ರ ಚಿಹ್ನೆಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕುರಿತು ಇಲ್ಲಿದೆ ಡೀಟೇಲ್ಸ್...

ಜ್ಯೋತಿಷ್ಯದಲ್ಲಿ ಶುಕ್ರನನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಸಂತೋಷ (happiness) , ಸಮೃದ್ಧಿ ಮತ್ತು ಐಷಾರಾಮಿ ಅಂಶವಾಗಿದೆ. ಜ್ಯೋತಿಷಿಗಳ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಉತ್ತಮ ಮತ್ತು ಶುಭ ಸ್ಥಾನದಲ್ಲಿದ್ದರೆ, ಅವನಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆ ಇರಲ್ಲ. ಅದೇ ರೀತಿ ಶುಕ್ರನ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಚಕ್ರಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ (Negative effect) ಗಳನ್ನು ಬೀರುತ್ತದೆ. ಯಾವ ರಾಶಿ ಚಕ್ರದ ಚಿಹ್ನೆಗಳಿಗೆ ಹಿಮೆಟ್ಟಿಸುವ ಶುಕ್ರನು ತೊಂದರೆಗಳನ್ನು ನೀಡಬಹುದು ಎಂಬುದನ್ನು ತಿಳಿಯಿರಿ‌. 

Tap to resize

Latest Videos

ಮೇಷ ರಾಶಿ (Aries)

ಸಿಂಹ ರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ತೊಂದರೆಗಳನ್ನು ಹೆಚ್ಚಿಸಬಹುದು. ಈ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟ (Financial crisis) ನ್ನು ಎದುರಿಸಬೇಕಾಗಬಹುದು. ನೀವು ಹಣಕಾಸಿನ ಬಜೆಟ್‌ ಮಾಡದಿದ್ದರೆ, ನಂತರ ಸಾಲವನ್ನು ತೆಗೆದುಕೊಳ್ಳುವ ಅಗತ್ಯವಿರಬಹುದು. ವ್ಯಾಪಾರಿಗಳು ಲಾಭವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ನಿಮ್ಮ ವೈವಾಹಿಕ ಜೀವನ (married life) ದಲ್ಲಿ ಏರಿಳಿತಗಳಿರಬಹುದು ಮತ್ತು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳಿರಬಹುದು.

ಕಟಕ ರಾಶಿ (Cancer)

ಕಟಕ ರಾಶಿಯವರು ಶುಕ್ರನ ಹಿಮ್ಮುಖ ಚಲನೆಯಿಂದ ಸಮಸ್ಯೆ (problem) ಗಳನ್ನು ಎದುರಿಸಬೇಕಾಗಬಹುದು. ಮನೆಯ ಸಂತೋಷಕ್ಕೆ ಅಡ್ಡಿಯಾಗಬಹುದು. ಕೌಟುಂಬಿಕ ಜೀವನದಲ್ಲಿ ಅಶಾಂತಿ ಹರಡಬಹುದು. ವ್ಯಾಪಾರಸ್ಥರು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ಕಠಿಣ ಪರಿಶ್ರಮ (hard work) ಕ್ಕೆ ತಕ್ಕ ಫಲಿತಾಂಶ ಸಿಗದ ಕಾರಣ ಮನಸ್ಸು ಚಿಂತೆಯಲ್ಲಿಯೇ ಇರುತ್ತದೆ. ಈ ಅವಧಿಯಲ್ಲಿ ನೀವು ಮಾನಸಿಕ ಒತ್ತಡ (Mental stress) ದಿಂದ ಅಶುಭವಾಗಿರಬಹುದು. ತಾಳ್ಮೆಯಿಂದಿರಿ, ಸಮಯದೊಂದಿಗೆ ವಿಷಯಗಳು ಉತ್ತಮಗೊಳ್ಳುತ್ತದೆ. 

ಪ್ರಕೃತಿ ವಿಕೋಪಕ್ಕೆ ಕಾರಣವೇ 'ಸಂಸಪ್ತಕ ಯೋಗ': ಈ ಆರು ರಾಶಿಯವರಿಗಂತೂ ಇದು 'ಸಂಕಷ್ಟ' ಕಾಲ..!

ಕನ್ಯಾ ರಾಶಿ (Virgo)

ಶುಕ್ರನ ಹಿಮ್ಮುಖ ಚಲನೆಯು ನಿಮ್ಮ ಜೀವನದ ಮೇಲೆ ಅಶುಭ ಪರಿಣಾಮವನ್ನು ಬೀರಬಹುದು. ಈ ಅವಧಿಯಲ್ಲಿ ನಿಮ್ಮ ಆರೊಗ್ಯ (health) ವನ್ನು ನಿರ್ಲಕ್ಷಿಸಬೇಡಿ. ಯಾವುದೇ ಹೂಡಿಕೆಯು ಹಣಕಾಸಿನ ನಷ್ಟವನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ನೀವು ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಹಣಕಾಸಿನ ಸಮಸ್ಯೆ (Financial problem) ಗಳನ್ನು ಎದುರಿಸಬೇಕಾಗಬಹುದು. ಶುಕ್ರನ ಹಿಮ್ಮುಖ ಚಲನೆಯ ಸಮಯದಲ್ಲಿ ವಾದಗಳಿಂದ ದೂರವಿರಿ.

ಪುಷ್ಯ ನಕ್ಷತ್ರದಲ್ಲಿ ಸೂರ್ಯ ಸಂಚಾರ; ಬ್ರೈಟ್ ಆಗಲಿದೆ ಈ 3 ರಾಶಿಯವರ ಲೈಫ್..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!