ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಕಾಶಿ ವಿಶ್ವನಾಥನ ಹಾಗೂ ರಾಮೇಶ್ವರದ ರಾಮನಾಥನ ದರ್ಶನ ಪಡೆಯಲೇಬೇಕು ಎನ್ನುತ್ತಾರೆ. ಕಾಶಿಗೆ ಹೋದವರು ರಾಮೇಶ್ವರಂಗೆ ಹೋಗಬೇಕು ಎಂಬ ವಾಡಿಕೆಯೂ ನಮ್ಮಲ್ಲಿದೆ. ಹಾಗೇ ಇದೀಗ ರಾಮೇಶ್ವರಂನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಅವರ ರಾಷ್ಟ್ರೀಯ ಸ್ಮಾರಕವೂ ನೋಡುಗರ ಕಣ್ಮನ ಸೆಳೆಯುತ್ತದೆ.
ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಕಾಶಿ ವಿಶ್ವನಾಥನ ಹಾಗೂ ರಾಮೇಶ್ವರದ ರಾಮನಾಥನ ದರ್ಶನ ಪಡೆಯಲೇಬೇಕು ಎನ್ನುತ್ತಾರೆ. ಕಾಶಿಗೆ ಹೋದವರು ರಾಮೇಶ್ವರಂಗೆ ಹೋಗಬೇಕು ಎಂಬ ವಾಡಿಕೆಯೂ ನಮ್ಮಲ್ಲಿದೆ. ಹಾಗೇ ಇದೀಗ ರಾಮೇಶ್ವರಂನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಅವರ ರಾಷ್ಟ್ರೀಯ ಸ್ಮಾರಕವೂ ನೋಡುಗರ ಕಣ್ಮನ ಸೆಳೆಯುತ್ತದೆ.
ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ರಾಮೇಶ್ವರದಲ್ಲಿರುವ ರಾಮನಾಥಸ್ವಾಮಿಯೂ ಒಂದು. ಕಾಶಿಯ ವಿಶ್ವನಾಥನ ದರ್ಶನ ಪಡೆದವರು ಇಲ್ಲಿಗೂ ಕೂಡ ಬರುತ್ತಾರೆ. ಈ ಎರಡು ಕ್ಷೇತ್ರಗಳಿಗೂ ಅವಿನಾಭಾವ ಸಂಬಂಧ ಇದೆ. ಇದು ಶ್ರೀರಾಮನು ಶಿವನನ್ನು ಪೂಜಿಸಿದ ಪುಣ್ಯ ಪವಿತ್ರ ತಾಣವಾಗಿದೆ.
ರಾಮೇಶ್ವರಂ ಎಲ್ಲಿದೆ?
ರಾಮನಾಥ ಅಥವಾ ರಾಮೇಶ್ವರಂ ಅಥವಾ ರಾಮನಾಥಸ್ವಾಮಿ ದೇವಸ್ಥಾನವು ತಮಿಳುನಾಡಿನ ರಾಮೇಶ್ವರಂ ದ್ವೀಪದಲ್ಲಿದೆ. ಶ್ರೀರಾಮ ಈ ಸ್ಥಳದಲ್ಲಿ ಶಿವನನ್ನು ಪೂಜಿಸಿದ್ದರಿಂದ ಇದಕ್ಕೆ ರಾಮೇಶ್ವರಂ ಜ್ಯೋತಿರ್ಲಿಂಗ ಎಂಬ ಹೆಸರು ಬಂದಿದೆ. ರಾಮೇಶ್ವರಂ ದ್ವೀಪದ ಸುತ್ತಲೂ 64 ಜಲಮೂಲಗಳು ಅಥವಾ ಕಲ್ಯಾಣಿಗಳಿವೆ. ಅವುಗಳಲ್ಲಿ 24ನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳಲ್ಲಿ ಸ್ನಾನ ಮಾಡುವುದು ನಿಮ್ಮ ಪಾಪಗಳನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಮುಖ್ಯ ತೀರ್ಥವೆಂದರೆ ಅಗ್ನಿ ತೀರ್ಥಂ ಎಂದು ಕರೆಯಲ್ಪಡುವ ಬಂಗಾಳ ಕೊಲ್ಲಿ.
ಪುರಾಣಗಳು ರಾಮೇಶ್ವರಂ ಬಗ್ಗೆ ಏನು ಹೇಳುತ್ತವೆ?
ರಾವಣನನ್ನು ಸೋಲಿಸಿದ ನಂತರ ಲಂಕಾದಿಂದ ಹಿಂದಿರುಗುವ ಮಾರ್ಗದಲ್ಲಿ ಭಗವಾನ್ ರಾಮನು ಈ ಸ್ಥಳದಲ್ಲಿ ಶಿವನನ್ನು ಪೂಜಿಸಿದನೆಂದು ದಂತಕಥೆಯಿದೆ. ಬ್ರಾಹ್ಮಣ ಮತ್ತು ಮಹಾನ್ ಶಿವಭಕ್ತನಾದ ರಾವಣನನ್ನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಭಗವಾನ್ ರಾಮನು ಶಿವನಿಗೆ ಇಲ್ಲಿ ಪ್ರಾರ್ಥನೆ ಸಲ್ಲಿಸಿದನು. ಈ ಸ್ಥಳದಲ್ಲಿ ಶಿವನಿಗೆ ಯಾವುದೇ ಗುಡಿ ಇಲ್ಲದ ಕಾರಣ, ರಾಮನು ಲಿಂಗವನ್ನು ತರಲು ಹನುಮಂತನನ್ನು ಶಿವನ ನಿವಾಸವಾದ ಕೈಲಾಸ ಪರ್ವತಕ್ಕೆ ಕಳುಹಿಸಿದನು. ಆದರೆ, ಹನುಮಂತನು ಪೂಜೆಯನ್ನು ಮಾಡಲು ನಿಗದಿಪಡಿಸಿದ ಶುಭ ಮುಹೂರ್ತದ ಮೊದಲು ಹಿಂತಿರುಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಸೀತೆ ಈ ಸ್ಥಳದಲ್ಲಿ ಮರಳಿನಿಂದ ಲಿಂಗವನ್ನು ಮಾಡಿದಳು. ಮತ್ತು ರಾಮನು ಮುಹೂರ್ತಕ್ಕೆ ಸರಿಯಾಗಿ ಈ ಲಿಂಗವನ್ನು ಪೂಜಿಸಿದನು. ಇದೇ ರಾಮಲಿಂಗ ಎನ್ನಲಾಗಿದೆ.
ಪ್ರಕೃತಿ ವಿಕೋಪಕ್ಕೆ ಕಾರಣವೇ 'ಸಂಸಪ್ತಕ ಯೋಗ': ಈ ಆರು ರಾಶಿಯವರಿಗಂತೂ ಇದು 'ಸಂಕಷ್ಟ' ಕಾಲ..!
ಇಲ್ಲಿದೆ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಸ್ಮಾರಕ..!
ರಾಮೇಶ್ವರಂ ಮತ್ತು ಮಧುರೈನಲ್ಲಿರುವ ಮೀನಾಕ್ಷಿ ದೇವಾಲಯಗಳ ವೈಭವ ಮತ್ತು ವಾಸ್ತುಶಿಲ್ಪಗಳನ್ನು ನೋಡಲು ಇಲ್ಲಿದೆ ಲಕ್ಷಾಂತರ ಜನರು ಬರುತ್ತಾರೆ. ಹಾಗೆಯೇ ಇಲ್ಲಿನ ಎಪಿಜೆ ಅಬ್ದುಲ್ ಕಲಾಂ ಅವರ ಜೀವನದ ಸರಳತೆ ಮತ್ತು ಭವ್ಯತೆಯನ್ನು ಸಾರುವ ಮ್ಯೂಜಿಯಂ ಕೂಡ ಜನರನ್ನು ಆಕರ್ಷಣೆ ಮಾಡುತ್ತದೆ. ದೇವಾಲಯಗಳ ಅದ್ಭುತ ವಾಸ್ತುಶಿಲ್ಪವನ್ನು ನೋಡುವುದು ಒಂದು ಉತ್ತಮ ಅನುಭವ, ಅದರ ಜೊತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮ್ಯೂಸಿಯಂ ಭೇಟಿಯು ಕೂಡ ಕಣ್ಣಿಗೆ ಹಬ್ಬದಂತೆ ಇರುತ್ತದೆ.
ಜನರು ಮೊದಲೆಲ್ಲಾ ರಾಮೇಶ್ವರಂ ಜ್ಯೋತಿರ್ಲಿಂಗದ ದರ್ಶನಕ್ಕಾಗಿ ರಾಮೇಶ್ವರ ನಗರಕ್ಕೆ ಬರುತ್ತಿದ್ದರು. ಆದರೆ ಇದೀಗ ಇದೀಗ ರಾಮೇಶ್ವರಂ ತೀರ್ಥಯಾತ್ರೆಯು, ಎಪಿಜೆ ಅಬ್ದುಲ್ ಕಲಾಂ ಅವರ ರಾಷ್ಟ್ರೀಯ ಸ್ಮಾರಕದ ಜೊತೆಗೂ ಸೇರಿಕೊಂಡಂತಾಗಿದೆ.
ಪುಷ್ಯ ನಕ್ಷತ್ರದಲ್ಲಿ ಸೂರ್ಯ ಸಂಚಾರ; ಬ್ರೈಟ್ ಆಗಲಿದೆ ಈ 3 ರಾಶಿಯವರ ಲೈಫ್..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.