ಯುಗಾದಿಯಿಂದ ಈ ರಾಶಿ ಕೈ ಹಿಡಿಯಲಿದೆ ಅದೃಷ್ಟ, ಯಾರಿಗೆ ಬೇವು, ಯಾರಿಗೆ ಬೆಲ್ಲ

ವಿಶ್ವಾವಸು ಸಂವತ್ಸರದಲ್ಲಿ ಗ್ರಹಗಳ ಸಂಚಾರವನ್ನೂ ಗಮನದಲ್ಲಿಟ್ಟುಕೊಂಡು ಈ ವರ್ಷ ಯಾವ ರಾಶಿಗಳಿಗೆ ಯಾವ ರೀತಿಯ ಫಲವಿದೆ, ಯಾರು ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಶ್ರೀಕಂಠಶಾಸ್ತ್ರಿಗಳು ಹೇಳಿದ್ದಾರೆ.  
 

ugadi rashi phala 2025 12 rashi bhavishya in kannada suh

ಮೇಷ -  ಶನಿಯ ಸಾಡೇಸಾತಿನ ಪ್ರಾರಂಭದೊಂದಿಗೆ ನಿಮ್ಮ ಈ  ಹೊಸ ವರ್ಷ ಪ್ರಾರಂಭ. ಸ್ವಲ್ಪ ಮಟ್ಟಿಗೆ ದು:ಖ, ವ್ಯಯ, ಆರೋಗ್ಯ ಬಾಧೆಗಳು ಬಾಧಿಸಲಿದೆ. ಕಣ್ಣು-ಕಾಲಿನ ಭಾಗದಲ್ಲಿ ತೊಂದರೆ ಸಾಧ್ಯತೆ. ವೃತ್ತಿಯಲ್ಲಿ ಅತಿಯಾದ ಒತ್ತಡ. ಕೆಲವರಿಗೆ ಕೆಲಸದಲ್ಲಿ ಸ್ಥಾನಚ್ಯುತಿಯೂ ಸಂಭವಿಸಬಹುದು.  ವಿದ್ಯಾರ್ಥಿಗಳಿಗೆ ಆಲಸ್ಯದಿಂದ ವಿದ್ಯೆ ಹಾನಿ. ಹಣಕಾಸಿನ ತಕರಾರುಗಳು ಸಂಭವಿಸಲಿವೆ.  ಗುರುಬಲದಿಂದ ಸ್ವಲ್ಪ ಅನುಕೂಲವೂ ಇದೆ. ಶುಭ ಕಾರ್ಯಗಳು ನಡೆಯಲಿವೆ. ಹಣದ ವಹಿವಾಟೂ ಚೆನ್ನಾಗಿರಲಿದೆ. ವಿದೇಶ ವಹಿವಾಟು-ವ್ಯವಹಾರಗಳಲ್ಲಿ ಹೆಚ್ಚಿನ ಅನುಕೂಲವೂ ಉಂಟಾಗಲಿದೆ. ಶೇರು ಮಾರುಕಟ್ಟೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ.  ಗೃಹ-ವಾಹನ ಖರೀದಿ ಯೋಗ. ಧರ್ಮಕಾರ್ಯಗಳಲ್ಲಿ ಆಸಕ್ತರಾಗುತ್ತೀರಿ. ಸಹೋದರರ ಬಾಂಧವ್ಯ ವೃದ್ಧಿಯಾಗಲಿದೆ. ಕೆಲಸದವರು-ಪರಿಚಾರಕರಿಂದ ಸಹಾಯ ಸಿಗಲಿದೆ. 

ವೃಷಭ -  ಈ ವರ್ಷದ ಆದಿಯಲ್ಲಿ ಬೇವಿಗಿಂತ ಬೆಲ್ಲವೇ ಅಧಿಕ. ಹೆಚ್ಚಿನ ಶುಭಫಲ. ವೃತ್ತಿಯಲ್ಲಿ ಬಡ್ತಿ. ಅಧಿಕಾರ ಯೋಗ. ರಾಜಕಾರಣಿಗಳಿಗೆ ವಿಶೇಷ ಅನುಕೂಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವೂ ಇದೆ. ಮೇ ನಂತರ ಬರುವ ಗುರುಬಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವಿವಾಹಾಪೇಕ್ಷಿತರಿಗೆ ವಿಶೇಷ ಯೋಗವಿದೆ. ಸರ್ಕಾರಿ ನೌಕರರಿಗೆ ವಿಶೇಷ ಅನುಕೂಲಗಳು. ವರ್ಷದ ಮಧ್ಯ ಭಾಗದಲ್ಲಿ ಮಕ್ಕಳ ವಿಚಾರದಲ್ಲಿ ಅಸಮಾಧಾನ, ಅನಾನುಕೂಲ ಸಾಧ್ಯತೆ. ಅಕ್ಟೋಬರ್ ನಂತರ ಸಹೋದರರ ಸಹಕಾರ. ಜನವರಿ ನಂತರ ಹೆಚ್ಚಿನ ಧನಲಾಭ. ಆರೋಗ್ಯ ವೃದ್ಧಿ. ಹೊಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. 

Latest Videos

ಮಿಥುನ  - ಹಣಕಾಸಿನ ತೊಂದರೆ. ಕರ್ಮ ಸ್ಥಾನದ ಶನೈಶ್ಚರ ಕೆಲಸದಲ್ಲಿ ಅಲೆದಾಟ. ಶುಕ್ರನಿಂದ ಪ್ರಾರಂಭದ ಮೂರು ತಿಂಗಳು  ಉನ್ನತ ಯಶಸ್ಸನ್ನು ಗಳಿಸುವಿರಿ. ಕಲಾವಿದರಿಗೆ ವಿಶೇಷ ಅವಕಾಶ. ವಾಹನ-ಗೃಹ ಯೋಗ. ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ತೊಡೆ ಭಾಗದಲ್ಲಿ ತೊಂದರೆ ಸಂಭವಿಸಬಹುದು. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವಿವಾಹಾದಿ ಶುಭಕಾರ್ಯಗಳು ನಡೆಯಲಿವೆ. ಹಣಕಾಸಿನ ಅನುಕೂಲ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಶುಭಫಲ. ಆಪ್ತರಿಗಾಗಿ ಹೆಚ್ಚಿನ ವ್ಯಯ. ನಂಬಿ ಮೋಸಹೋಗುವ ಸಾಧ್ಯತೆ ಹೆಚ್ಚು. 

ಕರ್ಕಟಕ - ಈ ಹೊಸ ವರ್ಷ ನಿಮ್ಮಪಾಲಿಗೆ ಕಷ್ಟ-ನಷ್ಟಗಳ ವರ್ಷ. ಗುರುವಿನ ಪರಿವರ್ತನೆ ನಿಮ್ಮ ಪಾಲಿಗೆ ಅಧಿಕ ವ್ಯಯ. ಕಾಲಿನ ಭಾಗದಲ್ಲಿ ತೊಂದರೆ ಉಂಟಾಗಲಿದೆ. ಪ್ರಾರಂಭದ ಮೂರು ತಿಂಗಳ ಕಾಲ ಶುಕ್ರನಿಂದ ಅತ್ಯುನ್ನತ ಸಂತಸ-ವೈಭೋಗಗಳನ್ನು ಅನುಭವಿಸುತ್ತೀರಿ. ಅಕ್ಟೋಬರ್ ನಂತರ ಗುರುವಿನಿಂದ  ನಿಮ್ಮ ಬದುಕು ಸಂಪೂರ್ಣ ಬದಲಾಗುತ್ತದೆ. ಉಚ್ಚಸ್ಥಾನಕ್ಕೆ ಬರುವ ಗುರುವು ನಿಮ್ಮಲ್ಲಿ ಗುರುತರ ಜವಾಬ್ದಾರಿ ತರಲಿದ್ದಾನೆ. ಚಿಕ್ಕವಯಸ್ಸಿನಲ್ಲೇ ಹಿರಿಯರಂತೆ ಆಲೋಚಿಸುವ ಗುಣ ಮೈಗೂಡಲಿದೆ. ಆರೋಗ್ಯದಲ್ಲೂ ಚೇತರಿಗೆ ಉಂಟಾಗಲಿದೆ. ಆದರೆ ಅಲೆದಾಟ ತಪ್ಪದು. ದೇಶ-ವಿದೇಶಗಳ ಓಡಾಟ, ಸ್ಥಳ ಪರಿವರ್ತನೆಗಳು ನಿಮ್ಮನ್ನು ಹೈರಾಣು ಮಾಡುತ್ತವೆ. ನವೆಂಬರ್ ನಂತರ  ಶುಕ್ರ-ಸೂರ್ಯ-ಬುಧರಿಂದ ಗೃಹ-ವಾಹನಾದಿ ಶುಭಫಲವನ್ನೂ ಕಾಣುತ್ತಿರಿ. 

ಸಿಂಹ - ಈ ವರ್ಷ ನಿಮ್ಮ ಪಾಲಿಗೆ ಮಿಶ್ರಫಲ. ಮೇ ನಂತರ ಗುರುವು ಲಾಭವನ್ನು ಪ್ರವೇಶಿಸುವುದರಿಂದ ವ್ಯಾಪಾರದಲ್ಲಿ ಲಾಭವನ್ನು ಕಾಣುತ್ತಿರಿ. ಗುರುಬಲದಿಂದಾಗಿ ಹಿರಿಯರಿಂದ ಉತ್ತಮ ಸಲಹೆಗಳು ಸಿಗಲಿವೆ. ಅಣ್ಣಂದಿರಿಂದ ವಿಶೇಷ ಸಹಕಾರಗಳು ಸಿಗಲಿವೆ. ಉನ್ನತ ಶಿಕ್ಷಣದವರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ. ವಿವಾಹಾದಿ ಮಂಗಳ ಕಾರ್ಯಗಳು ನಡೆಯಲಿವೆ. ಆದರೆ ಸಪ್ತಮದ ರಾಹು ಹಾಗೂ ಜನ್ಮದ ಕೇತು ನಿಮ್ಮ ಆರೋಗ್ಯವನ್ನೂ ಹಾಗೂ ನಿಮ್ಮ ದಾಂಪತ್ಯ ಜೀವನವನ್ನು ಹಾಳುಗೆಡವಬಹುದು ಎಚ್ಚರವಾಗಿರಿ. ಅಕ್ಟೋಬರ್ ನಂತರ ಹೆಚ್ಚಿನ ವ್ಯಯ.  ಬಂಧುಗಳ ವಿಯೋಗ ಸಾಧ್ಯತೆ. ಆಲೋಚನಾ ಶಕ್ತಿ ಕಳೆದುಕೊಳ್ಳುವಿರಿ. ಜನವರಿ ನಂತರ ಮತ್ತೆ ಶುಭಫಲಗಳನ್ನು ಕಣುವಿರಿ. ಮನೆಯಲ್ಲಿ ಶುಭಕಾರ್ಯಗಳು ಉಂಟಾಗಲಿವೆ. ಕಳೆದುಕೊಂಡ ಹಣ ಮತ್ತೆ ಕೈಸೇರಲಿದೆ. ಗುರು-ಹಿರಿಯರ ಅನುಗ್ರಹದಿಂದ ಉತ್ತಮ ಫಲ ಕಾಣುತ್ತೀರಿ.

ಕನ್ಯಾ -  ಅಪನಂಬಿಕೆಗಳು ನಿಮ್ಮನ್ನು ಕಾಡಬಹುದು. ಮೇ ತಿಂಗಳ ನಂತರ ಕರ್ಮ ಸ್ಥಾನಕ್ಕೆ ಪ್ರವೇಶ ಮಾಡುವ ಗುರುವು, ವೃತ್ತಿಯಲ್ಲಿ ಸ್ವಲ್ಪ ಬಲವನ್ನು ಕೊಡುತ್ತಾನೆ. ಷಷ್ಠದ ರಾಹು ಧೈರ್ಯ-ಸಾಹಸ ಕೊಟ್ಟು ಹುಂಬತನ ತುಂಬಲಿದ್ದಾನೆ. ವ್ಯಯದ ಕೇತು ಅತಿಯಾದ ನಷ್ಟವನ್ನೂ ತರಲಿದ್ದಾನೆ. ಕಾಲಿನ ಭಾಗದಲ್ಲಿ ಪೆಟ್ಟಾಗಲಿದೆ. ಅಕ್ಟೋಬರ್ ನಂತರ ಒಂದು ವಿಶೇಷ ಅನುಕೂಲ ಉಂಟಾಗಲಿದೆ. ಲಾಭ-ಬಡ್ತಿಯಂಥ ವಿಶೇಷ ಶುಭಫಲವನ್ನು ಹೊಂದುತ್ತಿರಿ. ವಿದೇಶ ಸಂಪರ್ಕಗಳು ಏರ್ಪಾಡಾಗಲಿವೆ. ಹಾಲು-ಹೈನುಗಾರರಿಗೆ ವಿಶೇಷ ಲಾಭವಿದೆ. ಶಾಲೆ-ಬೋಧನಾ ಕ್ಷೇತ್ರದವರಿಗೆ ವಿಶೇಷ ಲಾಭ. ಜನವರಿ ನಂತರ ಮತ್ತೆ ಉದ್ಯೋಗದಲ್ಲಿ ಸ್ವಲ್ಪ ಅತಂತ್ರತೆ ಉಂಟಾಗಲಿದೆ. ಆದರೆ ಆತಂಕವಿಲ್ಲ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಬುಧ-ಶುಕ್ರರು ಬಲ ಸ್ಥಾನಗಳಲ್ಲಿ ಸಂಚರಿಸುವಾಗ ಹೆಚ್ಚಿನ ಶುಭಫಲ ಇದ್ದೇ ಇರಲಿದೆ ಆತಂಕ ಬೇಡ. 

ತುಲಾ -  ಕಠಿಣ ಕೆಲಸಗಳು ಸುಲಭವಾಗುತ್ತವೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಧರ್ಮ ಕಾರ್ಯಗಳು ನಡೆಯಲಿವೆ. ದೇವಸ್ಥಾನ-ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೀರಿ. ಗುರು-ಹಿರಿಯರಿಂದ ಉತ್ತಮ ಮಾರ್ಗದರ್ಶನ ಸಿಗಲಿದೆ. ಸಹೋದರರಲ್ಲಿ ಸಹಕಾರ.  ಲಾಭದ ಕೇತು  ವಿದೇಶ ವಹಿವಾಟಿನ ಲಾಭತರಲಿದ್ದಾನೆ. ಆದಾಯವನ್ನು ಹೆಚ್ಚಿಸಲಿದ್ದಾನೆ. ಅಕ್ಟೋಬರ್ ನಂತರ ವೃತ್ತಿಯಲ್ಲಿ ವಿಶೇಷ ಅನುಕೂಲ ಉಂಟಾಗಲಿದೆ.  ಜಲ-ಕೃಷಿ-ಸಿಹಿ ಕ್ಷೇತ್ರ ವ್ಯಾಪಾರದಲ್ಲಿ ವಿಶೇಷ ಲಾಭ ಕಾಣುತ್ತೀರಿ. ಗುರು ಸ್ಥಾನದಲ್ಲಿರುವವರಿಗೆ ವಿಶೇಷ ಮಾನ್ಯತೆ ದೊರೆಯುತ್ತದೆ. ಪೌರೋಹಿತ್ಯ-ಉಪನ್ಯಾಸ ಕ್ಷೇತ್ರದವರಿಗೆ ಹೆಚ್ಚಿನ ಅನುಕೂಲ. ಜನವರಿಯಿಂದ ಮತ್ತೆ ಪುಣ್ಯಕಾರ್ಯಗಳಲ್ಲಿ ಭಾಗಿಯಾಗುವಿರಿ. ಉತ್ತಮರ ಭೇಟಿಯಾಗಲಿದೆ.  ವಿದ್ಯಾರ್ಥಿಗಳಿಗೂ ಅನುಕೂಲವಿದೆ. ಆದಾಯ ಹೆಚ್ಚಲಿದೆ. ಹೆಚ್ಚಿನ ಸೌಖ್ಯವಿರಲಿದೆ.  

ವೃಶ್ಚಿಕ -  ಹೆಚ್ಚು ಗೊಂದಲಗಳ ಸುಳಿಯಲ್ಲಿ ಸಿಲುಕುವಿರಿ. ಆಲೋಚನಾ ಶಕ್ತಿ ಶೂನ್ಯವಾಗುತ್ತದೆ.  ಮೇ ತಿಂಗಳವರೆಗೆ  ಗುರುಬಲ. ಮೇ 14 ರ ನಂತರ ಗುರುವು ಅಷ್ಟಮ ಸ್ಥಾನಕ್ಕೆ ಪ್ರವೇಶಿಸುವುದರಿಂದ ಆರೋಗ್ಯ ಕ್ಷೀಣವಾಗಲಿದೆ. ಹೆಚ್ಚಿನ ನಷ್ಟ ಫಲವನ್ನು ಅನುಭವಿಸುವಿರಿ. ಪ್ರಯಾಣದಲ್ಲಿ  ಎಚ್ಚರವಹಿಸಿ. ಅಕ್ಟೋಬರ್ ನಂತರ ಬದುಕಿನಲ್ಲಿ ಒಂದು ವಿಶೇಷ ತಿರುವನ್ನು ಪಡೆಯುವಿರಿ. ಭಾಗ್ಯ ಸ್ಥಾನವನ್ನು ಪ್ರವೇಶಿಸುವ ಗುರು ಸೌಭಾಗ್ಯವನ್ನು ತರಲಿದ್ದಾನೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡಿಸಲಿದ್ದಾನೆ. ಕಳೆದುಕೊಂಡದ್ದನ್ನೆಲ್ಲಾ ದೈವ ಕೃಪೆಯಿಂದ ಮರಳಿ ಪಡೆಯುತ್ತೀರಿ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಬೋಧನಾ ಕ್ಷೇತ್ರದಲ್ಲಿ ಲಾಭ. ಹಣ-ಮಾತಿನ ವಿಚಾರಗಳಿಂದ ಅತಿಯಾದ ನಷ್ಟ ಅನುಭವಿಸುತ್ತೀರಿ. ಆದರೆ ಇತರೆ ಗ್ರಹಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಕೆಯ ಶುಭಫಲಗಳಿರುತ್ತವೆ. ಆತಂಕ ಬೇಡ. 

ಧನುಸ್ಸು - ಆರೋಗ್ಯದಲ್ಲಿ ತೀವ್ರವಾದ ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರಾರಂಭದ ಎರಡು ತಿಂಗಳು ತುಂಬ ಎಚ್ಚರವಹಿಸಬೇಕು. ಮೇ 14 ರ ನಂತರ ಗುರು ಬಲದಿಂದ ವಿಶೇಷ ಅನುಕೂಲ ಕಾಣುತ್ತೀರಿ. ವಿವಾಹ ಕಾರ್ಯಗಳು ನಡೆಯಲಿವೆ. ವ್ಯಾಪಾರದಲ್ಲಿ ವಿಶೇಷ ಅನುಕೂಲ ಉಂಟಾಗಲಿದೆ. ಗೃಹ-ನಿವೇಶನ ಖರೀದಿ ಸಾಧ್ಯವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ವಾತಾವರಣ ಉಂಟಾಗಲಿದೆ. ವಾಹನ ಖರೀದಿ ಸಾಧ್ಯತೆ ಇದೆ.  ಗೃಹ ಕಲಹಗಳು ಕಾಡಲಿವೆ. ವಾತ -ಕಫ ಸಂಬಂಧಿ ತೊಂದರೆಗಳು ಕಾಡಲಿವೆ. ನವೆಂಬರ್ ವೇಳೆಗೆ ಶುಕ್ರ-ಬುಧರಿಂದ ವೃತ್ತಿಯಲ್ಲಿ ಅನುಕೂಲವಿದೆ. ವಸ್ತ್ರಾಭರಣ ಕ್ಷೇತ್ರದಲ್ಲಿ ಹೆಚ್ಚಿನ ಲಾಭಗಳಿಸುವಿರಿ. ಕಲಾವಿದರಿಗೆ ವಿಶೇಷ ಗೌರವ ಪ್ರಾಪ್ತಿಯಾಗಲಿದೆ. ಜನವರಿಯಿಂದ ಮತ್ತೆ ಗುರುಬಲ ಬಂದು ನಿಮ್ಮ ಜೀವನ ಸುಖಮಯವಾಗಲಿದೆ. ಅಂದುಕೊಂಡ ಆಸೆ-ಆಕಾಂಕ್ಷೆಗಳು ಈಡೇರಲಿವೆ. ಅಂತೂ ನವೆಂಬರ್ ನಂತರ ಹೆಚ್ಚಿನ ಸಮಾಧಾನ ಕಾಣುವಿರಿ. 

ಮಕರ -  ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಅಧ್ಯಯನ ಶೀಲರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ.  ಮೇ ತಿಂಗಳ 14 ರ ನಂತರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದೆ. ಹೆಚ್ಚಿನ ವ್ಯಯ ಸಂಭವಿಸಲಿದೆ. ಹಿತ ಶತ್ರುಗಳ ಬಾಧೆ ಕಾಡಲಿದೆ. ಧನ ಸ್ಥಾನಕ್ಕೆ ಬರುವ ರಾಹು ದುಡಿದದ್ದನ್ನೆಲ್ಲಾ ಕಳೆಯುತ್ತಾನೆ. ಬಾಯಿ ಹುಣ್ಣಾಗುವ ಸಾಧ್ಯತೆ ಇದೆ. ಕುಟುಂಬ ಘರ್ಷಣೆ ಉಂಟಾಗಲಿದೆ. ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ-ಘರ್ಷಣೆ ಉಂಟಾಗಲಿದೆ. ಒರಟು-ಕಹಿ ಮಾತುಗಳಿಂದ ಹತ್ತಿರದವರನ್ನು ಕಳೆದುಕೊಳ್ಳುವಿರಿ. ಹೆಚ್ಚು ಮೌನ ವಹಿಸಿ. ಅಷ್ಟಮದ ಕೇತು ಆರೋಗ್ಯ ಕ್ಷೀಣಿಸುತ್ತಾನೆ. ಅವಮಾನ ಇತ್ಯಾದಿ ತೊಂದರೆಗಳುಂಟಾಗಬಹುದು. ಜಲೋತ್ಪನ್ನ ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಲಾಭಗಳಿಸುತ್ತೀರಿ. ಜನವರಿಯಲ್ಲಿ ಆರೋಗ್ಯ ಬಾಧೆ, ಸಾಲ-ಶತ್ರುಗಳ ಭಯ ನಿಮ್ಮನ್ನು ಕಾಡಲಿದೆ. ಶುಕ್ರ-ಬುಧರಿಂದ ವೃತ್ತಿಯಲ್ಲಿ ವೀಶೇಷ ಅನುಕೂಲ-ಬಡ್ತಿ ಗೌರವಗಳು ಉಂಟಾಗಲಿವೆ. 

ಕುಂಭ - ಶನೈಶ್ಚರ ರಾಹುವಿನ ಜತೆ ಸೇರಿ ನಿಮ್ಮ ಮಾತಿನ ಬಲ ಕಡಿಮೆಗೊಳಿಸುತ್ತಾನೆ. ಪತ್ರಿಕಾ ರಂಗದವರು-ಉಪನ್ಯಾಸಕರು ಎಚ್ಚರವಹಿಸಿ.  ಕುಟುಂಬ ಕಲಹಗಳು ಶುರುವಾಗಲಿವೆ. ಮನೆ ಸೇರದೆ ಸಂಚಾರವೇ ಜೀವನ ಶೈಲಿಯಾಗುತ್ತದೆ. ಮೇ 14 ರ ನಂತರದ  ಬುದ್ಧಿಬಲ-ಮನೋಬಲಗಳು ಮೈಗೂಡಿ ವಿಶೇಷ ಸಾಧನೆಯಲ್ಲಿ ತೊಡಗುವಿರಿ. ಬರವಣಿಗೆ-ಅಧ್ಯಯನ-ಸಂಶೋಧನೆಗಳಲ್ಲಿ ತೊಡಗುವಿರಿ. ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಸಾಧನೆಗೆ ಪ್ರಶಸ್ತಿ-ಪುರಸ್ಕಾರಗಳು ಸಂದಾಯವಾಗಲಿವೆ. ಮತ್ತೊಬ್ಬರಿಗೆ ಮಾರ್ಗದರ್ಶಕರಾಗುವಿರಿ. ಮಕ್ಕಳ ಒಡನಾಟ ಮನಸ್ಸಿಗೆ ಮುದ ಕೊಡಲಿದೆ. ಸಂತಾನ ಸೂಚನೆಯಂಥಾ ಶುಭಫಲಗಳು ಉಂಟಾಗಲಿವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಸಪ್ತಮದ ಕೇತುವಿನಿಂದ ದಾಂಪತ್ಯದಲ್ಲಿ ಮನಸ್ತಾಪ-ಭಿನ್ನಾಭಿಪ್ರಾಯ ಕಲಹಗಳು ತಾರಕಕ್ಕೇರುತ್ತವೆ. ನಂಬಿದವರೇ ಮೋಸ ಮಾಡಬಹುದು. ಜನವರಿಯಲ್ಲಿ ಮತ್ತೆ ಗುರುಬಲ ಮರುಕಳಿಸುವುದರಿಂದ ಮತ್ತೆ ಶುಭಫಲವನ್ನು ಕಾಣುವಿರಿ. ಕಳೆದು ಹೋಗಿದ್ದ ನೆಮ್ಮದಿ ಮತ್ತೆ ಮರಳಿ ಬರಲಿದೆ. ವರ್ಷಾಂತ್ಯದಲ್ಲಿ ಮತ್ತೆ ಸುಖಜೀವನ ಇರಲಿದೆ. 

ಮೀನ  - ಕಾಲಿನ ಬಾಧೆಗಳು ಶುರುವಾಗಲಿದೆ.  ಗೃಹ-ನಿವೇಶನಾದಿ ಶುಭ ಫಲಗಳನ್ನು ಹೊಂದುವಿರಿ. ಆದರೆ ವ್ಯಯ ಸ್ಥಾನವನ್ನು ಪ್ರವೇಶಿಸುವ ರಾಹು ಕಣ್ಣು-ಕಾಲಿನ ಬಾಧೆ ತರಲಿದ್ದಾನೆ. ಹೆಚ್ಚಿನ ವ್ಯಯ ಉಂಟುಮಾಡುತ್ತಾನೆ. ಅನಗತ್ಯ ಖರ್ಚುಗಳು ಹೆಚ್ಚಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಒಂದು ವಿಶೇಷ ಬದಲಾವಣೆ ಕಾಣುತ್ತೀರಿ. ಊಹಿಸಲಾಗದ ವಿಶಿಷ್ಟ ಶುಭಫಲವನ್ನು ಕಾಣುತ್ತೀರಿ. ಪಂಚಮ ಸ್ಥಾನ ಪ್ರವೇಶಿಸುವ ಗುರುವಿನಿಂದ ಉನ್ನತ ಸ್ಥಾನ-ಮಾನ ಪ್ರಾಪ್ತಿಯಾಗಲಿದೆ. ಅಧ್ಯಯನ-ಸಂಶೋಧನೆಗಳಲ್ಲಿ ಸಹಕಾರ ಸಿಗಲಿದೆ. ಪ್ರಶಸ್ತಿ-ಪುರಸ್ಕಾರಗಳು ದೊರೆಯಲಿವೆ. ವೃತ್ತಿಯಲ್ಲಿ ವಿಶೇಷ ಅನುಕೂಲ ಉಂಟಾಗಲಿವೆ. ನವೆಂಬರ್ ನಂತರ  ಶುಕ್ರ-ಬುಧರಿಂದ ರಂಗಕರ್ಮಿಗಳು-ಕಲಾವಿದರಿಗೆ ವಿಶೇಷ ಫಲ ಉಂಟಾಗಲಿದೆ. ಜನವರಿಯಿಂದ ಮತ್ತೆ ಸಾಧಾರಣ ಫಲ ಇರಲಿದೆ.

ವಿಶ್ವಾವಸು ಸಂವತ್ಸರದಲ್ಲಿ ಯಾರು ರಾಜ? ಯಾರು ಮಂತ್ರಿ? ಯುಗಾದಿ ಭವಿಷ್ಯ ಹೇಗಿದೆ

vuukle one pixel image
click me!