ವಿಶ್ವಾವಸು ಸಂವತ್ಸರದಲ್ಲಿ ಯಾರು ರಾಜ? ಯಾರು ಮಂತ್ರಿ? ಯುಗಾದಿ ಭವಿಷ್ಯ ಹೇಗಿದೆ

ಈ ಸಂವತ್ಸರದ ಹೆಸರು ವಿಶ್ವಾವಸು. ವಿಶ್ವಾವಸು ಎಂದರೇನು..? ಎಂದು ಶ್ರೀಕಂಠಶಾಸ್ತ್ರಿಗಳು ಹೇಳಿದ್ದಾರೆ. 
 

horoscope ugadi varsha bhavishya all zodiac signs suh

ಈ ಸಂವತ್ಸರದ ಹೆಸರು ವಿಶ್ವಾವಸು. ವಿಶ್ವಾವಸು ಎಂದರೇನು..? ಎರಡುಮೂರು ಬಗೆಗಳಲ್ಲಿ ಈ ಪದವನ್ನು ಅರ್ಥೈಸಬಹುದು. ಕಲ್ಪದ್ರುಮದ ಪ್ರಕಾರ ವಿಶ್ವಂ ವಸು ಯಸ್ಯ ವಿಶ್ವಾವಸು ಅಂತ. ಇಡೀ ವಿಶ್ವವೇ ಯಾರ ಸಂಪತ್ತೋ ಅವನು ಅಂತ. ಅಲ್ಲದೇ,  ವಿಶ್ವೇಷಾಂ ವಸು ಯಸ್ಮಾತ್ ವಿಶ್ವಾವಸು:  ಎಂಬುದು ವಾಚಸ್ಪತ್ಯ ವಚನ. ಇದರರ್ಥ - ಎಲ್ಲರ ಸಂಪತ್ತು ಯಾರಿಂದಲೋ ಅವನು ವಿಶ್ವಾವಸು ಎಂದು. ಇವೆಲ್ಲವೂ ವಿಷ್ಣುವಿನ ಹೆಸರನ್ನೇ ಸೂಚಿಸುತ್ತದೆ. ಕಿಟ್ಟಲ್ ಪ್ರಕಾರ wealth Of all - ಎಲ್ಲರ ಸಂಪತ್ತು  ಅಂತ. ಒಟ್ಟಾರೆ ವಿಶ್ವಾವಸು ಸಂವತ್ಸರ ಸಂಪತ್ತನ್ನು ಸೂಚಿಸುತ್ತದೆ. ಎಲ್ಲರ ಬದುಕಿಗೆ ಸಮೃದ್ಧವಾದ ಸಂಪತ್ತು 
ವಿಶ್ವಾವಸು ಸಂವತ್ಸರವು ಪ್ರಾರಂಭವಾಗುತ್ತಿರುವುದು ಭಾನುವಾರ.  ಯಾವ ವಾರದಂದು ಸಂವತ್ಸರ ಪ್ರಾರಂಭವಾಗುತ್ತದೆಯೋ ಆ ವಾರದ ಅಧಿಪತಿಯೇ ಆ ವರ್ಷದ ರಾಜನಾಗಿರುತ್ತಾನೆ. ಹೀಗಾಗಿ ಈ ವರ್ಷದ ರಾಜ ಸೂರ್ಯ (ರವಿ )  ಸೌರ ಸಂಕ್ರಮಣವು ಯಾವ ವಾರವಿರುವುದೋ ಆ ವಾರದ ಅಧಿಪತಿ ಮಂತ್ರಿಯಾಗಿರುತ್ತಾನೆ. ಹೀಗಾಗಿ ಈ ವರ್ಷದಲ್ಲಿ ಸೋಮವಾರ ಸೌರ ಸಂಕ್ರಮಣವಾಗುವುದರಿಂದ ಈ ವರ್ಷದ ಮಂತ್ರಿ ಚಂದ್ರನಾಗಿದ್ದಾನೆ. ರಾಜ-ಮಂತ್ರಿಗಳೇ ಸಾಮಾನ್ಯವಾಗಿ ಆ ವರ್ಷದ ಫಲಾಫಲ ನಿರ್ಣಯಿಸಿಬಿಡುತ್ತಾರೆ. ಜಗದೊಡೆಯನ ನೇತ್ರಗಳೆ ಆಗಿರುವ ಸೂರ್ಯಚಂದ್ರರು ಈ ವರ್ಷ ಯಾವ ಹೆಚ್ಚಿನ ಶುಭವನ್ನೇ ತರಲಿದ್ದಾರೆ. 
 
ಗ್ರಹಗಳ ರಾಜಾದಯಫಲ :

ರಾಜ - ರವಿ
ರಾಜ  - ಸೂರ್ಯ ರಾಜನಾದುದರಿಂದ ಅತಿಯಾದ ಬಿಸಿಲಿನ ತಾಪ ಪ್ರಾಣಿಸಂಕುಲವನ್ನು ಕಾಡಲಿದೆ. ಕಡಿಮೆ ಮಳೆಯನ್ನು ಸೂಚಿಸುವ ಸೂರ್ಯ ಬೆಳೆ-ಧಾನ್ಯಗಳ ಕೊರತೆಯನ್ನುಂಟುಮಾಡಲಿದ್ದಾನೆ. ರಾಜರಲ್ಲಿ ವೈರತ್ವ ಬೆಳೆಯಲಿದೆ. 

Latest Videos

ಮಂತ್ರಿ -  ಚಂದ್ರ
ಮಂತ್ರಿ - ಚಂದ್ರ  ಮಂತ್ರಿಯಾದುದರಿಂದ ಮಳೆಗೆ ಕೊರತೆಯಾಗುವಿದಿಲ್ಲ. ಸಸ್ಯಗಳು ಚೆನ್ನಾಗಿ ಫಲಿಸುತ್ತವೆ. ಜನರು ಕ್ಷೇಮದಿಂದಿರುತ್ತಾರೆ. ಸ್ತ್ರೀಯರಿಗೆ ಅಧಿಕಾರ ಉಂಟಾಗಲಿದೆ.

ಸೇನಾಧಿಪತಿ - ರವಿ
ಸೇನೆ ಅಂದ್ರೆ ರಕ್ಷಣಾ ವ್ಯವಸ್ಥೆ. ರಕ್ಷಣಾ ವ್ಯವಸ್ಥೆಗಳಲ್ಲಿ ತೊಂದರೆಗಳು- ದೇಶದೇಶಗಳ ನಡುವೆ ಯುದ್ಧ ಸಂಭವ ಸಾಧ್ಯತೆ. ಕೆಂಪು ಧಾನ್ಯಗಳ ಬೆಳೆ ಸಮೃದ್ಧವಾಗಲಿದೆ. 

ಸಸ್ಯಾಧಿಪತಿ - ಗುರು
ಗುರುವು ಸಸ್ಯಾಧಿಪತಿಯಾದ್ದರಿಂದ ಸಸ್ಯಗಳಲ್ಲಿ ಸಮೃದ್ಧಿಯನ್ನು ಕಾಣಬಹುದು. ಸಿಹಿ ಪದಾರ್ಥಗಳು ಸಮೃದ್ಧವಾಗಿ ಬೆಳೆಯಲಿವೆ. ಸಿಹಿ ಹಾಗೂ ಹಣ್ಣಿನ ಫಲ ಹೆಚ್ಚಾಗಲಿದೆ.

ಧಾನ್ಯಾಧಿಪತಿ - ಕುಜ
ಕುಜನಿಂದಾಗಿ ಕುಷ್ಕಿ ಧಾನ್ಯಗಳು, ಕೆಂಪುಧಾನ್ಯಗಳು ಸಮೃದ್ಧವಾಗಿ ಬೆಳೆಯಬಹುದು. ಕೆಂಪು ಧಾನ್ಯಗಳು ಹೆಚ್ಚಿನ ಫಲಕೊಡಲಿವೆ. 

ಅರ್ಘಾಧಿಪತಿ -  ರವಿ
ಅರ್ಘಾಧಿಪತ್ಯವೆಂದರೆ ಪದಾರ್ಥಗಳಿಗೆ ಉಂಟಾಗುವ ಬೆಲೆ. ಸೂರ್ಯನಿಂದ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಕೆಂಪು ಧಾನ್ಯಗಳು ಹೆಚ್ಚಾಗಿ ಫಲಿಸಲಿವೆ.

ಮೇಘಾಧಿಪತಿ - ರವಿ
ಸೂರ್ಯನ ಕಾರಣದಿಂದ ಬೆಸಿಲಿನ ತಾಪ ಹೆಚ್ಚು. ಮಳೆ ಪ್ರಮಾಣ ಕಡಿಮೆಯಾಘಲಿದೆ. ಧಗೆ-ಒಣ ವಾತಾವರಣ ಹೆಚ್ಚಾಗಿರಲಿದೆ. 

ರಸಾಧಿಪತಿ- ಶನಿ
ಸಸ್ಯಗಳಲ್ಲಿ ಸತ್ವತೆ ಕಡಿಮೆಯಾಗುತ್ತದೆ. ರಸ ಪದಾರ್ಥಗಳು ಕ್ಷೀಣಿಸುತ್ತವೆ. 

ನೀರಸಾಧಿಪತಿ - ಬುಧ
ಸುಗಂಧ ದ್ರವ್ಯಗಳು-ಶ್ರೀಗಂಧಗಳು ದುರ್ಲಭವಾಗುತ್ತವೆ. ಕಬ್ಬಿಣ, ಸೀಸ, ತಾಮ್ರ, ಪಚ್ಚೆ ವಸ್ತುಗಳು ಸಮದ್ಧವಾಗಿ ದೊರೆಯುತ್ತವೆ.

ಪಶುನಾಯಕ - ಯಮ
ಯಮನ ನಾಯಕತ್ವದಲ್ಲಿ ಪಶುಗಳಿಗೆ ರೋಗ ಬಾಧೆ ಹೆಚ್ಚಬಹುದು. ಮೇವಿನ ಕೊರತೆ ಉಂಟಾಗಲಿದೆ.

ಗ್ರಹಣ ವಿಚಾರ :

07-09-2025 - ಭಾನುವಾರ - ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಸಂಭವಿಸಲಿದೆ. ಆಚರಣೆ ಇದೆ.
ಸ್ಪರ್ಶಕಾಲ ರಾತ್ರಿ - 09.57
ಮಧ್ಯಕಾಲ ರಾತ್ರಿ - 11.42
ಮೋಕ್ಷಕಾಲ ರಾತ್ರಿ - 1.26

03-03—2026 - ಮಂಗಳವಾರ - ಖಗ್ರಾಸ ಚಂದ್ರಗ್ರಹಣ ಭಾರತದಲ್ಲಿ ಸಂಭವಿಸಲಿದೆ. ಆಚರಣೆ ಇದೆ.
ಸ್ಪರ್ಶಕಾಲ ಮಧ್ಯಾಹ್ನ - 3.20
ಮಧ್ಯಕಾಲ ಸಂಜೆ  - 5.04
ಮೋಕ್ಷಕಾಲ ಸಂಜೆ  - 06.40

ಗ್ರಹಗಳ ಸಂಚಾರ ವಿಚಾರ :

ಈ ವರ್ಷ ಮುಖ್ಯವಾಗಿ ಗುರು, ರಾಹು, ಕೇತುಗಳ ಪರಿವರ್ತನೆ ಇರುವುದರಿಂದ ಎಲ್ಲ ರಾಶಿಗಳಿಗೂ ಈ ಗ್ರಹಗಳ ಫಲಾಫಲ ಸಂದಾಯವಾಗಲಿದೆ. 

ಮೇ 14 ರಂದು ಮಿಥುನ ರಾಶಿಗೆ ಗುರುವಿನ ಸಂಕ್ರಮಣವಾಗಲಿದೆ. ಅಲ್ಲದೆ,
ಗುರುವು ಅಕ್ಟೋಬರ್ 19 ರಿಂದ ಡಿಸೆಂಬರ್ 4 ರ ವರೆಗೆ ಕರ್ಕಟಕ ರಾಶಿಯಲ್ಲಿ ಸಂಚರಿಸಲಿದ್ದಾನೆ. 
ನಂತರ, ಡಿಸೆಂಬರ್ 5 ರಿಂದ ವರ್ಷಾಂತ್ಯದವರೆಗೆ ಮಿಥುನ ಸಂಚಾರವಿರುತ್ತದೆ.
ಮೇ 18 ರಂದು ರಾಹುವು ಕುಂಭ ರಾಶಿಗೂ ಕೇತುವು ಸಿಂಹ ರಾಶಿಗೂ ಪ್ರವೇಶವಾಗಲಿದೆ.

vuukle one pixel image
click me!