ಗುರುವಾಯೂರು ದೇಗುಲದಲ್ಲಿ ವೃಶ್ಚಿಕ ಏಕಾದಶಿಯಂದೇ ಉದಯಸ್ತಮಾನ ಪೂಜೆ ಮಾಡಿ: ಸುಪ್ರೀಂಕೋರ್ಟ್ ಸೂಚನೆ

Published : Oct 31, 2025, 07:14 PM IST
Guruvayur Temple

ಸಾರಾಂಶ

Udayasthamana Pooja controversy: ಗುರುವಾಯೂರು ದೇವಸ್ಥಾನದ ಉದಯಾಸ್ತಮಾನ ಪೂಜೆಯ ಸಮಯ ಬದಲಾವಣೆ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಭಕ್ತರ ಅನುಕೂಲಕ್ಕಾಗಿ ಆಚರಣೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ವೃಶ್ಚಿಕ ಏಕಾದಶಿಯಂದೇ ಪೂಜೆ ನಡೆಸುವಂತೆ ಆದೇಶಿಸಿದೆ.

ಗುರುವಾಯೂರು ದೇಗುಲ ವಿವಾದ: ಉದಯಸ್ಥಾನ ಪೂಜೆ ನಿಗದಿಯಂತೆ ನಡೆಸಲು ಸೂಚನೆ

ನವದೆಹಲಿ: ಕೆಲವು ಆಚರಣೆಗಳ ಸಮಯವನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸಲಾಗುತ್ತದೆ. ಬದಲಾವಣೆಗೂ ಮೊದಲು ದೇಗುಲದ ತಂತ್ರಿಗಳು ಅಷ್ಟಮಂಗಲ ಪ್ರಶ್ನೆಯ ಮೂಲಕ ಅನುಮತಿ ಪಡೆಯುತ್ತಾರೆ. ಅದೇ ರೀತಿ ಗುರುವಾಯೂರು ದೇವಸ್ಥಾನದಲ್ಲಿ ನಡೆಯುವ ಉದಯಾಸ್ತಮಾನ ಪೂಜೆಯ ಸಮಯವನ್ನು ತಂತ್ರಿಗಳು ಬದಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಕೋರ್ಟ್ ಮೆಟ್ಟಿಲೇರಿತ್ತು. ಈಗ ಈ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೀಗ ಸುಪ್ರೀಂಕೋರ್ಟ್‌ ತೆರೆ ಎಳೆದಿದೆ.

ಗುರುವಾಯೂರು ದೇವಸ್ಥಾನದಲ್ಲಿ ಉದಯಾಸ್ತಮಾನ ಪೂಜೆಯನ್ನು ವೃಶ್ಚಿಕ ಏಕಾದಶಿಯ ದಿನದಂದೇ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ದೇವರ ಆಧ್ಯಾತ್ಮಿಕ ಶಕ್ತಿಯನ್ನು (ಚೈತನ್ಯಂ) ಹೆಚ್ಚಿಸುವುದು ತಂತ್ರಿಗಳ (ಮುಖ್ಯ ಅರ್ಚಕರ) ಕರ್ತವ್ಯವಾಗಿದ್ದು, ಭಕ್ತರ ಅನುಕೂಲಕ್ಕಾಗಿ ತಂತ್ರಿಗಳು ಆಚರಣೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದ್ದು, ದೇವರ ಆಧ್ಯಾತ್ಮಿಕ ಶಕ್ತಿ ಕಡಿಮೆಯಾದರೆ, ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಕಡಿಮೆಯಾಗಬಹುದು ಎಂದು ಹೇಳಿದೆ.

ಡಿಸೆಂಬರ್ 1 ರಂದು ವೃಶ್ಚಿಕ ಏಕಾದಶಿ

ಈ ವರ್ಷ, ವೃಶ್ಚಿಕ ಏಕಾದಶಿ ಡಿಸೆಂಬರ್ 1 ರಂದು ಬರುತ್ತದೆ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದ ಮೂಲಕ ಉದಯಸ್ಥಮಾನ ಪೂಜೆಯನ್ನು ಆ ದಿನದಂದೇ ನಡೆಸಬೇಕೆಂದು ನಿರ್ದೇಶಿಸಿದೆ. ಈ ಹಿಂದೆ, ತುಲಾ ಏಕಾದಶಿಗೆ ಅನುಗುಣವಾಗಿ ನವೆಂಬರ್ 2 ರಂದು ಆಚರಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ ದೇಗುಲದ ತಂತ್ರಿ ಅದೇ ಸೂಕ್ತವೆಂದು ಭಾವಿಸಿದರೆ, ವೃಶ್ಚಿಕ ಏಕಾದಶಿಯ ಜೊತೆಗೆ ತುಲಾ ಏಕಾದಶಿಯಂದೇ ಉದಯಸ್ಥಮಾನ ಪೂಜೆಯನ್ನು ಸಹ ನಡೆಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ದೈವಿಕ ಮಾರ್ಗದರ್ಶನ ಪಡೆದು ಬದಲಾವಣೆಗೆ ಅನುಮತಿ ನೀಡಿದ್ದ ತಂತ್ರಿ

ವೃಶ್ಚಿಕ ಮಾಸದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ, ತುಲಂ ಏಕಾದಶಿಗೆ ಆಚರಣೆಯನ್ನು ಬದಲಾಯಿಸುವ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಲಾಗಿತ್ತು. ಗುರುವಾಯೂರ್ ದೇವಸ್ವಂ ಮಂಡಳಿಯ ಕೋರಿಕೆಯ ಮೇರೆಗೆ, ತಂತ್ರಿ ದೈವಿಕ ಮಾರ್ಗದರ್ಶನ ಪಡೆದು ಬದಲಾವಣೆಗೆ ಅನುಮತಿ ನೀಡಿದ್ದರು. ದೇಗುಲದ ತಂತ್ರಿ ಪರವಾಗಿ ಹಾಜರಾದ ಹಿರಿಯ ವಕೀಲ ವಿ. ಗಿರಿ, ಸಂಪ್ರದಾಯದ ಪ್ರಕಾರ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಸರಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಗುರುವಾಯೂರು ದೇವಸ್ವಂ ಮಂಡಳಿಯು ದೇಗುಲದಲ್ಲಿ ನಡೆಯುವ ಉದಯಸ್ತಮಾನ ಪೂಜೆಯು ದೈನಂದಿನ ಆಚರಣೆಯಲ್ಲ, ಬದಲಾಗಿ ಅದು ನೈವೇದ್ಯ (ವಾಳಿಪಾಡು) ಕಾಣಿಕೆ ಎಂಬ ನಿಲುವು ಹೊಂದಿತ್ತು. ದೇಗುಲ ಮಂಡಳಿಯ ಪರವಾಗಿ ಹಾಜರಾದ ಹಿರಿಯ ವಕೀಲರಾದ ಆರ್ಯಮ ಸುಂದರಂ ಮತ್ತು ಎಂ.ಎಲ್. ಜಿಷ್ಣು, ದೇವಾಲಯದ ಆಚರಣೆಗಳ ಬಗ್ಗೆ ಅಂತಿಮ ನಿರ್ಧಾರವು ತಂತ್ರಿಯದ್ದೇ ಆಗಿದ್ದು, ಅವರ ಒಪ್ಪಿಗೆಯ ಮೇರೆಗೆ ಈ ಆಚರಣೆಯನ್ನು ಮರು ನಿಗದಿಪಡಿಸಲಾಗಿದೆ ಎಂದು ವಾದಿಸಿದರು.

ಆದರೆ ಆದರೆ, ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಾದ ಸಿ ಎಸ್ ವೈದ್ಯನಾಥನ್, ಕೆ ಪರಮೇಶ್ವರ್, ಗುರು ಕೃಷ್ಣಕುಮಾರ್ ಮತ್ತು ವಕೀಲ ಎ ಕಾರ್ತಿಕ್ ಅವರು, ಉದಯಸ್ತಮಾನ ಪೂಜೆಯು ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಆಚರಣೆಯಾಗಿದ್ದು, ತಂತ್ರಿ ಅದನ್ನು ಏಕಪಕ್ಷೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ದೇವಸ್ಥಾನ ಭೇಟಿಯಿಂದ ಹಿಂದೆ ಸರಿದಿದ್ದ ನ್ಯಾಯಮೂರ್ತಿ

ಈ ಪ್ರಕರಣಗಳ ವಿಚಾರಣೆಯನ್ನು ತಾವು ಆಲಿಸುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಅವರು ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದ್ದಾಗಾಗಿ ಮಹೇಶ್ವರಿ ಹೇಳಿದ್ದಾರೆ. ತಮ್ಮ ಸ್ನೇಹಿತ ಮತ್ತು ಸಹ ನ್ಯಾಯಾಧೀಶ ಸಿ ಟಿ ರವಿಕುಮಾರ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಲು ಕೇರಳದಲ್ಲಿದ್ದರೂ ದೇವಸ್ಥಾನಕ್ಕೆ ಸಂಬಂಧಿಸಿದ ಅರ್ಜಿಗಳು ತಮ್ಮ ಪೀಠದ ಮುಂದೆ ಇದ್ದುದರಿಂದ, ತಾವು ದೇಗುಲಕ್ಕೆ ಭೇಟಿ ನೀಡದಿರಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ.

ದೇವಸ್ವಂ ಮಂಡಳಿಯ ಪರವಾಗಿ ಹಾಜರಾದ ಹಿರಿಯ ವಕೀಲ ಆರ್ಯಮ ಸುಂದರಂ, ಗುರುವಾಯೂರಿನಲ್ಲಿ ಎಲ್ಲಾ ಆಚರಣೆಗಳನ್ನು ಕಟ್ಟುನಿಟ್ಟಾಗಿ ಸಂಪ್ರದಾಯದ ಪ್ರಕಾರ ನಡೆಸಲಾಗುತ್ತದೆ ಎಂದು ಹೇಳುತ್ತಾ, ಗಾಯಕ ಕೆ ಜೆ ಯೇಸುದಾಸ್ ಕೂಡ ದೇವಾಲಯದೊಳಗೆ ಹಾಡಲು ಅನುಮತಿ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಧರ್ಮ ಮೀರಿದ ಸ್ನೇಹ: ಮುಸ್ಲಿಂ ನಟ ಮಮ್ಮುಟ್ಟಿ ಚೇತರಿಕೆ ನಂತರ ಹರಕೆ ತೀರಿಸಿದ ಕೇರಳ RSS ಮುಖಂಡ

ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ NEET ಪಾಸಾದ 4 ಮಕ್ಕಳ ತಾಯಿ 47ರ ಹರೆಯದ ಮಹಿಳೆ

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ