
ರಾತ್ರಿ ಬೆಳಗಾಗೋದ್ರಲ್ಲಿ ಜೀವನ ಸಂಪೂರ್ಣ ಬದಲಾಗಿರುತ್ತೆ. ಕೆಟ್ಟ ಸಮಯ ಸಿಡಿಲಿನಂತೆ ಬಡಿದಂಗೆ ಒಳ್ಳೆ ಸಮಯ ಕೂಡ ದಿಢೀರ್ ಬರುತ್ತೆ. ಕಷ್ಟ ಕಷ್ಟ ಅಂದ್ಕೊಂಡಿರೋರು ಅಚಾನಕ್ಕೆ ಒಳ್ಳೆ ಜೀವನ ನೋಡೋಕೆ ಶುರು ಮಾಡ್ತಾರೆ. ನೋವು, ಅನಾರೋಗ್ಯ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸ್ತಿರುವ ಜನರು ಯಾವಾಗ ಒಳ್ಳೆ ಸಮಯ ಬರುತ್ತೋ ಅಂತ ಕಾಯ್ತಿರುತ್ತಾರೆ. ಅಂಥವರಿಗೆ ದೇವರು ಸೂಕ್ಷ್ಮ ರೀತಿಯಲ್ಲಿ ಸೂಚನೆ ನೀಡ್ತಾನೆ. ನಿಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆ ನೀವು ಶ್ರೀಮಂತರಾಗ್ತೀರಿ, ನಿಮ್ಮ ಅದೃಷ್ಟ ಬದಲಾಗುತ್ತೆ, ಬಂದ ಕಷ್ಟವೆಲ್ಲ ಹೂವಿನಂತೆ ಹಗುರಾಗುತ್ತೆ ಎಂಬುದನ್ನು ತೋರಿಸುತ್ತೆ.
ಹೊಳೆಯುವ ಮುಖ : ಬೆಳಿಗ್ಗೆ ಎದ್ದ ತಕ್ಷಣ ಅನೇಕರು ಕನ್ನಡಿಯಲ್ಲಿ ಮುಖ ನೋಡಿಕೊಳ್ತಾರೆ. ಸದಾ ಡಲ್ಲಾಗಿರುವ ಮುಖ ಹೊಳೆಯುತ್ತಿದ್ದರೆ, ಮುಖದಲ್ಲಿ ಆತ್ಮವಿಶ್ವಾಸ, ಹೊಸ ಉತ್ಸಾಹ ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದರ್ಥ.
ಬಾಬಾ ವಂಗಾ ಭವಿಷ್ಯ: ಈ ರಾಶಿಗಳಿಗೆ ಮುಂದಿನ ವರ್ಷ ರಾಜಯೋಗ!
ಕನಸಿನಲ್ಲಿ ಮಂತ್ರಗಳು ಕೇಳಿಸುವುದು : ಕನಸಿ (dream)ನಲ್ಲಿ ನಿಮಗೆ ಮಂತ್ರ ಕೇಳಿಸಿದ್ರೆ ಅದು ಶುಭ. ಅದ್ರಲ್ಲೂ ರಾಮ ರಾಮ ಅಥವಾ ಓಂ ಮಂತ್ರ ಕೇಳಿಸಿದ್ರೆ ಅದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದು ಸಕಾರಾತ್ಮಕ ಹಾಗೂ ಆಧ್ಯಾತ್ಮಿಕ ವೃದ್ಧಿಯ ಸಂಕೇತವಾಗಿದೆ. ಕನಸಿನಲ್ಲಿ ಗಾಯತ್ರಿ ಮಂತ್ರ ಕೇಳಿಸಿದ್ರೆ ಅದನ್ನು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಸ್ವಪ್ನದಲ್ಲಿ ಗಂಟೆ, ಶಂಖ ಅಲ್ಲದೆ ಪವಿತ್ರ ಧಾರ್ಮಿಕ ಶಬ್ಧಗಳು ಕೇಳಿಸಿದ್ರೆ ಅದನ್ನೂ ಕೂಡ ಅದೃಷ್ಟ ಬದಲಾಗುವ ಸೂಚನೆ ಎನ್ನಲಾಗುತ್ತದೆ.
ಮನೆ ಮುಂದೆ ಹಸು : ಹಿಂದೂ ಧರ್ಮದಲ್ಲಿಆಕಳಿಗೆ ದೇವರ ಸ್ಥಾನ ನೀಡಲಾಗಿದೆ. ಹಸು ಮನೆ ಮುಂದೆ ಬಂದು, ಆಹಾರ ನೀಡುವವರೆಗೂ ಕಾದು ನಿಂತಿದ್ದರೆ ಇದನ್ನು ಕೂಡ ಶುಭ ಸೂಚಕ ಎನ್ನಲಾಗುತ್ತದೆ. ಅದೇ ರೀತಿ ನಿಮ್ಮ ಮನೆಗೆ ಪಕ್ಷಿಗಳು ಬರ್ತಿದ್ದರೆ ಅದು ಕೂಡ ಅದೃಷ್ಟ ಬದಲಾವಣೆಯ ಸೂಚಕವಾಗಿದೆ.
ಶರೀರದ ಅಂಗಗಳು ಬಡಿದುಕೊಳ್ಳುವುದು : ಪುರುಷರಲ್ಲಿ ದೇಹದ ಬಲಭಾಗದ ಯಾವುದೇ ಅಂಗ ಬಡಿದುಕೊಂಡರೆ ಅದನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಬಲ ಕಣ್ಣಾಗಿರಲಿ ಇಲ್ಲ ಬಲ ಕೈ ಆಗಿರಲಿ. ಇದು ವೃದ್ಧಿಯನ್ನು ಸೂಚಿಸುತ್ತದೆ. ಸಕಾರಾತ್ಮಕ ಬದಲಾವಣೆ ನಿಮ್ಮಲ್ಲಾಗಲಿದೆ. ಅದೇ ಮಹಿಳೆಯರ ಎಡ ಭಾಗಗಳು ಬಡಿದುಕೊಂಡಲ್ಲಿ ಅದನ್ನು ಶುಭಕರವೆಂದು ನಂಬಲಾಗಿದೆ.
Mahabharata: ಕುರುಕ್ಷೇತ್ರ ಯುದ್ಧದಲ್ಲಿ ಬದುಕುಳಿದ ಕರ್ಣನ ಒಬ್ಬನೇ ಮಗನಿವನು!
ಮನೆಯಲ್ಲಿ ನಡೆಯುತ್ತೆ ಈ ಎಲ್ಲ ಘಟನೆ : ನಿಮ್ಮ ಮುಂದಿನ ಜೀವನ ಸುಖಕರವಾಗಲಿದೆ ಎಂಬುದನ್ನು ಮನೆಯಲ್ಲಿ ನಡೆಯುವ ಇನ್ನೂ ಕೆಲ ಘಟನೆಗಳು ಸೂಚಿಸುತ್ತವೆ. ನಿಮ್ಮ ಮನೆಯಂಗಳದಲ್ಲಿ ಇಷ್ಟು ದಿನ ಬಾಡುತ್ತಿದ್ದ ಗಿಡಗಳು ಹಸಿರಾಗಿ ಮೊಗ್ಗು ಮೂಡಿದ್ರೆ ಅದನ್ನು ಶುಭವೆನ್ನಲಾಗುತ್ತದೆ. ಅದೇ ರೀತಿ ನೀವು ಹಚ್ಚಿರುವ ದೀಪ ದೀರ್ಘಕಾಲ ಬೆಳಗುತ್ತಿದ್ದರೆ ಅದು ಮಂಗಳಕರ.
ಬ್ರಹ್ಮಮುಹೂರ್ತದಲ್ಲಿ ಎಚ್ಚರವಾಗುವುದು : ನಿತ್ಯ ಎಚ್ಚರವಾಗುವ ಸಮಯಕ್ಕಿಂತ ಮೊದಲೇ ನಿಮಗೆ ಎಚ್ಚರವಾದ್ರೆ, ಅದು ಬ್ರಹ್ಮ ಮುಹೂರ್ತವಾಗಿದ್ದರೆ ಅದನ್ನು ಮಂಗಳಕರವೆಂದು ನಂಬಲಾಗುತ್ತದೆ. ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆ ಸಮಯವನ್ನು ಬ್ರಹ್ಮ ಮುಹೂರ್ತವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿದ್ರೆಯಿಂದ ಎಚ್ಚರವಾದ್ರೆ ಇದು ಶುಭಕರ. ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾದ್ರೆ, ನಿಮ್ಮ ಮುಂದಿನ ಜೀವನದಲ್ಲಿ ಅದೃಷ್ಟ ಬದಲಾಗಲಿದೆ, ಒಳ್ಳೆಯ ಜೀವನ ನಿಮ್ಮದಾಗಲಿದೆ ಎಂಬುದನ್ನು ನೀವು ಊಹಿಸಬಹುದು.