ಮಂಗಳಮುಖಿ ಹೆಸರು ಕೇಳ್ತಿದ್ದಂತೆ ಅನೇಕರು ಮೂಗು ಮುರಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೂ ಕೆಲ ಸೌಲಭ್ಯಗಳು ಸಿಗ್ತಿವೆ. ಆದ್ರೆ ಸಾಮಾನ್ಯರಿಗಿಂತ ಸಂಪೂರ್ಣ ಭಿನ್ನವಾಗಿರುವ ಅವರ ಪದ್ಧತಿಗಳು ಕೂಡ ರಹಸ್ಯಮಯವಾಗಿವೆ.
'ಥರ್ಡ್ ಜೆಂಡರ್' (Transgender) ಅವರನ್ನು ಮಂಗಳ ಮುಖಿಯರು ಎಂದೂ ಕರೆಯಲಾಗುತ್ತದೆ. ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸಾಮಾನ್ಯ ಜನರಿಗೆ ಸಿಗುವ ಗೌರವ (Respect),ಮರ್ಯಾದೆ ಸಿಗುತ್ತಿಲ್ಲ. ಎಷ್ಟು ಶಿಕ್ಷಣ ಹೊಂದಿದ್ದರೂ ಅವರನ್ನು ಕೀಳಾಗಿ ನೋಡಲಾಗುತ್ತದೆ. ಭಿಕ್ಷೆ ಬೇಡಿ ಜೀವನ ನಡೆಸುವ ಸ್ಥಿತಿ ಅವರಿಗಿದೆ. ಮದುವೆ ಸೇರಿದಂತೆ ಕೆಲ ವಿಶೇಷ ಸಮಾರಂಭಗಳಲ್ಲಿ ಮಂಗಳ ಮುಖಿಯರಿಗೆ ವಿಶೇಷ ಮಾನ್ಯತೆ ನೀಡಲಾಗುತ್ತದೆ. ಅವರನ್ನು ಮನೆಗೆ ಕರೆದು ಉಡಗೊರೆ ನೀಡುವ ಪದ್ಧತಿ ಕೆಲವು ಕಡೆ ಜಾರಿಯಲ್ಲಿದೆ. ಅವರ ಕೈನಿಂದ ಹಣ ಪಡೆದರೆ ಶುಭ ಎಂಬ ನಂಬಿಕೆ ಶಾಸ್ತ್ರಗಳಲ್ಲಿದೆ. ಇಷ್ಟರ ಮಧ್ಯೆಯೂ ಅವರಿಗೆ ಸಾಮಾನ್ಯರಂತೆ ಬದುಕಲು ಅವಕಾಶವಿಲ್ಲ.
ಟ್ರಾನ್ಸ್ ಜೆಂಡರ್‌ಗಳ ಪ್ರಪಂಚವು ಸಾಮಾನ್ಯ ಮನುಷ್ಯನಿಗಿಂತ ಬೇರೆಯಾಗಿದೆ. ಅವರ ಜೀವನ ವಿಧಾನ, ಜೀವನ ಪದ್ಧತಿ ಎಲ್ಲವೂ ವಿಭಿನ್ನವಾಗಿರುತ್ತದೆ. ಸಾಮಾನ್ಯರಿಗೆ ತಿಳಿಯದ ಅನೇಕ ಸಂಪ್ರದಾಯಗಳನ್ನು ಅವರು ಅನುಸರಿಸಿಕೊಂಡು ಬರುತ್ತಿದ್ದಾರೆ. ಮಂಗಳಮುಖಿಯರು ಹುಟ್ಟಿನಿಂದ ಸಾವಿನವರೆಗೆ ಸಾಕಷ್ಟು ನಿಯಮಗಳ ಪಾಲನೆ ಮಾಡಬೇಕಾಗುತ್ತದೆ. ಮಂಗಳಮುಖಿ ಸಮಾಜಕ್ಕೆ ಸೇರ್ಪಡೆ,ದೀಕ್ಷೆ ಸೇರಿದಂತೆ ಸಾವಿನ (Death) ನಂತರ ಮಾಡಬೇಕಾದ ಕಾರ್ಯಗಳನ್ನು ಅವರು ತಮ್ಮದೇ ರೀತಿಯಲ್ಲಿ ಮಾಡುತ್ತಾರೆ.
ರಾತ್ರಿ (Night) ನಡೆಯುತ್ತೆ ಮಂಗಳ ಮುಖಿಯರ ಶವಯಾತ್ರೆ (Funeral) : ಸಾಮಾನ್ಯವಾಗಿ ಮಂಗಳಮುಖಿಯರ ಅಂತ್ಯಕ್ರಿಯೆ ಮೆರವಣಿಗೆಯನ್ನು ಯಾರೂ ನೋಡಿರುವುದಿಲ್ಲ. ಅದರ ಹಿಂದೆಯೂ ವಿಭಿನ್ನ ಪರಿಕಲ್ಪನೆ ಇದೆ. ಮಂಗಳಮುಖಿಯರ ಮೃತ ದೇಹವನ್ನು (Dead Body )ಮನುಷ್ಯರಿಂದ ಮರೆಮಾಡಲಾಗುತ್ತದೆ. ಹಿಂದೂ ಪದ್ಧತಿಯಲ್ಲಿ ರಾತ್ರಿ ಅಂತ್ಯಸಂಸ್ಕಾರ ಮಾಡುವುದಿಲ್ಲ. ಹೊತ್ತು ಮುಳುಗುವುದ್ರೊಳಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇಲ್ಲವೆಂದ್ರೆ ರಾತ್ರಿ ಪೂರ್ತಿ ಹೆಣವನ್ನು ಕಾದು ಬೆಳಿಗ್ಗೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದ್ರೆ ಮಂಗಳಮುಖಿಯರ ಅಂತ್ಯಕ್ರಿಯೆಯನ್ನು ರಾತ್ರಿ ಮಾಡಲಾಗುತ್ತದೆ. ಮಂಗಳಮುಖಿಯರ ಶವವನ್ನು ರಾತ್ರಿಯೇ ಹೊರತೆಗೆಯಲಾಗುತ್ತದೆ.
undefined
ಶವಯಾತ್ರೆಯಲ್ಲಿ ಸಾಮಾನ್ಯರಿಗಿಲ್ಲ ಅವಕಾಶ : ಮಂಗಳಮುಖಿಯರ ಶವ ಯಾತ್ರೆಯಲ್ಲಿ ಬೇರೆಯವರಿಗೆ ಅವಕಾಶವಿಲ್ಲ. ಅವರ ಸಮುದಾಯದ ಜನರು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂಬ ನಂಬಿಕೆಯಿದೆ. ಮಂಗಳಮುಖಿಯರ ಶವಯಾತ್ರೆಯಲ್ಲಿ ಸಾಮಾನ್ಯ ಪಾಲ್ಗೊಂಡರೆ ಸತ್ತವರಿಗೆ ನಷ್ಟ. ಅವರ ನಂಬಿಕೆಯ ಪ್ರಕಾರ, ಸತ್ತ ವ್ಯಕ್ತಿ ಮತ್ತೆ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತ್ತಾನೆ.
ಮಂಗಳಮುಖಿಯರಿಗೆ ಪಾದ ಪೂಜೆ ಸಲ್ಲಿಸಿದ ವಿನಯ್ ಗುರೂಜಿ
ಶವಕ್ಕೆ ಚಪ್ಪಲಿ ಏಟು : ಮಂಗಳಮುಖಿಯರ ಮರಣದ ನಂತರ ಮೃತ ದೇಹದ ಮೇಲಿರುವ ಎಲ್ಲ ವಸ್ತುಗಳನ್ನು ತೆಗೆಯಲಾಗುತ್ತದೆ. ನಂತರ ಶವವನ್ನು ಬಿಳಿ ಬಟ್ಟೆಯಲ್ಲಿ ಕಟ್ಟಲಾಗುತ್ತದೆ. ಈ ಶಾಸ್ತ್ರ ಮುಗಿದ ಮೇಲೆ, ಅಂತ್ಯಕ್ರಿಯೆಯ ಮೊದಲು ಮೃತದೇಹಕ್ಕೆ ಬೂಟುಗಳು ಮತ್ತು ಚಪ್ಪಲಿಗಳಿಂದ ಹೊಡೆಯಲಾಗುತ್ತದೆ. ಇದರೊಂದಿಗೆ ಆ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗುತ್ತವೆ ಎಂದು ಅವರು ನಂಬಿದ್ದಾರೆ. ಸತ್ತ ವ್ಯಕ್ತಿ ಹಿಂದೂ ಧರ್ಮದವನಾಗಿರಲಿ ಇಲ್ಲ ಮುಸ್ಲಿಂ ಧರ್ಮದವನಾಗಿರಲಿ,ಶವವನ್ನು ಸುಡುವುದಿಲ್ಲ. ಯಾವ ಧರ್ಮದ ಮಂಗಳಮುಖಿ ಸತ್ತರೂ ಶವವನ್ನು ಹೂಳಲಾಗುತ್ತದೆ.ಮಂಗಳಮುಖಿ ಸಮುದಾಯದಲ್ಲಿ ಯಾರಾದರೂ ಸಾವನ್ನಪ್ಪಿದರೆ ಆ ಸಮುದಾಯದವರು ಒಂದು ವಾರಗಳ ಕಾಲ ಆಹಾರವನ್ನು ಸೇವನೆ ಮಾಡುವುದಿಲ್ಲ.
ಗುಪ್ತು ಗುಪ್ತಾಗಿ ನಡೆಯುತ್ತೆ ಮಂಗಳಮುಖಿಯರ ಶವ ಸಂಸ್ಕಾರ
ಮಂಗಳಮುಖಿ ಸಾವನ್ನಪ್ಪಿದರೆ ಸಂತೋಷ : ಹುಟ್ಟಿದ ಮೇಲೆ ಸಾವು ನಿಶ್ಚಿತ. ಈ ಸತ್ಯ ಗೊತ್ತಿದ್ದರೂ ಆಪ್ತರು ಸಾವನ್ನಪ್ಪಿದಾಗ ದುಃಖ ಸಾಮಾನ್ಯ. ಅವರನ್ನು ಮರೆಯಲು ಸಾಕಷ್ಟು ಪ್ರಯತ್ನಪಡಬೇಕಾಗುತ್ತದೆ. ಮನೆಯಲ್ಲಿ ಶೋಕಾಚರಣೆ ನಡೆಯುತ್ತದೆ. ಆದರೆ ಮಂಗಳಮುಖಿ ಸಾವನ್ನಪ್ಪಿದರೆ ಅವರ ಸಮಾಜದವರು ಕೊರಗುವುದಿಲ್ಲ. ಸಾಯುವ ಮೂಲಕ ಈ ನರಕಯಾತನೆಯಿಂದ ಅವರಿಗೆ ಮುಕ್ತಿ ಸಿಕ್ತು ಎಂದು ಮಂಗಳಮುಖಿ ಸಮಾಜದ ಜನರು ನಂಬುತ್ತಾರೆ. ಹಾಗಾಗಿ ಮಂಗಳಮುಖಿಯರು ಸತ್ತ ನಂತ್ರ ದುಃಖಿಸುವುದಿಲ್ಲ. ಸಾವಿನ ಮನೆಯಲ್ಲಿ ಸಂತೋಷ ವ್ಯಕ್ತಪಡಿಸುತ್ತಾರೆ. ಈ ಸಂತೋಷದಲ್ಲಿ ಜನರು ಹಣ ದಾನ ಮಾಡುತ್ತಾರೆ. ಹೋದವನಿಗೆ ದೇವರು ಒಳ್ಳೆಯ ಜನ್ಮ ನೀಡಲಿ ಎಂದು ಹಾರೈಸುತ್ತಾರೆ.