ಶ್ರೀಮದ್ ಭಗವತ್ ಗೀತೆಯ ಈ ಅಮೂಲ್ಯವಾದ ಶ್ಲೋಕಗಳೊಂದಿಗೆ ಅವುಗಳ ನೀತಿ ಅರ್ಥಗಳನ್ನು ನೀವು ನಿಮ್ಮ ಮಕ್ಕಳಿಗೆ ಕಲಿಸಬಹುದು. ಇದು ಅವರ ಜೀವನವನ್ನು ಉತ್ತಮಗೊಳಿಸುತ್ತದೆ.
ಚಿಕ್ಕ ವಯಸ್ಸಲ್ಲಿ ಕಲಿತಿದ್ದು ಯಾವತ್ತೂ ಮರೆತು ಹೋಗೋಲ್ಲ. ಅದು ಬದುಕಿನುದ್ದಕ್ಕೂ ಜೊತೆಗೆ ಬರುತ್ತದೆ. ಮಕ್ಕಳ ಬಾಲ್ಯವೇ ಅವರ ಭವಿಷ್ಯದ ಅಡಿಪಾಯ. ಹೀಗಾಗಿ, ಈ ಸಮಯದಲ್ಲಿ ಮಕ್ಕಳಿಗೆ ಒಳ್ಳೆಯ ಚಿಂತನೆಗಳನ್ನು ಪೋಷಕರು ಹೇಳಿಕೊಡಬೇಕು. ಪೋಷಕರು ಸಮಯವಿಲ್ಲವೆಂದು ಮಕ್ಕಳನ್ನು ಅವರ ಪಾಡಿಗೆ ಬಿಟ್ಟರೆ ನಾಳೆ ಅುಭವಿಸಬೇಕಾದವರೂ ಪೋಷಕರೇ ಆಗಿರುತ್ತಾರೆ. ಹೀಗಾಗಿ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಸಮಾಜದ ಶ್ರೇಷ್ಠ ಭವಿಷ್ಯಕ್ಕಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯದನ್ನು ಕಲಿಸಬೇಕು. ನಿಮ್ಮ ಮಗುವಿಗೆ ಜ್ಞಾನವನ್ನು ನೀಡಲ ಬಯಸಿದರೆ, ಖಂಡಿತವಾಗಿಯೂ ಶ್ರೀಮದ್ ಭಗವತ್ ಗೀತೆಯ ಅಮೂಲ್ಯ ನೀತಿಪಾಠಗಳನ್ನು ಹೇಳಿಕೊಡಿ. ಗೀತೆಯನ್ನೇ ಕಲಿಸುವುದು ಮತ್ತೂ ಉತ್ತಮವಾಗಿದೆ. ಭಗವತ್ ಗೀತೆಯ ಈ ಶ್ಲೋಕಗಳು ಹಿರಿಯರಿಗೆ ಮಾತ್ರವಲ್ಲದೆ ಮಗುವಿಗೂ ಸರಿಯಾದ ಮಾರ್ಗದರ್ಶನ ನೀಡುತ್ತದೆ.
ನೀವು ನಿಮ್ಮ ಮಕ್ಕಳಿಗೆ ಕಲಿಸಬೇಕಾದ ಭಗವದ್ಗೀತೆಯ(Bhagavad Gita) ಅತ್ಯುತ್ತಮ ನೀತಿಗಳ ಬಗ್ಗೆ ನಾವು ಸರಳವಾಗಿ ನಿಮಗೆ ಹೇಳುತ್ತೇವೆ.
ಪ್ರಯತ್ನ ನಮ್ಮದು, ಫಲ ದೇವರಿಗೆ ಬಿಟ್ಟಿದ್ದು..
ಗೀತೆಯ ಶ್ಲೋಕವೊಂದು ಇದನ್ನು ಹೇಳುತ್ತದೆ. ನೀವು ಖಂಡಿತವಾಗಿ ನಿಮ್ಮ ಮಕ್ಕಳಿಗೆ ಈ ಪಾಠ ಹೇಳಬೇಕು. ಒಬ್ಬನು ತನ್ನ ಸ್ವಂತ ಕರ್ಮವನ್ನು ಮಾಡಬೇಕು ಮತ್ತು ಫಲಿತಾಂಶಗಳನ್ನು ಬಯಸಬಾರದು. ಯಾವುದೇ ಕೆಲಸವನ್ನು ಮಾಡುವ ಮೊದಲು ಅನೇಕ ಬಾರಿ ಅದರ ಫಲಿತಾಂಶದ ಬಗ್ಗೆ ಯೋಚಿಸಬಾರದು. ಪರೀಕ್ಷೆಯು ತುಂಬಾ ಕಷ್ಟಕರ, ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಮಕ್ಕಳು ಆಗಾಗ್ಗೆ ಭಾವಿಸುತ್ತಾರೆ. ಅಂಥ ಪರಿಸ್ಥಿತಿಯಲ್ಲಿ, ಅವರು ಫಲಿತಾಂಶದ ಬಗ್ಗೆ ಯೋಚಿಸಬಾರದು, ಅವರ ಕೆಲಸವನ್ನು ಮಾತ್ರ ಮಾಡಬೇಕು ಎಂದು ಅವರಿಗೆ ವಿವರಿಸಿ. ಆ ಪರೀಕ್ಷೆಯನ್ನು ಅಧ್ಯಯನ ಮಾಡಿ ಬರೆಯುವುದು ಅವರ ಧರ್ಮ. ಅದನ್ನಷ್ಟೇ ಮಾಡಲು ಹೇಳಿ. ಈ ಪಾಠವು ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.
ಬುಧ ಗೋಚಾರ 2022: ಈ ನಾಲ್ಕು ರಾಶಿಗಳಿಗೆ 15 ದಿನ ಲಕ್ಷ್ಮೀ ಕಟಾಕ್ಷ
ಸೋಮಾರಿತನವನ್ನು ಬಿಟ್ಟುಬಿಡಿ(give up laziness)
ನಿಮ್ಮ ಮಕ್ಕಳು ಯಾವುದೇ ಕೆಲಸವನ್ನು ಮಾಡಲು ಸೋಮಾರಿಯಾಗಿದ್ದರೆ, ಅವರ ಈ ಅಭ್ಯಾಸವನ್ನು ಸುಧಾರಿಸಿ. ಏಕೆಂದರೆ ಸೋಮಾರಿತನವು ಯಾವುದೇ ಮನುಷ್ಯನ ದೊಡ್ಡ ಶತ್ರುವಾಗಿದೆ. ಜೀವನದಲ್ಲಿ ಯಶಸ್ವಿಯಾಗಲು ಸೋಮಾರಿತನವನ್ನು ಬಿಡುವುದು ಬಹಳ ಮುಖ್ಯ. ಸೋಮಾರಿತನದಿಂದ ಮಕ್ಕಳು ಕೆಲವೊಮ್ಮೆ ಶಾಲೆಗೆ ಹೋಗುವುದಿಲ್ಲ. ಹೋಂವರ್ಕ್ ಮಾಡುವುದಿಲ್ಲ. ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು ಸೋಮಾರಿತನವನ್ನು ಬಿಡಬೇಕು ಎಂದು ಹೇಳಿ. ಅವರನ್ನು ಸದಾ ಚಟುವಟಿಕೆಯಿಂದ ಇರಲು ಪ್ರೋತ್ಸಾಹಿಸಿ.
ಕರ್ತವ್ಯಗಳನ್ನು ನಿರ್ವಹಿಸಿ(perform duties)
ಭಗವದ್ಗೀತೆಯ ಈ ಶ್ಲೋಕವನ್ನು ನೀವು ಖಂಡಿತವಾಗಿ ಮಕ್ಕಳಿಗೆ ಹೇಳಲೇಬೇಕು. ಸಾಮಾನ್ಯವಾಗಿ ಮಕ್ಕಳು ಯಾವುದೇ ಕೆಲಸವನ್ನು ತಕ್ಷಣವೇ ಓದಲು ಅಥವಾ ಮಾಡಲು ನಿರಾಕರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕಠಿಣ ಪರಿಶ್ರಮವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಅವರಿಗೆ ಹೇಳಬೇಕು. ಒಬ್ಬನು ಎಂದಿಗೂ ಕಠಿಣ ಪರಿಶ್ರಮದಿಂದ ಪಲಾಯನ ಮಾಡಬಾರದು. ಯಾವಾಗಲೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆಗಲೇ ಬದುಕು ಹಸನಾಗುವುದು ಎಂದು ತಿಳಿಸಿ. ಕರ್ತವ್ಯ ಪ್ರಜ್ಞೆಯನ್ನು ಬಾಲ್ಯದಿಂದಲೇ ಅವರಲ್ಲಿ ಬೆಳೆಸಿ.
ಆಸೆ ಪಡಬೇಡ
ದುರಾಸೆ ತಪ್ಪು, ನಾವು ನಮ್ಮ ಮಕ್ಕಳಿಗೆ ಹೇಳಬೇಕು. ಲೋಭ ಮತ್ತು ಕ್ರೋಧ ನರಕದ ದ್ವಾರಗಳು ಎಂದು ಗೀತೆಯಲ್ಲಿ ಹೇಳಲಾಗಿದೆ. ಜೀವನದಲ್ಲಿ ಸಂತೋಷವಾಗಿರಲು ದುರಾಸೆ ಮತ್ತು ಕೋಪದಿಂದ ದೂರವಿರಬೇಕು. ಯಾವುದರ ಬಗ್ಗೆಯೂ ದುರಾಸೆ ಇರಬಾರದು ಎಂಬುದನ್ನು ನಿಮ್ಮ ಮಕ್ಕಳಿಗೆ ವಿವರಿಸಬೇಕು.
Palmistry: ಅಂಗೈಯ ಶನಿ ಪರ್ವತದಲ್ಲಿ ಈ ರೀತಿ ಮಾರ್ಕ್ ಇದ್ರೆ ಸಮಸ್ಯೆ ತಪ್ಪಿದ್ದಲ್ಲ!
ಮನಸ್ಸನ್ನು ನಿಯಂತ್ರಿಸಿ(control the mind)
ತಮ್ಮ ಮನಸ್ಸನ್ನು ನಿಯಂತ್ರಿಸಲು ಮಕ್ಕಳಿಗೆ ಕಲಿಸಿ. ಏಕೆಂದರೆ ವ್ಯಕ್ತಿಯು ಮನಸ್ಸನ್ನು ನಿಯಂತ್ರಿಸದಿದ್ದರೆ, ಜೀವನದಲ್ಲಿ ಸಂತೋಷವು ಲಭ್ಯವಾಗುವುದಿಲ್ಲ, ಯಶಸ್ಸನ್ನು ಪಡೆಯಲು ಸಾಕಷ್ಟು ಕಷ್ಟವಾಗುತ್ತದೆ. ಮನಸ್ಸನ್ನು ನಿಯಂತ್ರಿಸಲು ಮಕ್ಕಳಿಗೆ ಕಲಿಸಿ. ಏಕೆಂದರೆ ಒಬ್ಬ ವ್ಯಕ್ತಿಯು ಬಾಲ್ಯದಲ್ಲಿ ಕಲಿತದ್ದನ್ನು ಜೀವನಕ್ಕಾಗಿ ಅನುಸರಿಸುತ್ತಾನೆ. ಇದಕ್ಕಾಗಿ ಅವರಿಗೆ ಆಸೆಯಾಗಿದ್ದೆಲ್ಲ ಕೇಳಬಾರದು ಎಂಬುದು ತಿಳಿಸಬೇಕು. ಜೊತೆಗೆ, ಧ್ಯಾನ, ಯೋಗಾಭ್ಯಾಸ ಮಾಡಿಸಬೇಕು.