ತಿರುಪತಿ ತಿಮ್ಮಪ್ಪನಿಗೆ ಈ ವರ್ಷ ದಾಖಲೆ 4411 ಕೋಟಿ ಬಜೆಟ್‌

By Kannadaprabha News  |  First Published Mar 24, 2023, 7:36 AM IST

ದೇಶದ ಶ್ರೀಮಂತ ದೇಗುಲವಾಗಿರುವ ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ಹೊತ್ತಿರುವ ಆಡಳಿತ ಮಂಡಳಿಯು, 2023-24ನೇ ಸಾಲಿಗೆ ಸಾರ್ವಕಾಲಿಕ ದಾಖಲೆಯ 4411.68 ಕೋಟಿ ರು.ನ ಬಜೆಟ್‌ ಮಂಡಿಸಿದೆ


ತಿರುಪತಿ: ದೇಶದ ಶ್ರೀಮಂತ ದೇಗುಲವಾಗಿರುವ ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ಹೊತ್ತಿರುವ ಆಡಳಿತ ಮಂಡಳಿಯು, 2023-24ನೇ ಸಾಲಿಗೆ ಸಾರ್ವಕಾಲಿಕ ದಾಖಲೆಯ 4411.68 ಕೋಟಿ ರು.ನ ಬಜೆಟ್‌ ಮಂಡಿಸಿದೆ. 1933ರಲ್ಲಿ ಟಿಟಿಡಿ ರಚನೆಯಾದ ಬಳಿಕ ಇದು ಅತಿ ದೊಡ್ಡ ಮೊತ್ತದ ಬಜೆಟ್‌ ಆಗಿದೆ.

ಕೋವಿಡ್‌ ಬಳಿಕ ದೇಗುಲದ ಹುಂಡಿ ಸಂಗ್ರಹಣೆ ಭಾರೀ ಏರಿಕೆ ಕಂಡಿದೆ. 2022-23ರಲ್ಲಿ ಒಟ್ಟು 1,613 ಕೋಟಿ ರು. ಸಂಗ್ರಹವಾಗಿತ್ತು. ಕೋವಿಡ್‌ಗೂ ಪೂರ್ವದಲ್ಲಿ ಸುಮಾರು 1,200 ಕೋಟಿ ರು. ಸಂಗ್ರಹವಾಗುತ್ತಿತ್ತು. ಇನ್ನು ಈ ಬಾರಿ ಶ್ರೀವಾರಿ ಹುಂಡಿಯಿಂದ 1,591 ಕೋಟಿ ರು. ಸಂಗ್ರಹದ ನಿರೀಕ್ಷೆ ಇದೆ. ಸಂಬಳಕ್ಕೆ 1,532.20 ಕೋಟಿ ರು. ವೆಚ್ಚವಾಗಲಿದೆ. ಅಲ್ಲದೇ ಟಿಟಿಡಿ ಮಾಡಿರುವ ಹೂಡಿಕೆಗಳಿಂದ 990 ಕೋಟಿ ರು., ಪ್ರಸಾದದಿಂದ 500 ಕೋಟಿ ರು., ದರ್ಶನದಿಂದ 330 ಕೋಟಿ ರು., ಅರ್ಜಿತ ಸೇವೆಯಿಂದ 140 ಕೋಟಿ ರು., ಕಲ್ಯಾಣಕಟ್ಟಾದಿಂದ 126.5 ಕೋಟಿ ರು., ವಸತಿ ಮತ್ತು ಕಲ್ಯಾಣ ಮಂಟಪಗಳಿಂದ 129 ಕೋಟಿ ರು., ಸಾಲ ಬಾಕಿ, ಇಎಂಡಿ ಮತ್ತು ಠೇವಣಿಗಳಿಂದ 101.38 ಕೋಟಿ ರು., ಟ್ರಸ್ಟ್‌ನಿಂದ 65 ಕೋಟಿ ರು., ಸಾರ್ವಜನಿಕ ಠೇವಣಿಯಿಂದ 30.25 ಕೋಟಿ ರು ಸಂಗ್ರಹವಾಗಲಿದೆ ಎಂದು ಟಿಟಿಡಿ ಹೇಳಿದೆ.

Tap to resize

Latest Videos

ಇನ್ಮುಂದೆ ಯಂತ್ರದಲ್ಲಿ ತಯಾರಾಗಲಿವೆ ತಿರುಪತಿ ಲಡ್ಡು: 50 ಕೋಟಿ ರೂ. ವೆಚ್ಚದ ಯಂತ್ರ ನೀಡಲು ರಿಲಯನ್ಸ್‌ ಸಜ್ಜು

ತಿರುಪತಿ ದೇಗುಲದ ಮೇಲೆ ಡ್ರೋನ್‌ ವಿಡಿಯೋ: ಡ್ರೋನ್‌ ಬಿಟ್ಟವರ ಮೇಲೆ ಕ್ರಿಮಿನಲ್‌ ಕೇಸ್‌..!

click me!