ನೀವು ಗರ್ಭಿಣಿಯಾಗಿದ್ದರೆ ನಿಮ್ಮ ಭವಿಷ್ಯದ ಮಗುವಿನ ಸಂತೋಷ ಮತ್ತು ಸುವರ್ಣ ಜೀವನಕ್ಕಾಗಿ ನೀವು ಈ ಮಂತ್ರವನ್ನು ಪಠಿಸಬೇಕು.
ಮಗುವಿನ ಜನನವು ದೇವರ ಕೊಡುಗೆಯಾಗಿದೆ. ಮತ್ತು ಈ ದೊಡ್ಡ ಜವಾಬ್ದಾರಿಗಾಗಿ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ತಾಯ್ತನದ ಅನುಭವ ಮಾಂತ್ರಿಕವಾಗಿರಲಿದೆ ಮತ್ತು ಮಹಿಳೆಯ ಜೀವನದಲ್ಲಿ ಇದು ಹೊಸ ಅಧ್ಯಾಯದ ಆರಂಭವಾಗಿರುತ್ತದೆ. ಮಗುವಿಗೆ ಜನ್ಮ ನೀಡುವಾಗ ಮಹಿಳೆ ಅನುಭವಿಸುವ ನೋವು ಮಗುವಿನ ಮುದ್ದು ಮುಖ ನೋಡಿದಾಗ ಸಾರ್ಥಕವಾಗುತ್ತದೆ.
ಗರ್ಭಿಣಿಗೆ ಸದಾ ತನ್ನ ಹುಟ್ಟಲಿರುವ ಮಗುವಿನದೇ ಯೋಚನೆ. ಅದು ಹೇಗಿರಬಹುದು, ಏನು ಮಾಡಬಹುದು, ಅದಕ್ಕೇನು ಹೆಸರಿಡಬಹುದು ಎಂಬ ಯೋಚನೆಯಲ್ಲೇ ಮುಳುಗಿರುತ್ತಾರೆ. ಇದರೊಂದಿಗೆ ಗರ್ಭಿಣಿಯರು ಸದಾ ಬಯಸುವುದು ಹುಟ್ಟಲಿರುವ ಮಗು ಆರೋಗ್ಯವಾಗಿರಲಿ, ಉತ್ತಮ ರಾಜಯೋಗದಲ್ಲಿ ಜನಿಸಿ ಜೀವನಪೂರ್ತಿ ಸುಖವಾಗಿರಲಿ ಎಂದು.
ಗರ್ಭಿಣಿಯರು ಯಾವಾಗಲೂ ತಮ್ಮ ಭವಿಷ್ಯದ ಮಗುವಿಗೆ ಸಂತೋಷದ ಜೀವನವನ್ನು ಬಯಸುತ್ತಾರೆ. ಮಕ್ಕಳು ಆರೋಗ್ಯವಂತರು ಮತ್ತು ಅದೃಷ್ಟವಂತರಾಗಲು ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಈ ಪರಿಹಾರಗಳಲ್ಲೊಂದು ಮಂತ್ರ ಪಠಣ.
ಗರ್ಭಾವಸ್ಥೆಯ ಒಂಬತ್ತು ತಿಂಗಳ ಅವಧಿಯಲ್ಲಿ ಆಹಾರ ಪದ್ಧತಿ ಮತ್ತು ಯೋಗದ ಜೊತೆಗೆ ಮಂತ್ರಗಳ ಪಠಣವನ್ನು ಸಲಹೆ ನೀಡಲಾಗುತ್ತದೆ. ಈ ಪದ್ಧತಿಯು ಪ್ರಾಚೀನ ಕಾಲದಿಂದಲೂ ಸಕ್ರಿಯವಾಗಿದೆ ಮತ್ತು ಇನ್ನೂ ಬಳಕೆಯಲ್ಲಿದೆ. ಇದನ್ನು "ಗರ್ಭ ಸಂಸ್ಕಾರ" ಎಂದು ಕರೆಯಲಾಗುತ್ತದೆ.
ಶಿಖರ ದರ್ಶನಂ ಪಾಪ ನಾಶಂ; ದೇವಾಲಯಕ್ಕೆ ಭೇಟಿ ನೀಡಿದಾಗ ಶಿಖರಕ್ಕೆ ನಮಸ್ಕರಿಸೋದು ಮರೀಬೇಡಿ!
ಇಂದು ನಾವು ಗರ್ಭಿಣಿಯರು ಕಡ್ಡಾಯವಾಗಿ ಜಪಿಸಬೇಕಾದ ಇಂತಹ ಮಂತ್ರವನ್ನು ನಿಮಗೆ ಹೇಳಲಿದ್ದೇವೆ. ಈ ಮಂತ್ರ ಪಠಣದ ಪ್ರಭಾವದಿಂದ, ಮಗು ಸುಸಂಸ್ಕೃತ ಮತ್ತು ಅದೃಷ್ಟಶಾಲಿಯಾಗುತ್ತಾನೆ. ಹಾಗಾದರೆ ಮಂತ್ರ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿಯೋಣ.
ಮಂತ್ರ
'ರಕ್ಷ ರಕ್ಷಾ ಗಣಾಧ್ಯಕ್ಷ ರಕ್ಷ ತ್ರೈಲೋಕ್ಯ ನಾಯಕ. ಭಕ್ತಾನನಭಯಂ ಕರ್ತಾ ತ್ರಾತಭಾವ ಭವಾರ್ಣವತ್ ॥'
ಪಠಣ ವಿಧಾನ
ಬೆಳಿಗ್ಗೆ ಸ್ನಾನ ಮಾಡಿ. ಸ್ನಾನದ ನಂತರ ಶ್ರೀ ಗಣೇಶನನ್ನು ಪೂಜಿಸಿ.
ಶ್ರೀ ಗಣೇಶನ ಆರತಿಯನ್ನು ಮಾಡಿ.
ಪ್ರತಿನಿತ್ಯ ಪೂಜೆ ಮಾಡಿದ ನಂತರ ಶ್ರೀ ಗಣೇಶನ ಮುಂದೆ ಕುಳಿತುಕೊಳ್ಳಿ.
ಗಣೇಶನ ಮುಂದೆ ಕುಳಿತು ಈ ಮಂತ್ರವನ್ನು 108 ಬಾರಿ ಜಪಿಸಿ.
ಮಂತ್ರ ಪಠಣ ನಿಯಮ
ಗರ್ಭಿಣಿಯರು ಶ್ರೀ ಗಣೇಶನ ಮುಂದೆ ಕುಳಿತು ಈ ಮಂತ್ರವನ್ನು ಪಠಿಸಬೇಕು.
ಈ ಮಂತ್ರವನ್ನು ಜಪಿಸುವಾಗ, ನಿಮ್ಮ ಮುಖ ಪೂರ್ವ ದಿಕ್ಕಿನತ್ತ ತಿರುಗಿರಲಿ.
ಮಂತ್ರದ ಅಲೆಗಳು ನಿಮ್ಮ ಮಕ್ಕಳಿಗೂ ತಲುಪುವಂತೆ ಮಂತ್ರವನ್ನು ಮನಸ್ಸಿನಲ್ಲಲ್ಲದೇ ಜೋರಾಗಿ ಜಪಿಸಿ.
ಮಂತ್ರವನ್ನು 108 ಬಾರಿ ಜಪಿಸಿದ ನಂತರ, ಶ್ರೀ ಗಣೇಶನಿಗೆ ಲಡ್ಡುವನ್ನು ಅರ್ಪಿಸಿ ಮತ್ತು ನಂತರ ಅದನ್ನು ನೀವೇ ತಿನ್ನಿರಿ.
ರಾತ್ರಿ ಮಲಗುವ ಮುನ್ನ ಒಮ್ಮೆ ಈ ಮಂತ್ರವನ್ನು ಪಠಿಸಿ. ನಂತರ ನೀವು ಹಾಸಿಗೆಯಲ್ಲಿಯೂ ಈ ಮಂತ್ರವನ್ನು ಪಠಿಸಬಹುದು.
ಶನಿಯ ನಕ್ಷತ್ರ ಗೋಚಾರದಿಂದ 6 ರಾಶಿಗಳಿಗೆ 7 ತಿಂಗಳು ಲಾಭ
ಇದರೊಂದಿಗೆ ಗಾಯತ್ರಿ ಮಂತ್ರ ಪಠಣದಿಂದ ಮಗು ಹಾಗೂ ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಗಾಯತ್ರಿ ಮಂತ್ರ ಹೀಗಿದೆ-
'ಓಂ ಭೂರ್ಭುವಸ್ವಾಹ ತತ್ಸವಿತ್ ಸ್ಮರೇಣ್ಯಂ, ಭರ್ಗೋ ಧೀಮಸ್ಯ ಧೀಮಹಿ, ದಿಯೋ ಯೋನ ಪ್ರಚೋದಯಾತ್'
ಮಂತ್ರದ ಪ್ರಯೋಜನಗಳು
ಈ ಮಂತ್ರದ ಪ್ರಭಾವದಿಂದ ಜನಿಸಿದ ಮಗುವಿನ ಜೀವನವು ಸಂತೋಷದಿಂದ ತುಂಬಿರುತ್ತದೆ.
ಈ ಮಂತ್ರದ ಪ್ರಭಾವದಿಂದಾಗಿ ಮಗುವಿನ ವ್ಯಕ್ತಿತ್ವದಲ್ಲಿ ಸದ್ಗುಣಗಳು ತುಂಬಿರಲಿವೆ.
ಈ ಮಂತ್ರದ ಪ್ರಭಾವದಿಂದ ಜನಿಸಿದ ಮಗು ಬಲಶಾಲಿ ಮತ್ತು ಸಮೃದ್ಧವಾಗುತ್ತದೆ.
ಈ ಮಂತ್ರದ ಪ್ರಭಾವದಿಂದ ಜನಿಸಿದ ಮಗು ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತದೆ.
ಈ ಮಂತ್ರದ ಪ್ರಭಾವದಿಂದ ಹುಟ್ಟಿದ ಮಗುವಿನ ಭವಿಷ್ಯವು ಜಾಗೃತಗೊಳ್ಳುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.