ಟ್ರಂಪ್ ಮೇಲೆ‌ ದಾಳಿ..ವೈರಲ್ ಆಯ್ತು ಭವಿಷ್ಯ ಹೇಳಿದ್ದ ಪಾದ್ರಿ ವೀಡಿಯೋ!

By Roopa Hegde  |  First Published Jul 15, 2024, 2:50 PM IST

ಅಮೆರಿಕದಲ್ಲಿ ಚುನಾವಣೆ ಕಾವೇರಿದೆ. ಪ್ರಚಾರ ಕಾರ್ಯ ಜೋರಾಗಿ ನಡೆದಿದೆ. ಈ ಮಧ್ಯೆ ಟ್ರಂಪ್ ಮೇಲೆ ನಡೆದ ದಾಳಿ ಎಲ್ಲರನ್ನು ಆಘಾತಗೊಳಿಸಿದ್ದು, ಪಾದ್ರಿಯೊಬ್ಬರು ಹೇಳಿದ ಮಾತು ನಿಜವಾಗ್ತಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. 
 


ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಚುನಾವಣೆ ಸಭೆಯಲ್ಲಿ ಮಾತನಾಡ್ತಿದ್ದ ಟ್ರಂಪ್ ಮೇಲೆ ದಾಳಿ ನಡೆದಿದ್ದು, ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಚಿತ್ರ ಅಂದ್ರೆ ಟ್ರಂಪ್ ದಾಳಿಗೆ ಮುನ್ನವೇ ಪಾದ್ರಿಯೊಬ್ಬರು ಈ ಬಗ್ಗೆ ಭವಿಷ್ಯವಾಣಿ ನುಡಿದಿದ್ದರು. ಅದೀಗ ನಿಜವಾಗ್ತಿದ್ದು, ಅವರ ವಿಡಿಯೋ ಕೂಡ ವೇಗವಾಗಿ ವೈರಲ್ ಆಗಿದೆ. ಅಷ್ಟಕ್ಕೂ ಆ ಪಾದ್ರಿ ಯಾರು ಹಾಗೆ ಅವರು ಹೇಳಿದ ಭವಿಷ್ಯವೇನು ಎಂಬ ಮಾಹಿತಿ ಇಲ್ಲಿದೆ. 

ಟ್ರಂಪ್ (Trump) ಮೇಲೆ ದಾಳಿಯಾಗ್ತಿದ್ದಂತೆ ಅನೇಕರು ಪಾದ್ರಿ ವಿಡಿಯೋ (Video) ವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ರಂಪ್ ಬಗ್ಗೆ ಭವಿಷ್ಯ ಹೇಳಿದ್ದ ಪಾದ್ರಿ ಹೆಸರು ಬ್ರಾಂಡನ್ ಬಿಗ್ಸ್ (Brandon Biggs). ಮಾರ್ಚ್ 2024ರಲ್ಲಿ ಅವರ ವಿಡಿಯೋ ಒಂದನ್ನು ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. 

Tap to resize

Latest Videos

undefined

ಹತ್ಯೆ ಯತ್ನದಿಂದ ಚುನಾವಣೆಯಲ್ಲಿ ಟ್ರಂಪ್‌ ಪರ ಅನುಕಂಪದ ಅಲೆ? ಮಸ್ಕ್‌, ಬೆಜೋಸ್‌ ಬೆಂಬಲ

ಪಾದ್ರಿ ಹೇಳಿದ್ದೇನು? : ವಿಡಿಯೋದಲ್ಲಿ ಪಾದ್ರಿ, ಭಗವಂತ ನನ್ನ ಜೊತೆ ಮಾತನಾಡಿದ್ದಾನೆ. ಅಮೆರಿಕಾದಲ್ಲಿ ಮುಂದೆ ಏನೆಲ್ಲ ಆಗುತ್ತೆ ಎಂಬುದನ್ನು ಹೇಳಿದ್ದಾನೆ. ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ಅನೇಕ ಮಹತ್ವದ ಘಟನೆಗಳು ನಡೆಯಲಿವೆ ಎಂದಿದ್ದರು. ಮಾತು ಮುಂದುವರೆಸಿದ ಬ್ರಾಂಡನ್ ಬಿಗ್ಸ್, ನಾನು ಟ್ರಂಪ್ ಮೇಲೆ ಮಾರಣಾಂತಿಕ ದಾಳಿ ನಡೆಯೋದನ್ನು ನೋಡಿದ್ದೇನೆ. ಗುಂಡು ಟ್ರಂಪ್, ಕಿವಿಯ ಮೂಲಕ ಹಾದು ಹೋಗಿತ್ತು. ಗುಂಡು ಅವರ ತಲೆಯ ಹತ್ತಿರದಿಂದ ಪಾಸ್ ಆಗಿದೆ. ಅವರ ಕಿವಿಯೋಲೆಗಳನ್ನು ಛಿದ್ರಗೊಳಿಸಿತ್ತು. ನಂತ್ರ ಅವರು ನೆಲಕ್ಕೆ ಬೀಳ್ತಾರೆ. ಭಗವಂತನ ಪ್ರಾರ್ಥನೆ ಮಾಡ್ತಾರೆ ಎಂದಿದ್ದ ಬ್ರಾಂಡನ್ ಬಿಗ್ಸ್, ಟ್ರಂಪ್, ರಾಷ್ಟ್ರಪತಿ ಚುನಾವಣೆ ಗೆದ್ದಿದ್ದನ್ನು ಕೂಡ ನಾನು ನೋಡಿದ್ದೇನೆ ಎಂದಿದ್ದರು. 

ಕುಸಿಯಲಿರುವ ಅಮೆರಿಕ ಆರ್ಥಿಕತೆ (Financial Crisis in America): ಈ ವಿಡಿಯೋದಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಬಗ್ಗೆಯೂ ಪಾದ್ರಿ ಭವಿಷ್ಯ ನುಡಿದಿದ್ದಾರೆ. ನಾನು ರಾಷ್ಟ್ರಪತಿ ಚುನಾವಣೆ ನಂತ್ರ ದೇಶದ ಆರ್ಥಿಕ ಹಿಂಜರಿತವನ್ನು ನೋಡಿದ್ದೇನೆ. ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿ ಅಮೆರಿಕಾದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತವಾಗಲಿದೆ. ಆ ಸಮಯ ಬಹಳ ಕೆಟ್ಟದಾಗಿರಲಿದೆ ಎಂದು ಪಾದ್ರಿ ಹೇಳಿದ್ದಾರೆ.

ಟ್ರಂಪ್ ಮೇಲೆ ದಾಳಿ (Attack on Trump) : ಭಾನುವಾರ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲಿ  ಗುಂಡುಗಳ ಸುರಿಮಳೆಯಾಗಿದೆ. ಒಂದು ಗುಂಡು ಟ್ರಂಪ್ ಅವರ ಬಲ ಕಿವಿಯ ಮೇಲ್ಭಾಗಕ್ಕೆ ನಾಟಿದೆ. ಟ್ರಂಪ್ ಕಿವಿಯಿಂದ ರಕ್ತ ಚಿಮ್ಮಿದೆ. ತಕ್ಷಣ ರಕ್ಷಣಾ ಪಡೆ ಅವರನ್ನು ಸುತ್ತುವರೆಸು ಅವರನ್ನು ರಕ್ಷಿಸಿದೆ. ದಾಳಿಕೋರನನ್ನು ಗುಪ್ತದಳದವರು ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ. ಟ್ರಂಪ್, ಟೆಲಿಪ್ರೊಂಪ್ಟರ್ ಅನ್ನು ಬಳಸದಿರುವ ನಿರ್ಧಾರವು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿ ಬಾರಿ ಟ್ರಂಪ್ ಟೆಲಿಪ್ರೊಂಪ್ಟರ್ ಬಳಸುತ್ತಿದ್ದರು. ಈ ಬಾರಿ ಹಾಗೆಯೇ ಮಾತನಾಡುವ ನಿರ್ಧಾರಕ್ಕೆ ಬಂದಿದ್ದರು. ದಾಳಿ ನಂತ್ರ ಟ್ರಂಪ್ ತಾವು ಹೆದರುವುದಿಲ್ಲ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ. ದಾಳಿಯಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿರುವ ಟ್ರಂಪ್, ದೇವರ ಆಶೀರ್ವಾದದಿಂದ ತಾನು ಬದುಕಿದ್ದೇನೆ ಎಂದಿದ್ದಾರೆ.

ಮನೆಯಿಂದ ಮನೆಗೆ ಟೆರೇಸ್‌ ಮೇಲೆ ಜಿಗಿಯುತ್ತಾ ಬಂದಿದ್ದ ಹಂತಕ; ಪ್ರತ್ಯಕ್ಷದರ್ಶಿಗಳಿಂದ ಸ್ಫೋಟಕ ಮಾಹಿತಿ

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದೇನು? : ಟ್ರಂಪ್ ಮೇಲಿನ ಈ ಮಾರಣಾಂತಿಕ ದಾಳಿಯ ನಂತರ, ಯುಎಸ್ ಅಧ್ಯಕ್ಷ ಜೋ ಬೈಡನ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಿಂಸೆ ಎಂದಿಗೂ ಉತ್ತರವಲ್ಲ ಎಂದು ಬೈಡನ್ ಹೇಳಿದ್ದಾರೆ. ಕಾಂಗ್ರೆಸ್ ಸದಸ್ಯರ ಮೇಲೆ ಗುಂಡಿನ ದಾಳಿ, ಜನವರಿ 6 ರಂದು ಕ್ಯಾಪಿಟಲ್ ಹಿಲ್ ಮೇಲಿನ ದಾಳಿ, ನ್ಯಾನ್ಸಿ ಪೆಲೋಸಿ ಅವರ ಪತಿ ಮೇಲಿನ ದಾಳಿ, ಚುನಾವಣಾ ಅಧಿಕಾರಿಗಳಿಗೆ ಬೆದರಿಕೆ, ಹಾಲಿ ರಾಜ್ಯಪಾಲರ ವಿರುದ್ಧ ಅಪಹರಣ ಸಂಚು ಅಥವಾ ಡೊನಾಲ್ಡ್ ಟ್ರಂಪ್ ಹತ್ಯೆಯ ಯತ್ನ, ಅಮೆರಿಕದಲ್ಲಿ ಈ ರೀತಿಯ ಹಿಂಸೆಗೆ ಜಾಗವಿಲ್ಲ ಎಂದಿದ್ದಾರೆ.

 

Recorded on 3/14/24 (verified), Pastor Brandon Biggs recounts a prophecy he saw.

"I saw an attempt on [Trump's] life that this bullet flew by his ear and it came so close to his head that it busted his ear drum. And I saw, he fell to his knees during this timeframe..." pic.twitter.com/W1BGNOPrFg

— Yunasai (@XYunasai)
click me!