ಹತ್ಯೆ ಯತ್ನದಿಂದ ಚುನಾವಣೆಯಲ್ಲಿ ಟ್ರಂಪ್‌ ಪರ ಅನುಕಂಪದ ಅಲೆ? ಮಸ್ಕ್‌, ಬೆಜೋಸ್‌ ಬೆಂಬಲ

ಗುಂಡಿನ ದಾಳಿ ಟ್ರಂಪ್‌ ಪರವಾಗಿ ಅನುಕಂಪದ ಅಲೆ ಹೆಚ್ಚಿಸಬಹುದು. ದಾಳಿಯನ್ನೇ ಗುರಿಯಾಗಿಸಿಕೊಂಡು ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಇದಕ್ಕೆ ಕಾರಣವಾದ ಬೈಡೆನ್‌ ಬಗ್ಗೆ ಟ್ರಂಪ್‌ ದಾಳಿ ನಡೆಸಬಹುದು.

Will ssassination attempt advantage to donald trump  in election mrq

ವಾಷಿಂಗ್ಟನ್‌: ಚುನಾವಣಾ ಪ್ರಚಾರ ರ್‍ಯಾಲಿ ವೇಳೆ ವ್ಯಕ್ತಿಯೊಬ್ಬನಿಂದ ನಡೆದ ಗುಂಡಿನ ದಾಳಿ ಮತ್ತು ಚೆಲ್ಲಿದ ರಕ್ತವು ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಪರ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುಕಂಪದ ಅಲೆ ಎಬ್ಬಿಸುವ ಸಾಧ್ಯತೆ ಇದೆ. ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಕಣಕ್ಕೆ ಇಳಿಯಲು ನಿರ್ಧರಿಸಿರುವ ಟ್ರಂಪ್‌ ಈಗಾಗಲೇ ತಮ್ಮ ಎದುರಾಳಿ ವಿರುದ್ಧ ಸತತ ಟೀಕಾಪ್ರಹಾರಗಳ ಮೂಲಕ ಸುದ್ದಿಯಲ್ಲಿದ್ದರು. ಮತ್ತೊಂದೆಡೆ ವಯೋಸಹಜ ಸಮಸ್ಯೆ ಎದುರಿಸುತ್ತಿರುವ ಬೈಡೆನ್‌ಗೆ ಸ್ವತಂತ್ರವಾಗಿ ನಡೆದಾಡಲು ಆಗುತ್ತಿಲ್ಲ. ಎದುರಿಗಿರುವ ವ್ಯಕ್ತಿ ಯಾರು? ಅಕ್ಕ ಪಕ್ಕ ಏನಾಗುತ್ತಿದೆ? ಎಂಬುದರ ಅರಿವೂ ಇಲ್ಲದ ಸ್ಥಿತಿ ತಲುಪಿದ್ದಾರೆ.

ಇತ್ತೀಚಿನ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬೈಡೆನ್‌ ವರ್ತನೆ ಕಟು ಟೀಕೆ ಮತ್ತು ನಗೆಪಾಟಲಿಗೆ ಗುರಿಯಾಗಿದೆ. ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿಯಬೇಕು ಎಂಬ ಆಗ್ರಹ ಅವರ ಬೆಂಬಲಿಗರಿಂದಲೇ ವ್ಯಕ್ತವಾಗುತ್ತಿದೆ. ಆದರೂ ಹಟ ಹಿಡಿದು ತಾವೇ ಅಭ್ಯರ್ಥಿ ಎಂದು ಬೈಡೆನ್‌ ಹೇಳುತ್ತಿದ್ದಾರೆ.

ಇಂಥದ್ದರ ನಡುವೆಯೇ ನಡೆದ ಗುಂಡಿನ ದಾಳಿ ಟ್ರಂಪ್‌ ಪರವಾಗಿ ಅನುಕಂಪದ ಅಲೆ ಹೆಚ್ಚಿಸಬಹುದು. ದಾಳಿಯನ್ನೇ ಗುರಿಯಾಗಿಸಿಕೊಂಡು ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಇದಕ್ಕೆ ಕಾರಣವಾದ ಬೈಡೆನ್‌ ಬಗ್ಗೆ ಟ್ರಂಪ್‌ ದಾಳಿ ನಡೆಸಬಹುದು. ‘ಚುನಾವಣೆ ಗೆಲ್ಲಲೆಂದೇ ದಾಳಿ ನಡೆಸಬಹುದೆಂದು’ ಎಂದು ಟ್ರಂಪ್‌ ಪಕ್ಷದ ನಾಯಕರು ಆರೋಪಿಸಿದ್ದಾರೆ. ಇದನ್ನು ಅವರು ಚುನಾವಣೆಯ ತಂತ್ರವಾಗಿ ಬಳಸಬಹುದಾಗಿದೆ. ಒಟ್ಟಾರೆ ದಾಳಿ ಘಟನೆ ಟ್ರಂಪ್‌ಗೆ ಒಂದಿಷ್ಟು ಹೆಚ್ಚಿನ ಮತಗಳನ್ನು ದೊರಕಿಸಿಕೊಡುವುದಂತೂ ಖಚಿತ ಎನ್ನಲಾಗಿದೆ.

ಮಸ್ಕ್‌, ಬೆಜೋಸ್‌ ಬೆಂಬಲ

ದಾಳಿಯ ಬೆನ್ನಲ್ಲೇ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರು ಟ್ರಂಪ್‌ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇನ್ನೊಂದೆಡೆ ಇನ್ನೊಬ್ಬ ಸಿರಿವಂತ ಉದ್ಯಮಿ ಜೆಫ್‌ ಬೆಜೋಸ್‌, ಟ್ರಂಪ್‌ ಧೈರ್ಯವಂತ ಎಂದು ಶ್ಲಾಘಿಸಿದ್ದಾರೆ.

ಪುರಿ ಜಗನ್ನಾಥನಿಂದಲೇ ಬದುಕುಳಿದ ಡೊನಾಲ್ಡ್ ಟ್ರಂಪ್! ಇದು 48 ವರ್ಷದ ಹಿಂದಿನ ಸಂಬಂಧ!

ಫೈಟ್ ಎಂದು ಅಬ್ಬರಿಸಿದ ಟ್ರಂಪ್ 

ತಮ್ಮ ಹತ್ಯೆಗೆ ಯತ್ನ ನಡೆದಿದ್ದರೂ ಡೊನಾಲ್ಡ್‌ ಟ್ರಂಪ್‌ ಎದೆಗುಂದದೇ ‘ಫೈಟ್‌’ ಎಂದು ಅಬ್ಬರಿಸುದ್ದು ವಿಶೇಷ. ಟ್ರಂಪ್‌ರ ಈ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗುಂಡುಗಳು ಹಾರುತ್ತಿದ್ದಂತೆ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಜನರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದರು. ರಕ್ತಸಿಕ್ತ ಮುಖದ ಟ್ರಂಪ್‌ ಅವರನ್ನು ಭದ್ರತಾ ಪಡೆಯವರು ವೇದಿಕೆಯಿಂದ ಕೆಳಗಿಳಿಸಿದರು.

ಈ ವೇಳೆ, ಕಿವಿಯಿಂದ ರಕ್ತ ಸೋರುತ್ತಿದ್ದರೂ ತಮ್ಮ ಮುಷ್ಟಿ ಕಟ್ಟಿದ ಕೈಯನ್ನು ಮೇಲಕ್ಕೆತ್ತಿ ‘ಫೈಟ್‌! (ಹೋರಾಡಿ) ಎಂದು ಟ್ರಂಪ್‌ ಅಬ್ಬರಿಸಿದರು. ನಂತರ ಅವರನ್ನು ಕಾರಿನಲ್ಲಿ ಪಿಟ್ಸ್‌ಬರ್ಗ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಟ್ರಂಪ್‌ ‘ನನಗೆ ಶೂ ಹಾಕಿಕೊಳ್ಳಲು ಬಿಡಿ’ ಎಂದು ಕಿರುಚಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. 

ಮನೆಯಿಂದ ಮನೆಗೆ ಟೆರೇಸ್‌ ಮೇಲೆ ಜಿಗಿಯುತ್ತಾ ಬಂದಿದ್ದ ಹಂತಕ; ಪ್ರತ್ಯಕ್ಷದರ್ಶಿಗಳಿಂದ ಸ್ಫೋಟಕ ಮಾಹಿತಿ

ಶಾಂತಿ ಕಾಯ್ದುಕೊಳ್ಳಿ:  ಟ್ರಂಪ್ ಮನವಿ 

ತಮ್ಮ ಹತ್ಯೆ ಯತ್ನದ ಬಗ್ಗೆ ಡೊನಾಲ್ಡ್ ಟ್ರಂಪ್ ಆಘಾತ ವ್ಯಕ್ತಪಡಿಸಿ ದ್ದರೂ ಶಾಂತಿ, ಒಗ್ಗಟ್ಟು ಕಾಯ್ದುಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ. ದಾಳಿಗೆ ಎದೆಗುಂದದೇ ಮತ್ತೆ ಚುನಾವಣೆ ಸಮಾ ವೇಶಕ್ಕೆ ತೆರಳುವುದಾಗಿ ಘೋಷಿಸಿದ್ದಾರೆ. ಘಟನೆ ಬಳಿಕ ತಮ್ಮ ಸಾಮಾಜಿಕ ಜಾಲ ತಾಣ 'ಟ್ರುತ್ ಸೋಷಿಯಲ್' ಮೂಲಕ  ಪ್ರತಿಕ್ರಿಯೆ ನೀಡಿರುವ ಟ್ರಂಪ್, 'ಅಮೆರಿಕ ದಲ್ಲಿ ಇಂತಹ ಕೃತ್ಯ ನಡೆಯುತ್ತದೆ ಎಂಬುದು ನಿಜಕ್ಕೂ ಆಘಾತಕಾರಿ. ಸದ್ಯಕ್ಕೆ ನನಗೆ ಹಂತಕನ ಬಗ್ಗೆ ಏನೂ ಗೊತ್ತಿಲ್ಲ. ಅವನು ಸತ್ತಿದ್ದಾನೆ. ನನ್ನ ಬಲಗಿವಿಯ ಮೇಲ್ತುದಿಯನ್ನು ಕತ್ತರಿಸಿಕೊಂಡು ಗುಂಡು ಹಿಂದಕ್ಕೆ ಹೋಗಿದೆ. ಗುಂಡಿನ ಶಬ್ದ ಕೇಳುತ್ತಲೇ ಏನೋ ಆಗುತ್ತಿದೆ ಎಂದು ನನಗೆ ಅನ್ನಿಸಿತ್ತು. ಅಷ್ಟರಲ್ಲಿ ನನ್ನ ಚರ್ಮ ಸೀಳಿಕೊಂಡು ಗುಂಡು ಹಾರಿತು. ಸಾಕಷ್ಟು ರಕ್ತ ಹೋಗಿದೆ. ದೇವರು ಅಮೆರಿಕವನ್ನು ಕಾಪಾಡಲಿ!' ಎಂದಿದ್ದಾರೆ. ಬಳಿಕ ಇನ್ನೊಂದು ಹೇಳಿಕೆ ನೀಡಿರುವ ಅವರು, 'ಈ ವೇಳೆ ಜನರು ಸಮಚಿತ್ತ ಕಾಯ್ದುಕೊಳ್ಳಬೇಕು. ಅಮೆರಿಕಕ್ಕೆ ಇಂಥಮಹತ್ವದ ವೇಳೆ ಒಗ್ಗಟ್ಟು ಕಾಯ್ದುಕೊ ಳ್ಳುವುದು ಮುಖ್ಯ' ಎಂದಿದ್ದಾರೆ.

Latest Videos
Follow Us:
Download App:
  • android
  • ios