ಈ ರಾಶಿ ಹುಡುಗಿಯರಿಂದ ಪರಿಶುದ್ಧ ಸ್ನೇಹ ನಿರೀಕ್ಷಿಸಬಹುದು!

By Suvarna News  |  First Published Jul 14, 2021, 5:33 PM IST

 ರಾಶಿ ಚಕ್ರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುವಲ್ಲಿ ಸಹಾಯಕವಾಗುತ್ತವೆ. ರಾಶಿ ಆಧಾರದ ಮೇಲೆ ಸಿಟ್ಟು, ತಾಳ್ಮೆ, ಸೂಕ್ಷ್ಮತೆ, ಚತುರತೆ ಹೀಗೆ ಅನೇಕ ಗುಣ ಸ್ವಭಾವಗಳನ್ನು ತಿಳಿಯಬಹುದು. ಹಾಗೆಯೇ ಈ ನಾಲ್ಕು ರಾಶಿಯ ಹುಡುಗಿಯರು ಉತ್ತಮ ಸ್ನೇಹವನ್ನು ನೀಡಬಲ್ಲರೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ...


ಜ್ಯೋತಿಷ್ಯದಲ್ಲಿ ಜಾತಕವನ್ನು ನೋಡಿ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕವನ್ನು ಆಧರಿಸಿ ಭವಿಷ್ಯದ ಬಗ್ಗೆ ತಿಳಿಯುವುದು, ಅಷ್ಟೇ ಅಲ್ಲದೆ ಹಸ್ತದಲ್ಲಿರುವ ರೇಖೆಯನ್ನು ಗಮನಿಸಿ ಸಹ ಭವಿಷ್ಯವನ್ನು, ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಅದೇ ರೀತಿ ರಾಶಿಯ ಪ್ರಕಾರವೂ ಭವಿಷ್ಯದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳಬಹುದು. 

ವ್ಯಕ್ತಿಯ ಗುಣ ಸ್ವಭಾವಗಳು ಭಿನ್ನವಾಗಿರುತ್ತವೆ. ಒಂದೇ ರಾಶಿಯಾಗಿದ್ದರೂ ಕೆಲವು ಬಾರಿ ಒಬ್ಬರಿಗಿಂತ ಇನ್ನೊಬ್ಬರು ಬೇರೆಯೇ ಆಗಿರುತ್ತಾರೆ. ಹುಟ್ಟಿದ ಘಳಿಗೆ, ದಿನ, ಸಮಯ, ರಾಶಿ, ನಕ್ಷತ್ರ, ಯೋಗ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜಾತಕವನ್ನು ರಚಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯಲಾಗುತ್ತದೆ. ಜಾತಕವನ್ನು ರಚಿಸುವಲ್ಲಿ ರಾಶಿ ಗುಣವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ರಾಶಿಯ ಆಧಾರದ ಮೇಲೆ ವ್ಯಕ್ತಿಯ ಗುಣವನ್ನು ತಿಳಿಯಬಹುದಾಗಿರುತ್ತದೆ. ವ್ಯಕ್ತಿಯ ವ್ಯಕ್ತಿತ್ವವು ರಾಶಿ ಮತ್ತು ನಕ್ಷತ್ರಗಳ ಗುಣ ಸ್ವಭಾವಗಳಿಂದ ಪ್ರಭಾವಿತವಾಗಿರುತ್ತವೆ. ಹಾಗಾಗಿ ವ್ಯಕ್ತಿಯ ರಾಶಿಯಿಂದ ಅವರ ವ್ಯಕ್ತಿತ್ವ ಮತ್ತು ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿರುತ್ತದೆ.

ಇದನ್ನು ಓದಿ : ಈ 4 ರಾಶಿಯವರು ಸೋಲೊಪ್ಪೋದು ವಿರಳ: ನಿಮ್ಮದು ಇದೇ ರಾಶಿನಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಹುಡುಗಿಯರು ಉತ್ತಮ ಸ್ನೇಹವನ್ನು ನೀಡಬಲ್ಲರೆಂದು ಹೇಳಲಾಗುತ್ತದೆ. ಸ್ನೇಹಿತರಿಗಾಗಿ ಮಿಡಿಯುವ ಹೃದಯ ಇವರದ್ದಾಗಿರುತ್ತದೆ. ಸ್ನೇಹಿತರು ಕಷ್ಟದಲ್ಲಿದ್ದಾಗಲೂ ಅವರ ಕೈ ಬಿಡದೆ ಸಹಾಯ ಹಸ್ತಚಾಚುವ ಗುಣವನ್ನು ಈ ನಾಲ್ಕು ರಾಶಿಯವರು ಹೊಂದಿರುತ್ತಾರೆ. ಹಾಗಾದರೆ ಆ ನಾಲ್ಕು ರಾಶಿ ಯಾವುವು? ಅವುಗಳ ಗುಣ ಸ್ವಭಾವವನ್ನು ತಿಳಿಯೋಣ...

Tap to resize

Latest Videos

undefined


ವೃಷಭ ರಾಶಿ
ಈ ರಾಶಿಯ ಹುಡುಗಿಯರು ಹೆಚ್ಚು ಪ್ರಾಮಾಣಿಕರು ಮತ್ತು ಸಂವೇದನಾಶೀಲ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯವರು ತಮ್ಮ ಎಲ್ಲ ಸಂಬಂಧಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಅದು ಕುಟುಂಬದವರಾಗಲಿ, ಪ್ರೀತಿಸಿದವರಾಗಲಿ ಅಥವಾ ಸ್ನೇಹಿತರೇ ಆಗಲಿ ಎಲ್ಲವನ್ನು ಅತ್ಯಂತ ಪ್ರೇಮದಿಂದ ನಿಭಾಯಿಸುವ ಸ್ವಭಾವ ಈ ರಾಶಿಯವರದ್ದು. ಸುಖ-ದುಃಖಗಳಲ್ಲಿ ಸ್ನೇಹಿತರ ಜೊತೆ ನಿಲ್ಲುವ ಈ ರಾಶಿಯವರು ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. 

ಇದನ್ನು ಓದಿ: ರಾಶಿಯನುಸಾರ ಈ ರತ್ನ ಧರಿಸಿದರೆ ಅದೃಷ್ಟ ನಿಮ್ಮದು

ತುಲಾ ರಾಶಿ
ಈ ರಾಶಿಯ ಹುಡುಗಿಯರಿಂದ ಪರಿಶುದ್ಧ ಸ್ನೇಹವನ್ನು ಅಪೇಕ್ಷಿಸಬಹುದು. ತುಲಾ ರಾಶಿಯವರು ತಮ್ಮ ಸ್ನೇಹಿತರನ್ನು ಖುಷಿಯಾಗಿಡುವ ಸಲುವಾಗಿ ಎಲ್ಲ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳ ಸ್ವಭಾವ, ವ್ಯವಹರಿಸುವ ಪರಿ ಎಲ್ಲರನ್ನೂ ಇವರತ್ತ ಆಕರ್ಷಿಸುತ್ತದೆ. ಹಾಗಾಗಿ ತುಲಾ ರಾಶಿಯವರಿಗೆ ಹೆಚ್ಚು ಸ್ನೇಹಿತರು ಇರುತ್ತಾರೆ. ಸ್ನೇಹಿತರು ಹಂಚಿಕೊಂಡ ವಿಷಯಗಳನ್ನು ಗುಟ್ಟಾಗಿ ಇಡುತ್ತಾರೆ. ಅಷ್ಟೇ ಅಲ್ಲದೆ ವಿಷಯಗಳನ್ನು ಇತರರೊಂದಿಗೆ ಹೇಳಿ ಆಡಿಕೊಳ್ಳುವ ಸ್ವಭಾವ ಈ ರಾಶಿಯವರದ್ದಲ್ಲ. ಹಾಗಾಗಿ ತುಲಾ ರಾಶಿಯ ಹುಡುಗಿಯರು ಉತ್ತಮ ಸ್ನೇಹಿತರಾಗುತ್ತಾರೆ.

ಕರ್ಕಾಟಕ ರಾಶಿ
ಈ ರಾಶಿಯ ಹುಡುಗಿಯರು ಉತ್ತಮ ಸ್ನೇಹಿತರಾಗುತ್ತಾರೆ. ಸ್ನೇಹವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಗುಣ ಇವರಲ್ಲಿರುತ್ತದೆ. ಸ್ನೇಹಿತರ ಖಾಸಗಿ ವಿಷಯಗಳನ್ನು ಯಾವುದೇ ಸಂದರ್ಭದಲ್ಲೂ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಹಾಗಾಗಿ ಹಲವರು ಕರ್ಕಾಟಕ ರಾಶಿಯ ಹುಡುಗಿಯರ ಬಳಿ ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆಂದು ಹೇಳಲಾಗುತ್ತದೆ. 

ಇದನ್ನು ಓದಿ : ಈ ರಾಶಿ- ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧ – ಎಲ್ಲದಕ್ಕೂ ಸಿದ್ಧ..!

ವೃಶ್ಚಿಕ ರಾಶಿ
ಈ ರಾಶಿಯ ವ್ಯಕ್ತಿಗಳಿಗೆ ಸ್ನೇಹಿತರು ಬಹಳ. ಈ ರಾಶಿಯ ಹುಡುಗಿಯರ ಬಗ್ಗೆ ಹೇಳಬೇಕೆಂದರೆ ಇವರಿಗೆ ಸ್ನೇಹಿತರು ಹೆಚ್ಚಿರುತ್ತಾರೆ. ಸ್ನೇಹವನ್ನು ತುಂಬಾ ಪ್ರಾಮಾಣಿಕತೆಯಿಂದ ನಿಭಾಯಿಸುತ್ತಾರೆ. ಸ್ನೇಹಕ್ಕಾಗಿ ಎಂಥದ್ದೇ ಕಷ್ಟವನ್ನಾದರೂ ಎದುರಿಸಲು ತಯಾರಿರುತ್ತಾರೆ. ಈ ರಾಶಿಯ ಹುಡುಗಿಯರು ಸ್ನೇಹಿತರಿಗಾಗಿ ಎಷ್ಟು ಕಷ್ಟಗಳನ್ನು ಎದುರಿಸಿದ್ದರೋ ಅಥವಾ ಏನೆಲ್ಲ ಸಹಾಯವನ್ನು ಮಾಡಿರುತ್ತಾರೋ ಅಷ್ಟೇ ಸಹಾಯ ಮತ್ತು ಸಹಕಾರವನ್ನು ಪ್ರತಿಯಾಗಿ ಸ್ನೇಹಿತರು ಮಾಡಬೇಕೆಂದು ಬಯಸುತ್ತಾರೆ. ಸ್ನೇಹಿತರು ತಮ್ಮ ಕಷ್ಟಕ್ಕೆ ಆಗಲೇಬೇಕೆಂದು ಆಶಿಸುತ್ತಾರೆ.

click me!