ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..

By Suvarna News  |  First Published Apr 18, 2023, 11:20 AM IST

ಈ ದೇವಾಲಯವು ಜುಲೈನಿಂದ ಫೆಬ್ರುವರಿವರೆಗೆ ನೀರಿನ ಅಡಿಯಲ್ಲೇ ಉಳಿಯುತ್ತದೆ. ಮಾರ್ಚ್ ಮತ್ತು ಜೂನ್ ತಿಂಗಳ ನಡುವೆ ಮಾತ್ರ ಹೊರಗೆ ಕಾಣಿಸುತ್ತದೆ. ಈ ದೇವಾಲಯದಿಂದ ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಿದ್ರು ಪಾಂಡವರು.. ಆದ್ರೆ ಎರಡೂವರೆ ಮೆಟ್ಟಿಲು ಕಮ್ಮಿ ಬಿತ್ತು!


ಇಲ್ಲೊಂದು ಅದ್ಭುತ ದೇವಾಲಯವಿದೆ. ನೋಡಲು ಬಹಳ ಸುಂದರವಾಗಿದೆ. ಆದರೆ, ವರ್ಷದಲ್ಲಿ 4 ತಿಂಗಳು ಮಾತ್ರ ನೀವದನ್ನು ನೋಡಲು ಸಾಧ್ಯ. ಅಷ್ಟೇ ಅಲ್ಲ, ಈ ದೇವಾಲಯದಿಂದ ಸೀದಾ ಸ್ವರ್ಗಕ್ಕೆ ಮೆಟ್ಟಿಲಿದೆ.. ಆದರೂ, ಅದನ್ನೇರಿ ಸ್ವರ್ಗ ತಲುಪಲಾರಿರಿ!

ಯಾವುದೀ ದೇವಾಲಯ? ಇಲ್ಲಿ ಯಾರು ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಿದ್ದು? ಮೆಟ್ಟಿಲಿದ್ರೂ ಸ್ವರ್ಗಕ್ಕೆ ಹೋಗೋಕೇಗಾಗಲ್ಲ? ಎಂಬೆಲ್ಲ ಪ್ರಶ್ನೆಗಳು ಕಾಡ್ತಿವೆಯಲ್ಲ.. ಎಲ್ಲದಕ್ಕೂ ಉತ್ತರ ನೀಡ್ತೀವಿ, ಮುಂದೆ ಓದಿ..

Tap to resize

Latest Videos

ಬಥು ಕಿ ಲಡಿ
ಇದೇ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಬಟು ಕಿ ಲಡಿ ದೇವಸ್ಥಾನ. ಸುಮಾರು 5000 ವರ್ಷಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಭಗವಾನ್ ವಿಷ್ಣುವಿನ ಪ್ರತಿಮೆಯು ಶೇಷನಾಗನ ಮೇಲೆ ನಿಂತಿದೆ. ಮುಖ್ಯ ದೇವಾಲಯದ ಹೊರತಾಗಿ, ಈ ದೇವಾಲಯದ ಸಂಕೀರ್ಣದಲ್ಲಿ ಎಂಟು ಸಣ್ಣ ದೇವಾಲಯಗಳನ್ನು ಸಹ ನಿರ್ಮಿಸಲಾಗಿದೆ. ಇಲ್ಲಿ ಕಲ್ಲಿನಿಂದ ಕೆತ್ತಿದ ಗಣೇಶ ಮತ್ತು ಕಾಳಿಯ ವಿಗ್ರಹಗಳನ್ನು ನೋಡಬಹುದು.

4 ತಿಂಗಳು ಮಾತ್ರ ದರ್ಶನ
ಈ ದೇವಾಲಯವು ಪಾಂಗ್ ಅಣೆಕಟ್ಟಿನಲ್ ಸಮೀಪ ನೆಲೆಗೊಂಡಿರುವುದರಿಂದ ವರ್ಷದಲ್ಲಿ ಕೇವಲ 4 ತಿಂಗಳು ಮಾತ್ರ ಭಕ್ತರಿಗೆ ದರ್ಶನ ನೀಡುತ್ತದೆ. ಉಳಿದ 8 ತಿಂಗಳು ನೀರಿನಲ್ಲಿ ಮುಳುಗಿರುತ್ತದೆ. 
ಪಂಜಾಬ್‌ನ ಜಲಂಧರ್‌ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಮಹಾರಾಣಾ ಪ್ರತಾಪ್ ಸಾಗರ್ ಸರೋವರದಲ್ಲಿರುವ ಪಾಂಗ್ ಅಣೆಕಟ್ಟಿನ ಗೋಡೆಯಿಂದ 15 ಕಿಮೀ ದೂರದಲ್ಲಿರುವ ದ್ವೀಪದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಪಾಂಗ್ ಅಣೆಕಟ್ಟಿನ ಸರೋವರದ ನೀರಿನ ಮಟ್ಟ ಏರುತ್ತಿದ್ದಂತೆ, ದೇವಾಲಯವು ನೀರಿನ ಅಡಿಯ ವಿಭಿನ್ನ ಪ್ರಪಂಚವೇ ಆಗುತ್ತದೆ. ಫೆಬ್ರುವರಿಯಿಂದ ಜುಲೈವರೆಗೆ ದೇವಾಲಯವು ನೀರಿನ ಅಡಿಯಲ್ಲಿಯೇ ಇರುತ್ತದೆ. ಅಂದರೆ ಈ ದೇವಾಲಯಕ್ಕೆ ವರ್ಷದಲ್ಲಿ ಕೇವಲ 4 ತಿಂಗಳು ಮಾತ್ರ ಭೇಟಿ ನೀಡಬಹುದು. 

ಈ ದೇವಾಲಯದಲ್ಲಿ ದುರ್ಗೆಗೆ ನಿತ್ಯ ಪೂಜಿಸುವುದು ಮುಸ್ಲಿಂ ಅರ್ಚಕ!

ಬಥು ಕಲ್ಲಿನ ಕೆತ್ತನೆ
ಈ ದೇವಾಲಯದ ಅಚ್ಚರಿಯ ಸಂಗತಿ ಎಂದರೆ ನೀರಿನಲ್ಲಿ ಮುಳುಗಿ ಬಹಳ ಸಮಯ ಕಳೆದರೂ ದೇವಾಲಯದ ರಚನೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಏಕೆಂದರೆ, ಈ ದೇವಾಲಯವು ಬ ಥು ಎಂಬ ಶಕ್ತಿಶಾಲಿ ಕಲ್ಲಿನಿಂದ ಮಾಡಲ್ಪಟ್ಟಿದೆ. ದೇವಾಲಯವು ನೀರಿನಲ್ಲಿ ಮುಳುಗಿದಾಗ ದೂರದಿಂದ ಮುತ್ತುಗಳ ಸರಮಾಲೆಯಂತೆ ಕಾಣುವುದರಿಂದ ಇದನ್ನು ಬಟು ಕಿ ಲಡಿ ಎಂದು ಕರೆಯುತ್ತಾರೆ. ಪಾಂಡವರ ವನವಾಸದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಿದ ಪಾಂಡವರು
ಈ ದೇವಾಲಯವನ್ನು ಸ್ಥಳೀಯ ರಾಜನು ನಿರ್ಮಿಸಿದನೆಂದು ಇಲ್ಲಿ ವಾಸಿಸುವ ಜನರು ನಂಬುತ್ತಾರೆ. ಕೆಲವರು ಇದನ್ನು ಪಾಂಡವರು ಕಟ್ಟಿದ್ದೆನ್ನುತ್ತಾರೆ. ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಸ್ವರ್ಗಕ್ಕೆ ಏಣಿಯನ್ನು ನಿರ್ಮಿಸಲು ಪ್ರಯತ್ನಿಸಿದರು. ಆದರೆ, ಅವರು ಒಂದೇ ರಾತ್ರಿಯಲ್ಲಿ ಈ ಮೆಟ್ಟಿಲುಗಳನ್ನು ನಿರ್ಮಿಸಬೇಕಾಗಿತ್ತು. ಆಗ ಪಾಂಡವರು ಸ್ವರ್ಗಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲು ಶ್ರೀಕೃಷ್ಣನ ಸಹಾಯವನ್ನು ಕೋರಿದರು. ಶ್ರೀ ಕೃಷ್ಣನು ಆರು ತಿಂಗಳ ಒಂದು ರಾತ್ರಿಯನ್ನು ಮಾಡಿದನು. ಆರು ತಿಂಗಳು ಕಳೆದರೂ ಸ್ವರ್ಗಕ್ಕೆ  ಎರಡೂವರೆ ಮೆಟ್ಟಿಲು ಕಮ್ಮಿ ಬಿದ್ದಿತು ಮತ್ತು ಅದಾಗಲೇ ಬೆಳಗಾಗಿತ್ತು. ಇಂದಿಗೂ ಈ ದೇವಾಲಯದಲ್ಲಿ ಸ್ವರ್ಗಕ್ಕೆ ಹೋಗುತ್ತದೆನ್ನಲಾದ 40 ಮೆಟ್ಟಿಲುಗಳನ್ನು ಕಾಣಬಹುದು. 

ಪಕ್ಷಿ ವೀಕ್ಷಕರಿಗೆ ಸ್ವರ್ಗ
ಪ್ರಕೃತಿಯನ್ನು ಇಷ್ಟಪಡುವವರಿಗೆ ಈ ಸ್ಥಳವು ತುಂಬಾ ಚೆನ್ನಾಗಿದೆ. ಇದಲ್ಲದೇ ಈ ಸ್ಥಳ ಪಕ್ಷಿ ವೀಕ್ಷಕರಿಗೆ ಸ್ವರ್ಗದಂತಿದೆ. ಏಕೆಂದರೆ ಪಾಂಗ್ ಅಣೆಕಟ್ಟು ವಲಸೆ ಹಕ್ಕಿಗಳ ನೆಲೆಯಾಗಿ ಬಹಳ ಪ್ರಸಿದ್ಧವಾಗಿದೆ. 200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಆದ್ದರಿಂದ, ಅದರ ಸುತ್ತಲಿನ ಪ್ರದೇಶಗಳನ್ನು ಭಾರತ ಸರ್ಕಾರವು ಪಕ್ಷಿಗಳ ಆಶ್ರಯಕ್ಕಾಗಿ ರಕ್ಷಿಸಿದೆ.

Venus Transit: ಶುಕ್ರನ ಯೌವನ ಪ್ರವೇಶದಿಂದ 4 ರಾಶಿಗಳಿಗೆ ಲಾಭ

ಯಾವಾಗ ಹೋಗಬೇಕು? ತಲುಪುವುದು ಹೇಗೆ?
ದೇವಾಲಯದ ಸುತ್ತಲಿನ ನೋಟವು ಬಹಳ ಮನೋಹರವಾಗಿದೆ. ನೀವು ಈ ದೇವಾಲಯಕ್ಕೆ ಭೇಟಿ ನೀಡಲು ಬಯಸಿದರೆ, ಏಪ್ರಿಲ್ ನಿಂದ ಜೂನ್ ವರೆಗೆ ಉತ್ತಮ ಸಮಯ. ಈ ದೇವಾಲಯವನ್ನು ದೋಣಿಯ ಮೂಲಕ ತಲುಪಬಹುದು. ದೇವಾಲಯದ ಸುತ್ತಲೂ ರೆನ್ಸಾರ್ ಎಂಬ ದ್ವೀಪ ರಚನೆಯಿದೆ. ಇಲ್ಲಿ ಅರಣ್ಯ ಇಲಾಖೆಯ ಅತಿಥಿ ಗೃಹವೂ ಇದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಧರ್ಮಶಾಲಾದ ಗಗ್ಗಲ್ ವಿಮಾನ ನಿಲ್ದಾಣ. ಕಾಂಗ್ರಾದಿಂದ ಜವಾಲಿ ಅಥವಾ ಧಮೇತಾ ಗ್ರಾಮಕ್ಕೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.

click me!