ಅಕ್ಷಯ ತೃತೀಯದ ದಿನ ಚಿನ್ನ ಖರೀದಿಸುವ ಸಂಪ್ರದಾಯವಿದೆ. ಆದರೆ, ಈಗಿನ ಬೆಲೆಯಲ್ಲಿ ಚಿನ್ನ ಖರೀದಿಸುವುದೇನು ಸುಲಭದ ಮಾತಲ್ಲ. ಒಂದು ವೇಳೆ ನಿಮಗೆ ಈ ದಿನ ಚಿನ್ನ ಖರೀದಿಸಲು ಸಾಧ್ಯವಾಗದಿದ್ದಲ್ಲಿ ಮನೆಗೆ ಲಕ್ಷ್ಮೀಯನ್ನು ಸೆಳೆಯಲು ಇತರೆ ಮಂಗಳಕರ ವಸ್ತುಗಳನ್ನು ಕೂಡಾ ಖರೀದಿಸಿ ಮನೆಗೆ ತರಬಹುದು.
ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯದ ಈ ದಿನವು 2023ರಲ್ಲಿ ಏಪ್ರಿಲ್ 22ರಂದು ಬರುತ್ತದೆ.
ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಏನೇ ಕೊಂಡರೂ ಅದು ಅಕ್ಷಯ ಆಶೀರ್ವಾದವನ್ನು ತರುತ್ತದೆ. ಲಕ್ಷ್ಮಿಯನ್ನು ಮೆಚ್ಚಿಸಲು ಇದು ಅತ್ಯುತ್ತಮ ದಿನ ಎಂದು ನಂಬಲಾಗಿದೆ. ಈ ದಿನ ಚಿನ್ನ ಖರೀದಿಸುವ ಸಂಪ್ರದಾಯವೂ ಇದೆ. ಈ ದಿನ ಚಿನ್ನವನ್ನು ಖರೀದಿಸಿದರೆ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಕೊಂಡವರನ್ನು ಸದಾ ಸಮೃದ್ಧರಾಗಿರಲು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ. ಆದರೆ ಈಗಿನ ದಿನಗಳಲ್ಲಿ ಚಿನ್ನವನ್ನು ಖರೀದಿಸುವುದು ಸುಲಭದ ಮಾತಲ್ಲ. ಅದರ ಬೆಲೆಯಂತೂ ಗಗನದಿಂದ ಇಳಿಯುವುದೇ ಇಲ್ಲ. ಹಾಗಾಗಿ, ಒಂದು ವೇಳೆ ನಿಮಗೆ ಈ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ, ಈ ದಿನ ಚಿನ್ನ ಖರೀದಿಯ ಹೊರತಾಗಿ ಕೆಲವೊಂದು ಮಂಗಳಕರ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೂ ತಾಯಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ ಹಾಗೂ ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿ ನೆಲೆಸುತ್ತದೆ.
ಶಿವಲಿಂಗ
ಅಕ್ಷಯ ತೃತೀಯದ ದಿನ ಮನೆಯ ಪೂಜಾಕೋಣೆಗಾಗಿ ಶಿವಲಿಂಗವನ್ನು ಖರೀದಿಸಿ. ಅದನ್ನು ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ. ಹೀಗೆ ಮಾಡುವುದರಿಂದ ಎಲ್ಲಾ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂಪತ್ತು ತುಂಬಿರುತ್ತದೆ.
Venus Transit: ಶುಕ್ರನ ಯೌವನ ಪ್ರವೇಶದಿಂದ 4 ರಾಶಿಗಳಿಗೆ ಲಾಭ
ಶ್ರೀ ಯಂತ್ರ
ಅಕ್ಷಯ ತೃತೀಯದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಮಂತ್ರಗಳನ್ನು ಪಠಿಸುವಂತೆ, ಅವಳ ಯಂತ್ರವನ್ನು ಪೂಜಿಸುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಅಕ್ಷಯ ತೃತೀಯದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಶ್ರೀ ಯಂತ್ರವನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಅದನ್ನು ಮನೆಗೆ ತಂದು ನಿಯಮ ಪ್ರಕಾರ ಪೂಜಾ ಮನೆಯಲ್ಲಿ ಸ್ಥಾಪಿಸಿ. ಶ್ರೀಯಂತ್ರವನ್ನು ಪ್ರತಿ ದಿನ ನೋಡುವುದರಿಂದ ಹಾಗೂ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬಹುದು.
ದಕ್ಷಿಣಾವರ್ತಿ ಶಂಖ
ಅಕ್ಷಯ ತೃತೀಯ ದಿನದಂದು ಮನೆಗಾಗಿ ದಕ್ಷಿಣಾವರ್ತಿ ಶಂಖವನ್ನು ಖರೀದಿಸಿ ತರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶಂಖ ಇರುವ ಮನೆಯಲ್ಲಿ ದುಃಖ ಮತ್ತು ಬಡತನವು ಎಂದಿಗೂ ನೆಲೆಸುವುದಿಲ್ಲ ಎಂದು ನಂಬಲಾಗಿದೆ. ಲಕ್ಷ್ಮಿಯ ಆಶೀರ್ವಾದ ಸದಾ ಸುರಿಯುತ್ತಿರುತ್ತದೆ. ದಕ್ಷಿಣಾವರ್ತಿ ಶಂಖದ ನಿಯಮಿತ ಪೂಜೆಯು ಸಂಪತ್ತನ್ನು ಹೆಚ್ಚಿಸುವುದರ ಜೊತೆಗೆ ಸಂತೋಷ ಮತ್ತು ಅದೃಷ್ಟವನ್ನು ನೀಡುತ್ತದೆ.
ಗೋವು
ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಲಕ್ಷ್ಮಿ ದೇವಿಯ ಆರಾಧನೆಯು ಗೋ ಪೂಜೆಯಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಅಕ್ಷಯ ತೃತೀಯದಲ್ಲಿ ಸಾಧ್ಯವಾದರೆ ಗೋವುಗಳನ್ನು ಖರೀದಿಸಿ, ಇಲ್ಲದಿದ್ದಲ್ಲಿ ಬೆಳ್ಳಿಯ ಗೋವನ್ನು ಮನೆಗೆ ತಂದು ಲಕ್ಷ್ಮಿ ದೇವಿಯೊಂದಿಗಿಟ್ಟು ಪೂಜೆ ಸಲ್ಲಿಸಿದರೆ ಅವಳು ಸಂತೋಷಪಡುತ್ತಾಳೆ ಮತ್ತು ಕುಟುಂಬಕ್ಕೆ ತನ್ನ ಆಶೀರ್ವಾದವನ್ನು ನೀಡುತ್ತಾಳೆ.
Amarnath Yatra 2023ಗೆ ನೋಂದಣಿ ಆರಂಭ, ಇಲ್ಲಿದೆ ಸಂಪೂರ್ಣ ವಿವರ..
ಕವಡೆ
ಕವಡೆಗಳು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿದ್ದು, ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತವೆ. ಈಶಾನ್ಯ ದಿಕ್ಕು, ಇದು ದೇವರು ಮತ್ತು ದೇವತೆಯ ವಾಸಸ್ಥಾನವೆಂದು ನಂಬಲಾಗಿದೆ; ಅಕ್ಷಯ ತೃತೀಯದಂದು ಕವಡೆಗಳನ್ನು ತಂದು ಈ ದಿಕ್ಕಿನಲ್ಲಿ ಇರಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.