ಕೂತ್ರೂ ನಿಂತ್ರೂ ಎಲ್ಲರಿಗಿಂತ ಇವ್ರಿಗೆ ದೃಷ್ಟಿ ಬೀಳೋದು ಹೆಚ್ಚು, ಪಟ್ಟಿಯಲ್ಲಿ ನೀವಿದ್ದೀರಾ ಚೆಕ್ ಮಾಡಿ

Published : Nov 06, 2025, 09:05 PM IST
Evil Eye

ಸಾರಾಂಶ

Numerology : ನಮ್ಮ ಜನ್ಮ ದಿನಾಂಕಕ್ಕೂ ದೃಷ್ಟಿಗೂ ಸಂಬಂಧ ಇದೆ. ಕೆಲವೊಂದು ದಿನಾಂಕದಂದು ಜನಿಸಿದ ಜನರಿಗೆ ಸಮಸ್ಯೆ ಹೆಚ್ಚು. ಬೇಗ ಕೆಟ್ಟ ದೃಷ್ಟಿಗೆ ಇವರು ಬಲಿಯಾಗ್ತಾರೆ. ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೇಗ ಪರಿಣಾಮ ಬೀರುತ್ತಾ ಎಂಬುದನ್ನು ಇಲ್ಲಿ ಚೆಕ್ ಮಾಡ್ಕೊಳ್ಳಿ.

ಜ್ವರ ಬರಲಿ ಇಲ್ಲ ಜಾಬ್ ನಲ್ಲಿ ಸಮಸ್ಯೆ ಆಗ್ಲಿ ಇದಕ್ಕೆಲ್ಲ ದೃಷ್ಟಿ ಬಿದ್ದಿರೋದು ಒಂದು ಕಾರಣ ಆಗಿರ್ಬಹುದು. ನಮ್ಮ ಏಳ್ಗೆ ಸಹಿಸಲಾಗದ ಜನರು ಕೆಟ್ಟ ಕಣ್ಣಿನಿಂದ ನಮ್ಮನ್ನು ನೋಡಿದ್ರೆ ದೃಷ್ಟಿ ಬೀಳುತ್ತೆ. ಬರೀ ಮನುಷ್ಯನಿಗೆ ಮಾತ್ರವಲ್ಲ, ಮನೆ, ಆಸ್ತಿಗೂ ದೃಷ್ಟಿ ಬೀಳುತ್ತೆ ಅಂತ ಜನ ನಂಬ್ತಾರೆ. ದೃಷ್ಟಿಯ ಪರಿಣಾಮ ಅನೇಕ ಬಾರಿ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಭವಿಷ್ಯದ ಮೇಲೆ ಗಮನಾರ್ಹ ಬದಲಾವಣೆ ತರುತ್ತದೆ. ದೃಷ್ಟಿ ಬೀಳೋದಕ್ಕೂ ಬರ್ತ್ ಡೇಟ್ ಗೂ ಸಂಬಂಧ ಇದೆ. ಕೆಲವೊಂದು ಜನ್ಮ ದಿನಾಂಕ ಹೊಂದಿರುವವರಿಗೆ ಬೇಗ ದೃಷ್ಟಿ ಬೀಳುತ್ತೆ ಅಂತ ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾರು ಬೇಗ ಕೆಟ್ಟ ದೃಷ್ಟಿಗೆ ಪ್ರಭಾವಿತರಾಗ್ತಾರೆ. ಜೀವನದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸ್ತಾರೆ ಗೊತ್ತಾ?

ಈ ಮೂಲಾಂಕ (Root Numbers) ಹೊಂದಿರುವವರಿಗೆ ದೃಷ್ಟಿ ಬೀಳೋದು ಹೆಚ್ಚು :

ಮೂಲ ಸಂಖ್ಯೆ 2 : ನಿಮ್ಮ ಜನ್ಮ ದಿನಾಂಕವನ್ನು ಕೂಡಿಸಿದಾಗ ಬರುವ ಸಂಖ್ಯೆಯೇ ಮೂಲಾಂಕ. ನೀವು ಯಾವುದೇ ತಿಂಗಳ 11ನೇ ದಿನಾಂಕದಂದು ಜನಿಸಿದ್ರೆ 1 ಪ್ಲಸ್ 1 ಅಂದ್ರೆ ನಿಮ್ಮ ಮೂಲಾಂಕ 2 ಆಗುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ, 2, 11, 20 ಮತ್ತು 29 ರಂದು ಜನಿಸಿದವರ ಮೂಲಾಂಕ 2. ಇವರು ಚಂದ್ರನಿಂದ ಪ್ರಭಾವಿತರಾಗಿರುತ್ತಾರೆ. ಇವರ ಶಕ್ತಿ ಮೃದುವಾಗಿರುತ್ತದೆ. ಹಾಗೆಯೇ ಭಾವನಾತ್ಮಕ ಸ್ವಭಾವ ಹೊಂದಿರುತ್ತಾರೆ. ಇವರಿಗೆ ಬಹುಬೇಗ ಕೆಟ್ಟ ದೃಷ್ಟಿ ತಗಲುತ್ತದೆ. ಯಾವುದೇ ವ್ಯಕ್ತಿ ಅವರ ಬಗ್ಗೆ ಅಸೂಯೆಪಟ್ಟಲ್ಲಿ ಇಲ್ಲ ಅವರ ಬಗ್ಗೆ ನಕಾರಾತ್ಮಕ ಆಲೋಚನೆ ಮಾಡಿದ್ರೆ ಅವರು ಬೇಗ ಪ್ರಭಾವಿತರಾಗುತ್ತಾರೆ. ಅವರ ಯಶಸ್ಸಿನ ಬಗ್ಗೆ ಬೇರೆಯವರು ಅಸೂಯೆಪಟ್ಟಲ್ಲಿ ಇವರ ಯಶಸ್ಸಿಗೆ ಅಡ್ಡಿಯಾಗುತ್ತದೆ.

ಈ 4 ರಾಶಿಯವರಿಗೆ ಎರಡು ಮುಖಗಳಿರುತ್ತವೆ, ಊಸರವಳ್ಳಿಗಿಂತ ವೇಗವಾಗಿ ಬಣ್ಣ ಬದಲಾಯಿಸ್ತಾರೆ

ಮೂಲಾಂಕ 6 : ಇನ್ನು ನಿಮ್ಮ ಮೂಲಾಂಕ ಆರಾಗಿದ್ದರೆ ನೀವು ಕೂಡ ಬೇಗ ಕೆಟ್ಟ ದೃಷ್ಟಿಗೆ ಒಳಗಾಗ್ತೀರಿ. ನೀವು ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ್ದರೆ ನಿಮ್ಮ ಮೂಲಾಂಕ 6 ಆಗಿರುತ್ತದೆ. ಶುಕ್ರನು ಈ ಜನರ ಮೇಲೆ ಬಲವಾದ ಪ್ರಭಾವ ಬೀರುತ್ತಾನೆ. ಮೂಲಾಂಕ 6 ನ್ನು ಹೊಂದಿರುವ ಜನರು ಸುಂದರವಾಗಿರುತ್ತಾರೆ. ಅವರು ಎಲ್ಲರನ್ನೂ ಪ್ರೀತಿಸ್ತಾರೆ. ಅವರನ್ನು ಕೂಡ ಎಲ್ಲರೂ ಪ್ರೀತಿಸುತ್ತಾರೆ. ಅವರ ಗುಣವೇ ಅವರಿಗೆ ಶತ್ರು. ಅವರ ವರ್ಚಸ್ಸನ್ನು ಇತರರು ಸಹಿಸುವುದಿಲ್ಲ. ಅವರಿಗೆ ಸಿಗುವ ಪ್ರೀತಿ, ಯಶಸ್ಸನ್ನು ಇತರರು ಅಸೂಯೆಪಡುತ್ತಾರೆ. ಹಣಕಾಸು, ಯಶಸ್ಸು ಮತ್ತು ಸಂಬಂಧದ ವಿಷ್ಯದಲ್ಲಿ ಅವರಿಗೆ ಕೆಟ್ಟ ದೃಷ್ಟಿ ಬೇಗ ನಾಟುತ್ತದೆ. ದುಷ್ಟ ಶಕ್ತಿಯಿಂದ ತಪ್ಪಿಸಿಕೊಳ್ಳಲು ಸಂಬಂಧವನ್ನು ಮುಚ್ಚಿಡುವುದು ಸೂಕ್ತ.

Swapna Shastra: ರಾತ್ರಿ ಹೊತ್ತು ಪದೇ ಪದೇ ಬೆಚ್ಚಿ ಬಿದ್ದು ಎದ್ದೇಳುತ್ತೀರಾ? ದುಃಸ್ವಪ್ನ ದೂರ ಮಾಡಲು ಹೀಗೆ ಮಾಡಿ

ಮೂಲಾಂಕ 8 : ಇನ್ನು ಮೂಲಾಂಕ 8 ಹೊಂದಿರುವ ಜನರಿಗೂ ದೃಷ್ಟಿ ಬೇಗ ಬೀಳುತ್ತದೆ. 8, 17 ಮತ್ತು 26ನೇ ದಿನಾಂಕದಂದು ಜನಿಸಿದವರ ಮೂಲಾಂಕ 8 ಆಗಿರುತ್ತದೆ. ಇವರು ಶನಿಯ ಆಳವಾದ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಜೀವನದಲ್ಲಿ ಬರುವ ಅನೇಕ ಏರುಪೇರುಗಳ ನಡುವೆಯೇ ಅವರು ಹೋರಾಟದ ಜೀವನ ನಡೆಸಿ ಯಶಸ್ಸು ಪಡೆಯುತ್ತಾರೆ. ಆದ್ರೆ ಅವರ ಯಶಸ್ಸನ್ನು ಅನೇಕರು ಸಹಿಸುವುದಿಲ್ಲ. ಕೆಟ್ಟ ದೃಷ್ಟಿ ನಿಮಗೆ ನೋವುಂಟು ಮಾಡುತ್ತದೆ. ಅಪಘಾತಕ್ಕೂ ಕಾರಣ ಆಗಬಹುದು. ಮಾನಸಿಕ ಒತ್ತಡ ಕಾಡಬಹುದು. ಆರ್ಥಿಕ ಸಮಸ್ಯೆ ಕಾಡಬಹುದು. ಮೂಲಾಂಕ 8 ಹೊಂದಿರುವ ವ್ಯಕ್ತಿಗಳು ಶನಿ ಆರಾಧನೆ ಮಾಡಬೇಕು.

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ