Blessings of Shani Dev: ಶನಿಕಾಟ ತಪ್ಪಬೇಕು ಅಂದ್ರೆ ದಿಕ್ಕು ನೋಡಿ ಮಲಗಿ

Published : Nov 04, 2025, 09:42 PM IST
Shani

ಸಾರಾಂಶ

ನ್ಯಾಯದ ಪರ ಸದಾ ನಿಲ್ಲುವ ಶನಿಯನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ನಾವು ಮಲಗುವ ದಿಕ್ಕು ಕೂಡ ಇಲ್ಲಿ ಮುಖ್ಯವಾಗುತ್ತದೆ. ತಪ್ಪು ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಶನಿಯ ಕಾಟ ಹೆಚ್ಚಾಗಬಹುದು. ಯಾವ ದಿಕ್ಕು ಶನಿಗೆ ಪ್ರಿಯ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಏನೇ ಕಷ್ಟ ಬಂದ್ರೂ ಜನರು ಮೊದಲು ಹೇಳೋದು ಶನಿ (Shani) ಹೆಸರು. ಶನಿ ಕಾಟ ತಪ್ಪುತ್ತಿಲ್ಲ, ಒಂದಾದ್ಮೇಲೆ ಒಂದು ಸಮಸ್ಯೆ ಬರ್ತಾನೇ ಇದೆ ಅಂತ ಜನ ಬೇಸರಗೊಳ್ತಾರೆ. ಆದ್ರೆ ಶನಿಕಾಟಕ್ಕೆ ಕಾರಣ ನೀವೇ. ಅನೇಕ ಬಾರಿ ನೀವು ಮಾಡುವ ತಪ್ಪುಗಳೇ ಶನಿ ಕೋಪಕ್ಕೆ ಕಾರಣವಾಗುತ್ತದೆ. ನ್ಯಾಯವಾದಿ ಶನಿ. ಅವನನ್ನು ಕರ್ಮದ ದೇವರು ಎಂದೂ ಕರೆಯುತ್ತಾರೆ. ಎಲ್ಲೇ ತಪ್ಪಾದ್ರೂ ಅದಕ್ಕೆ ತಕ್ಕ ಶಿಕ್ಷೆಯನ್ನು ಶನಿದೇವ ನೀಡ್ತಾನೆ. ನೀವು ಯಾವ ದಿಕ್ಕಿನಲ್ಲಿ ಮಲಗುತ್ತೀರಿ ಎಂಬುದು ಕೂಡ ಶನಿ ಜೊತೆ ಸಂಬಂಧ ಹೊಂದಿದೆ. ನೀವು ತಪ್ಪು ದಿಕ್ಕಿನಲ್ಲಿ ಮಲಗಿದ್ರೆ ಶನಿಕಾಟ ನಿಶ್ಚಿತ. ಮಲಗುವಾದ ದಿಕ್ಕುಳನ್ನು ನೋಡಿ ನಿದ್ರೆ ಮಾಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಮಲಗುವ ಭಂಗಿಯೂ ನಿಮ್ಮ ಕರ್ಮವನ್ನು ಬದಲಿಸುತ್ತದೆ.

ಶನಿ ಕೃಪೆಗೆ ಪಾತ್ರವಾಗಲು ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು? :

ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಬೇಕು. ಇದು ಕರ್ಮ, ಶಿಸ್ತು ಮತ್ತು ಅದೃಷ್ಟದ ಗ್ರಹವೆಂದು ಪರಿಗಣಿಸಲಾದ ಶನಿಯೊಂದಿಗೆ ನೇರವಾಗಿ ನಿಮ್ಮನ್ನು ಸಂಪರ್ಕಿಸುತ್ತದೆ. ಹಾಗಾಗಿ ನೀವು ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವುದು ಸೂಕ್ತ. ಇದು ಶನಿಯ ಶಕ್ತಿಯನ್ನು ಸ್ಥಿರಗೊಳಿಸುತ್ತದೆ. ಮಾನಸಿಕ ಶಾಂತಿ ನಿಮಗೆ ಲಭಿಸುತ್ತದೆ. ಶಿಸ್ತಿನ ಜೀವನ ನಿಮ್ಮದಾಗುತ್ತದೆ. ವೃತ್ತಿಯಲ್ಲಿ ಸ್ಪಷ್ಟತೆ ನಿಮಗೆ ಸಿಗುತ್ತದೆ. ಇಷ್ಟೇ ಅಲ್ಲ ಯಾವುದೇ ಕೆಟ್ಟ, ನಕಾರಾತ್ಮಕ ಕನಸು ಬೀಳುವುದಿಲ್ಲ.

ಈ 6 ರಾಶಿಯವರು ತುಂಬಾ ಅದೃಷ್ಟವಂತರು, ನೀವು ಯಾವುದೇ ವ್ಯವಹಾರ ಮಾಡಿದರೂ ಲಾಭದ ಮಳೆ, ಹಣದ ಹರಿವು

ದಕ್ಷಿಣ ದಿಕ್ಕಿಗೆ ತಲೆಯಿಟ್ಟು ನೀವು ಮಲಗುವುದ್ರಿಂದ ಸಾಡೇ ಸಾತಿ ಅಥವಾ ಶನಿ ದೋಷಗಳಿಂದ ಕಾಡುವ ಸಮಸ್ಯೆ ಕಡಿಮೆ ಆಗಲಿದೆ. ದಕ್ಷಿಣ ದಿಕ್ಕಿಗೆ ನೀವು ತಲೆಯಿಟ್ಟು ಮಲಗುವುದ್ರಿಂದ ಆಂತರಿಕ ಪಕ್ವತೆಯನ್ನು ಅನುಭವಿಸುತ್ತೀರಿ. ಆಧ್ಯಾತ್ಮಿಕ ಬೆಳವಣಿಗೆಯನ್ನು ನೀವು ಕಾಣಬಹುದು.

ರಾತ್ರಿ ಮಲಗುವಾಗ ಈ ಟಿಪ್ಸ್ ಫಾಲೋ ಮಾಡಿ :

ಶನಿದೋಷ, ಶನಿಯ ಕೆಟ್ಟ ದೃಷ್ಟಿಯಿಂದ ನಿಮಗೆ ಮುಕ್ತಿ ಸಿಗಬೇಕು ಅಂದ್ರೆ ಪ್ರತಿ ದಿನ ಮಲಗುವ ವೇಳೆ ಕೆಲ ಉಪಾಯಗಳನ್ನು ಫಾಲೋ ಮಾಡಬೇಕು. ನೀವು ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವ ಜೊತೆಗೆ ಮಲಗುವ ಮೊದಲು ಶನಿ ಮಂತ್ರ ಜಪಿಸಿ. ಓಂ ಶಾನ ಶನೈಶ್ಚರಾಯ ನಮಃ ಮಂತ್ರವನ್ನು 108 ಬಾರಿ ಜಪಿಸುವುದ್ರಿಂದ ಲಾಭವಿದೆ. ಹಾಸಿಗೆ ಕೆಳಗೆ ಕಪ್ಪು ಬಟ್ಟೆ ಅಥವಾ ಕಬ್ಬಿಣದ ಉಂಗುರವನ್ನು ಇಟ್ಟು ಮಲಗುವುದ್ರಿಂದ ಶನಿಗ್ರಹವನ್ನು ಸಮತೋಲನಕ್ಕೆ ತರಬಹುದು. ನೀವು ದಿಂಬಿನ ಕೆಳಗೆ ಟೂರ್ಮ್ಯಾಲಿನ್ ರತ್ನವನ್ನು ಇಡಿ. ಇದನ್ನು ವರ್ಡೆಲೈಟ್ ಎಂದೂ ಕರೆಯುತ್ತಾರೆ. ನೀವು ಯಾವುದೇ ಲೋಹದ ಬೆಡ್ ಬಳಸಬೇಡಿ. ಮರದ ಬೆಡ್ ಮೇಲೆ ಮಲಗಬೇಕು.

ಮಂಗಳ-ರಾಹು ಅಪಾಯಕಾರಿ ಅಂಗಾರಕ ಯೋಗ, ಈ 3 ರಾಶಿಗೆ ಜೀವನದಲ್ಲಿ ಕಷ್ಟ-ನಷ್ಟ

ಈ ಕೆಲ್ಸ ಮಾಡಿದ್ರೆ ಬೆನ್ನು ಹತ್ತುತ್ತಾನೆ ಶನಿ : ಶನಿಗೆ ವಿರುದ್ಧವಾಗಿರುವ ದಿಕ್ಕಿನಲ್ಲಿ ನೀವು ಮಲಗಿದ್ರೆ ಶನಿಕಾಟ ಶುರುವಾಗುತ್ತದೆ. ಉತ್ತರ ದಿಕ್ಕಿಗೆ ಇಲ್ಲವೆ ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ನೀವು ಮಲಗಬಾರದು. ನೀವು ಈ ದಿಕ್ಕಿನಲ್ಲಿ ಮಲಗುವುದ್ರಿಂದ ನಿಮ್ಮ ಒತ್ತಡ ಹೆಚ್ಚಾಗುತ್ತದೆ. ಶೀಘ್ರದಲ್ಲಿ ಲಭಿಸಬೇಕಾಗಿದ್ದ ಯಶಸ್ಸು ವಿಳಂಭವಾಗುತ್ತದೆ. ಶನಿ, ಶಿಕ್ಷೆ ನೀಡುವ ಬದಲು ನಿಮಗೆ ಕಠಿಣ ಪರೀಕ್ಷೆ ನೀಡಿ ನಿಮ್ಮನ್ನು ಸರಿದಾರಿಗೆ ತರುತ್ತಾನೆ.

ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಅನೇಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವ್ಯಾಪಾರದಲ್ಲಿ ಏಳ್ಗೆಯಾಗಬೇಕು ಎನ್ನುವವರು, ಶನಿವಾರ ದೇವಸ್ಥಾನಕ್ಕೆ ತೆರಳಿ ಸಾಸಿವೆ ಎಳ್ಳೆಯನ್ನು ಅರ್ಪಿಸಿ. ಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಹಾಕಿ, ಅರಳಿ ಮರಕ್ಕೆ ಇದನ್ನು ಹಾಕುವುದ್ರಿಂದ ಸುಖ – ಸಮೃದ್ಧಿ ಪ್ರಾಪ್ತಿಯಾಗುತ್ತದೆ.

PREV
Read more Articles on
click me!

Recommended Stories

ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ
ನಿಮ್ಮ ಜನ್ಮರಾಶಿಯ ಗುಪ್ತ ಮಂತ್ರ: ಅದೃಷ್ಟ ಬದಲಿಸುವ ಶಕ್ತಿ!