ರಾಶಿ ಆಧಾರದಲ್ಲಿ ದಾಂಪತ್ಯದಲ್ಲಿ ಕಡಿಮೆಯಿಂದ ಹೆಚ್ಚು ಮೋಸ ಮಾಡುವವರು ಇವರೇ ನೋಡಿ..

By Suvarna News  |  First Published Jun 27, 2022, 10:22 AM IST

ಸಂಬಂಧದಲ್ಲಿ ಮೋಸ ಮಾಡುವ ರಾಶಿಗಳನ್ನು ಆನ್‌ಲೈನ್ ಡೇಟಾ ಆಧಾರದಲ್ಲಿ ಪಟ್ಟಿ ಮಾಡಲಾಗಿದೆ. ಅದರಂತೆ ಕಡಿಮೆಯಿಂದ ಅತಿ ಹೆಚ್ಚು ಮೋಸ ಮಾಡುವ ರಾಶಿಗಳನ್ನು ಕ್ರಮವಾಗಿ ನೀಡಲಾಗಿದೆ. 


ಸ್ಥಿರ ಮತ್ತು ಆರೋಗ್ಯಕರ ಸಂಬಂಧ(relationship)ವನ್ನು ರಚಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ ದುರದೃಷ್ಟವಶಾತ್, ಜನರು ಏಕೆ ಮೋಸ(cheat) ಮಾಡುತ್ತಾರೆ ಎಂಬುದಕ್ಕೂ ಹಲವು ಕಾರಣಗಳಿವೆ. ಮದುವೆಯೊಂದಿಗಿನ ವಿರಸದಿಂದ ಹಿಡಿದು ಹೊಂದಾಣಿಕೆಯಾಗದ ಸೆಕ್ಸ್ ಡ್ರೈವ್‌ಗಳವರೆಗೆ, ನಿರ್ಲಕ್ಷ್ಯದ ಭಾವನೆಯಿಂದ ಹಿಡಿದು ಹಣದ ವಿಷಯದವರೆಗೆ, ಮೋಸಗಾರರಲ್ಲಿ ಹಲವಾರು ವಿವರಣೆಗಳಿರುತ್ತವೆ. ಆದರೆ ಕೆಲ ಜನರು ಇತರರಿಗಿಂತ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಕೆಲ ರಾಶಿಚಕ್ರಕ್ಕೆ ಸೇರಿದವರು ಇತರರಿಗಿಂತ ಹೆಚ್ಚು ವಂಚಕ ಸ್ವಭಾವದವರಾಗಿರುತ್ತಾರೆ. 

ವಿವಾಹೇತರ ಡೇಟಿಂಗ್ ಸೈಟ್ ಅಕ್ರಮ ಎನ್‌ಕೌಂಟರ್‌ಗಳು ತಮ್ಮ ಸದಸ್ಯರಿಂದ ಸಿಕ್ಕಿದ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಇದು ಹೆಚ್ಚಾಗಿ ದಾಂಪತ್ಯದಲ್ಲಿ, ಸಂಬಂಧದಲ್ಲಿ ಮೋಸ ಮಾಡುವ ವಿಷಯವಾಗಿ ರಚಿಸಿದ ಡೇಟಾ. ಅದರ ಆಧಾರದಲ್ಲಿ ಕಡಿಮೆಯಿಂದ ಹೆಚ್ಚು ಮೋಸ ಮಾಡುವ ರಾಶಿಚಕ್ರಗಳನ್ನು(Zodiac signs) ಇಲ್ಲಿ ಪಟ್ಟಿ ಮಾಡಲಾಗಿದೆ. 

Tap to resize

Latest Videos

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಭಾವೋದ್ರಿಕ್ತರು ಮತ್ತು ನಿಷ್ಠಾವಂತರು. ಬಹುಶಃ ಅದಕ್ಕಾಗಿಯೇ ಅವರು ಕೇವಲ 3 ಪ್ರತಿಶತದಷ್ಟು ಮೋಸ ಮಾಡುವ ಸಾಧ್ಯತೆಯಿರುವ ರಾಶಿಚಕ್ರದ ಚಿಹ್ನೆ.

ಕುಂಭ ರಾಶಿ(Aquarius)
ಅಕ್ರಮ ಸಂಬಂಧ ಬಯಸುವ ಬಳಕೆದಾರರ ನೆಲೆಯಲ್ಲಿ ಕುಂಭ ರಾಶಿಯು ಕೇವಲ 4 ಪ್ರತಿಶತ ಭಾಗವನ್ನು ಹೊಂದಿದೆ. ಮುಕ್ತ ಮನೋಭಾವದವರು ಮತ್ತು ವಿಲಕ್ಷಣವಾಗಿರುವವರೂ ಇವರು. ಆದರೂ ಈ ಚಿಹ್ನೆಯು ತಮ್ಮ ಸಂಗಾತಿಗೆ ನಿಷ್ಠರಾಗಿ ಉಳಿಯುತ್ತದೆ.

ಧನು ರಾಶಿ(Sagittarius)
ಕುಂಭ ರಾಶಿಯೊಂದಿಗೆ ಶೇ 4 ಪ್ರತಿಶತದಲ್ಲಿ ಧನು ರಾಶಿಯವರು ಟೈ ಮಾಡಿಕೊಂಡಿದ್ದಾರೆ. ಇವರು ನಿಯಮಗಳು ಮತ್ತು ನಿರ್ಬಂಧಗಳನ್ನು ತಿರಸ್ಕರಿಸಿದರೂ ಪ್ರಾಮಾಣಿಕರೂ ಹೌದು. ಸಂಬಂಧದ ವಿಷಯಕ್ಕೆ ಬಂದಾಗ ಬಹಳ ನಿಷ್ಠೆಯಿಂದಿರುತ್ತಾರೆ.

ಮೇಷದಿಂದ ಕುಂಭದವರೆಗೆ; ಈ ರಾಶಿಯ ಜನರು ಫೋನಿಗೇ ಅಂಟಿಕೊಂಡಿರುತ್ತಾರೆ!

ಮೇಷ ರಾಶಿ(Aries)
ಮೇಷ ರಾಶಿಯು ಸಂಬಂಧದಲ್ಲಿ ಮೋಸ ಮಾಡುವ ಸಾಧ್ಯತೆ ಕೇವಲ ಶೇ. 5. ಈ ಮೂಲಕ ಇವರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಮೇಷ ರಾಶಿಯವರು ಭಾವೋದ್ರಿಕ್ತರಾಗಿದ್ದರೂ, ಸಂಗಾತಿಯ ವಿಚಾರದಲ್ಲಿ ನಿಷ್ಠೆಯುಳ್ಳವರಾಗಿರುತ್ತಾರೆ. ಸಂಗಾತಿಯ ಮೇಲೆ ಕೋಪ ಬಂದಾಗ ಕೂಗಾಡಿ ತಣ್ಣಗಾಗಬಹುದು. ಆದರೆ, ಮೋಸ ಮಾಡುವುದು ಅಪರೂಪ.

ಮೀನ ರಾಶಿ(Pisces)
ಮೀನವು ಆಕರ್ಷಕ, ಪ್ರಣಯಿ ಮತ್ತು ಪರಿಗಣನೆಯುಳ್ಳದ್ದು. ಸಂಬಂಧದಲ್ಲಿ ಇರಬೇಕಾದ ಎಲ್ಲ ಉತ್ತಮ ಗುಣಲಕ್ಷಣಗಳು ಇವರಲ್ಲಿವೆ. ಅಕ್ರಮ ಡೇಟಿಂಗ್ ಬಳಕೆದಾರರಲ್ಲಿ ಅವರು ಕೇವಲ 6 ಪ್ರತಿಶತವನ್ನು ಹೊಂದಿದ್ದಾರೆ.

ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರು ಆದರ್ಶವನ್ನು ನಿರಂತರವಾಗಿ ಬೆನ್ನಟ್ಟುವ ಮೂಲಕ ತಮ್ಮನ್ನು ತಾವು ನೋಯಿಸಿಕೊಳ್ಳಬಹುದು. ಬಹುಶಃ ಅದಕ್ಕಾಗಿಯೇ ಅವರು ಮೀನಕ್ಕಿಂತ ಹೆಚ್ಚು ಮೋಸ ಮಾಡುವ ಸಾಧ್ಯತೆಯಿದೆ.  ವಿವಾಹೇತರ ಡೇಟಿಂಗ್ ಸೈಟ್‌ನಲ್ಲಿ ಅಕ್ರಮ ಸಂಬಂಧಕ್ಕೆ ಹುಡುಕುವವರಲ್ಲಿ ಇವರ ಪಾಲು 8 ಪ್ರತಿಶತ.

ಸಿಂಹ ರಾಶಿ(Leo)
8 ಪ್ರತಿಶತದಲ್ಲಿ ಕನ್ಯಾರಾಶಿಯೊಂದಿಗೆ ಟೈ ಮಾಡಿಕೊಂಡಿರುವುದು ಸಿಂಹ ರಾಶಿ. ಸಂಬಂಧದಲ್ಲಿ ವಂಚಕ ರಾಶಿಚಕ್ರಗಳಲ್ಲಿ ಮಧ್ಯದಲ್ಲಿದೆ ಇದು. ಅವರು ನಿಷ್ಠಾವಂತ ಮತ್ತು ರಕ್ಷಣಾತ್ಮಕರಾದರೂ ಸದಾ ಗಮನವನ್ನು ಬಯಸುವ ಕಾರಣದಿಂದಾಗಿ ತಮ್ಮ ಆತ್ಮವಿಶ್ವಾಸವನ್ನು ಸ್ಥಿರವಾಗಿಟ್ಟುಕೊಳ್ಳಲು ಇಂಥ ಕೃತ್ಯಕ್ಕೆ ಇಳಿಯಬಹುದು. ಬೇರೆಯವರ ಗಮನ ಇವರಿಗೆ ಸಂತೋಷ ನೀಡುತ್ತದೆ. 

ಕರ್ಕಾಟಕ(Cancer)
ಕರ್ಕಾಟಕ ರಾಶಿಯವರು ವಿವಾಹೇತರ ಡೇಟಿಂಗ್ ಸೈಟ್ ಬಳಕೆದಾರರ ಪಾಲಿನಲ್ಲಿ 9 ಪ್ರತಿಶತವನ್ನು ಹೊಂದಿವೆ. ಇದು ಆಶ್ಚರ್ಯಕರವೆನಿಸಬಹುದು, ಏಕೆಂದರೆ ಅವರು ನಿಷ್ಠಾವಂತರು ಮತ್ತು ಬದ್ಧತೆ ಹೊಂದಿದವರು. ಆದರೆ ಅವರು ವಿರುದ್ಧ ಲಿಂಗಿಗಳನ್ನು ಆಕರ್ಷಿಸುವಲ್ಲಿ ಉತ್ತಮರಾಗಿರುವುದು ಇದಕ್ಕೆ ಕಾರಣವಿರಬಹುದು.

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಕೊಳ್ಳೋದು ಅಶುಭ!

ವೃಷಭ ರಾಶಿ(Taurus)
ವೃಷಭ ರಾಶಿಯು ಸಂಬಂಧದಲ್ಲಿ ಮೋಸ ಮಾಡುವ ಸಾಧ್ಯತೆ ಶೇ.11 ಪ್ರತಿಶತದಷ್ಟು. ತೀವ್ರವಾದ ಭೌತಿಕ ಜೀವಿಗಳಾದ ಇವರು, ತಮ್ಮ ಲಾಭಕ್ಕಾಗಿ, ಐಶಾರಾಮಿ ಜೀವನಕ್ಕಾಗಿ ಹೆಚ್ಚು ವಂಚನೆಯ ಮೊರೆ ಹೋಗಬಹುದು. ಆನಂದಕ್ಕೆ ಆದ್ಯತೆ ನೀಡುವ ರಾಶಿಗಳಿವು. 

ಮಕರ ರಾಶಿ(Capricorn)
ಮಕರ ರಾಶಿಯವರು ವಿವಾಹ ಬಾಹ್ಯ ಡೇಟಿಂಗ್ ಆ್ಯಪ್‌ಗಳ ಬಳಸುವ  ವರ್ಗದ ಶೇ. 12 ಪಾಲು ಹೊಂದಿದ್ದಾರೆ. 

ಮಿಥುನ ರಾಶಿ(Gemini)
ಮಿಥುನ ರಾಶಿಯವರು ಎರಡು ಮುಖದವರಪ, ಅಪಕ್ವ, ನಿರ್ದಯ ಮತ್ತು ಮೇಲ್ನೋಟಕ್ಕೆ ಒಳ್ಳೆಯವರಂತೆ ಇರುವವರು. ಅವರು ಗಮನಾರ್ಹವಾದ 14 ಪ್ರತಿಶತದಷ್ಟು ಮೋಸ ಮಾಡುವ ಎರಡನೇ ಅತ್ಯಂತ ಸಂಭವನೀಯ ರಾಶಿಚಕ್ರ ಚಿಹ್ನೆಯಾಗಿದ್ದಾರೆ.

ತುಲಾ ರಾಶಿ(Libra)
ತುಲಾ ರಾಶಿಯವರು ಶೇ.16ರಷ್ಟು ವಿವಾಹ ಬಾಹಿರ ಡೇಟಿಂಗ್ ಆ್ಯಪ್ ಬಳಕೆದಾರರಾಗಿ ಗುರುತಿಸಿಕೊಂಡು, ವಂಚಕ ಸ್ಥಾನದಲ್ಲಿ ಮೊದಲಿಗರಾಗಿದ್ದಾರೆ. 

click me!