ಈ ಬಾರಿ ಕೊರೋನಾ ನಡುವೆಯೇ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವ ಪರಿಸ್ಥಿತಿ ಬಂದೊದಗಿದೆ. ಆದರೆ, 126 ವರ್ಷಗಳ ನಂತರ ಬರುತ್ತಿರುವ ಸೂರ್ಯ ಮತ್ತು ಮಂಗಳ ಯೋಗವು ಹಲವರ ದಿಕ್ಕನ್ನು ಬದಲಿಸಲಿದೆ. ಬಹುತೇಕರಿಗೆ ಶುಭವನ್ನು ನೀಡಿದರೆ, ಕೆಲವೇ ಕೆಲವರಿಗೆ ಸ್ವಲ್ಪ ಕಹಿಯನ್ನು ನೀಡಲಿದೆ. ಆದರೆ, ಇದಕ್ಕೂ ಪರಿಹಾರಗಳು ಇದ್ದು, ಗಣೇಶ ಹಾಗೂ ಸೂರ್ಯೋಪಾಸನೆ ಮಾಡುವುದರಿಂದ ಸಂಕಷ್ಟ ನಿವಾರಣೆಯಾಗಲಿದೆ. ಹಾಗಾದರೆ, ಯಾವ ಯಾವ ರಾಶಿಗಳ ಯೋಗ ಏನಿದೆ ಎಂಬುದನ್ನು ನೋಡೋಣ ಬನ್ನಿ…
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿ ಹಬ್ಬವನ್ನು ಆಚರಿಸುತ್ತೇವೆ. ಗಣೇಶ ಎಂದರೇ ವಿಘ್ನನಿವಾರಕ, ಇಂತಹ ಸಂದರ್ಭದಲ್ಲಿ ಈಗ ಹಬ್ಬದ ಖುಷಿಯಲ್ಲಿ ನಾವಿದ್ದೇವೆ. ಪ್ರಥಮ ಪೂಜಕನಿಂದ ಈ ಬಾರಿ ಹಲವು ರಾಶಿಯವರಿಗೂ ಅದೃಷ್ಟ ಒಲಿದಿದೆ. ಬೇರೆ ಬೇರೆ ರಾಶಿಯವರಿಗೆ ಬೇರೆ ಬೇರೆ ಫಲಗಳು ಈ ಸಂದರ್ಭದಲ್ಲಿ ಲಭಿಸಲಿದೆ.
ಈ ಅದೃಷ್ಟವೇನು ಪ್ರತಿ ವರ್ಷ ಬರುವುದಲ್ಲ. ಬರೋಬ್ಬರಿ 126 ವರ್ಷಗಳ ನಂತರ ಸೂರ್ಯ ಸಿಂಹರಾಶಿಯಲ್ಲಿ, ಮಂಗಳ ಮೇಷರಾಶಿಯಲ್ಲಿ ನೆಲೆಸಿರುತ್ತಾನೆ. ಸೂರ್ಯ ಮತ್ತು ಮಂಗಳ ಗ್ರಹದ ಈ ಯೋಗವು ಇಷ್ಟು ಸುದೀರ್ಘ ಸಮಯದ ಬಳಿಕ ಬರುತ್ತಿದೆ. ಹಾಗಾಗಿ ಇದು ವಿಶೇಷವೇ ಆಗಿದೆ. ಆದರೆ, ಕೆಲವರಿಗೆ ಇದು ಅಡ್ಡಪರಿಣಾಮವನ್ನೂ ಬೀರಲಿದೆ. ಇದರಿಂದ ಇಂತಹ ರಾಶಿಯವರು ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
ಮೇಷ ರಾಶಿ
ಈ ರಾಶಿಯಿಂದ 5ನೇ ಮನೆಯಲ್ಲಿ ಸೂರ್ಯನ ಗೋಚರ ಪ್ರಭಾವದಿಂದ ಹಿಡಿದ ಕೆಲಸವು ವೃದ್ಧಿಯಾಗಲಿದೆ. ಅಂದರೆ ಹೊಸ ಕಾರ್ಯಗಳು ಹಾಗೂ ಯೋಜನೆಗಳು ಫಲಪ್ರದವಾಗಲಿದೆ. ಮೇಷ ರಾಶಿಯವರ ಪರಿವಾರದಲ್ಲಿ ಖುಷಿಯು ಮನೆಮಾಡಲಿದೆ.
ಇದನ್ನು ಓದಿ: ಹಲ್ಲಿನ ಮಧ್ಯೆ ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಏನು ಅರ್ಥ ಅಂತ ಗೊತ್ತಾ..!?
ವೃಷಭ
ಈ ರಾಶಿಯಿಂದ ಸೂರ್ಯನು ನಾಲ್ಕನೇ ಮನೆಯಲ್ಲಿ ಗೋಚರಿಸುವುದರಿಂದ ಕುಟುಂಬದಲ್ಲಿ ಕಲಹವಾಗುತ್ತದೆ. ಸೂರ್ಯನ ಆರಾಧನೆ ಮಾಡುವುದರಿಂದ ಮಾನಸಿಕ ನೆಮ್ಮದಿ ಲಭಿಸಲಿದೆ. ವಾದ-ವಿವಾದಗಳಲ್ಲಿ ಜಯ ಸಿಗಲಿದೆ. ಅರ್ಧಕ್ಕೆ ನಿಂತ ಕೆಲಸಗಳೆಲ್ಲಾ ಪೂರ್ಣವಾಗುವುದು.
ಮಿಥುನ
ಪರಾಕ್ರಮ ಭಾವದಲ್ಲಿ ಸೂರ್ಯ ಗೋಚರವಾಗುವುದರಿಂದ ಈ ರಾಶಿಯವರಲ್ಲಿ ಶಕ್ತಿ ಹೆಚ್ಚಲಿದೆ. ಅಂದರೆ ಶಕ್ತಿಯ ಭಂಡಾರವೇ ಜೊತೆಗಿರುತ್ತದೆ. ಹಾಗಂತ ಇವರು ತಮ್ಮ ಹಠ ಹಾಗೂ ಆವೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡು ನಡೆದರೆ ಯಶಸ್ಸು ಲಭಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.
ಕರ್ಕಾಟಕ
ಧನಭಾವದಲ್ಲಿ ಸೂರ್ಯ ಗೋಚರವಾಗುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಮಾತಿನ ಮೇಲೆ ಹಿಡಿತವನ್ನು ಇವರು ಇಟ್ಟುಕೊಳ್ಳಲೇಬೇಕು. ಹೀಗಾದಲ್ಲಿ ಮಾತ್ರ ತಮ್ಮ ಕೆಲಸದಲ್ಲಿ ಸಫಲತೆಯನ್ನು ಸಾಧಿಸಬಹುದಾಗಿದೆ. ದೊಡ್ಡ ಯೋಜನೆಯು ಫಲಪ್ರದವಾಗುವುದರ ಮೂಲಕ ಮನೆಯಲ್ಲಿ ಖುಷಿ ನೆಲೆಸುವುದು. ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ.
ಸಿಂಹ
ಸಿಂಹ ರಾಶಿಯ ಅಧಿಪತಿಯಾದ ಸೂರ್ಯನು ತನ್ನದೇ ಮನೆಯಲ್ಲಿ ನೆಲಸಿರುವುದು ಈ ರಾಶಿಯವರಿಗೆ ವರದಾನವೇ ಸರಿ. ಆದರೆ, ಇದು ಪರೀಕ್ಷೆಯ ಸಮಯವಾಗಿದೆ. ನಿಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಉಪಯೋಗ ಮಾಡಿಕೊಂಡು ಕೆಲಸ ಮಾಡಬೇಕು. ಗಣೇಶನನ್ನು ಭಕ್ತಿಯಿಂದ ಆರಾಧಿಸಿದರೆ ಮನೋಕಾಮನೆಗಳೆಲ್ಲಾ ಪೂರ್ಣಗೊಳ್ಳುವುದು.
ಕನ್ಯಾ
ಈ ರಾಶಿಯಿಂದ ಹಾನಿ ಭಾವದಲ್ಲಿ ಸೂರ್ಯ ಗೋಚರವಾಗುವುದರಿಂದ ಈ ರಾಶಿಯವರಿಗೆ ಮಿಶ್ರ ಫಲ ಲಭಿಸಲಿದೆ. ಅಂದರೆ ಇವರಿಗೆ ಕಷ್ಟಗಳು ಎದುರಾಗಲಿದ್ದು, ಜೊತೆಗೆ ಸಂಬಂಧಿಕರು ಇಲ್ಲವೇ ಮಿತ್ರರಿಂದ ಅಶುಭ ಸಮಾಚಾರಗಳು ಕೇಳಿಬರುವ ಸಾಧ್ಯತೆ ಇದೆ. ಶ್ರದ್ಧಾಭಕ್ತಿಯಿಂದ ಗಣೇಶನನ್ನು ಪೂಜಿಸಿ, ಆರಾಧಿಸಿದರೆ ಕಷ್ಟ ಕಳೆದು ಸುಖ ಲಭಿಸಲಿದೆ.
ತುಲಾ
ಈ ರಾಶಿಯಿಂಧ ಲಾಭದ ಮನೆಯಲ್ಲಿ ಸೂರ್ಯ ಇರುವುದರಿಂದ ವರದಾನವಾಗಿದ್ದು, ಎಲ್ಲ ಅನಿಷ್ಠಗಳು ಶಮನವಾಗಿ ಶುಭವನ್ನು ತರಲಿದೆ. ಚುನಾವಣೆಗಳಿಗೆ ಸಂಬಂಧಿಸಿದ ಯಾವುದಾದರೂ ನಿರ್ಣಯವನ್ನು ತೆಗೆದುಕೊಳ್ಳುವುದಿದ್ದರೆ ಇದು ಸುಸಂದರ್ಭವಾಗಿದ್ದು, ಅದರಲ್ಲಿ ಸಫಲತೆ ಲಭಿಸಲಿದೆ. ಆದಾಯದಲ್ಲೂ ಉತ್ತಮ ಏಳ್ಗೆಯನ್ನು ಕಾಣಬಹುದಾಗಿದೆ.
ಇದನ್ನು ಓದಿ: ಮುದ್ದು ಮಗುವಿನ ಮೇಲೆ ಕೆಟ್ಟ ಕಣ್‌ದೃಷ್ಟಿ ತಾಕಿದರೆ ಹೀಗೆ ಮಾಡಿ ..
ವೃಶ್ಚಿಕ
ಈ ರಾಶಿಯವರಿಗೂ ಅಧಿಪತಿ ಮಂಗಳ ಗ್ರಹವಾಗಿದ್ದು, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಹಿಡಿದ ಕೆಲಸಗಳೂ ಕೈಗೂಡಲಿವೆ. ಜಮೀನಿಗೆ ಸಂಬಂಧಪಟ್ಟಂತೆ ಲಾಭವಾಗಲಿದೆ ಎಂದು ಹೇಳಲಾಗಿದೆ. ಈ ರಾಶಿಯವರಿಗೆ ಉತ್ತಮ ಸಮಯ ಆರಂಭವಾಗಲಿದೆ.
ಧನು
ಈ ರಾಶಿಯಿಂದ ಭಾಗ್ಯದ ಮನೆಯಲ್ಲಿ ಸೂರ್ಯ ಗೋಚರವಾಗುವುದರಿಂದ ಈ ರಾಶಿಯವರಿಗೆ ಅತ್ಯುತ್ತಮ ಫಲ ಲಭಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗುವುದಲ್ಲದೆ, ಅದೃಷ್ಟವೂ ಇವರ ಕೈ ಹಿಡಿಯಲಿದೆ. ಧರ್ಮಕರ್ಮಗಳ ವಿಷಯಗಳಲ್ಲಿ ಯಾವಾಗಲೂ ಸ್ವಲ್ಪ ಮುಂದಿರುವ ಸ್ವಭಾವದವರಾಗಿರುತ್ತೀರಿ. ಕುಟುಂಬದವರ ನಡುವೆ ಪ್ರೀತಿ ಮತ್ತು ನೆಮ್ಮದಿ ನೆಲೆಸುತ್ತದೆ.
ಮಕರ
ಮಕರ ರಾಶಿಯಿಂದ 8ನೇ ಮನೆಯಲ್ಲಿ ಸೂರ್ಯ ಗೋಚರವಾಗುತ್ತಾನೆ. ಹಾಗಾಗಿ ಈ ರಾಶಿಯವರಿಗೆ ಯಶಸ್ಸು ಲಭಿಸಲಿದೆ. ಯಾವುದಾದರೂ ಪುರಸ್ಕಾರಗಳೂ ಇವರನ್ನು ಹುಡುಕಿಕೊಂಡು ಬರಲಿದೆ. ಇಲ್ಲವೆ, ಕಾರ್ಯಕ್ಷೇತ್ರದಲ್ಲಿ ಗೌರವ ಲಭಿಸುವ ಸಾಧ್ಯತೆ ಇದ್ದರೂ ನಿಮ್ಮವರೇ ನಿಮ್ಮನ್ನು ತುಳಿಯಲು ನೋಡುತ್ತಾರೆ.
ಕುಂಭ
ಈ ರಾಶಿಯಿಂದ 7ನೇ ಮನೆಯಲ್ಲಿ ಸೂರ್ಯ ಗೋಚರವಾಗುತ್ತಾನೆ. ಆದ್ದರಿಂದ ವ್ಯಾಪಾರದಲ್ಲಿ ಉನ್ನತಿಪಡೆಯುತ್ತಾನೆ. ಆದಾಯದಲ್ಲೂ ವೃದ್ಧಿಯಾಗಲಿದೆ. ಆದರೆ, ದಾಂಪತ್ಯ ಜೀವನಕ್ಕೆ ಈ ಯೋಗ ಅಷ್ಟು ಉತ್ತಮವಾಗಿಲ್ಲ ಎಂದು ಹೇಳಲಾಗಿದೆ. ಈ ರಾಶಿಯವರಿಗೆ ಚೌತಿಯ ಸಂದರ್ಭದಲ್ಲಿ ಶುಭ ಸಮಾಚಾರವನ್ನು ಕೇಳುವ ಸಂಭವ ಹೆಚ್ಚಿದೆ.
ಇದನ್ನು ಓದಿ: ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಬಳಿದರೆ ಅದೃಷ್ಟ ಬರುತ್ತೆ…!
ಮೀನ
ಶತ್ರುಭಾವದಲ್ಲಿ ಸೂರ್ಯ ಗೋಚರವಾಗುವುದಾದರೂ ಈ ರಾಶಿಯವರಿಗೆ ಅಲ್ಪ ಲಾಭವೇ ಆಗಲಿದೆ. ಆದರೆ, ಹೆಚ್ಚಿನ ಖರ್ಚು ಮಾಡುವುದರಿಂದ ಆರ್ಥಿಕ ಕಷ್ಟಗಳು ಎದುರಾಗಲಿವೆ. ಲಕ್ಷ್ಮೀ ಮತ್ತು ಗಣೇಶನ ಕೃಪೆ ನಿಮ್ಮ ಮೇಲಿರುವ ಕಾರಣ ಎಲ್ಲ ಕಷ್ಟಗಳು ದೂರಾಗುತ್ತವೆ.