Unlucky Gifts: ವಾಸ್ತು ಪ್ರಕಾರ, ಈ ಉಡುಗೊರೆಗಳು ದುರದೃಷ್ಟ ತರುತ್ತವೆ!

By Suvarna News  |  First Published Feb 8, 2022, 1:26 PM IST

ಉಪ್ಪಿನಕಾಯಿ, ಅಕ್ವೇರಿಯಂ, ಟವೆಲ್, ವ್ಯಾಲೆಟ್.. ಇವೆಲ್ಲ ಸಾಮಾನ್ಯವಾಗಿ ಉಡುಗೊರೆಯಾಗಿ ಕೊಡುವ ವಸ್ತುಗಳೇ. ಆದರೆ, ವಾಸ್ತು ಪ್ರಕಾರ, ಇವೂ ಸೇರಿದಂತೆ ಹಲವು ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದರಿಂದ ಸಮಸ್ಯೆಗಳೇಳುತ್ತವೆ. 


ನಾವು ಸಾಮಾನ್ಯವಾಗಿ ನಮ್ಮ ಪ್ರೀತಿ(love)ಯನ್ನು ವ್ಯಕ್ತಪಡಿಸಲು ಉಡುಗೊರೆಗಳನ್ನು ಕೊಡುತ್ತೇವೆ. ಅದರಲ್ಲೂ ಗೃಹಪ್ರವೇಶ, ಮದುವೆ, ಹುಟ್ಟಿದ ಹಬ್ಬ ಸಮಾರಂಭಗಳಲ್ಲಿ ಉಡುಗೊರೆ(gift) ನೀಡುವುದು ಸಂಪ್ರದಾಯವೇ ಆಗಿಬಿಟ್ಟಿದೆ. ಈ ಸಂದರ್ಭದಲ್ಲಿ ಏನು ಕೊಡಬಹುದು ಎಂದು ಸಾಕಷ್ಟು ತಲೆ ಓಡಿಸಿ ಏನನ್ನೋ ತಂದಿಟ್ಟುಕೊಳ್ಳುತ್ತೇವೆ. ಆದರೆ, ಕೆಲವು ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ದುರದೃಷ್ಟ ಬರುತ್ತದೆ ಎನ್ನುತ್ತದೆ ವಾಸ್ತು. ಹೀಗಾಗಿ ಉಡುಗೊರೆಯ ಆಯ್ಕೆ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ನಿಮಗೆ ವಾಸ್ತು(Vaastu)ವಿನಲ್ಲಿ ನಂಬಿಕೆ ಇಲ್ಲ ಎಂದು ಏನನ್ನೋ ಕೊಂಡಿರೆಂದುಕೊಳ್ಳಿ, ಪಡೆಯುವವರಿಗೆ ನಂಬಿಕೆ ಇದ್ದಾಗ ಅವರದನ್ನು ಬಳಸದೆ ಬಿಸಾಡಬಹುದು. ಯಾವೆಲ್ಲ ವಸ್ತುಗಳನ್ನು ಉಡುಗೊರೆಯಾಗಿ ಕೊಡಬಾರದು ಎಂಬ ವಿವರ ಇಲ್ಲಿದೆ. 

ಟವೆಲ್ ಹಾಗೂ ಕರ್ಚೀಫ್‌ಗಳು(Napkins and Towels)
ಸಾಮಾನ್ಯವಾಗಿ ಗಂಡಸರಿಗೆ ಉಡುಗೊರೆ ಕೊಡುವಾಗ ಶರ್ಟ್ ಪೀಸ್ ಜೊತೆಗೆ ಕರ್ಚೀಫನ್ನೋ, ಟವೆಲ್ಲನ್ನೋ ಇಟ್ಟು ಕೊಡುವ ರೂಢಿಯಿದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಇದು ಖಂಡಿತಾ ಉತ್ತಮ ಆಯ್ಕೆಯಲ್ಲ. ಈ ಉಡುಗೊರೆಯು ಕೊಟ್ಟವರಲ್ಲೂ, ತೆಗೆದುಕೊಂಡವರಲ್ಲೂ ನಕಾರಾತ್ಮಕತೆ ಹೆಚ್ಚಲು ಕಾರಣವಾಗಬಹುದು. ಅದರ ಬದಲಿಗೆ ನಾಣ್ಯವನ್ನು ಇಟ್ಟುಕೊಡುವ ಅಭ್ಯಾಸ ರೂಢಿಸಿಕೊಳ್ಳಿ. 

Tap to resize

Latest Videos

undefined

ನೀರನ್ನು ಹೊಂದಿರುವ ವಸ್ತುಗಳು
ನೀರನ್ನು ಹೊಂದಿರುವ ವಸ್ತುಗಳೆಂದರೆ ಅಕ್ವೇರಿಯಂ, ನೀರು ಜಿನುಗುವ ಬುದ್ಧ, ಇತರೆ ಕಾರಂಜಿ ಹೊರಡಿಸುವ ಅಲಂಕಾರಿಕ ವಸ್ತುಗಳು(Home Decor Gifts) ಇತ್ಯಾದಿ. ಇವೆಲ್ಲ ಮನೆಯನ್ನು ಸುಂದರಗೊಳಿಸುತ್ತವೆ ನಿಜ. ಆದರೆ, ಉಡುಗೊರೆಯಾಗಿ ಕೊಡಲು ಇದು ಸರಿಯಾದ ಆಯ್ಕೆ ಅಲ್ಲ. ನೀರಿನ ವಸ್ತುಗಳು ಪ್ರತಿ ದಿನದ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲೂ ಆರ್ಥಿಕ ನಷ್ಟ(financial loses)ಕ್ಕೆ ಎಡೆ ಮಾಡಿಕೊಡಬಹುದು. ನೀರು ಸದಾ ಚಲನೆಯಲ್ಲಿರುವ ಶಕ್ತಿ. ಅದನ್ನು ಮನೆಯಲ್ಲಿಡುವಾಗ ವಾಸ್ತುವಿನ ನಿಯಮಗಳನ್ನು ಪಾಲಿಸಬೇಕು. ನಿಮ್ಮಿಂದ ಅದನ್ನು ಉಡುಗೊರೆಯಾಗಿ ಪಡೆದವರಿಗೆ ವಾಸ್ತು ನಿಮಯಗಳು ಗೊತ್ತಿಲ್ಲದೆ ಹೋಗಿರಬಹುದು. ಇದರ ಬದಲಿಗೆ ನೀವು ವಿಂಡ್ ಚೈಮ್‌ ಉಡುಗೊರೆಯಾಗಿ ಕೊಡುವುದು ಉತ್ತಮ. 

Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!

ದೇವರ ಮೂರ್ತಿಗಳು(Gods statues)
ಎಲ್ಲ ಹಿಂದೂಗಳ ಮನೆಯಲ್ಲಿ ದೇವರ ಮೂರ್ತಿಗಳಿರುತ್ತವೆ. ಅದನ್ನು ಗೃಹಪ್ರವೇಶಗಳಲ್ಲಿ ಉಡುಗೊರೆಯಾಗಿ ಕೊಡುವವರ ಸಂಖ್ಯೆಯೂ ಸಾಕಷ್ಟಿದೆ. ಆದರೆ, ದೇವರ ಮೂರ್ತಿಗಳು ಉಡುಗೊರೆಯಾಗಿ ಉತ್ತಮವಲ್ಲ. ಆಯಾ ದೇವರ ವಿಗ್ರಹವನ್ನು ಆಯಾ ವಿಧಾನಗಳಿಂದಲೇ ಪೂಜಿಸಬೇಕು, ನಡೆಸಿಕೊಳ್ಳಬೇಕು. ಉಡುಗೊರೆ ಪಡೆದವರಿಗೆ ಅದರ ರೀತಿ ರಿವಾಜು ಗೊತ್ತಿಲ್ಲದಿದ್ದಾಗ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ, ಮುಷ್ಠಿಗಿಂತ ದೊಡ್ಡದಾದ ವಿಗ್ರಹಗಳನ್ನು ದೇವರ ಮನೆಯಲ್ಲಿಟ್ಟು ಪೂಜಿಸುವುದೂ ಶುಭವಲ್ಲ. ಜೊತೆಗೆ, ಮನೆಯಲ್ಲಿ ಬಹಳಷ್ಟು ಗಣೇಶ ಮೂರ್ತಿಗಳಿರಕೂಡದು ಎನ್ನಲಾಗುತ್ತದೆ.. ಇನ್ನೂ ಹಲವಾರು ನಂಬಿಕೆ, ಆಚರಣೆಗಳಿಗೆ ನೀವು ಕೊಡುವ ವಿಗ್ರಹ ಅಡ್ಡಿಯಾಗಬಹುದು. ಹಾಗಾಗಿ, ವಿಗ್ರಹಗಳನ್ನು ಕೊಡಬೇಡಿ. 

ಸ್ಟೇಶನರಿ ವಸ್ತುಗಳು
ಪುಸ್ತಕ, ಪೆನ್ನು, ಪೆನ್ಸಿಲ್ ಸೇರಿದಂತೆ ಸ್ಟೇಶನರಿ ವಸ್ತುಗಳನ್ನು ಸಾಮಾನ್ಯವಾಗಿ ಮಕ್ಕಳ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಕೊಡಲಾಗುತ್ತದೆ. ಇದನ್ನು ಕೊಡುವ ನಿಮ್ಮ ಉದ್ದೇಶ, ದೂರದೃಷ್ಟಿ ಒಳ್ಳೆಯದೇ ಆದರೂ ವಾಸ್ತು ಪ್ರಕಾರ ಇವು ಉತ್ತಮ ಆಯ್ಕೆಗಳಲ್ಲ. ಇದರಿಂದ ನಿಮ್ಮ ಉತ್ತಮ ಕರ್ಮಗಳ ಫಲವನ್ನು ಸಂಪೂರ್ಣ ಮತ್ತೊಬ್ಬರಿಗೆ ದಾಟಿಸಿದಂತಾಗುತ್ತದೆ. ನೀವು ಅದುವರೆಗೆ ಸಾಧಿಸಿದ್ದೆಲ್ಲ ನಷ್ಟವಾಗುತ್ತದೆ. 

Venus-Mars conjunction 2022: ನಿಮ್ಮ ವಿ ಡೇ ಯೋಜನೆಗೆ ಮಂಗಳ- ಶುಕ್ರ ಸಂಯೋಗ ಅಡ್ಡಗಾಲಾಗುವುದೇ?

ಚೂಪಾದ ವಸ್ತುಗಳು(Sharp items)
ನೀವು ಕೊಡುವ ಪಾತ್ರೆ ಪರಡಿಗಳು, ಶೋಕೇಸ್ ವಸ್ತುಗಳು ಚಾಕುವಿನಂತೆ ಚೂಪಾಗಿರಬಹುದು. ಹಾಗಿದ್ದಲ್ಲಿ ಅವು ಸೇರಿದ ಮನೆಯಲ್ಲಿನ ವ್ಯಕ್ತಿಗಳ ಮಧ್ಯೆ ಜಗಳ, ಕದನ ಹೆಚ್ಚಿಸುತ್ತವೆ. ಹಾಗಾಗಿ, ಚೂಪಾದ ವಸ್ತುಗಳನ್ನು ಎಂದಿಗೂ ಉಡುಗೊರೆಯಾಗಿ ನೀಡಬಾರದು. 

ವ್ಯಾಲೆಟ್ಸ್(Wallets)
ಸಾಮಾನ್ಯವಾಗಿ ಯುವಕರಿಗೆ ಉಡುಗೊರೆ ಆಯ್ಕೆ ಮಾಡುವಾಗ ವ್ಯಾಲೆಟ್ ಸುಲಭದ ಆಯ್ಕೆ. ಆದರೆ, ಇದನ್ನು ಉಡುಗೊರೆಯಾಗಿ ಕೊಡಕೂಡದು ಎನ್ನುತ್ತದೆ ವಾಸ್ತು ಶಾಸ್ತ್ರ. ಹಣವನ್ನು ಸಂಗ್ರಹಿಸಲು ಇಡುವ ವಸ್ತುಗಳನ್ನು ಸ್ವತಃ ಕೊಂಡು ಉಪಯೋಗಿಸಬೇಕೇ ಹೊರತು ಉಡುಗೊರೆಯಾಗಿ ಕೊಡಬಾರದು. ಇದರಿಂದ ನಿಮ್ಮ ಧನಾತ್ಮಕ ಆರ್ಥಿಕ ಶಕ್ತಿಯನ್ನು ಮತ್ತೊಬ್ಬರಿಗೆ ದಾಟಿಸಿದಂತಾಗುತ್ತದೆ. 

ಉಪ್ಪಿನಕಾಯಿ(Pickles)
ನಿಮ್ಮ ಪ್ರೀತಿಪಾತ್ರರಿಗೆ ಉಪ್ಪಿನಕಾಯಿ ಹೆಸರು ಕೇಳಿದರೇ ಬಾಯಲ್ಲಿ ನೀರೂರಬಹುದು. ಹಾಗಂಥ ಅವರಿಗೆ ಉಪ್ಪಿನಕಾಯಿ ಉಡುಗೊರೆ ಕೊಡುವುದರಿಂದ ನಿಮ್ಮ ನಡುವೆ ಜಗಳ ಶುರುವಾಗಬಹುದು. ಒಂದು ವೇಳೆ ಕೊಡಲೇಬೇಕೆಂದರೆ ಅವರಿಂದ ಒಂದು ರುಪಾಯಿ ಅಥವಾ 10 ರುಪಾಯಿ ಪಡೆದು ದುಡ್ಡಿಗೆ ಕೊಟ್ಟಂತೆ ಕೊಟ್ಟುಬಿಡಿ. 

click me!