Venus-Mars conjunction 2022: ನಿಮ್ಮ ವಿ ಡೇ ಯೋಜನೆಗೆ ಮಂಗಳ- ಶುಕ್ರ ಸಂಯೋಗ ಅಡ್ಡಗಾಲಾಗುವುದೇ?

By Suvarna News  |  First Published Feb 8, 2022, 12:00 PM IST

ನೀವು ವ್ಯಾಲೆಂಟೈನ್ಸ್ ಡೇಗೆ ಹತ್ತಾರು ಪ್ಲ್ಯಾನ್ ಮಾಡುತ್ತಲೇ ಇರಬಹುದು. ಆದರೆ, ನಿಮ್ಮ ಗ್ರಹಗತಿ ನಿಮ್ಮ ಯೋಜನೆಗೆ ಸಹಕಾರ ನೀಡಲು ಬಯಸಿದೆಯೇ ಅಥವಾ ಉಲ್ಟಾ ಪಲ್ಟಾ ಮಾಡಲು ಹೊಂಚು ಹಾಕುತ್ತಿದೆಯೇ ನೋಡಿ..


ಪ್ರೇಮಿಗಳ ದಿನ(Valentine's Day) ಇನ್ನೇನು ಬಂದೇ ಬಿಟ್ಟಿತು. ಆಗಲೇ ಪ್ರೇಮಿಗಳ ವಾರ ಶುರುವಾಗಿದೆ. ರೋಸ್ ಡೇ ಕಳೆದು ಪ್ರಪೋಸ್ ಡೇ ಬಂದಿದೆ. ಪ್ರೀತಿಯಲ್ಲಿ ಬಿದ್ದವರು ಈಗಾಗಲೇ ನಿಮ್ಮ ಪ್ರೇಮ ವ್ಯಕ್ತಪಡಿಸಲು ಸಾಕಷ್ಟು ತಯಾರಿಯಲ್ಲಿ ತೊಡಗಿರುತ್ತೀರಿ. ಆದರೆ, ಬರುವ ದಿನಗಳ ಬಗ್ಗೆ ನೀವಷ್ಟೇ ಯೋಜನೆ ಹಾಕುತ್ತಿಲ್ಲ. ನಿಮ್ಮ ಗ್ರಹಗತಿಗಳೂ ಯೋಜನೆ ಹಾಕುತ್ತಿವೆ!

ಹೌದು, ಜೀವನದಲ್ಲಿ ನಾವಂದುಕೊಂಡಂತೆ ಎಲ್ಲವೂ ಆಗುವುದಿಲ್ಲ. ಅದಕ್ಕೆ ನಮ್ಮ ರಾಶಿ, ನಕ್ಷತ್ರಕ್ಕೆ ಗ್ರಹಗಳ ಸಾಥ್ ಸಿಗಬೇಕು. ಆಗಷ್ಟೇ ಕನಸು ನನಸಾಗುವುದು. ಈ ಬಾರಿ ವ್ಯಾಲೆಂಟೈನ್ಸ್ ಡೇ ತಯಾರಿ ಮೇಲೆ ಸವಾರಿ ನಡೆಸಲು ಹೊರಟಿರುವುದು ಮಂಗಳ ಹಾಗೂ ಶುಕ್ರ ಗ್ರಹಗಳ ಸಂಯೋಗ(Venus-Mars conjunction). ಈ ಸಂಯೋಗದ ವಿಶೇಷತೆ ಏನೆಂದರೆ ಇವೆರಡೂ ಗ್ರಹಗಳೂ ಪ್ರೀತಿಯ ವಿಚಾರದಲ್ಲಿ ಬಹು ಮುಖ್ಯವಾದವು. ವ್ಯಾಲೆಂಟೈನ್ಸ್ ಡೇ ದಿನದಲ್ಲೇ ತಾವು ಫ್ಲರ್ಟಿಂಗ್ ಮಾಡ ಹೊರಟಿದ್ದಾವೆ ಮಂಗಳ- ಶುಕ್ರ. 

Tap to resize

Latest Videos

undefined

ಶುಕ್ರನು ಸ್ತ್ರೀ ಗುಣ(feminine) ಹೊಂದಿದ್ದು, ಪ್ರೀತಿ, ಸೌಂದರ್ಯ, ಆಕರ್ಷಣೆ, ಲಕ್ಷುರಿಗಳಿಗೆ ಕಾರಣನಾಗಿದ್ದಾನೆ. ಮತ್ತೊಂದೆಡೆ ಮಂಗಳವು ಪುರುಷ ಗುಣ(masculine) ಹೊಂದಿದ್ದು, ಅಧಿಕಾರ, ಧೈರ್ಯ, ಶೌರ್ಯ, ಶಕ್ತಿಗೆ ಕಾರಣವಾಗುತ್ತದೆ. ವಿರುದ್ಧ ಲಿಂಗಿಗಳ ನಡುವೆ ಆಕರ್ಷಣೆ ಸಹಜ. ಇವೆರಡೂ ಗ್ರಹಗಳು ಫೆಬ್ರವರಿ ಆರಂಭದಲ್ಲೇ ಹತ್ತಿರ ಬಂದಿವೆ. ಫೆ.16ರಂದು ಬಹಳ ಸಮೀಪಕ್ಕೆ ಬರುತ್ತವೆ. ಪ್ರತಿ ವರ್ಷ ಇವೆರಡು ಗ್ರಹಗಳ ಸಂಯೋಗ ಹೆಚ್ಚೆಂದರೆ 10 ದಿನಗಳಿರುತ್ತಿತ್ತು. ಆದರೆ,  ಈ ಬಾರಿ ಇವೆರಡರ ಸಂಯೋಗ ಸುಮಾರು 2 ತಿಂಗಳ ಕಾಲ ಇರಲಿದೆ. ಪ್ರೇಮಿಗಳ ಹಬ್ಬದ ತಿಂಗಳಲ್ಲಿ ನಡೆಯುತ್ತಿರುವ ಈ ಎರಡು ಗ್ರಹಗಳ ಸಂಯೋಗ ಪ್ರೀತಿ ಜೀವನದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ನೋಡೋಣ. 

ಮೇಷ(Aries)
ಈ ಸಂಯೋಗವು ನಿಮ್ಮ ಜಾತಕದ 10ನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಮನೆಯು ಉದ್ಯೋಗಕ್ಕೆ ಸಂಬಂಧಿಸಿದ್ದಾಗಿದ್ದು, ನೀವು ಬಹುಷಃ ಉದ್ಯೋಗದ ವಿಷಯದಲ್ಲೇ ಅತಿ ಪ್ರೀತಿ ತಾಳುತ್ತೀರಿ ಅಥವಾ ಉದ್ಯೋಗ ಸ್ಥಳದಲ್ಲಿರುವವರ ಮೇಲೆ ಆಕರ್ಷಣೆ ಹೆಚ್ಚಬಹುದು. ಆದರೆ, ಮಾರ್ಚ್ ಸಮಯದಲ್ಲಿ 11ನೇ ಮನೆಗೆ ಸಂಯೋಗ ತಲುಪುವುದರಿಂದ ನಿಮ್ಮ ಗೆಳೆಯರ(Friends) ಬಳಗದಲ್ಲಿರುವವರೇ ನಿಮ್ಮ ಪ್ರೇಮಿಯಾಗುವ ಸಾಧ್ಯತೆ ಇದೆ. ಅಥವಾ ಸಾಮಾಜಿಕ ಜಾಲತಾಣ(social media)ದ ಮೂಲಕ ಪ್ರೀತಿ ಕಂಡುಕೊಳ್ಳುವ ಸಾಧ್ಯತೆಯೂ ಇದೆ. 

Vastu Shastra : ಈ ವಸ್ತುಗಳನ್ನು ನೆಲದ ಮೇಲಿಟ್ಟು ಆರ್ಥಿಕ ಸಂಕಷ್ಟ ತಂದ್ಕೊಳ್ಬೇಡಿ

ವೃಷಭ(Taurus)
ಇವರಿಗೆ ಮೊಂಡುತನ ಜಾಸ್ತಿ. ಶುಕ್ರ- ಮಂಗಳನ ಸಂಯೋಗವು ನಿಮ್ಮನ್ನು ಕಂಫರ್ಟ್ ಝೋನ್‌ನಿಂದ ಹೊರ ಬರುವಂಥ ಅನುಭವಗಳನ್ನು ನೀಡುತ್ತವೆ. ನಿಮ್ಮ ರಾಶಿಯ 9ನೇ ಮನೆಯಲ್ಲಿ ಸಂಯೋಗವಾಗುತ್ತಿರುವುದರಿಂದ ನಿಮ್ಮ ಯೋಚನೆಗಳು ವಿಸ್ತಾರಗೊಳ್ಳುತ್ತವೆ. ನೀವು ಪ್ರೇಮಿಯೊಂದಿಗೆ ಪ್ರವಾಸ ಹೋಗಬಹುದು ಇಲ್ಲವೇ, ಬೇರೆ ಸಂಸ್ಕೃತಿಯ ಅಥವಾ ದೂರದ ಸ್ಥಳದಲ್ಲಿರುವವರೊಂದಿಗೆ ಪ್ರೀತಿಯಾಗಬಹುದು.  

ಮಿಥುನ(Gemini)
ನಂಬಿಕೆ, ಪಾಲುದಾರಿಕೆಗಾಗಿ ನೋಡುತ್ತಿರುವ ಈ ರಾಶಿಯವರು ಈ ಸಂದರ್ಭದಲ್ಲಿ ಪ್ರೀತಿ ವಿಷಯದಲ್ಲಿ ಹೆಚ್ಚು ಗಂಭೀರರೂ, ಬದ್ಧತೆಯವರೂ ಆಗಲಿದ್ದಾರೆ. ಆದರೆ, ಅದನ್ನು ಪಡೆಯುವ ಸಲುವಾಗಿ ತಮ್ಮನ್ನು ಉತ್ತಮ ಪಡಿಸಿಕೊಳ್ಳುವತ್ತ ಮನಸ್ಸು ಹಾಕುವರು. 

ಕಟಕ(Cancer)
ಜಾತಕದ 7ನೇ ಮನೆ ಸಂಬಂಧಕ್ಕೆ ಸಂಬಂಧಿಸಿದ್ದು. ಅಲ್ಲಿಯೇ ಮಂಗಳ- ಶುಕ್ರ ಸಂಯೋಗ ನಡೆಯುತ್ತಿರುವುದರಿಂದ ಈ ರಾಶಿಗೆ ಪ್ರೇಮಿಗಳ ದಿನ ಬಹಳ ವಿಶೇಷವಾಗಿರಲಿದೆ. ರೊಮ್ಯಾಂಟಿಕ್ ರಿಲೇ‌ಶನ್‌ಶಿಪ್‌ನಲ್ಲಿ ಪ್ರಮುಖ ಬೆಳವಣಿಗೆಗಳನ್ನು ಕಾಣಬಹುದು. ಯಾರಾದರೂ ನಿಮ್ಮ ಹಿಂದೆ ಬಿದ್ದು ಮನಸ್ಸು ಬದಲಾಗಬಹುದು. ಮಾರ್ಚ್ ವೇಳೆಗೆ ನೀವು ಅವರ ವಿಷಯದಲ್ಲಿ ಗಂಭೀರರಾಗಲಿದ್ದೀರಿ. 

ಪರ್ವತದ ಮೇಲಿಂದ ಬಿದ್ದು ಸಾವನ್ನಪ್ಪಿದಳೇ ದ್ರೌಪದಿ? ಪಾಂಚಾಲಿಯ ಕುರಿತ Amazing Facts

ಸಿಂಹ(Leo)
ಈ ತಿಂಗಳಲ್ಲಿ ನೀವು ನಿಮಗೇನು ಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿ ಅದನ್ನು ಪಡೆಯಲು ಸರ್ವ ಪ್ರಯತ್ನ ಹಾಕುವಿರಿ. ಮಾರ್ಚ್ ವೇಳೆಗೆ ಸಂಬಂಧದ ವಿಷಯದಲ್ಲಿ ಹೆಚ್ಚು ಸಂತೋಷದಾಯಕ ಫಲವಿದೆ. 

ಕನ್ಯಾ(Virgo)
ನಿಮ್ಮ ಸೃಜನಶೀಲತೆ ಹಗೂ ಆತ್ಮವಿಶ್ವಾಸ ಹಿಂದೆಂದಿಗಿಂತಲೂ ಹೆಚ್ಚಿರಲಿದೆ. ಹಾಗಾಗಿ, ಒಂಟಿಯಾಗಿರುವವರು ಸಂಬಂಧಕ್ಕೆ ಇಳಿಯುವ ಸಾಧ್ಯತೆಗಳು ಹೆಚ್ಚಿವೆ. 

ತುಲಾ(Libra)
ಶುಕ್ರ- ಮಂಗಳ ಸಂಯೋಗ ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಾಗಲಿದೆ. ಈ ಮನೆ ಕುಟುಂಬ ಹಾಗೂ ಮನೆಗೆ ಸಂಬಂಧಿಸಿದ್ದು. ಹಾಗಾಗಿ, ಈ ಸಂದರ್ಭದಲ್ಲಿ ಹೊಸಬರ ಆಗಮನದಿಂದ ನಿಮ್ಮ ಕುಟುಂಬ ದೊಡ್ಡದಾಗಬಹುದು. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. 

ವೃಶ್ಚಿಕ(Scorpio)
ನೀವು ಹೆಚ್ಚಿನ ಮಾತುಕತೆ ಹೊಂದಿರುವವರ ಮೇಲೆ ಆಕರ್ಷಣೆ ಹುಟ್ಟಲಿದೆ. ಗೆಳೆಯರೇ ಪ್ರೇಮಿಗಳಾಗಬಹುದು. ಮತ್ತೆ ಕೆಲವರಿಗೆ ಸಂಬಂಧದಲ್ಲಿಯೇ ಕೆಲವರ ಮೇಲೆ ಆಸಕ್ತಿ ಹುಟ್ಟಬಹುದು. 

Guidelines For Men: ಧರ್ಮ ಶಾಸ್ತ್ರದ ಪ್ರಕಾರ, ಉತ್ತಮ ಪತಿಯಾದವನ ಆರು ಗುಣಗಳಿವು

ಧನು(Sagittarius)
ಈ ಗ್ರಹಗಳ ಸಂಯೋಗದಿಂದ ನಿಮ್ಮ ವ್ಯಾಲೆಂಟೈನ್ಸ್ ತಿಂಗಳು ಉಡುಗೊರೆ ಹಾಗೂ ಪ್ರೀತಿಯ ಸುರಿಮಳೆಯಿಂದ ತುಂಬಲಿದೆ. 

ಮಕರ(Capricorn)
ನೀವು ಹೊಳೆವ ಸಮಯ ಬಂದೇ ಬಿಟ್ಟಿದೆ. ಈ ತಿಂಗಳು ಉತ್ತಮ ಆತ್ಮವಿಶ್ವಾಸದಿಂದ ಮಾತು, ಪ್ರೀತಿ, ಯೋಚನೆ ಎಲ್ಲದರಲ್ಲೂ ಪ್ರಬುದ್ಧತೆ ಮೆರೆಯುವಿರಿ. ಗಂಭೀರ ಸಂಬಂಧಕ್ಕೆ ಇಳಿಯುವಿರಿ. 

ಕುಂಭ(Aquarius)
12ನೇ ಮನೆಯಲ್ಲಿ ಸಂಯೋಗದ ಪರಿಣಾಮಗಳು ಕಾಣುತ್ತವೆ. ಹಾಗಾಗಿ, ಆಧ್ಯಾತ್ಮ ಭಾವ, 6ನೇ ಇಂದ್ರಿಯದ ಕೆಲಸ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ನೀವು ಒಂಟಿಯಾಗಿರಲು ಬಯಸುವಿರಿ. ಮಾರ್ಚ್‌ನಲ್ಲಿ ಪ್ರೀತಿಯ ವಿಷಯದಲ್ಲಿ ಅಚ್ಚರಿಗಳಿವೆ. 

ಮೀನ(Pisces)
ಈ ಸಂಯೋಗದಿಂದ ನಿಮ್ಮ ಸಾಮಾಜಿಕ ಬದುಕು ಹೆಚ್ಚು ಬ್ಯುಸಿಯಾಗಲಿದೆ. ನಿಮ್ಮ ಗುರಿಗಳಂತೆಯೇ ಗುರಿ ಹೊಂದಿರುವವರು ಸಿಕ್ಕು ಅವರ ಮೇಲೆ ಪ್ರೀತಿಯಾಗಬಹುದು. 

click me!