ವಿವಾಹ ಜೀವನದಲ್ಲಿ ಏರುಪೇರುಗಳು ಸಹಜ. ಆ ಸಂದರ್ಭದಲ್ಲಿ ಸಂಬಂಧ ಚೆನ್ನಾಗಿ ಉಳಿಸಿಕೊಳ್ಳಲು ನಿಮ್ಮ ರಾಶಿಯನ್ವಯ ನೀವೇನು ಮಾಡಬಹುದು?
ಒಮ್ಮೆ ನಮ್ಮ ಪ್ರೀತಿ ನಮಗೆ ಸಿಕ್ಕ ನಂತರ ಹೊಸ ಜೀವನ ಶುರುವಾಗುತ್ತದೆ. ಇಬ್ಬರೂ ಒಟ್ಟಿಗೇ ಜೀವನ ಕಳೆಯುವಾಗ ಕೆಲ ವಿಷಯಗಳಲ್ಲಿ ಸಹಮತ ಇದ್ದರೆ ಮತ್ತೆ ಕೆಲವು ವಿಷಯಗಳಲ್ಲಿ ವಿರೋಧಗಳು ಎದುರಾಗುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಸಂಬಂಧ(relationship)ವೇ ಮುಖ್ಯ, ಯಾವುದೋ ಒಂದು ವಿಷಯವಲ್ಲ ಎಂದು ಅರಿತು ಬ್ಯಾಲೆನ್ಸ್ ಮಾಡುವುದು ಮುಖ್ಯ. ನಿಮ್ಮ ರಾಶಿಯನ್ವಯ ನೀವೇನು ಮಾಡಿದರೆ ವಿವಾಹ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂಬುದನ್ನು ನೋಡಿ, ಅದನ್ನು ಬದುಕಲ್ಲಿ ಅಳವಡಿಸಿ.
ಮೇಷ(Aries)
ಇದು ನಿಮ್ಮ ಸಂಗಾತಿಯನ್ನು ನಂಬಬೇಕಾದ ಸಮಯ. ಅವರಲ್ಲಿ ನಂಬಿಕೆ ಇಡುವುದು ಕೂಡಾ ಅಮೂಲ್ಯ ನೆನಪಾಗಬಲ್ಲದು. ನಿಮ್ಮ ಸುತ್ತ ಕಟ್ಟಿಕೊಂಡಿರುವ ಗೋಡೆ ಕಳಚಿ ಹಾಕಿ ಸಂಗಾತಿಯೊಂದಿಗೆ ಸಂಪೂರ್ಣ ಮನ ಬಿಚ್ಚಿ ಸೇರಿಕೊಳ್ಳಿ. ಇಬ್ಬರ ನಡುವೆ ಬಾರ್ಡರ್ ಬೇಡ. ಯಾವಾಗ ನಿಮ್ಮಿಬ್ಬರ ನಡುವೆ ಮ್ಯಾಜಿಕಲ್ ಇಂಟಿಮಸಿ ಶುರುವಾಗುತ್ತೋ, ಆ ನಂತರದ ಜರ್ನಿಯೇ ವಿಶಿಷ್ಠವಾಗಿರುತ್ತದೆ. ನಿಮ್ಮ ಸಂಗಾತಿಯ ದೃಷ್ಟಿಯಿಂದ ಅವರು ಮಾಡುತ್ತಿರುವ ಕೆಲಸವನ್ನು ಒಮ್ಮೆ ನೋಡಿ. ನಂತರ ತಪ್ಪುಗಳೂ ಸರಿಯಾಗಿಯೇ ಕಾಣಿಸುತ್ತವೆ.
undefined
ವೃಷಭ(Taurus)
ಸಂಬಂಧದಲ್ಲಿ ಇತರರ ಕಾಳಜಿ ವಹಿಸುವ ಮೊದಲು ನಿಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳಿ. ಸಂಬಂಧದಲ್ಲಿದ್ದೂ ನೀವು ಹಸಿವು, ಕೋಪ, ಒಂಟಿತನ ಹಾಗೂ ಸುಸ್ತಿನಿಂದ ಬಳಲುತ್ತಿದ್ದರೆ, ಮೊದಲು ನಿಮ್ಮ ಕಾಳಜಿ(care) ಮಾಡಿಕೊಳ್ಳಿ. ನಿಮ್ಮ ದೈಹಿಕ, ಮಾನಸಿಕ ಸುಸ್ತು ಕಡಿಮೆಯಾದರೆ, ಸಂಬಂಧವನ್ನು ಬೇರೆ ರೀತಿಯಲ್ಲಿ ಕೊಂಡೊಯ್ಯುವ ಶಕ್ತಿ ದೊರಕುತ್ತದೆ.
Daily Pooja At Home: ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ
ಮಿಥುನ(Gemini)
ನಿಮಗೇ ಗೊತ್ತಿಲ್ಲದೆ ಸಂಗಾತಿ(spouse)ಗೆ ನೋವುಂಟು ಮಾಡಿದ್ದೀರಾ? ಅದನ್ನು ಅವರೆದುರು ಪ್ರಾಮಾಣಿಕವಾಗಿ ಹೇಳಿಕೊಳ್ಳಿ. ಸರಿ ಮಾಡಿಕೊಳ್ಳಲು ಬಯಸುತ್ತಿರುವುದಾಗಿ, ಅದಕ್ಕಾಗಿ ಏನು ಮಾಡಬೇಕೆಂದು ಕೇಳಿ. ಇದರಿಂದ ನಿಮ್ಮಿಬ್ಬರ ನಡುವೆ ಸಂವಹನ(communication) ಸುಲಭವಾಗುತ್ತದೆ.
ಕಟಕ(Cancer)
ಎಷ್ಟೇ ನೋವು, ಕಷ್ಟ ಬಂದರೂ ಸಂಗಾತಿಯ ಜೊತೆ ನಿಲ್ಲುವಂಥ ಭರವಸೆ ನೀಡಿ. ಅವರ ಆಪ್ತ ಸಂಬಂಧದಿಂದ ನಿಮ್ಮನ್ನು ನೀವು ಕಂಡುಕೊಳ್ಳಲಿರುವಿರಿ. ಸಂಪೂರ್ಣ ನೀವು ನೀವಾಗಿದ್ದು, ಅವರೊಂದಿಗೆ ನಗು, ಗೆಳೆತನ, ಪ್ರೀತಿ, ಸಮಾನತೆ ಹಂಚಿಕೊಳ್ಳಿ.
ಸಿಂಹ(Leo)
ಎಲ್ಲವನ್ನೂ ನೀವೇ ಮಾಡಬೇಕಾಗಿಲ್ಲ. ನಿಮಗೀಗ ಜೊತೆಯಾಗಿ ಸಂಗಾತಿಯೂ ಇರುವುದನ್ನು ನೆನಪಲ್ಲಿಟ್ಟುಕೊಳ್ಳಿ. ಸಮಸ್ಯೆಗಳನ್ನು ನೀವೊಬ್ಬರೇ ಪರಿಹರಿಸಬೇಕಾಗಿಲ್ಲ. ಅವರಿಗೂ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿ. ಇದರಿಂದ ಅವರಿಗೆ ನಿಮ್ಮೊಂದಿಗೆ ಡೀಪ್ ಕನೆಕ್ಷನ್ ಹೊಂದಲು ಸಹಾಯವಾಗುತ್ತದೆ.
Astrology And Relationship: ಸಂಗಾತಿ ಜೊತೆ ಸರಸ ಹೆಚ್ಚಲು ಸರಳ ಟಿಪ್ಸ್
ಕನ್ಯಾ(Virgo)
ಎಲ್ಲವನ್ನೂ ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ನಿಮ್ಮ ಸಂಗಾತಿ ಹೇಗೆ ಪ್ರತಿಕ್ರಿಯಿಸಬೇಕೆಂದು ನೀವು ನಿಯಂತ್ರಿಸಲು ಹೋಗಬೇಡಿ. ಅವರನ್ನು ಅವರು ಇರುವ ಹಾಗೆಯೇ ಒಪ್ಪಿಕೊಂಡರೆ ನಂತರ ಯಾವ ಸಮಸ್ಯೆಯೂ ನಿಮಗೆ ಸಮಸ್ಯೆ ಎನಿಸುವುದಿಲ್ಲ.
ತುಲಾ(Libra)
ತುಲಾ ರಾಶಿಯವರು ನಿಮ್ಮ ಭಯ, ಆತಂಕ, ಚಿಂತೆಗಳನ್ನು ಬಾಯಿ ಬಿಟ್ಟು ಹೇಳದೆ, ಸಂಗಾತಿಯೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕೆಂದರೆ ಸಾಧ್ಯವಿಲ್ಲ. ಒಮ್ಮೆ ಸಂಗಾತಿಯ ಬಳಿ ಇವೆಲ್ಲವನ್ನೂ ಹೇಳಿಕೊಂಡು ಬಿಟ್ಟರೆ ನಿಮಗೂ ಹಗುರಾಗುತ್ತದೆ, ಅವರೂ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ವೃಶ್ಚಿಕ(Scorpio)
ನಿಮ್ಮ ಕಲ್ಪನೆಯಂತೆಯೇ ನೈಜ ಸಂಬಂಧಗಳಿರುವುದು ಸಾಧ್ಯವಿಲ್ಲ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ನಿಮಗೆ ಗೊತ್ತಿರುವ ವಿಷಯಗಳಾಚೆಯೂ ಸಂಗತಿಗಳು ನಡೆಯುತ್ತವೆ ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ನೋಡಲು ಪ್ರಯತ್ನಿಸಿ.
ಧನು(Sagittarius)
ಸಂಬಂಧದಲ್ಲಿ ಬರೀ ಸುಖವಲ್ಲ, ದುಃಖ, ನೋವು, ಗೊಂದಲ ಎಲ್ಲವನ್ನೂ ಎಂಜಾಯ್ ಮಾಡಲು ಶುರು ಮಾಡಿ. ಇದು ಇರುವುದೇ ಹೀಗೆ, ಇದರಲ್ಲೇ ಸೌಂದರ್ಯವಿದೆ ಎಂಬುದನ್ನು ತಿಳಿಯಿರಿ. ಬಹಳಷ್ಟು ಏರುಪೇರುಗಳನ್ನು ಸಂಗಾತಿಯೊಂದಿಗೆ ನೋಡಿದ್ದೀರಿ. ಇದೀಗ ಅವರೊಂದಿಗಿನ ಈ ಜರ್ನಿ ಅನುಭವ ಸವಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಮಕರ(Capricorn)
ನಿಮ್ಮ ಸುತ್ತಮುತ್ತ ಚೆನ್ನಾಗಿಟ್ಟುಕೊಳ್ಳಿ. ಗೆಳೆಯರನ್ನು ಮರೆಯದಿರಿ. ನಿಮ್ಮೆಲ್ಲ ಮನರಂಜನೆ, ಸಂತೋಷಕ್ಕೆ ಸಂಗಾತಿಯೂ ಪಾಲುದಾರರಾಗುವಂತೆ ಮಾಡಿಕೊಳ್ಳಿ. ನಂತರ ನೀವು ಒಬ್ಬರಿಗೊಬ್ಬರು ಬೆಸ್ಟ್ ಫ್ರೆಂಡ್ ಆಗುವುದರಲ್ಲಿ ಅನುಮಾನವಿಲ್ಲ.
ಕುಂಭ(Aquarius)
ಮಲ್ಟಿಟಾಸ್ಕಿಂಗ್ ಬಿಟ್ಟು ಬಿಡಿ. ಎಲ್ಲದಕ್ಕೂ ಒಟ್ಟೊಟ್ಟಿಗೇ ತಲೆ ಹಾಕಿಕೊಂಡಿರುವುದರಿಂದಲೇ ಸಂಗಾತಿಯೊಂದಿಗೆ ಸಂಪೂರ್ಣ ಕನೆಕ್ಟ್ ಆಗಿರಲು ನಿಮಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಸಂಗಾತಿಯ ಮಾತುಗಳಿಗೆ ಸಂಪೂರ್ಣ ಗಮನ ಕೊಡಿ. ಅದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿ. ಮತ್ತೆಲ್ಲವೂ ಒಳಿತಾಗಲಿದೆ.
ಮೀನ(Pisces)
ನೀವು ಕಳೆದುಕೊಂಡಿದ್ದು, ನೋವುಂಡಿದ್ದು ಸಾಕಷ್ಟಿರಬಹುದು. ಆದರೆ, ಅದರಲ್ಲೇ ಮುಳುಗಿಕೊಂಡಿದ್ದು ಈಗಿರುವುದನ್ನು ಮತ್ತೆ ಕಳೆದುಕೊಳ್ಳಬೇಡಿ. ಕೈಲೇನಿದೆಯೋ ಅದಕ್ಕೆ ಗಮನ ಹರಿಸಿ. ಹಳೆಯ ಎಲ್ಲ ಅನುಭವಗಳಿಂದ ನೀವು ಸ್ಟ್ರಾಂಗ್ ಆಗಿದ್ದೀರಿ. ಅದನ್ನು ನಂಬಿ ವಾಸ್ತವ ಒಪ್ಪಿಕೊಂಡು ನಿಮ್ಮ ಸಂಗಾತಿಯ ಜೊತೆ ಮುನ್ನಡೆಯಿರಿ.