ಪವಾಡ ಪುರುಷ ಸಾಯಿ ಬಾಬಾ ಕುರಿತ Interesting facts

Published : Jan 02, 2022, 05:48 PM IST
ಪವಾಡ ಪುರುಷ ಸಾಯಿ ಬಾಬಾ ಕುರಿತ Interesting facts

ಸಾರಾಂಶ

ಶಿರಡಿ ಸಾಯಿ ಬಾಬಾ ಹೆಸರು ಕೇಳದವರಿಲ್ಲ. ಆದರೆ, ಬಾಬಾ ಕುರಿತ ಈ ಆಸಕ್ತಿಕರ ವಿಷಯಗಳು ಬಹುತೇಕರಿಗೆ ತಿಳಿದಿಲ್ಲ. 

ಶಿರಡಿಯ ಸಾಯಿ ಬಾಬಾ(Sai Baba)ರಿಗೆ ಜಗತ್ತಿನಾದ್ಯಂತ ಭಕ್ತಗಣವಿದೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸಹಾಯ ಮಾಡುತ್ತಾ, ತಾವೂ ಬೆಳೆದು ಇತರರನ್ನೂ ಬೆಳೆಸಬೇಕು ಎಂದು ಸಾರಿದವರು ಸಾಯಿ ಬಾಬಾ. ಧ್ಯಾನ ಹಾಗೂ ಆಧ್ಯಾತ್ಮದ ಶಕ್ತಿಯನ್ನು ಸಾರಿದ ಸಾಯಿಬಾಬಾ ಯಾವುದೇ ಧರ್ಮವನ್ನು ಪ್ರತಿಪಾದಿಸಲಿಲ್ಲ. ಬದಲಿಗೆ ದೇವರೊಬ್ಬನೇ, ಆತ ಸರ್ವಶಕ್ತ ಎಂದರು. ಸಾಯಿ ಬಾಬಾ ಭಕ್ತರು ಅವರ ಆದರ್ಶಗಳು, ಪಾಠಗಳಿಗೆ ಮಂತ್ರ ಮುಗ್ಧರಾಗಿದ್ದಾರೆ. ಇಂಥಾ ಈ ಬಾಬಾ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ.

ನಾಮಧೇಯ
ಸಾಯಿಬಾಬಾ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಅವರ ನಿಜ ನಾಮಧೇಯ(real name) ಖಂಡಿತಾ ಗೊತ್ತಿರಲಿಕ್ಕಿಲ್ಲ. ನಿಮಗಷ್ಟೇ ಅಲ್ಲ, ಯಾರಿಗೂ ಸಾಯಿ ಬಾಬಾ ನಿಜ ಹೆಸರು ತಿಳಿದಿಲ್ಲ. ಅವರ ಮೂಲ ಧರ್ಮವಾಗಲೀ, ಬದುಕಿನ ಮೊದಲ ವರ್ಷಗಳ ಬಗ್ಗೆಯಾಗಲೀ, ಮೂಲ ಹೆಸರಾಗಲೀ ತಿಳಿದವರು ಯಾರೂ ಇಲ್ಲ. ಸನ್ಯಾಸಿಯಾಗಿ ಶಿರಡಿಗೆ ಬಂದರು, ಶಿಷ್ಯವರ್ಗವನ್ನು ಗಳಿಸಿದರು. ಅವರ ಶಿಷ್ಯರು ಅವರನ್ನು ಸಾಯಿ ಬಾಬಾ ಎಂದರು. ಅವರ ಜೀವನದ ಹಿನ್ನೆಲೆ ತಿಳಿದಿಲ್ಲವಾದರೂ ಫಕೀರರೊಬ್ಬರು ತನ್ನ ಬೆಳೆಸಿದ್ದಾಗಿ ಸಾಯಿಬಾಬಾ ಹೇಳಿದ್ದಾರೆ. 

ಕಾಲುಗಳು
ಒಮ್ಮೆ ವಿದೇಶಿಗನೊಬ್ಬ ಸಾಯಿ ಬಾಬಾ ಅವರ ಫೋಟೋ ತೆಗೆಯಲು ಇಚ್ಛಿಸಿದರು. ಆದರೆ, ಬಾಬಾ ಇದಕ್ಕೆ ಮೊದಲು ಒಪ್ಪಲಿಲ್ಲ. ಆದರೆ ವಿದೇಶಿಗ ಹಟ ಬಿಡಲಿಲ್ಲ. ಕಡೆಗೆ ಬಾಬಾ ಕೇವಲ ತಮ್ಮ ಪಾದಗಳ ಫೋಟೋ ತೆಗೆಯಬೇಕೆಂದರು. ಅದಕ್ಕೆ ಒಪ್ಪಿದ ವಿದೇಶಿಗ ಸಾಯಿ ಬಾಬಾ ಅವರ ಪೂರ್ಣ ಚಿತ್ರವನ್ನೇ ಕ್ಲಿಕ್ಕಿಸಿದ. ಆದರೆ, ನಂತರ ಚಿತ್ರವನ್ನು ಡೆವಲಪ್ ಮಾಡಿದಾಗ ಅಲ್ಲಿ ಕೇವಲ ಬಾಬಾ ಕಾಲುಗಳಿದ್ದವು. 

ಪವಾಡಗಳು(miracles)
ಸಾಯಿ ಬಾಬಾ ಪವಾಡಗಳಿಗೆ ಲೆಕ್ಕವಿಲ್ಲ. ಅವರ ಭಕ್ತಗಣ ಹೇಳುವಂತೆ ಗುಣ ಪಡಿಸಲಾಗದ ಕಾಯಿಲೆಗಳನ್ನು ಸುಲಭವಾಗಿ ಗುಣ ಪಡಿಸಿದ್ದಾರೆ. ನೀರಿನಿಂದ ದೀಪ ಹಚ್ಚಿ ತೋರಿದ್ದಾರೆ. ಸಾವಿರಾರು ಜನರ ಜೀವ ಉಳಿಸಿದ್ದಾರೆ.

ಜಗತ್ಪಸಿದ್ದ
ಶಿರಡಿಯ ಸಾಯಿ ಬಾಬಾಗೆ ಕೇವಲ ಭಾರತದಲ್ಲಿ ಮಾತ್ರ ಭಕ್ತಗಣವಿಲ್ಲ. ಜಗತ್ತಿನಾದ್ಯಂತ ಅವರ ಭಕ್ತರಿದ್ದಾರೆ. ದೇಶ ವಿದೇಶಗಲ್ಲಿ ಒಟ್ಟಾರೆ 2000ಕ್ಕೂ ಅಧಿಕ ಸಾಯಿ ಬಾಬಾ ದೇವಾಲಯ(temple)ಗಳಿವೆ. 

ಈಶ್ವರ, ಅಲ್ಲಾ
ಸಾಯಿ ಬಾಬಾ ಯಾವುದೋ ಒಂದು ಧರ್ಮದ ಪ್ರತಿಪಾದಕರಲ್ಲ. ಅವರು ಈಶ್ವರ(Ishwar)ನೂ ಹೌದು, ಅಲ್ಲಾ(Allah)ನೂ ಹೌದೆಂದರು. ದೇವರೊಬ್ಬನೇ. ದೇವರಿದ್ದಾನೆ ಎಂದು ನಂಬಿದರೆ ಸಾಕೆಂದು ಭಕ್ತರಿಗೆ ಹೇಳುತ್ತಿದ್ದರು. ಮಂದಿರ, ಮಸೀದಿ ಎರಡಕ್ಕೂ ಭೇಟಿ ನೀಡಿ ಮಂತ್ರ ಹೇಳುತ್ತಿದ್ದರು. ಇದರಿಂದ ಹಿಂದೂಗಳು ಹಾಗೂ ಮುಸ್ಲಿಮರೆಲ್ಲರೂ ಸಾಯಿ ಬಾಬಾರನ್ನು ದೇವರೆನ್ನುತ್ತಾರೆ. ಸಾಯಿ ದರ್ಬಾರ್‌(Sai Darbar)ನಲ್ಲಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಬೇಧವಿಲ್ಲದೆ, ಎಲ್ಲರನ್ನೂ ಒಂದೇ ರೀತಿ ಕಾಣಲಾಗುತ್ತದೆ. 

Daily Pooja At Home: ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ

ತಪಸ್ಸು
ಸಾಯಿ ಬಾಬಾ ತಮ್ಮ ಬದುಕಿನ ಐದು ವರ್ಷಗಳ ಕಾಲ ಶಿರಡಿಯ ಸುತ್ತಮುತ್ತ ಓಡಾಡುತ್ತಾ, ಬೇವಿನ ಮರ(neem tree)ದ ಕೆಳಗೆ ಧ್ಯಾನಸ್ಥರಾಗಿ ಕೂರುತ್ತಿದ್ದರು. ತಮ್ಮ ಜೀವನದ ಅಂತಿಮ ಉದ್ದೇಶ ಪ್ರೀತಿಯನ್ನು ಹರಡುವುದಾಗಿದೆ ಎಂದು ನಂಬಿದ್ದರು. 

Nostradamus 2022 Prediction: ವಿಶ್ವನಾಯಕರ ಸಾವು, ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ!

ಶಿರಡಿ
ಇಂದಿಗೂ ಕೂಡಾ ಶಿರಡಿಯ ಸಾಯಿ ಬಾಬಾ ಮಂದಿರದಲ್ಲಿ ಬಾಬಾ ಅವರ ಎನರ್ಜಿ ಫೀಲಾಗುತ್ತದೆ. ಪ್ರತಿ ದಿನ ಶಿರಡಿಗೆ 65,000ಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ರಾಮನವಮಿಯ ಸಂದರ್ಭದಲ್ಲಿ ಈ ಸಂಖ್ಯೆ ಬಹಳಷ್ಟು ಏರಿಕೆ ಕಾಣುತ್ತದೆ. 

ಶಿವನ ಅವತಾರ
ಸಾಯಿಬಾಬಾ ಭಕ್ತರಲ್ಲಿ ಅನೇಕರು ಇಂದಿಗೂ ಅವರನ್ನು ಶಿವನ ಅವತಾರವೆಂದೇ ನಂಬುತ್ತಾರೆ. 1918ರಲ್ಲಿ ಬಾಬಾ ವಿಧಿವಶರಾಗುವ ಮುಂಚೆ ತಾವು 8 ವರ್ಷಗಳ ಬಳಿಕ ಒಬ್ಬ ಬಾಲಕನಾಗಿ ಮತ್ತೆ ಬರುವುದಾಗಿ ಹೇಳಿದ್ದರು.

PREV
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!