Navratri 2022: ಹಬ್ಬದ ಸಮಯದಲ್ಲಿ ಈ ಕೆಲಸ ಮಾಡಿದರೆ ಬಡತನ ಎದುರಾಗಬಹುದು, ಎಚ್ಚರ!

By Suvarna News  |  First Published Sep 25, 2022, 11:33 AM IST

ನವರಾತ್ರಿ ಹಬ್ಬದ ಸಮಯದಲ್ಲಿ ಕೆಲ ಕೆಲಸಗಳನ್ನು ತಪ್ಪಿಯೂ ಮಾಡಬಾರದು. ಹಾಗೆ ಮಾಡುವುದರಿಂದ ದುರದೃಷ್ಟ ಎದುರಾಗುತ್ತದೆ, ಬಡತನ ಹಿಂಬಾಲಿಸುತ್ತದೆ ಎನ್ನಲಾಗುತ್ತದೆ. ಯಾವುವು ಆ ನಿಷೇಧಿತ ಕೆಲಸಗಳು?


ನವರಾತ್ರಿಯು ತಾಯಿ ಚಾಮುಂಡೇಶ್ವರಿಗೆ ಸಂಬಂಧಿಸಿದ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ನವರಾತ್ರಿಯ ಸಮಯದಲ್ಲಿ ದೇವಿಯ ಪೂಜೆಯ ಮೂಲಕ ಮುಕ್ತಿಯನ್ನು ಪಡೆಯಬಹುದಾಗಿದೆ. ಈ ವರ್ಷ ಶಾರದೀಯ ನವರಾತ್ರಿಯು ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಲಿದ್ದು, ಇದು ಅಕ್ಟೋಬರ್ 05 ರವರೆಗೆ ಇರುತ್ತದೆ. ನವರಾತ್ರಿಯಲ್ಲಿ ಮಾ ದುರ್ಗೆಯ ಆಗಮನದ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಕೆಲ ಮಾಡಬಾರದ ಕೆಲಸಗಳಿವೆ.. ನೀವು ಆ ಕೆಲಸಗಳನ್ನು ಮಾಡಿದರೆ ಗಂಭೀರ ತೊಂದರೆಗೆ ಸಿಲುಕಬಹುದು. ಹಾಗೆ ಮುಂದಿನ 10 ದಿನಗಳ ಕಾಲ ನೀವು ಮಾಡಬಾರದ ಕೆಲಸಗಳೇನು ನೋಡೋಣ..

ಉಗುರುಗಳನ್ನು ಕತ್ತರಿಸಬೇಡಿ
ಮುಂದಿನ ಏಕಾದಶಿಯವರೆಗೆ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ. ಈ ದಿನಗಳಲ್ಲಿ ಉಗುರನ್ನು ಕತ್ತರಿಸುವುದು ಅಮಂಗಳವಾಗಿದೆ. ಫ್ಯಾಶನ್, ಭೌತಿಕ ಆಸೆಗಳಿಂದ ಪ್ರಲೋಭನೆಗೆ ಒಳಗಾಗಬೇಡಿ ಮತ್ತು ಸರಳ ಜೀವನವನ್ನು ನಡೆಸಿ.

Tap to resize

Latest Videos

ಕೂದಲು ಕತ್ತರಿಸುವುದು
ನವರಾತ್ರಿಯ ಈ ಅವಧಿಯಲ್ಲಿ ಕೂದಲು ಕತ್ತರಿಸಬೇಡಿ. ಉಪವಾಸ ಆಚರಿಸುವ ಜನರು ತಪ್ಪಿಯೂ ಕ್ಷೌರ ಮಾಡಬಾರದು.

ಹೊಲಿಗೆ ಅಥವಾ ಹೆಣೆಯಬೇಡಿ
ಈ ಅವಧಿಯಲ್ಲಿ ಬಟ್ಟೆಗಳು ಮತ್ತಿತರೆ ವಸ್ತುಗಳ ಹೊಲಿಗೆ ಶ್ರೇಯಸ್ಕರವಲ್ಲ. ಸೂಜಿ ದಾರದಿಂದ ದೂರವಿರಬೇಕು. ಹಾಗೆಯೇ ಬುಟ್ಟಿ ಸೇರಿದಂತೆ ಯಾವುದನ್ನಾದರೂ ಹೆಣೆಯುವುದು ಕೂಡಾ ನವರಾತ್ರಿ ಸಮಯದಲ್ಲಿ ನಿಷಿದ್ಧವಾಗಿದೆ.

ಗಾಸಿಪ್ ಮಾಡಬೇಡಿ
ಯಾವುದೇ ದಿನಗಳಲ್ಲೂ ಗಾಸಿಪ್ ಮಾಡುವುದು ಒಳ್ಳೆಯದಲ್ಲ. ಅದರಲ್ಲೂ ಮಾ ದುರ್ಗೆಯ ಹಬ್ಬದ ಸಮಯದಲ್ಲಿ ಮತ್ತೊಬ್ಬರ ಬಗ್ಗೆ ಗಾಸಿಪ್ ಮಾಡಿವುದು, ಸುಳ್ಳು ಹೇಳುವುದು, ಕಟುವಾದ ಪದಗಳ ಬಳಕೆ, ಕೋಪಗೊಳ್ಳುವುದು, ಇತರರಿಗೆ ಶಪಿಸುವುದು- ಇವೆಲ್ಲವನ್ನು ಮಾಡುವುದರಿಂದ ತಾಯಿ ನಿಮ್ಮ ಮನೆಯಿಂದ ಹೊರ ಹೋಗುತ್ತಾಳೆ. ಜೊತೆಗೆ, ನಿಮ್ಮ ದುರ್ನಡತೆಗೆ ಪಶ್ಚಾತ್ತಾಪ ಪಡುವಂತೆ ಮಾಡುತ್ತಾಳೆ. 

Astrology Tips for Wealth: ಸಮೃದ್ಧಿ ಮತ್ತು ಹಣಕಾಸು ಹೆಚ್ಚಿಸುವ ರತ್ನಗಳು ಇವು!

ಜ್ಯೋತಿ ನಂದಲು ಬಿಡಬೇಡಿ
ನವರಾತ್ರಿಯ ಆರಂಭದ ದಿನ ಆಖಂಡ ಜ್ಯೋತಿ ಹಚ್ಚಲಾಗುತ್ತದೆ. ಈ ಜ್ಯೋತಿಯು ಮುಂದಿನ ಒಂಬತ್ತೂ ದಿನಗಳವರೆಗೆ ಉರಿಯುತ್ತಿರುವಂತೆ ನೋಡಿಕೊಳ್ಳಬೇಕು. ಆಗಾಗ ಅದರ ಎಣ್ಣೆ ಮತ್ತು ಬತ್ತಿಯನ್ನು ಪರೀಕ್ಷಿಸಿ ಬೇಕಾದುದನ್ನು ಒದಗಿಸಬೇಕು. ಅಖಂಡ ಜ್ಯೋತಿಯನ್ನು ಯಾವುದೇ ಕಾರಣಕ್ಕೂ ನಂದಲು ಬಿಡಬೇಡಿ. 

ಕಸ ಹಾಕಬೇಡಿ
ನಿಮ್ಮ ಮನೆ ಅಥವಾ ಕನಿಷ್ಠ ಪೂಜಾ ಕೊಠಡಿ/ಸ್ಥಳ ಮತ್ತು ಅಡುಗೆಮನೆಯಲ್ಲಿ ನವರಾತ್ರಿಯ ಸಮಯದಲ್ಲಿ ಕಸ ಹಾಕಬೇಡಿ. ನಿಮ್ಮ ಮನೆಯನ್ನು ವಿಶೇಷವಾಗಿ ಪೂಜಾ ಕೊಠಡಿ/ನಿಮ್ಮ ಅಡುಗೆ ಮನೆಯನ್ನು ಕೊಳಕು ಮಾಡಬೇಡಿ. ಅದನ್ನು ಸ್ವಚ್ಛವಾಗಿಡುವುದರಿಂದ ಧನಾತ್ಮಕ ಶಕ್ತಿಯಿಂದ ತುಂಬಿಕೊಳ್ಳಬಹುದು.

ಮನೆಯಲ್ಲಿ ಚಪ್ಪಲಿ, ಶೂ ಧರಿಸಬೇಡಿ
ಈ ಎಲ್ಲಾ 9 ದಿನಗಳ ಕಾಲ ಮನೆಯಲ್ಲಿ ಸಾಧ್ಯವಾದರೆ ಚಪ್ಪಲಿ, ಬೂಟುಗಳನ್ನು ಧರಿಸಬೇಡಿ. ಈ ಅವಧಿಯಲ್ಲಿ ಚರ್ಮದ ವಸ್ತುಗಳನ್ನು ಬಳಸಬೇಡಿ.

ನಾನ್ ವೆಜ್ ಬೇಡ
ಈ ಶುಭ ಅವಧಿಯಲ್ಲಿ ನಾನ್ ವೆಜ್, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಿ. ಉಪವಾಸ ಮಾಡುತ್ತಿದ್ದರೆ ಸೂರ್ಯಾಸ್ತದ ಮೊದಲು ಸಂಪೂರ್ಣ ಊಟವನ್ನು ಸೇವಿಸಬೇಡಿ. ಈ ಮಂಗಳಕರ ಅವಧಿಯಲ್ಲಿ ಪಿಜ್ಜಾ, ಬರ್ಗರ್ ಅಥವಾ ಫಾಸ್ಟ್ ಫುಡ್ ತಿನ್ನಬೇಡಿ.

ಕೊಳಕು ಬಟ್ಟೆಗಳನ್ನು ಧರಿಸಬೇಡಿ
ನವರಾತ್ರಿಯ ಸಮಯದಲ್ಲಿ ಜನರು ಕೊಳಕು ಬಟ್ಟೆಗಳನ್ನು ಧರಿಸಬಾರದು. ಪ್ರತಿ ದಿನ ಹೊಸದಾದ, ಕನಿಷ್ಠ ಶುಭ್ರ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. 

Navratri 2022: ಹಬ್ಬದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಖಚಿತ!

ಹಗಲಿನಲ್ಲಿ ಮಲಗಬೇಡಿ 
ನವರಾತ್ರಿಯ ಸಮಯದಲ್ಲಿ ಹಗಲಿನಲ್ಲಿ ಮಲಗಬೇಡಿ. ದೂರದರ್ಶನ/ಸುದ್ದಿ/ಧಾರಾವಾಹಿ/ಚಲನಾತ್ಮಕತೆಯನ್ನು ತರುವ ಚಲನಚಿತ್ರಗಳನ್ನು ತಪ್ಪಿಸಿ ಮತ್ತು ಧನಾತ್ಮಕ ಶಕ್ತಿಯನ್ನು ಮಾತ್ರ ಅಳವಡಿಸಿಕೊಳ್ಳುವಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಬ್ರಹ್ಮಚರ್ಯ ಕ್ರಮದಲ್ಲಿರಿ
ನವರಾತ್ರಿಯ ಸಮಯದಲ್ಲಿ ಬ್ರಹ್ಮಚರ್ಯದ ಕ್ರಮದಲ್ಲಿರಿ, ದೈಹಿಕ ಸಂಬಂಧಗಳನ್ನು ಮಾಡುವುದನ್ನು ತಪ್ಪಿಸಿ.

click me!