Zodiac Signs: ಈ ರಾಶಿಗಳವರು ಎಗ್ಗಿಲ್ಲದೇ ಫ್ಲರ್ಟ್ ಮಾಡ್ತಾರೆ

By Suvarna NewsFirst Published Sep 6, 2022, 10:53 AM IST
Highlights

ಫ್ಲರ್ಟ್ ಮಾಡುವುದೆಂದರೆ ಕೆಲವರಿಗೆ ಚಿಟಿಕೆ ಹೊಡೆದಷ್ಟೇ ಸಲೀಸು. ವಿನೋದದ ಮಾತುಗಳನ್ನಾಡುತ್ತ, ಇತರರನ್ನು ಆಕರ್ಷಿಸುತ್ತ, ಖುಷಿಯಾಗಿರುವುದೆಂದರೆ ಇವರಿಗೆ ಇಷ್ಟ. ಫ್ಲರ್ಟಿಂಗ್ ಅನ್ನು ಅತ್ಯಂತ ಸಹಜವಾಗಿ ಮಾಡುವ ಜನರು ಈ ರಾಶಿಗಳಿಗೆ ಸೇರಿರುವ ಸಾಧ್ಯತೆ ಹೆಚ್ಚು.

ಪುರುಷ-ಮಹಿಳೆಯರ ನಡುವೆ ಆಕರ್ಷಣೆ ಸಹಜ. ವಿರುದ್ಧ ಲಿಂಗಿಗಳ ನಡುವೆ ಆಕರ್ಷಣೆ ಇರುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಆದರೆ, ನಾಗರಿಕ ಸಮಾಜದಲ್ಲಿ ನಾವು ಈ ಆಕರ್ಷಣೆಗಳನ್ನು ನಾವು ಕಟ್ಟುಪಾಡಿಗೆ ಒಳಪಡಿಸುತ್ತೇವೆ. ಅಂದರೆ, ವಿವಾಹವಾದ ಬಳಿಕ ಮತ್ತೊಬ್ಬರ ಕುರಿತು ಆಕರ್ಷಣೆ ಉಂಟಾಗದಂತೆ, ಉಂಟಾದರೂ ಅದು ಮಿತಿ ಮೀರದಂತೆ ಎಚ್ಚರಿಕೆ ವಹಿಸುತ್ತೇವೆ. ಏಕೆಂದರೆ, ಬದುಕಿನಲ್ಲಿ ಒಬ್ಬ ಸಂಗಾತಿಯೊಂದಿಗೆ  ಮುಂದುವರಿಯುವ ಆಶಯ ಹೊಂದಿರುತ್ತೇವೆ. ಸಂಗಾತಿಗಳ ನಡುವೆ ನಿಷ್ಠೆ ಇರಬೇಕಾದುದು ಅತ್ಯಂತ ಅಗತ್ಯ. ಯಾವುದೇ ಸಂಬಂಧದ ದೃಢವಾದ ತಳಹದಿಯೇ ಪರಸ್ಪರ ವಿಶ್ವಾಸ, ನಂಬಿಕೆ ಹಾಗೂ ನಿಷ್ಠೆ. ಆದರೂ ಈ ವಿಚಾರದಲ್ಲಿ ಎಲ್ಲರ ಸ್ವಭಾವ ಒಂದೇ ತೆರನಾಗಿ ಇರುವುದಿಲ್ಲ. ಎಲ್ಲೋ ಒಂದೆಡೆ ನಿಷ್ಠೆ, ವಿಶ್ವಾಸದ ಕೊರತೆ ಇದ್ದಿರಬಹುದು. ಅಥವಾ ಅಂಥದ್ದೇನೂ ಸಮಸ್ಯೆ ಇಲ್ಲದಿದ್ದರೂ ಇತರರೊಂದಿಗೆ ಸಲೀಸಾಗಿ ಫ್ಲರ್ಟ್ ಮಾಡುವುದನ್ನು ನೋಡಬಹುದು. ನೀವು ಕೆಲವರನ್ನು ನೋಡಿರಬಹುದು, ಅವರಿಗೆ ಫ್ಲರ್ಟ್ ಮಾಡುವುದು ಅತ್ಯಂತ ಸಲೀಸಿನ ಕೆಲಸ. ವಿನೋದದ ಮಾತುಗಳನ್ನಾಡುತ್ತಲೇ ಇತರರನ್ನು ತಮ್ಮತ್ತ ಆಕರ್ಷಿಸುವ ಗುಣ ಹೊಂದಿರುತ್ತಾರೆ. ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇವರು ವಿವಾಹೇತರ ಸಂಬಂಧವನ್ನೂ ಹೊಂದಿರಬಹುದು. ಹಾಗೆಂದು, ಫ್ಲರ್ಟ್ ಮಾಡುವವರೆಲ್ಲರೂ ಬಾಹ್ಯ ಸಂಬಂಧ ಹೊಂದಿರುವುದಿಲ್ಲ. ಏಕೆಂದರೆ, ಫ್ಲರ್ಟ್ ಮಾಡುವುದು ಅವರಿಗೆ ದೊಡ್ಡ ವಿಚಾರವೇ ಅಲ್ಲ, ತಮ್ಮ ಖುಷಿಗಾಗಿ ಮಾಡುವ ಕ್ರಿಯೆ ಅಷ್ಟೆ. ಅಂತಹ ಜನರನ್ನು ಕೆಲವು ರಾಶಿಗಳಲ್ಲಿ ಕಾಣಬಹುದು.

·        ಧನು (Sagittarius)
ಧನು ರಾಶಿಯ (Zodiac Sign) ಜನ ಸಂಗಾತಿಗೆ (Partner) ಮೋಸ (Cheat) ಮಾಡುವ ಗುಣವನ್ನೇನೂ ಹೊಂದಿರುವುದಿಲ್ಲ. ತಮ್ಮನ್ನು ತಾವು ಭಾರೀ ಇಷ್ಟಪಡುವ ಇವರು ತಮ್ಮ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಮೀಪದ ಬಂಧುಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಫ್ಲರ್ಟ್ (Flirt) ಮಾಡುವುದನ್ನು ತಡೆಯಲು ಇವರಿಂದ ಸಾಧ್ಯವೇ ಆಗುವುದಿಲ್ಲ. ಫ್ಲರ್ಟ್ ಮಾಡುವುದು ಇವರ ಸಹಜ ಗುಣ. ಆದರೆ, ಈ ಸಂಬಂಧವನ್ನು ಮುಂದಿನ ಹಂತಕ್ಕೆ ಒಯ್ಯುವುದಿಲ್ಲ. ತಮಗೆ ಇಷ್ಟವಾಗುವವರು ಎದುರಾದಾಗ ಇವರ ಮುಖ ಅರಿವಿಲ್ಲದೆ ಅರಳುತ್ತದೆ. ಹಿಂದೊಮ್ಮೆ ತಮ್ಮ ಕ್ರಶ್ (Crush) ಆಗಿದ್ದವರು ಸಿಕ್ಕರೆ ಅವರನ್ನು ಪ್ರೀತಿಯಿಂದ, ಖುಷಿ(Happy)ಯಿಂದ ಮಾತನಾಡಿಸುತ್ತಾರೆ. ತಮ್ಮ ಮಾಜಿ ಲವರ್ ಅಥವಾ ಕ್ರಶ್ ಏನು ಮಾಡುತ್ತಿದ್ದಾರೆ ಎಂದು ತಿಳಿಯುವ ಕುತೂಹಲ ಹೊಂದಿರುತ್ತಾರೆ. ಅವರೊಂದಿಗೆ ಅತ್ಯುತ್ತಮ ಸ್ನೇಹವನ್ನೂ (Friendship) ಹೊಂದಬಹುದು. ಹೀಗಾಗಿ, ಧನು ರಾಶಿಯವರ ಸಂಗಾತಿಗೆ ಹೆಚ್ಚು ತಾಳ್ಮೆ ಬೇಕಾಗುತ್ತದೆ.

ಈ ರಾಶಿಯವರು ಶುದ್ಧ ಪೋಲಿಗಳು, ಅನೈತಿಕ ಸಂಬಂಧಕ್ಕೂ ಹೇಸಲ್ಲ!

Latest Videos

·        ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ತಮ್ಮ ಸ್ನೇಹವನ್ನು ಪ್ರೇಮವನ್ನಾಗಿ (Love) ಪರಿವರ್ತನೆ ಮಾಡಿಕೊಳ್ಳಬಲ್ಲರು. ಮಹಿಳೆಯರು (Women), ಪುರುಷರು (Men) ಎನ್ನದೆ ಎಲ್ಲರೊಂದಿಗೂ ಬೆರೆಯುತ್ತಾರೆ. ಮಹಿಳೆಯರೊಂದಿಗೆ ವಿನೋದದ ಮಾತುಗಳನ್ನಾಡುತ್ತ ಕಾಲಕ್ಷೇಪ ಮಾಡಬಲ್ಲರು. ಭಾರೀ ಆಕರ್ಷಣೆ (Attract) ಮಾಡುವ ಗುಣ ಹೊಂದಿರುತ್ತಾರೆ. ಆದರೆ, ಇವರೊಂದಿಗಿನ ಪ್ರೇಮ ಸಾಕಷ್ಟು ಬಾರಿ ದುಃಖಮಯವಾಗುವ ಸಾಧ್ಯತೆ ಅಧಿಕ. 

·        ಮಕರ (Capricorn)
ನೈಸರ್ಗಿಕ ಆಗುಹೋಗುಗಳ ಬಗ್ಗೆ ಅತೀವ ಕುತೂಹಲ ಹೊಂದಿರುವ ಮಕರ ರಾಶಿಯ ಜನ ರೋಮಾಂಟಿಕ್ (Romantic) ಜೀವನಕ್ಕೆ ಆದ್ಯತೆ ನೀಡುತ್ತಾರೆ. ವಿವಾಹವಾಗಿದ್ದರೂ (Marriage) ಅಥವಾ ಈಗಾಗಲೇ ಸಂಗಾತಿ ಹೊಂದಿದ್ದರೂ ಮತ್ತೊಂದು ಸಂಬಂಧ ಮಾಡಿಕೊಳ್ಳಬಲ್ಲರು. ಯಾರಾದರೂ ತಮ್ಮನ್ನು ಗಾಢವಾಗಿ ಇಷ್ಟಪಡುತ್ತಾರೆ ಎಂದಾದರೆ ಅವರನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ವಿನೋದದ ಮಾತುಗಳನ್ನಾಡುತ್ತ ಎಲ್ಲರನ್ನೂ ಸೆಳೆಯಬಲ್ಲರು. ಆದರೆ, ಹೊಸ ಸಂಬಂಧವನ್ನು (Relationship) ಶಾಶ್ವತವಾಗಿ ಉಳಿಸಿಕೊಳ್ಳುವುದಿಲ್ಲ. ಏಕೆಂದರೆ, ತಮ್ಮ ಮೊದಲ ಸಂಬಂಧ ಉಳಿಸಿಕೊಳ್ಳಬೇಕೆಂಬ ಆಶಯ ಹೊಂದಿರುತ್ತಾರೆ. ಹೊಸಬರ ಕುರಿತು ಸಾಕಷ್ಟು ಗೊಂದಲ ಹೊಂದಿರುತ್ತಾರೆ. ಹೀಗಾಗಿ, ಗೊಂದಲಕಾರಿ ಸಂದೇಶಗಳನ್ನೇ ನೀಡುತ್ತಾರೆ. ಹೊಸಬರು ಇವರ ಹಾವಭಾವ ನೋಡಿದರೆ “ತಮ್ಮತ್ತ ಆಕರ್ಷಣೆ ಹೊಂದಿದ್ದಾರೆ’ ಎನ್ನುವ ಭಾವನೆ ಬರುವಂತೆ ವರ್ತಿಸುತ್ತಾರೆ.   

ಈ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾದ ಬಡವ ಸಹ ಸಿರಿವಂತನಾಗಬಹುದು!

 

 

click me!