ನೀವು ಈ ರಾಶಿಗೆ ಸೇರಿದವರಾದ್ರೆ ಅಪ್ಪಿತಪ್ಪಿಯೂ black thread ಕಟ್ಕೋಬೇಡಿ!

By Suvarna NewsFirst Published Sep 6, 2022, 9:56 AM IST
Highlights

ಭಾರತೀಯರ ಕೈಗಳು, ಕಾಲು, ಕತ್ತಲ್ಲಿ ಕಪ್ಪು ದಾರ, ಕೆಂಪು ದಾರ, ಹಳದಿ ದಾರ ಇತ್ಯಾದಿ ವಿವಿಧ ಬಗೆಯ ದಾರಗಳು ಕಾಮನ್. ಕೆಲವರು ದೃಷ್ಟಿಯಾಗಬಾರದೆಂದು ಕಟ್ಟಿಕೊಂಡರೆ ಮತ್ತೆ ಕೆಲವರು ಸಮಸ್ಯೆಗಳಿಂದ ಪಾರಾಗುವ ಪರಿಹಾರವಾಗಿ ಕಟ್ಟುತ್ತಾರೆ.. ಅದರಲ್ಲೂ ಕಪ್ಪು ಬಣ್ಣದ ದಾರ ಹೆಚ್ಚು ಎಫೆಕ್ಟಿವ್ ಎಂಬ ನಂಬಿಕೆ ಇದೆ. ಆದರೆ, ಈ ಕಪ್ಪು ದಾರವನ್ನು ಎರಡು ರಾಶಿಚಕ್ರದವರು ಕಟ್ಟಬಾರದು. ಒಂದು ವೇಳೆ ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ..

ಸಾಮಾನ್ಯವಾಗಿ ಭಾರತೀಯರ ಕೈಗಳಲ್ಲಿ ಕಪ್ಪು ದಾರವಿರುತ್ತದೆ. ಕೆಲವರ ಒಂದು ಕಾಲಲ್ಲಿರುತ್ತದೆ. ಮತ್ತೆ ಕೆಲವರು ಕತ್ತಿನಲ್ಲಿ ಕಟ್ಟಿಕೊಂಡಿರುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಕಪ್ಪು ದಾರ ಕಟ್ಟುವ ಅಭ್ಯಾಸವಿದೆ. ಮಕ್ಕಳಿಗೆ ದೃಷ್ಟಿಯಾಗಬಾರದೆಂದು ಹೇಗೆ ಕಪ್ಪು ಬೊಟ್ಟು ಇಡಲಾಗುತ್ತದೆಯೋ ಹಾಗೆಯೇ ದೊಡ್ಡವರು ದೃಷ್ಟಿಯಾಗಬಾರದೆಂದು ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ದುಷ್ಟ ಶಕ್ತಿಗಳು ಸೋಕಬಾರದೆಂದು ಕಟ್ಟಿಕೊಳ್ಳುತ್ತಾರೆ. ಮತ್ತೆ ಕೆಲವರು ಧೈರ್ಯಕ್ಕಾಗಿ, ಮನಸಿನ ಭಯ ನಿವಾರಣೆಗಾಗಿ, ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಕಟ್ಟಿಕೊಳ್ಳುತ್ತಾರೆ. ಅಪರೂಪಕ್ಕೆ ಕೆಲವರು ಅಲಂಕಾರಿಕವಾಗಿಯೂ ಧರಿಸುತ್ತಾರೆ. 

ಜ್ಯೋತಿಷ್ಯದಲ್ಲಿ, ಕಪ್ಪು ಬಣ್ಣವು ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಗಳಿಂದ ಮತ್ತು ವಿಶೇಷವಾಗಿ ದುಷ್ಟ ಕಣ್ಣು(evil eye)ಗಳಿಂದ ರಕ್ಷಿಸುತ್ತದೆ. ಕಪ್ಪು ಬಣ್ಣವು ನೋಡುವವರ ಮನಸ್ಸನ್ನು ವಿಚಲಿತಗೊಳಿಸಿ, ಅವರ ದೃಷ್ಟಿಯಿಂದಾಗಬಹುದಾದ ಕೆಟ್ಟ ಪರಿಣಾಮಗಳಿಂದ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಕಪ್ಪು ಶನಿಯ ಬಣ್ಣವಾಗಿದೆ. ಹೀಗಾಗಿ, ಶನಿಯ ಆಶೀರ್ವಾದಕ್ಕಾಗಿಯೂ ಇದನ್ನು ಧರಿಸಲಾಗುತ್ತದೆ. 

ಆದರೆ ಕಪ್ಪು ದಾರವು ಎಲ್ಲರನ್ನೂ ಕಟ್ಟಬಾರದು ಎಂದು ನಿಮಗೆ ತಿಳಿದಿದೆಯೇ? ಅಷ್ಟೇ ಅಲ್ಲ, ಕಪ್ಪು ದಾರ ಕಟ್ಟುವಾಗ ಯಾವ ಕಾಲಿಗೆ ಅಥವಾ ಕೈಗೆ ಕಟ್ಟಬೇಕೆಂಬ ವಿಷಯ ಕೂಡಾ ತಿಳಿದಿರಬೇಕು. 

ದೀಪಾವಳಿಯಂದೇ ಸೂರ್ಯಗ್ರಹಣ! ಹಬ್ಬ ಮಾಡ್ಬೋದಾ?

ಈ ಎರಡು ರಾಶಿಯವರು ಕಟ್ಟಬಾರದು!
ಹೌದು, ಜ್ಯೋತಿಷ್ಯದ ಪ್ರಕಾರ ಎರಡು ರಾಶಿಗಳು ಅಪ್ಪಿತಪ್ಪಿಯೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಏಕೆಂದರೆ, ಇದು ಅವರಿಗೆ ಒಳಿತು ಮಾಡುವುದಕ್ಕಿಂತ ಹೆಚ್ಚಾಗಿ ಕೆಡುಕನ್ನುಂಟು ಮಾಡುತ್ತದೆ. ಮೇಷ ಮತ್ತು ವೃಶ್ಚಿಕ ರಾಶಿಯ ಎರಡು ರಾಶಿಗಳ ಜನರು ಕಪ್ಪು ದಾರವನ್ನು ಧರಿಸಬಾರದು. ಇದರ ಹಿಂದಿನ ಕಾರಣ ಏನು ಗೊತ್ತಾ?

ಮೇಷ ರಾಶಿ(Aries)
ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಷ ರಾಶಿಯ ಅಧಿಪತಿ ಮಂಗಳ. ಮಂಗಳ ಗ್ರಹದ ಬಣ್ಣ ಕೆಂಪು. ಅದಕ್ಕೆ ಕಪ್ಪು ಬಣ್ಣ ಇಷ್ಟವಿಲ್ಲ. ಹಾಗಾಗಿ ಮೇಷ ರಾಶಿಯ ಜನರು ಕಪ್ಪು ಬಣ್ಣದ ದಾರ ಧರಿಸಿದರೆ, ಅವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತವೆ. ಕುಜದ ಕೋಪ ಎದುರಿಸಬೇಕಾಗುತ್ತದೆ. ಕಪ್ಪು ದಾರವು ಮೇಷ ರಾಶಿಯ ಜನರ ಜೀವನದಲ್ಲಿ ಚಡಪಡಿಕೆ, ದುಃಖ ಮತ್ತು ವೈಫಲ್ಯವನ್ನು ಉಂಟುಮಾಡಬಹುದು.

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯ ಅಧಿಪತಿಯೂ ಮಂಗಳ. ಆದ್ದರಿಂದ, ಈ ರಾಶಿಚಕ್ರದ ಜನರು ಕೂಡಾ ಕಪ್ಪು ಬಣ್ಣದ ದಾರ ಧರಿಸಬಾರದು. ಕಪ್ಪು ಬಣ್ಣವು ಸ್ಕಾರ್ಪಿಯೋ ರಾಶಿಚಕ್ರದ ಜೀವನದಲ್ಲಿ ತೊಂದರೆಗಳನ್ನು ತರಬಹುದು. ಆದ್ದರಿಂದ, ವೃಶ್ಚಿಕ ರಾಶಿಯ ಜನರು ಕಪ್ಪು ಬಣ್ಣವನ್ನು ಬಳಸುವುದನ್ನು ತಪ್ಪಿಸಬೇಕು. ಕಪ್ಪು ದಾರವು ಇವರ ಜೀವನದಲ್ಲಿ ಬಡತನಕ್ಕೆ ಕಾರಣವಾಗಬಹುದು.

ಯಾರು ಧರಿಸಬೇಕು?
ಜ್ಯೋತಿಷ್ಯದಲ್ಲಿ, ತುಲಾ(Libra), ಮಕರ(Capricorn) ಮತ್ತು ಕುಂಭ ರಾಶಿ(Aquarius)ಯ ಜನರು ಕಪ್ಪು ದಾರವನ್ನು ಧರಿಸಬೇಕು ಎನ್ನಲಾಗುತ್ತದೆ. ತುಲಾ ರಾಶಿಯು ಶನಿ ದೇವನ ಉತ್ಕೃಷ್ಟ ಚಿಹ್ನೆ, ತುಲಾ ರಾಶಿಯವರಿಗೆ ಶನಿಯ ಪ್ರಭಾವವು ಉತ್ತಮವಾದ ಕಾರಣ, ಕಪ್ಪು ದಾರವನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ. ಮಂಗಳವಾರದಂದು ತುಲಾ ರಾಶಿಯ ವ್ಯಕ್ತಿಯು ತನ್ನ ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಿದರೆ, ಆಗ ಲಕ್ಷ್ಮಿ ಅವನ ಮನೆಗೆ ಬರಲು ಪ್ರಾರಂಭಿಸುತ್ತಾಳೆ. ಇನ್ನು ಮಕರ ಮತ್ತು ಕುಂಭ ರಾಶಿಯನ್ನು ಆಳುವ ಗ್ರಹ ಶನಿ. ಶನಿಯ ಬಣ್ಣ ಕಪ್ಪು. ಹಾಗಾಗಿ, ಈ ರಾಶಿಯವರು ಕಪ್ಪು ದಾರವನ್ನು ಧರಿಸುವುದು ವರವೆಂದು ಪರಿಗಣಿಸಲಾಗುತ್ತದೆ. ಕಪ್ಪು ದಾರ ಧಾರಣೆಯಿಂದ ಇವರಿಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಕರಗಿ ಪ್ರಗತಿ ಕಾಣಬಹುದು. 

Love Compatibility: ಮೇಷಕ್ಕೂ ಸಿಂಹಕ್ಕೂ ಜೋಡಿಯಾದ್ರೆ ಹೊಂದಾಣಿಕೆ ಇರುತ್ತಾ?

ಯಾವ ಕಾಲಿಗೆ ಕಟ್ಟಬೇಕು?
ಜ್ಯೋತಿಷ್ಯದ ಪ್ರಕಾರ, ಮಹಿಳೆಯರು ಕಪ್ಪು ದಾರವನ್ನು ತಮ್ಮ ಎಡಕಾಲಿಗೆ ಕಟ್ಟಿಕೊಳ್ಳಬೇಕು. ಪುರುಷರು ಬಲಗಾಲಿಗೆ ಕಟ್ಟಿಕೊಳ್ಳಬೇಕು.

click me!