ಐಷಾರಾಮಿ ವಸ್ತುಗಳಿಗೆ ಹುಚ್ಚಾರಾಗೋ ರಾಶಿಗಳಿವು, ಸದಾ ಅದರದ್ದೇ ಧ್ಯಾನ ಇವರಿಗೆ!

By Suvarna NewsFirst Published Dec 12, 2022, 4:58 PM IST
Highlights

ದುಬಾರಿ, ಐಷಾರಾಮಿ ವಸ್ತುಗಳನ್ನು ಖರೀದಿಸುವ ಆಸೆ ಬಹಳಷ್ಟು ಜನರಲ್ಲಿದ್ದರೂ ಎಲ್ಲರೂ ಆ ಧೈರ್ಯ ಮಾಡುವುದಿಲ್ಲ. ಆದರೆ, ಕೆಲವು ಜನ ತಮ್ಮ ದುಡಿಮೆಯ ಬಹುಪಾಲನ್ನು ಐಷಾರಾಮಿ ವಸ್ತುಗಳಿಗೆ ಸುರಿಯಲು ಹಿಂದೆಮುಂದೆ ನೋಡುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾಲ್ಕು ರಾಶಿಗಳಲ್ಲಿ ಈ ಗುಣ ಕಂಡುಬರುತ್ತದೆ. 
 

ರಾಶಿಚಕ್ರಗಳು ಮನುಷ್ಯರ ವ್ಯಕ್ತಿತ್ವದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಪ್ರತಿಯೊಬ್ಬರ ರೂಪ, ಸ್ವಭಾವ, ವರ್ತನೆ, ಇನ್ನೊಬ್ಬರಿಗೆ ಅವರು ಸ್ಪಂದಿಸುವ ರೀತಿ, ಪ್ರೀತಿ-ಪ್ರೇಮದ ಸಂಗತಿಗಳು, ಮಾನಸಿಕ ಸ್ಥಿತಿಗತಿ ಇತ್ಯಾದಿಗಳ ಮೇಲೆ ರಾಶಿಚಕ್ರದ ಪ್ರಭಾವಗಳು ಅತ್ಯಧಿಕ. ಹೀಗಾಗಿ, ವಂಶವಾಹಿಗಳ ಪ್ರಭಾವಕ್ಕೂ ಮಿಗಿಲಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಕೆಲವು ರಾಶಿಗಳ ವ್ಯಕ್ತಿಗಳು ಸಿಂಪಲ್‌ ಜೀವನವನ್ನು ಇಷ್ಟಪಟ್ಟರೆ, ಕೆಲವರು ಅದ್ದೂರಿಯ, ಆಡಂಬರದ, ಲೋಲುಪ್ತಿಯ ಜೀವನಶೈಲಿಯನ್ನು ಅನುಸರಿಸುತ್ತಾರೆ. ವಸ್ತುಗಳನ್ನು ಬೇಕಾಬಿಟ್ಟಿ ಖರೀದಿ ಮಾಡುವುದು, ಪ್ರದರ್ಶನ ಮಾಡುವುದು, ದುಬಾರಿ ವಸ್ತುಗಳನ್ನು ಖರೀದಿಸಿ ತೃಪ್ತಿ ಪಡುವುದು ಇಂತಹ ಹಲವಾರು ಗುಣಗಳನ್ನು ಕೆಲವು ರಾಶಿಗಳ ಜನ ಹೊಂದಿರುತ್ತಾರೆ. ವಿವಿಧ ದುಬಾರಿ ವಸ್ತುಗಳನ್ನು ತಮ್ಮದಾಗಿಸಿಕೊಂಡರೆ ಅವರಿಗೆ ತೃಪ್ತಿ. ಅದರಲ್ಲೇ ಜೀವನಕ್ಕೊಂದು ಅರ್ಥ ಕಾಣುತ್ತಾರೆ. ಸಾಕಷ್ಟು ಸಾಮಾನ್ಯ ಜನರಿಗೆ ದುಬಾರಿ ವಸ್ತು ಖರೀದಿಸುವ ಧೈರ್ಯ ಇರುವುದಿಲ್ಲ. ಆದರೆ, ಇವರಿಗೆ ಹಾಗಲ್ಲ. ತಮ್ಮ ಬಳಿ ಹಣ ಎಷ್ಟೇ ಇರಲಿ, ದುಬಾರಿ ವಸ್ತುಗಳನ್ನು ಖರೀದಿಸುವುದರಲ್ಲಿ ಎಲ್ಲಿಲ್ಲದ ಧೈರ್ಯ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳಲ್ಲಿ ಈ ಗುಣ ದಟ್ಟವಾಗಿ ಕಂಡುಬರುತ್ತದೆ.

•    ಕುಂಭ (Aquarius)
ಕುಂಭ ರಾಶಿಯ (Zodiac Sign) ಜನ ವಿಭಿನ್ನವಾದ ವಸ್ತುಗಳ (Trending Things) ಸಂಗ್ರಹ ಮಾಡುವುದರಲ್ಲಿ ಎತ್ತಿದ ಕೈ. ದುಂದುವೆಚ್ಚ (Extravagant) ಮಾಡುವುದನ್ನು ನಿಯಂತ್ರಿಸಿಕೊಳ್ಳುವುದು ಇವರಿಂದ ಸಾಧ್ಯವಿಲ್ಲ. ಹೊಸ (New) ಹಾಗೂ ವಿನೂತನ ವಸ್ತುಗಳ ಸಂಗ್ರಹ ಮಾಡುವ ಇಚ್ಛೆ ಇವರಲ್ಲಿ ಎಂದೂ ಕೊನೆಯಾಗುವುದಿಲ್ಲ. ದುಬಾರಿ (Costly) ವಸ್ತುಗಳನ್ನು ಖರೀದಿಸಲು ಶಾಪಿಂಗ್‌ (Shoping) ಮಾಡುವುದೆಂದರೆ ಇಷ್ಟಪಡುತ್ತಾರೆ. ಎಕ್ಸ್‌ ಟ್ರಾಆರ್ಡಿನರಿ (Extraordinary) ಎನ್ನಬಹುದಾದ ವಸ್ತುಗಳನ್ನು ಆಯ್ಕೆ ಮಾಡುವುದರಲ್ಲಿ ಮುಂದಿರುತ್ತಾರೆ. 

Astrology Tips: ಮಂತ್ರಕ್ಕಿದೆ 108ರ ನಂಟು

•    ಮೀನ (Pisces)
ಅಪಾರ ಕ್ರಿಯಾಶೀಲತೆ (Creative) ಹಾಗೂ ಕಲ್ಪನಾಶಕ್ತಿಯುಳ್ಳ (Imaginative) ಮೀನ ರಾಶಿಯ ಜನ ಕನಸು (Dream) ಕಾಣುವುದರಲ್ಲೂ ಮುಂದಿರುತ್ತಾರೆ. ಕೆಲವು ವಸ್ತುಗಳನ್ನು ಅವು ದುಬಾರಿಯಾದರೂ ಸರಿ, ಖರೀದಿಸಬೇಕೆಂದು ಕನಸು ಕಾಣುತ್ತಾರೆ. ಅದನ್ನು ಈಡೇರಿಸಿಕೊಳ್ಳಲು ಶಕ್ತಿಮೀರಿ ಯತ್ನಿಸುತ್ತಾರೆ. ಕಲಾತ್ಮಕ (Artistic) ವಸ್ತುಗಳ ಸಂಗ್ರಹ ಹೊಂದಿರುತ್ತಾರೆ. ಅತ್ಯುತ್ತಮ ಹಾಗೂ ರಾಯಲ್‌ (Royal) ಎನಿಸಬಹುದಾದ ವಸ್ತುಗಳು ಇವರಲ್ಲಿ ಭಾರೀ ಉತ್ಸಾಹ ತುಂಬುತ್ತವೆ. ಶಾಪೊಹಾಲಿಕ್ಸ್‌ (Shopaholics) ಎನ್ನಬಹುದಾದ ವ್ಯಕ್ತಿತ್ವ ಇವರದ್ದು. ಸಿಕ್ಕಾಪಟ್ಟೆ ಹಣ (Money) ವ್ಯಯ ಮಾಡಿದ ಬಳಿಕ, ಬೇಡವಾದುದನ್ನೆಲ್ಲ ಕೊಂಡ ನಂತರ ಸಾಕಷ್ಟು ಬಾರಿ ಪಶ್ಚಾತ್ತಾಪ (Regret) ಪಡುತ್ತಾರೆ.

 ವೃಷಭ ರಾಶಿಗೆ ವರ್ಷ 2023ರಲ್ಲಿ ಅಂದುಕೊಂಡಿದ್ದೆಲ್ಲ ಆಗುವುದೇ?

•    ಸಿಂಹ (Leo)
ಅಧಿಕ ಮೌಲ್ಯದ (Heavy) ಪ್ರೈಸ್‌ ಟ್ಯಾಗ್‌ (Price Tag) ಇರುವ ವಸ್ತುಗಳನ್ನು ಖರೀದಿ ಮಾಡುವುದು ಸಿಂಹ ರಾಶಿಯ ಜನರ ಅಭ್ಯಾಸ. ಎಲ್ಲಿಗೇ ಹೋದರೂ ಅತ್ಯುತ್ತಮವಾದ ಹಾಗೆಯೇ ಅತಿಹೆಚ್ಚು ದರ ಇರುವ ಬಟ್ಟೆ, ಶೂ, ವಾಚ್‌ ಗಳೇ ಇವರ ಕಣ್ಣಿಗೆ ಬೀಳುತ್ತವೆ. ಸಾಧಾರಣವಾದುದನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ತಾವು ಯಾವಾಗಲೂ ಜನರ ಆಸಕ್ತಿಯ ಕೇಂದ್ರಬಿಂದು (Centre) ಆಗಿರಬೇಕು ಎನ್ನುವುದು ಇವರ ಬಯಕೆ. ಅದಕ್ಕಾಗಿ ಇಷ್ಟೆಲ್ಲ ಹೂಡಿಕೆ (Invest) ಮಾಡುತ್ತಾರೆ. ದುಬಾರಿ ಗ್ಲಾಮರಸ್‌ ವಸ್ತುಗಳನ್ನು ಖರೀದಿಸುವುದು ಭಾರೀ ಇಷ್ಟ. ಅವುಗಳನ್ನು ತಮ್ಮದಾಗಿಸಿಕೊಂಡರೆ ಸಖತ್‌ ಖುಷಿ (Happy) ಪಡುತ್ತಾರೆ.

•    ವೃಷಭ (Taurus)
ದುಬಾರಿ ವಸ್ತುಗಳನ್ನು ಖರೀದಿಸುವಲ್ಲಿ ವೃಷಭ ರಾಶಿಯವರಿಗೂ ಸಾಕಷ್ಟು ಆಸಕ್ತಿ (Interest) ಇರುತ್ತದೆ. ತಮಗೆ ಹೊಂದುವ, ಕಂಫರ್ಟ್‌ ಎನಿಸುವ ಲಕ್ಸುರಿ (Luxury) ವಸ್ತುಗಳನ್ನು ಪಡೆಯಲೇ ಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಲಕ್ಸುರಿ ವಸ್ತುಗಳಿದ್ದರೆ ಬದುಕಿಗೆ ಅರ್ಥ ಎಂದು ಭಾವಿಸುತ್ತಾರೆ. ದುಬಾರಿ ವಸ್ತುಗಳನ್ನು ಕೊಳ್ಳುವಾಗ ಎರಡನೇ ಯೋಚನೆ ಮಾಡುವುದಿಲ್ಲ. ವೃಷಭ ರಾಶಿಯ ಜನ ಶ್ರಮಜೀವಿಗಳಾಗಿದ್ದು, ತಮ್ಮ ದುಡಿಮೆಯ ಬಹುಪಾಲನ್ನು  ಐಷಾರಾಮಿ (Lavish) ವಸ್ತುಗಳ ಖರೀದಿಗೆ ವಿನಿಯೋಗಿಸುತ್ತಾರೆ. 

click me!