Planets Astrology : ಮಸಾಲೆ ಸರಿಯಾಗಿ ಬಳಸಿದ್ರೆ ಕಡಿಮೆಯಾಗುತ್ತೆ ಜಾತಕ ದೋಷ

By Suvarna NewsFirst Published Dec 12, 2022, 3:52 PM IST
Highlights

ಜಾತಕದಲ್ಲಿ ಗ್ರಹಗಳ ದೋಷಗಳನ್ನು ನಾವು ನೋಡ್ತೆವೆ. ಇದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಗ್ರಹ ದೋಷದಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಹೋಮ, ಹವನ ಮಾಡುವ ಬದಲು ಮಸಾಲೆ ಬಳಸಿ ನೋಡಿ.
 

ಅಡುಗೆ ಮನೆ ಅಂದ್ಮೇಲೆ ಮಸಾಲೆ ಪದಾರ್ಥ ಇರ್ಲೇಬೇಕು. ಒಂದಲ್ಲ ಒಂದು ಆಹಾರ ತಯಾರಿಸಲು ನಾವು ಪ್ರತಿ ದಿನ ಈ ಮಸಾಲೆಗಳನ್ನು ಬಳಕೆ ಮಾಡ್ತೇವೆ. ಅರಿಶಿನ, ಕಾಳು ಮೆಣಸು, ಲವಂಗ, ದಾಲ್ಚಿನಿ ಹೀಗೆ ಅದು ಬೇಕು, ಇದು ಬೇಕು ಅಂತಾ ಮಹಿಳೆಯರು ಒಂದಿಷ್ಟು ಮಸಾಲೆ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಟ್ಟಿರುತ್ತಾರೆ. ಭಾರತದಲ್ಲಿ ಈ ಮಸಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಇದನ್ನು ಬರೀ ಅಡುಗೆಗೆ ಮಾತ್ರ ಬಳಕೆ ಮಾಡೋದಿಲ್ಲ. ಇದನ್ನು ಅನೇಕ ರೀತಿಯ ರೋಗಕ್ಕೆ ಔಷಧಿ ರೂಪದಲ್ಲಿಯೂ ಬಳಕೆ ಮಾಡ್ತೇವೆ.

ಶೀತ, ಕೆಮ್ಮು, ನೆಗಡಿಯಾದಾಗ ಮೊದಲು ಕೈ ಹೋಗೋದು ಮಸಾಲೆ (Spice ) ಪದಾರ್ಥಗಳಿಗೆ. ಅದ್ರಿಂದ ಕಷಾಯ ಮಾಡಿ ಕುಡಿಯುವ ನಮಗೆ ಈ ಮಸಾಲೆ ಪದಾರ್ಥಗಳು ಗ್ರಹ (Planet) ಗಳ ಜೊತೆಯೂ ಸಂಬಂಧ ಹೊಂದಿವೆ ಎಂಬುದು ಗೊತ್ತಿರೋದಿಲ್ಲ. ಹಿಂದೂ (Hindu) ಧರ್ಮದಲ್ಲಿ ಗ್ರಹಗಳ ಜೊತೆ ಸಂಬಂಧ ಹೊಂದಿರುವ ಮಸಾಲೆಗಳು ಯಾವುವು ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.   

ಗ್ರಹಗಳು ಹಾಗೂ ಮಸಾಲೆ ವಸ್ತುಗಳು : 
ಸೂರ್ಯ (Sun) ಗ್ರಹ :
ಸೂರ್ಯ ಅತ್ಯಂತ ಶಾಖದ ಗ್ರಹ. ಈತ ಕೂಡ ಕೆಲ ಮಸಾಲೆಯನ್ನು ಆಳ್ತಾನೆ. ಕೆಂಪು ಮೆಣಸಿನಕಾಯಿ, ಕರಿಮೆಣಸು, ಸಾಸಿವೆ, ಬೆಲ್ಲ ಮತ್ತು ಬಾರ್ಲಿಯು ಸೂರ್ಯನ ಒಡೆತನದಲ್ಲಿದೆ. ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ ನಾವು ಮನೆಯಲ್ಲಿ ಈ ಮಸಾಲೆಗಳನ್ನು ಬಳಸಬೇಕು. ಇದ್ರಿಂದ ಜಾತಕದಲ್ಲಿ ಸೂರ್ಯ ಬಲಪಡೆಯುತ್ತಾನೆ.  

ಚಂದ್ರ (Moon) ಗ್ರಹ : ರಾತ್ರಿ ಎಲ್ಲರ ಮನಸ್ಸಿಗೆ ಮುದ ನೀಡುವ ಗ್ರಹ ಚಂದ್ರ.  ಏಲಕ್ಕಿ ಮತ್ತು ಇಂಗು ಚಂದ್ರ ಗ್ರಹದ ಅಡಿಯಲ್ಲಿ ಬರುತ್ತದೆ. ಈ ಮಸಾಲೆಗಳ ಬಳಕೆಯು ಜಾತಕದಲ್ಲಿ ಚಂದ್ರನ ದಿಕ್ಕನ್ನು ಸುಧಾರಿಸುತ್ತದೆ ಮತ್ತು ಚಂಚಲ ಮನಸ್ಸನ್ನು ಶಾಂತಗೊಳಿಸುತ್ತದೆ.

ಮಕರ ರಾಶಿಯ ಪುರುಷರ ಮನ ಮತ್ತೆ ಗೆಲ್ಲಬೇಕಾ? ಇಲ್ಲಿದೆ ಮಾರ್ಗ!!

ಮಂಗಳ (Mars) ಗ್ರಹ : ನಿಮ್ಮ ಜಾತಕದಲ್ಲಿ ಮಂಗಳ ದುರ್ಬಲನಾಗಿದ್ದಾನೆ ಎನ್ನಿಸಿದ್ರೆ ನೀವು ಮನೆಯಲ್ಲಿರುವ ಕೆಲ ಮಸಾಲೆಯನ್ನು ಬಳಕೆ ಮಾಡಿ. ಮಂಗಳನಿಗೆ ಸಂಬಂಧಿಸಿದ ಅಡುಗೆ ಮನೆಯಲ್ಲಿರುವ ವಸ್ತುಗಳು ಸಕ್ಕರೆ, ಕೆಂಪು ಮೆಣಸಿನಕಾಯಿ ,ಶುಂಠಿ, ಮೆಂತ್ಯ ಮತ್ತು ಕಡಲೆಕಾಯಿ. ಗ್ರೇವಿ ತಯಾರಿಸಲು ನಾವು ಬಳಸುವ ಮಸಾಲೆಗಳು ಮಂಗಳನಿಗೆ ಸಂಬಂಧಿಸಿವೆ.

ಬುಧ ಗ್ರಹ : ಕೊತ್ತಂಬರಿ ಬುಧ ಗ್ರಹದ ಜೊತೆ ಸಂಬಂಧ ಹೊಂದಿದೆ. ಕೊತ್ತಂಬರಿ ಸೊಪ್ಪಿನ ಬಳಕೆ ಮಾಡಿದ್ರೆ ಬುಧ ನಮ್ಮ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತಾನೆ. ಬುದ್ಧನ ಸ್ಥಾನ ಬಲಗೊಂಡರೆ ಅರ್ಧಕ್ಕೆ ನಿಂತ ಕಾರ್ಯಗಳು ಪೂರ್ಣಗೊಳ್ಳುತ್ತವೆ.

ಗುರು ಗ್ರಹ : ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅರಿಶಿನ ಗುರುವಿಗೆ ಸಂಬಂಧಿಸಿದೆ.  ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ನೀವು ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಬಳಕೆ ಮಾಡಬೇಕಾಗುತ್ತದೆ.  

ಶುಕ್ರ ಗ್ರಹ : ಜಾತಕದಲ್ಲಿರುವ ಶುಕ್ರ ಬಲಪಡೆಯಬೇಕೆಂದ್ರೆ ನೀವು ಮಸಾಲೆ ಬಳಕೆಯನ್ನು ಹೆಚ್ಚಿಗೆ ಮಾಡಬೇಕು. ಜೀರಿಗೆ, ಸೋಂಪು, ಉಪ್ಪು ಶುಕ್ರನಿಗೆ ಸಂಬಂಧಿಸಿವೆ. ಶುಕ್ರ ಗ್ರಹವನ್ನು ಬಲಪಡಿಸಲು ಈ ಮಸಾಲೆಗಳ ಬಳಕೆಗಿಂತ ಉತ್ತಮ ಮತ್ತು ಸುಲಭವಾದ ಮಾರ್ಗ ಬೇರೆ ಇಲ್ಲವೆಂದು ನಂಬಲಾಗಿದೆ. 

Colour Astrology: ಶುಭ ಕಾರ್ಯದಲ್ಲಿ ಕಪ್ಪು ಬಟ್ಟೆ ಯಾಕೆ ಧರಿಸ್ಬಾರದು?

ಶನಿ (Saturn) ಗ್ರಹ : ಎಣ್ಣೆ, ಕರಿಮೆಣಸು, ಕಪ್ಪು ಎಳ್ಳು, ಲವಂಗ ಮತ್ತು ಜೇನುತುಪ್ಪ ಶನಿ ಗ್ರಹದ ಮಸಾಲೆಗಳಾಗಿವೆ. ಶನಿಯನ್ನು ಮೆಚ್ಚಿಸಲು ಸರಳವಾದ ಮಾರ್ಗವೆಂದರೆ ಮನೆಯಲ್ಲಿ ಈ ಮಸಾಲೆಗಳನ್ನು ಬಳಸುವುದು ಮತ್ತು ಪ್ರತಿ ಶನಿವಾರ ಶನಿ ದೇವರಿಗೆ ಈ ಮಸಾಲೆಗಳನ್ನು ಅರ್ಪಿಸುವುದು.

ರಾಹು ಗ್ರಹ : ಬೇವಿನ ಎಲೆ ಮತ್ತು ಜಾಯಿಕಾಯಿಯ ಬಳಕೆಯಿಂದ ರಾಹುವಿನ ನಕಾರಾತ್ಮಕ ಪರಿಣಾಮಗಳನ್ನು ನೀವು ಕಡಿಮೆ ಮಾಡಬಹುದು.

ಕೇತು ಗ್ರಹ : ಓಂ ಕಾಳು, ಕಪ್ಪು ಉಪ್ಪು, ಹುಣಸೆಹಣ್ಣು ಮತ್ತು ಒಣ ಮಾವನ್ನು ನೀವು ಹೆಚ್ಚಾಗಿ ಬಳಕೆ ಮಾಡುವುದ್ರಿಂದ ಕೇತುವಿನ ಪ್ರಭಾವವನ್ನು ಕಡಿಮೆ ಮಾಡಬಹುದು. ಕೇತು ಹಾಗೂ ರಾಹು ಕೆಟ್ಟ ಗ್ರಹಗಳಾಗಿವೆ. 
 

click me!