ಸಂಬಂಧದಲ್ಲಿ ಸೋಮಾರಿಯಾಗಿದ್ದು ಸಂಗಾತಿಗಳಿಗೆ ಕೆಲಸ ಹಚ್ಚೋ ರಾಶಿಗಳಿವು

Published : Feb 19, 2023, 05:39 PM IST
ಸಂಬಂಧದಲ್ಲಿ ಸೋಮಾರಿಯಾಗಿದ್ದು ಸಂಗಾತಿಗಳಿಗೆ ಕೆಲಸ ಹಚ್ಚೋ ರಾಶಿಗಳಿವು

ಸಾರಾಂಶ

ಜೀವನವೆಂದರೆ ಸುಖ, ದುಃಖಗಳ ಆಗರ. ಪ್ರತಿದಿನವೂ ಏನಾದರೊಂದು ಸವಾಲು, ಜವಾಬ್ದಾರಿ ವಹಿಸಬೇಕಾದ ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ. ಅವುಗಳಿಂದ ದೂರ ಓಡುವುದು ಕೆಲವರ ಸ್ವಭಾವ. ಅದರಲ್ಲೂ ಸಂಬಂಧದಲ್ಲಿ ಕೆಲವು ಜನ ಅತಿಯಾಗಿ ನಿಷ್ಕ್ರಿಯತೆ ಹೊಂದಿರುತ್ತಾರೆ. ಇವರಿಂದಾಗಿ, ಇವರ ಸಂಗಾತಿ ಹೆಚ್ಚು ಜವಾಬ್ದಾರಿ ನಿಭಾಯಿಸಬೇಕಾದ ಸಂದರ್ಭ ಬಂದೊದಗುತ್ತದೆ.

ಬದುಕಿನಲ್ಲಿ ಈಸಿ ಗೋಯಿಂಗ್‌ ಮನಸ್ಥಿತಿ ಒಳ್ಳೆಯದೇ. ಸುಮ್ಮಸುಮ್ಮನೆ ಎಲ್ಲದಕ್ಕೂ ತಲೆಕೆಡಿಸಿಕೊಂಡು, ಗಂಭೀರವಾಗಿ ಪರಿಗಣಿಸುವುದಕ್ಕಿಂತ ಈಸಿ ಗೋಯಿಂಗ್‌ ಮೆಂಟಾಲಿಟಿ ಉತ್ತಮ. ಆದರೆ, ಈ ಧೋರಣೆ ರೋಮ್ಯಾಂಟಿಕ್‌ ಸಂಬಂಧದಲ್ಲಿ ಸ್ವಲ್ಪ ಸಂಕಷ್ಟವನ್ನು ತಂದೊಡ್ಡುತ್ತದೆ. ನಿಮ್ಮ ಸಂಗಾತಿ ಆರಾಮಾಗಿರುವ ಧೋರಣೆ ಹೊಂದಿದ್ದು, ತಮ್ಮ ಪಾಡಿಗೆ ಸುಖವಾಗಿದ್ದರೆ ಎಲ್ಲವನ್ನೂ ನೀವೇ ನಿಭಾಯಿಸಬೇಕಾಗಿ ಬರುತ್ತದೆ. ಅವರಿಂದಾಗಿ ನೀವೇ ನಿರ್ಣಯ ಕೈಗೊಳ್ಳಬೇಕಾದ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಂಬಂಧದಲ್ಲಿ ಒಬ್ಬರು ನಿಷ್ಕ್ರಿಯರಾಗಿರುತ್ತಾರೆ ಅಥವಾ ಜವಾಬ್ದಾರಿಯಿಂದ ಸ್ವಲ್ಪ ಹಿಂದೆ ಸರಿಯುತ್ತಾರೆ. ಇನ್ನೊಬ್ಬರು ಸಕ್ರಿಯವಾಗಿದ್ದು ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾರೆ. ಆಯ್ಕೆ, ವಿಚಾರ, ಯೋಜನೆಗಳೆಲ್ಲವನ್ನೂ ಅವರೇ ಮಾಡುತ್ತಾರೆ. ಇದರಿಂದಾಗಿ ನಿಷ್ಕ್ರಿಯ ಸಂಗಾತಿ ಸೋಮಾರಿಯಾಗಿ ಕಾಲಕಳೆಯಬಲ್ಲರು.

ಮಹಿಳೆಯಾಗಲಿ, ಪುರುಷನಾಗಲೀ ಸಂಬಂಧದಲ್ಲಿ ಯಾರಾದರೂ ಒಬ್ಬರು ಹೀಗಿದ್ದರೂ ಮತ್ತೊಬ್ಬರ ಮೇಲೆ ಒತ್ತಡವುಂಟಾಗುವುದು ನಿಶ್ಚಿತ. ಹಾಗೆಂದು ಅವರು ಬೇರೆ ವಿಚಾರಗಳಲ್ಲೂ ನಿಷ್ಕ್ರಿಯರಾಗಿರುತ್ತಾರೆ ಎಂದಲ್ಲ. ಸಂಬಂಧದಲ್ಲಿ ಅವರ ಪಾತ್ರ ಅಷ್ಟಕ್ಕಷ್ಟೆ ಎನ್ನುವಂತಿರುತ್ತದೆ. ಈ ಗುಣ ಸಹ ಕೆಲವು ರಾಶಿಗಳಲ್ಲಿ ಗಾಢವಾಗಿ ಕಂಡುಬರುತ್ತದೆ. ಈ ರಾಶಿಗಳ ಜನ ಸಂಗಾತಿಯ ಆಯ್ಕೆಗೆ ಎಲ್ಲವನ್ನೂ ಬಿಟ್ಟು ತಾವು ನಿರುಮ್ಮಳರಾಗಿರುತ್ತಾರೆ. ಅಂತಹ ರಾಶಿಗಳು ಯಾವುವು ನೋಡಿ.

ವೃಷಭ (Taurus): ವೃಷಭ ರಾಶಿಯವರು ಕೌಟುಂಬಿಕ (Family) ಜವಾಬ್ದಾರಿ (Responsibility) ನಿಭಾಯಿಸುವಲ್ಲಿ ಎತ್ತಿದ ಕೈ ಆಗಿದ್ದರೂ ಸಂಬಂಧದಲ್ಲಿ ಹೆಚ್ಚಿನ ಅಫೆಕ್ಷನ್‌ (Affection) ಹಾಗೂ ಭಾವುಕತೆಯನ್ನು ನಿರೀಕ್ಷಿಸುವಂತಿಲ್ಲ. ಇವರ ಸಂಗಾತಿ (Partner) ಇವರೆದುರು ಎಂಥದ್ದೇ ಪ್ಲಾನ್‌ ಇಟ್ಟರೂ ಅದರ ಬಗ್ಗೆ ಉದಾಸೀನತೆ ತೋರುತ್ತಾರೆ. ಸಂಬಂದದಲ್ಲೂ ಕಠಿಣ ನಿಲುವನ್ನು ವ್ಯಕ್ತಪಡಿಸುತ್ತಾರೆ. ತಮ್ಮದೇ ಕಂಫರ್ಟ್‌ ವಲಯದಲ್ಲಿರುವ ಬಗ್ಗೆ ಇವರು ಹತ್ತಾರು ಸಮರ್ಥನೆ ನೀಡಿಕೊಳ್ಳುತ್ತಾರೆ. ಸಂಗಾತಿ ಆರಂಭಿಸಿದ ಯೋಜನೆಯನ್ನು ವಿಳಂಬಿಸುತ್ತ ಸಾಗುತ್ತಾರೆ. ಕೊನೆಗೆ ಅದನ್ನು ಸಂಪೂರ್ಣಗೊಳಿಸುವ ಭರವಸೆ ಇರುವುದಿಲ್ಲ. 

ಈ 5 ರಾಶಿಯ ಜನರಿಗಂತೂ ಖರ್ಚಿನ ಮೇಲೆ ನಿಯಂತ್ರಣವೇ ಇಲ್ಲ, ನೀರಿನಂತೆ ಹಣ ವ್ಯಯಿಸುತ್ತಾರೆ!

ಮಿಥುನ (Gemini): ಈ ರಾಶಿಯ ಜನ ಸಂಪೂರ್ಣ ಜೀವನದ ಬಗ್ಗೆ ಆರಾಮದಾಯಕ (Laid Back) ಮನೋಸ್ಥಿತಿ ಹೊಂದಿರುತ್ತಾರೆ. ಈಸಿ ಗೋಯಿಂಗ್‌ (Easy Going) ಇವರ ನಿಲುವು. ವಿಭಿನ್ನ ವ್ಯಕ್ತಿತ್ವ ಹಾಗೂ ಹೊಸ ಕೌಶಲಗಳನ್ನು (Skill) ಕಲಿಯುವ ಇವರ ಆಸಕ್ತಿಯನ್ನು ಮೆಚ್ಚುವಂತಿದ್ದರೂ ಇವರ ಈಸಿ ಗೋಯಿಂಗ್‌ ನಿಲುವು ಕೆಲವೊಮ್ಮೆ ಸಂಬಂಧದ (Relationship) ಮೇಲೆ ಪರಿಣಾಮ ಬೀರುತ್ತದೆ. ರೋಮ್ಯಾಂಟಿಕ್‌ (Romantic) ಸಂಬಂಧವನ್ನು ಹಾಳುಮಾಡುತ್ತದೆ. ಕಟ್ಟುನಿಟ್ಟಾಗಿ ಒತ್ತಾಯ (Force) ಮಾಡದ ಹೊರತು ಯಾವುದೇ ಕೆಲಸ ಮಾಡುವುದಿಲ್ಲ. ನಿರ್ದಿಷ್ಟ ಕಾರ್ಯ ಮಾಡಲು ಇವರನ್ನು ಪುಷ್‌ (Push) ಮಾಡುತ್ತಲೇ ಇರಬೇಕಾಗುತ್ತದೆ. ಎಲ್ಲರೊಂದಿಗೆ ಬೆರೆಯಬಲ್ಲ ಈ ರಾಶಿಯ ಜನ ಸಂಗಾತಿಯೊಂದಿಗೆ ಮುಖ್ಯವಾದ ಚರ್ಚೆ ನಡೆಯುತ್ತಿದ್ದರೂ ಅದನ್ನು ಅರ್ಧಕ್ಕೇ ಬಿಡಬಲ್ಲರು. ಮತ್ತೊಮ್ಮೆ ಆ ವಿಚಾರ ಎದುರಾಗದಿರಲು ಅಲ್ಲಿಂದ ದೂರ ಓಡಬಲ್ಲರು. 

ಧನು (Sagittarius): ಧನು ರಾಶಿಯ ಜನ ಸ್ವತಂತ್ರ ವ್ಯಕ್ತಿತ್ವದ (Free Spirited), ಸಾಹಸಿ ಧೋರಣೆಯವರು. ಆದರೆ, ಸಂಬಂಧದಲ್ಲಿ ಆರಾಮಾಗಿರುವ ಧೋರಣೆ ತೋರುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕೆ (Freedom) ಅಪಾರ ಬೆಲೆ ನೀಡುವ ಇವರು ಸಂಬಂಧದಲ್ಲಿ ನಿಷ್ಕ್ರಿಯತೆ (Passive) ತೋರುತ್ತಾರೆ. ಹಾಗೂ ಸಂಗಾತಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂಗಾತಿ ಯಾವುದಾದರೂ ಸಮಸ್ಯೆಯಲ್ಲಿದ್ದರೂ ಅದರ ಬಗ್ಗೆ ಚರ್ಚಿಸುವ ಬದಲು ಆ ಸಮಯದಲ್ಲಿ ಅವರಿಂದ ದೂರವೇ ಇರುತ್ತಾರೆ. ಕಾಳಜಿಯಿಲ್ಲದಿರುವಂತೆ ವರ್ತಿಸುತ್ತಾರೆ. ಯಾವಾಗಲೂ ಆರಾಮದ ಮನಸ್ಥಿತಿಯಲ್ಲಿ ಇರಬೇಕೆಂದು ಬಯಸುವ ಇವರು, ತಮ್ಮ ಸುತ್ತಲಿನ ವಿವಾದಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿ ಕ್ಷಣವನ್ನು ಎಂಜಾಯ್‌ (Enjoy) ಮಾಡುವುದು ಇವರಿಗಿಷ್ಟ.

ಏನೇ ಆದರೂ Friendship ಬಿಡೋದಿಲ್ಲ ಅಂತಾರೆ ಈ ರಾಶಿಯವರು!!

ಮೀನ (Pisces): ಈ ರಾಶಿಯ ಜನ ಹೆಚ್ಚು ವಿಶ್ರಾಂತಿಯಲ್ಲಿರಲು ಬಯಸುತ್ತಾರೆ. ಮುಖ್ಯವಾಗಿ ಸಂಬಂಧದಲ್ಲಿ ತಮ್ಮ ಸಂಗಾತಿಗಿಂತ ನಿಧಾನವಾಗಿ (Slow) ಕೆಲಸ ಕೈಗೊಳ್ಳುವ ಬುದ್ಧಿ ಹೊಂದಿರುತ್ತಾರೆ. ಅಪ್ರತಿಮ ಕನಸುಗಾರರಾಗಿರುವ ಇವರು ತಮ್ಮದೇ ಕಲ್ಪನೆಗಳಲ್ಲಿ ಮುಳುಗಿ ಹೋಗುತ್ತಾರೆ. ಅಲ್ಲಿ ಕಂಫರ್ಟ್‌ (Comfort) ಆಗಿರುತ್ತಾರೆ, ಸೋಮಾರಿಯಾಗಿರುತ್ತಾರೆ. ಪ್ರೊಡಕ್ಟಿವ್‌ (Productive) ಆಗಿರುವುದಿಲ್ಲ. ಹೆಚ್ಚು ಮಾತನಾಡುತ್ತಾರೆಯೇ ಹೊರತು ಸಕ್ರಿಯವಾಗಿರುವುದಿಲ್ಲ.   

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ