ಕೆಂಗಾಪುರದ ರಾಮಲಿಂಗೇಶ್ವರ ಶ್ರೀ ಮುಳ್ಳು ಗದ್ದುಗೆ ಉತ್ಸವ
ಪವಾಡ ಪುರುಷ ರಾಮಲಿಂಗೇಶ್ವರ ಶ್ರೀಗಳ ಮುಳ್ಳಿನ ಕುಣಿತ
ಶಿವರಾತ್ರಿ ಹಬ್ಬದ ಮಾರನೆ ದಿನ ನಡೆಯುವ ಉತ್ಸವ
ವರದಿ: ವರದರಾಜ್, ದಾವಣಗೆರೆ
ಮುಳ್ಳಿನ ಮೇಲೆ ಕುಳಿತು ಕುಣಿದಾಡುತ್ತಾರೆ, ರಕ್ತ ಬರಲ್ಲ ನೋವಂತೂ ಆಗುವುದೇ ಇಲ್ಲ. ಮುಂಜಾನೆ 5 ಗಂಟೆಯಿಂದಲೇ ಸತತವಾಗಿ ನಾಲ್ಕೈದು ಗಂಟೆಗಳ ಕಾಲ ಮುಳ್ಳಿನ ಗದ್ದುಗೆ ಮೇಲೆ ಕುಣಿಯುವ ಸಂಪ್ರದಾಯ ಸಾಂಗವಾಗಿ ನೆರವೇರಿದೆ.. ದಾವಣಗೆರೆ ಜಿಲ್ಲೆ ಕೆಂಗಾಪುರ ಗ್ರಾಮದಲ್ಲಿ ರಾಮಲಿಂಗೇಶ್ವರ ಮಠದಲ್ಲಿ ಪ್ರತಿವರ್ಷವು ನಡೆಯುವ ಪವಾಡವಿದು. ಈ ಬಾರಿಯೂ ಅತ್ಯಂತ ಸಂಭ್ರಮ ಸಡಗರದಿಂದ ಮುಳ್ಳುಗದ್ದುಗೆ ಉತ್ಸವ ಜರುಗಿತು. ಇಲ್ಲಿ ಪವಾಡ ಪುರುಷ ರಾಮಲಿಂಗೇಶ್ವರ ಶ್ರೀಗಳು ಮುಳ್ಳಿನ ಮೇಲೆ ಕುಳಿತು ಕುಣಿದಾಡುವ ಮೂಲಕ ಭಕ್ತರನ್ನೇ ಅಚ್ಚರಿಗೊಳಿಸುತ್ತಾರೆ.
ಶಿವರಾತ್ರಿ ಹಬ್ಬದ ಮಾರನೆ ದಿನ ನಡೆಯುವ ಈ ಮುಳ್ಳು ಗದ್ದುಗೆ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಇಳಿವಯಸ್ಸಿನಲ್ಲೂ ಸಂಪ್ರದಾಯ ಮುಂದುವರಿಸಿದ್ದಾರೆ. ರಾಮಲಿಂಗೇಶ್ವರ ಶ್ರೀಗಳು ತಮ್ಮ ಮಠದಿಂದ ಕೆಂಗಾಪುರ ಗ್ರಾಮದ ದೇವಸ್ಥಾನದ ಗದ್ದುಗೆ ವರೆಗು ಮುಳ್ಳುಗದ್ದುಗೆ ಉತ್ಸವದಲ್ಲಿ ಸಾಗುತ್ತಾರೆ. ಐದು ದಿನ ಉಪವಾಸ ಇದ್ದು ಮಡಿಯನ್ನುಟ್ಟು ಶ್ರೀಗಳು ಮುಳ್ಳುಗದ್ದುಗೆ ನಡೆಸಿಕೊಡುತ್ತಾರೆ.
ನಂತರ ನಡೆದ ಕಾರ್ಣಿಕದಲ್ಲಿ ಕಾರ್ಮೊಡ್ ಕವಿದಿತೋ. ಗಗನದಲ್ಲಿ ಮುತ್ತಿಗಳು ಸುರಿದವೋ .. ಅಂತರಂಗದ ಪಕ್ಷಿ ಹಾರಿತೋ.. ಎಂದು ಭವಿಷ್ಯದ ಬಗ್ಗೆ ಸ್ವಾಮೀಜಿ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ. ರಾಮಲಿಂಗೇಶ್ವರ ಶ್ರೀಗಳನ್ನು ಈ ಭಾಗದ ಆರಾಧ್ಯ ದೈವ ಎಂದು ನಂಬುವ ಭಕ್ತರು ಅವರ ಕಾರಣಿಕವನ್ನು ಬಲವಾಗಿ ನಂಬುತ್ತಾರೆ.
Vastu Tips: ಕಾಳಿ ಸೇರಿದಂತೆ ಈ ದೇವರ ವಿಗ್ರಹಗಳನ್ನು ಮನೆಯಲ್ಲಿಟ್ಟರೆ, ಹೆಚ್ಚಲಿದೆ ತೊಂದರೆ
ಸುಮಾರು ಒಂದು ಶತಮಾನಗಳಿಂದ ಈ ಕ್ಷೇತ್ರವಿದೆ. ಮೇಲಾಗಿ ಇದು ಮೊದಲಿನ ಗುರುಗಳು ಇಲ್ಲಿ ಐಕ್ಯವಾದ ಸ್ಥಳ. ಹೀಗಾಗಿ ರಾಜ್ಯದ 18 ಕಡೆ ಈ ಕ್ಷೇತ್ರದ ಮಠಗಳಿದ್ದರು ಮೂಲ ಕ್ಷೇತ್ರದ ಬಗ್ಗೆ ಜನರಿಗೆ ಭಕ್ತಿ ಜಾಸ್ತಿ. ಸುತ್ತಲು ಅಡಿಕೆ ತೆಂಗಿನ ತೋಟ ಸ್ವಲ್ಪ ದೂರದಲ್ಲಿ ಜಗತ್ ಪ್ರಸಿದ್ಧ ಸೂಳೆಕೆರೆ. ಜೊತೆಗೆ ನಿತ್ಯ ಹರಿಯುವ ನೀರು ಹೀಗೆ ಪ್ರಕೃತಿ ಮಾತೆಯ ಆನಂದ ಸಾಗರವೇ ಇದಾಗಿದೆ. ಈ ಕ್ಷೇತ್ರಕ್ಕೆ ಜನರು ಬಂದು ಹೋದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆ ಇದೆ
ನುಡಿದಂತೆ ನಡೆ ಇದೇ ಜನ್ಮ ಕಡೆ ಎಂಬ ವಾಣಿಯಂತೆ ಸ್ವಾಮೀಜಿಗಳ ಕೇವಲ ಪವಾಡ ಮತ್ತು ಮುಳ್ಳು ಗದ್ದಿಗೆ ಸೀಮಿತವಾಗಿಲ್ಲ. ಬದಲಾಗಿ ಎಂಟು ಶಿಕ್ಷಣ ಸಂಸ್ಥೆಗಳನ್ನ ಸ್ಥಾಪನೆ ಮಾಡಿದ್ದಾರೆ. ಇದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ವಿಶೇಷವೆಂದರೆ ಇದರಲ್ಲಿ ಶೇಖಡಾ 80ರಷ್ಟು ಶೋಷಿತ ಸಮೂದಾಯ ಜನ. ಪ್ರತಿ ವರ್ಷ ನೂರಾರು ಜೋಡಿಗಳಿಗೆ ಇಲ್ಲಿ ಉಚಿತ ಸಾಮೂಹಿಕ ವಿವಾಹ ಸಹ ನಡೆಯುತ್ತದೆ. ಹೀಗಾಗಿ ಪ್ರಗತಿಪರರು ಮತ್ತು ದೈವ ಭಕ್ತರು ಇಲ್ಲಿಗೆ ಬರುವುದು ಇದೇ ಕಾರಣಕ್ಕೆ.
ಈ 5 ರಾಶಿಯ ಜನರಿಗಂತೂ ಖರ್ಚಿನ ಮೇಲೆ ನಿಯಂತ್ರಣವೇ ಇಲ್ಲ, ನೀರಿನಂತೆ ಹಣ ವ್ಯಯಿಸುತ್ತಾರೆ!
ಪ್ರತಿವರ್ಷ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಕೆಂಗಾಪುರದ ರಾಮಲಿಂಗೇಶ್ವರ ಶ್ರೀಗಳಿಗೆ ಎಲ್ಲಿಲ್ಲದ ನಂಟು. ರಾಮಲಿಂಗೇಶ್ವರ ಶ್ರೀಗಳ ಮುಳ್ಳುಗದ್ದುಗೆ ಉತ್ಸವಕ್ಕೆ ವಿ ಎಸ್ ಉಗ್ರಪ್ಪ ತಪ್ಪದೆ ಬರುತ್ತಾರೆ. ಮಠದ ಆವರಣದಲ್ಲಿ ನಡೆಯುವ ಸಾಮೂಹಿಕ ವಿವಾಹ ಧರ್ಮಸಮ್ಮೇಳನ, ಮುಳ್ಳುಗದ್ದುಗೆ ಉತ್ಸವದಲ್ಲಿ ಪಾಲ್ಗೊಂಡು ನಂತರ ಬೆಂಗಳೂರಿಗೆ ತೆರಳುತ್ತಾರೆ. ಆದ್ರೆ ಈ ಬಾರಿ ಉಗ್ರಪ್ಪ ಅನಾರೋಗ್ಯದ ಕಾರಣ ಅವರು ಗೈರು ಹಾಜರಾಗಿದ್ದಾರೆ.