ಬಹಿರ್ಮುಖ ಮತ್ತು ಅಂತರ್ಮುಖ ನಿಲುವುಗಳು ಹದವಾಗಿ ಹೊಂದಾಣಿಕೆಯಾಗಿದ್ದರೆ ಜೀವನ ಹೆಚ್ಚು ಸುಂದರವಾಗಬಲ್ಲದು. ಏಕೆಂದರೆ, ಸರ್ವಕಾಲಕ್ಕೂ ಬಹಿರ್ಮುಖಿಯಾಗಿದ್ದರೆ ಆಂತರಿಕ ದೃಷ್ಟಿಗೆ ಜೀವನದ ಸೌಂದರ್ಯ ದಕ್ಕದೇ ಹೋಗಬಹುದು. ಹಾಗೆಯೇ, ಕೇವಲ ಅಂತರ್ಮುಖಿಯಾಗಿದ್ದರೆ ಬಾಹ್ಯ ಪ್ರಪಂಚದ ಮಾತುಕತೆಗಳಲ್ಲಿ ರುಚಿ ಕಾಣಿಸದು. ಕೆಲವು ಜನ ಈ ಗುಣಗಳ ಎರಕವಾಗಿರುತ್ತಾರೆ.
ಮನುಷ್ಯನ ವ್ಯಕ್ತಿತ್ವಗಳು ಹಲವು ಬಗೆ. ಆದರೆ, ಅಂತರ್ಮುಖಿ, ಬಹಿರ್ಮುಖಿಗಳೆಂದು ಸಾಮಾನ್ಯವಾಗಿ ವಿಭಾಗಿಸಲಾಗಿದೆ. ತಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳದ, ಅತಿ ಸೀಮಿತ ಆತ್ಮೀಯರನ್ನು ಹೊಂದಿರುವ ಜನರನ್ನು ಅಂತರ್ಮುಖಿಗಳೆಂದು ಪರಿಗಣಿಸಿದರೆ, ಕಂಡವರನ್ನೆಲ್ಲ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಅಥವಾ ಹೆಚ್ಚು ಅಭಿವ್ಯಕ್ತಿಗೊಳಿಸುವ ಜನರನ್ನು ಬಹಿರ್ಮುಖಿಗಳೆಂದು ಹೇಳಲಾಗುತ್ತದೆ. ಆದರೆ, ಕೆಲ ಜನ ಇವೆರಡೂ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಆತ್ಮೀಯ ವಲಯವೂ ಇರುತ್ತದೆ. ಹೆಚ್ಚು ಸ್ನೇಹಿತರೂ ಇರುತ್ತಾರೆ. ಹಾಗೆಯೇ, ಇವರಲ್ಲಿ ಅಂತರ್ಮುಖತೆಯೂ ಇರುತ್ತದೆ. ತಮ್ಮೊಳಗನ್ನು ಪರಿಶೀಲನೆ ಮಾಡಿಕೊಳ್ಳುವ, ಅಂತರ್ ವಿಮರ್ಶೆ ಮಾಡಿಕೊಳ್ಳುವ ಸ್ವಭಾವವೂ ಇರುತ್ತದೆ. ಇವರನ್ನು ಆಂಬಿವರ್ಟ್ ಅಥವಾ ಉಭಯಮುಖಿಗಳೆಂದು ಕರೆಯಲಾಗುತ್ತದೆ. ನಾವ್ಯಾರೂ ಒಬ್ಬರಿದ್ದಂತೆ ಮತ್ತೊಬ್ಬರಿರುವುದಿಲ್ಲ. ಆದರೂ ಕೆಲವು ಜನ ಗುಣಸ್ವಭಾವಗಳಲ್ಲಿ ಸಾಕಷ್ಟು ಸಾಮ್ಯತೆ ಇರುತ್ತದೆ. ಹೀಗೆ, ಅಂತರ್ಮುಖಿಯೂ ಆಗಿರುವ, ಬಹಿರ್ಮುಖಿಯೂ ಆಗಿರುವ ಗುಣಸ್ವಭಾವ ಕೆಲವು ರಾಶಿಗಳ ಜನರಲ್ಲಿ ಕಂಡುಬರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ರಾಶಿಗಳ ಜನ ಇತರರೊಂದಿಗೆ ಒಡನಾಡುವಲ್ಲಿ ಎಷ್ಟು ಸಂತಸ ಕಾಣುತ್ತಾರೋ ಹಾಗೆಯೇ, ತಾವು ಏಕಾಂಗಿಯಾಗಿರುವುದನ್ನೂ ಅಷ್ಟೇ ಎಂಜಾಯ್ ಮಾಡುತ್ತಾರೆ.
• ಮಿಥುನ (Gemini)
ಅವಳಿ (Twin) ರಾಶಿಯಾಗಿರುವ ಮಿಥುನದ ಜನ ದ್ವಿಮುಖ ನಿಲುವು ಹೊಂದಿರುತ್ತಾರೆ. ತಮ್ಮ ಅತ್ಯುತ್ತಮ ಸಂವಹನ ಕೌಶಲದಿಂದಾಗಿ (Communication Skill) ಜೀವನವನ್ನು ಸಂಭ್ರಮಿಸುತ್ತಾರೆ. ಬಹಳ ಸುಲಭವಾಗಿ ಖುಷಿಖುಷಿಯಾಗಿ ಮಾತುಕತೆಯಲ್ಲಿ ತೊಡಗುವ ಇವರು ಎಲ್ಲವನ್ನೂ ಒಳಗೊಳ್ಳುವ (Adoptable) ಸ್ವಭಾವವನ್ನು ಹೊಂದಿರುತ್ತಾರೆ. ವಿಭಿನ್ನ ಸಾಮಾಜಿಕ ಕೌಶಲದಿಂದ ಗುರುತಿಸಿಕೊಂಡರೂ ಇವರಲ್ಲಿ ಒಬ್ಬ ಅಂತರ್ಮುಖಿಯೂ (Introvert) ಇರುತ್ತಾನೆ. ಇವರ ಮನಸ್ಸು ಬಾಹ್ಯ ಮತ್ತು ಅಂತರ್ಮುಖತೆಯ ನಡುವೆ ಪದೇ ಪದೆ ಬದಲಾಗುತ್ತಿರುತ್ತದೆ. ಈ ಉಭಯಮುಖಿ (Ambivert) ಧೋರಣೆಯಿಂದ ಇವರ ವ್ಯಕ್ತಿತ್ವಕ್ಕೆ ಆಳವಾದ ನೋಟ ಹಾಗೂ ವೈಭವ ದಕ್ಕುತ್ತದೆ.
ಮನೆಯಿಂದ ಬಡತನ ಓಡಿಸಲು ಏನು ಮಾಡಬೇಕು?; ಇಲ್ಲಿದೆ ಉಪಾಯ..!
• ತುಲಾ (Libra)
ಜೀವನದ ಎಲ್ಲ ಹಂತಗಳಲ್ಲಿ ಸಾಮರಸ್ಯ (Harmony) ಮತ್ತು ಸಮತೋಲನ ಬಯಸುವ ತುಲಾ ರಾಶಿಯ ಜನ ವರ್ಚಸ್ಸಿನಿಂದ ಗಮನ ಸೆಳೆಯುತ್ತಾರೆ. ವಿವಿಧ ರೀತಿಯಲ್ಲಿ ಸಂಪರ್ಕ ಹೊಂದುವ ಸಾಮರ್ಥ್ಯ ಬೆಳೆಸಿಕೊಂಡಿರುತ್ತಾರೆ. ಸಾಮಾಜಿಕ ಒಡನಾಟ (Interaction) ಇವರಿಗೆ ಭಾರೀ ಇಷ್ಟವಾದ ಕಾರ್ಯ. ಹಾಗೆಯೇ, ಅಂತರ್ಮುಖವಾಗಿರುವುದನ್ನೂ ಇಷ್ಟಪಡುತ್ತಾರೆ. ಅಪ್ರಯತ್ನಪೂರ್ವಕವಾಗಿ ಬಾಹ್ಯ-ಅಂತರ್ಮುಖ ಸಮತೋಲನ ಹೊಂದುತ್ತಾರೆ.
• ಧನು
ಬೌದ್ಧಿಕ ಕುತೂಹಲ (Intellectual Curiosity) ಮತ್ತು ಸಾಹಸಮಯ ಧೋರಣೆ ಹೊಂದಿರುವ ಧನು ರಾಶಿಯ ಜನ ಸಾಮಾಜಿಕ ಒಡನಾಟದಲ್ಲಿ ಅಪರಿಮಿತ ಸಾಮರ್ಥ್ಯ ಹೊಂದಿರುತ್ತಾರೆ. ಗುಂಪು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಜತೆಜತೆಗೇ, ಆತ್ಮವಿಮರ್ಶೆ ಮಾಡಿಕೊಳ್ಳುವ ಗುಣದಿಂದಾಗಿ ಬಹಿರ್ಮುಖ (Extravert), ಅಂತರ್ಮುಖ ಎರಡೂ ಗುಣವನ್ನು ಅಳವಡಿಸಿಕೊಂಡಿರುತ್ತಾರೆ. ಜನರೊಂದಿಗೆ ಬೆರೆಯುವಷ್ಟೇ ಸುಲಭವಾಗಿ ತಮ್ಮೊಳಗನ್ನೂ ವೀಕ್ಷಣೆ ಮಾಡಿಕೊಳ್ಳುತ್ತಾರೆ.
• ಕುಂಭ (Aquarius)
ಅನ್ವೇಷಣಾತ್ಮಕ (Innovative) ವಿಚಾರಧಾರೆ ಹೊಂದಿರುವ ಕುಂಭ ರಾಶಿಯ ಜನ ಸಾಮಾಜಿಕ ಒಡನಾಟದಲ್ಲಿ ಅತ್ಯುತ್ತಮ ನಿರ್ವಹಣೆ ಮಾಡುತ್ತಾರೆ. ಸಾಮಾಜಿಕ ಒಡನಾಟದಿಂದ ಅವರ ಬೌದ್ಧಿಕ ಮಟ್ಟ ವಿಸ್ತರಣೆಯಾಗುತ್ತದೆ. ಮಾತುಕತೆಯಲ್ಲಿ ತೊಡಗಿದ್ದಾಗ ಇವರ ಬಾಹ್ಯ ಮುಖ ಹೆಚ್ಚು ಪ್ರಖರವಾಗಿದ್ದು, ವಿಚಾರಕ್ಕೆ (Thought) ಅನುವು ಮಾಡಿಕೊಡುತ್ತದೆ. ಅಂತರ್ಮುಖತೆಯನ್ನೂ ಹೊಂದಿದ್ದು, ಆಳವಾದ ಪರಿಶೀಲನೆ ಮಾಡಿಕೊಳ್ಳಬಲ್ಲರು. ಎರಡು ಧೋರಣೆಗಳ ನಡುವೆ ಸುಲಭವಾಗಿ ವರ್ತಿಸುತ್ತ ಉಭಯಮುಖಿಯಾಗಿರುತ್ತಾರೆ.
ಈ ರೀತಿಯ ಪಾದಗಳಿರುವ ಜನರಿಗೆ ಬಡತನವೇ ಬರಲ್ಲ; ಇವರಿಗೆ ಉನ್ನತ ಹುದ್ದೆ ಸಿಗಲಿದೆ..!
• ಮೀನ (Pisces)
ಕಲ್ಪನಾತ್ಮಕ (Imaginative) ಶಕ್ತಿ ಹಾಗೂ ಸಹಾನುಭೂತಿ ಹೊಂದಿರುವ ಮೀನ ರಾಶಿಯ ಜನ ಅತ್ಯಂತ ಸುಲಭವಾಗಿ ಇನ್ನೊಬ್ಬರೊಂದಿಗೆ ಮಾತುಕತೆ (Conversation) ನಡೆಸಬಲ್ಲರು. ಭಾವನಾತ್ಮಕ (Emotional) ಮಟ್ಟದಲ್ಲಿ ಸಂಪರ್ಕ ಹೊಂದಬಲ್ಲರು. ಹಾಗೆಯೇ, ಇವರಿಗೆ ಏಕಾಂತವೂ (Solitude) ಅಷ್ಟೇ ಅಗತ್ಯವಾಗಿ ಬೇಕಾಗಿರುತ್ತದೆ. ಕ್ರಿಯಾಶೀಲತೆಯನ್ನು ಕಾರ್ಯರೂಪಕ್ಕಿಳಿಸಲು, ಶ್ರೀಮಂತ ಆಂತರಿಕ ಪ್ರಪಂಚದಲ್ಲಿ ವಿಹರಿಸಲು ಏಕಾಂತವಾಗಿರಲು ಇಷ್ಟಪಡುತ್ತಾರೆ. ಅಪರೂಪದ ಉಭಯಮುಖಿ ಸ್ವಭಾವ ಹೊಂದಿರುವ ಇವರು, ವಿಭಿನ್ನ ಭಾವನಾತ್ಮಕ ಸ್ತರಗಳನ್ನು ಸ್ಪರ್ಶಿಸಬಲ್ಲರು.