ಮುಟ್ಟಿನ ವೇಳೆ ದೇವಸ್ಥಾನಕ್ಕೆ ಏಕೆ ಹೋಗಬಾರದು? ಇದು ಸ್ತ್ರೀಕುಲಕ್ಕೆ ಅಪಮಾನವೇ?

By Sushma Hegde  |  First Published Aug 30, 2023, 12:15 PM IST

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.


ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ ಹಲವಾರು ವಿಧದ ನಿಯಮಗಳನ್ನು ಅನುಸರಿಸಿಕೊಂಡು ಬರಲಾಗಿದೆ. ಮಹಿಳೆಯರು ಕೂಡ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಮುಖ್ಯವಾದದ್ದು ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗದಿರುವುದು. ಮುಟ್ಟಿನ ಸಮಯದಲ್ಲಿ, ಮಹಿಳೆಯರು ಪೂಜೆ, ದೇವಸ್ಥಾನಗಳಿಗೆ ಹೋಗುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣ ಏನು? ಎಂಬ ಡೀಟೇಲ್ಸ್ ಇಲ್ಲಿದೆ.

Latest Videos

undefined

ಮಾನಸಿಕ ದುರ್ಬಲತೆ

ಮಹಿಳೆಯರು ಋತು ಕ್ರಮದಲ್ಲಿ ಇರುವ ಸಮಯದಲ್ಲಿ ಮಾನಸಿಕವಾಗಿ ದುರ್ಬಲತೆ ಹೊಂದಿರುತ್ತಾರೆ. ಅದೇ ರೀತಿ ದೈಹಿಕ ಅಶುದ್ಧತೆ ಕಾಡುವುದರಿಂದ ಇಂತಹ ಸಮಯದಲ್ಲಿ ಮನಸ್ಸು ಬಲಹೀನವಾಗಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಸ್ತ್ರೀ ದೇವಸ್ಥಾನದ ಒಳಗೆ ಹೋಗುವುದು ಸೂಕ್ತವಲ್ಲ ಎಂದು ಹೇಳಲಾಗಿದೆ. 

Super Blue Moon 2023: ಇಂದು ಆಗಸದಲ್ಲಿ ಮೂಡಲಿದೆ ಸೂಪರ್ ಬ್ಲೂ ಮೂನ್; ಚಂದ್ರನ ಕಾಂತಿ ನಿಮ್ಮ ಮೇಲೆ ಯಾವ ಪರಿಣಾಮ ಬೀರಲಿದೆ?

 

ಮನಸ್ಸು ನಿರಾಳ ಇರಲ್ಲ

ಮಾನಸಿಕ ಮೈಲಿಗೆ ಅಂದರೆ ಮನಸ್ಸು ದೇವಾಲಯದ ಒಳಗೆ ಹೋಗಲು ಹಿಂಜರಿಯುವ ಸ್ಥಿತಿ ಇರುತ್ತದೆ ಈ ರೀತಿ ಮನಸ್ಸು ಬಲಹೀನತೆಯಲ್ಲ ಕೂಡಿರುವ ಸಮಯದಲ್ಲಿ ದ್ವಂದ್ವ ಕಾಡುತ್ತದೆ. ಮನಸ್ಸು ನಿರಾಳ ಇಲ್ಲದಿರುವ ಸಮಯದಲ್ಲಿ ಯಾವ ಕೆಲಸವೂ ಮಾಡಲು ಆಗುವುದಿಲ್ಲ. ಹಾಗಾಗಿ ಈ ವೇಳೆ ದೇವಸ್ಥಾನಗಳಿಗೆ ಹೋಗಬಾರದು ಎಂದು ಹೇಳುತ್ತಾರೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ಆಯಾಸ ಮತ್ತು ನೋವಿನಲ್ಲಿರುತ್ತಾರೆ ಎನ್ನುವ ಕಾರಣದಿಂದ ಅವರಿಗೆ ಆ ಅವಧಿಯಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಅವಕಾಶವನ್ನು ನೀಡಲಾಗಿಲ್ಲ ಅಷ್ಟೇ. ಈ ನಿಯಮದಿಂದ ಸ್ತ್ರೀ ಅವಮಾನ ಪಡಿಸಲಾಗಿದೆ ಎಂದು ಭಾವಿಸಬಾರದು. ಇದರ ವಾಸ್ತವ ಸಂಗತಿ ಅರಿತುಕೊಳ್ಳಬೇಕು.

click me!