ಕೆಲವರು ತಮ್ಮ ಮನಸ್ಸಿಗನ್ನಿಸಿದ್ದನ್ನು ಪಟಪಟನೆ ಹೇಳಿ ಹಗುರಾಗುತ್ತಾರೆ. ಮತ್ತೆ ಕೆಲವರ ಮನಸ್ಸಿನಲ್ಲೇನಾಗ್ತಿದೆ ಅನ್ನೋದು ಜಪ್ಪಯ್ಯಾ ಅಂದ್ರೂ ತಿಳಿಯೋಲ್ಲ. ಪಕ್ಕದಲ್ಲಿರುವವರಿಗೇ ತಮ್ಮ ಭಾವನೆ ತಿಳಿಯದಂತೆ ಮುಚ್ಚಿಡಬಲ್ಲ ಸಾಮರ್ಥ್ಯ ಇವರದು! ಇಂಥ ಗುಮ್ಮನ ಗುಸ್ಕಗಳು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
ಕೆಲವರು ಹಾಗೆಯೇ, ಅವರೊಂದಿಗೆ ವರ್ಷಗಟ್ಟಲೇ ಇದ್ದರೂ ಅವರ ಮನಸ್ಸಿನಲ್ಲೇನಾಗುತ್ತೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಏಕೆಂದರೆ ಭಾವನೆಗಳನ್ನು ನಿಗ್ರಹಿಸುವುದು ಹೇಗೆಂದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಭಾವನೆಗಳನ್ನು ಮುಚ್ಚಿಡುವುದು ಅವರ ದೌರ್ಬಲ್ಯವೋ, ಸಾಬಲ್ಯವೋ ಹೇಳುವುದು ಕಷ್ಟ. ಆದರೆ, ಫೀಲಿಂಗ್ಸ್ ಮುಚ್ಚಿಡೋ ಈ ವರ್ಗದವರು ಜೊತೆಗಿದ್ದವರಿಗೆ ಅವರ ಮನಸ್ಸನ್ನು ಊಹಿಸಲು ಸದಾ ಸವಾಲು ನೀಡುತ್ತಲೇ ಇರುತ್ತಾರೆ. ಭಾವನೆಗಳನ್ನು ಯಾಕೆ ಮರೆ ಮಾಚುತ್ತಾರೋ ದೇವರೇ ಬಲ್ಲ, ಆದರೆ, ಕೆಲವರಿಗೆ ಅವನ್ನು ಸಂವಹನ ರೂಪಕ್ಕೆ ತರುವುದು ಕಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಏಕೆ ಹೇಳಬೇಕು ಎಂಬ ಮೊಂಡಾಟ. ಇನ್ನೂ ಕೆಲವರು ತಮ್ಮ ಭಾವನೆಗಳು ಮತ್ತೊಬ್ಬರನ್ನು ಘಾಸಿಗೊಳಿಸಬಹುದೆಂದೋ ಅಥವಾ ಅದರಿಂದ ಯಾರಿಗೇನು ಪ್ರಯೋಜನವಿಲ್ಲವೆಂದೋ ಮನಸ್ಸನ್ನು ಮುಚ್ಚಿಡುತ್ತಾರೆ. ಹೀಗೆ ತಮ್ಮ ಭಾವನೆಗಳನ್ನು ಮರೆಮಾಚುವಲ್ಲಿ ಪರಿಣಿತರಾಗಿರುವ ಅಗ್ರ ರಾಶಿಚಕ್ರಗಳಿವು..
ವೃಷಭ ರಾಶಿ(taurus)
ಅವರು ಯಾರಾದರೂ ವ್ಯಕ್ತಿಯನ್ನು ಶೇ.100ರಷ್ಟು ನಂಬದ ಹೊರತು ತಮ್ಮ ಮನಸ್ಸನ್ನು ತೆರೆದುಕೊಳ್ಳುವುದಿಲ್ಲ. ವೃಷಭ ರಾಶಿಯವರು ಜನರನ್ನು ನಂಬುವ ಬಗ್ಗೆ ತುಂಬಾ ಸೆಪ್ಟಿಕಲ್ ಆಗಿರುತ್ತಾರೆ. ಏಕೆಂದರೆ ಅವರು ನೋಯಿಸಲು ಶಕ್ತರಾಗಿರುವುದಿಲ್ಲ ಅಥವಾ ಅವರು ಅನುಭವಿಸಿದ ನೋವಿನ ಬಗ್ಗೆ ನೆನೆದು ಸದಾ ದುಃಖಿಸುತ್ತಲೇ ಇರುತ್ತಾರೆ.
ಗೋಕುಲಾಷ್ಟಮಿ 18ಕ್ಕೋ 19ಕ್ಕೋ? ಶುಭ ಮುಹೂರ್ತ, ಪೂಜಾ ವಿಧಿ ವಿವರಗಳಿಲ್ಲಿವೆ..
ಕನ್ಯಾ ರಾಶಿ(Virgo)
ಅವರು ಇತರರ ಮುಂದೆ ತಾವೇನು ವ್ಯಕ್ತಪಡಿಸಬೇಕು ಎಂಬುದರ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ. ಅವರು ತಮ್ಮನ್ನು ತಾವು ಉಳಿಸಿಕೊಳ್ಳಲು ಬಯಸುತ್ತಾರೆ ಮತ್ತು ತಮ್ಮ ದುರ್ಬಲ ಭಾಗವನ್ನು ಯಾರಿಗೂ ತೋರಿಸುವುದಿಲ್ಲ. ಫೀಲಿಂಗ್ಸ್ ವ್ಯಕ್ತಪಡಿಸಿ ಸಣ್ಣವರಾದರೆ ಅಥವಾ ಕಳೆದುಕೊಂಡರೆ ಎಂಬ ಭಯ ಅವರನ್ನು ಕಾಡುತ್ತದೆ. ಎದೆಗುಂದುವುದಕ್ಕಿಂತ ಒಂಟಿಯಾಗಿರಲು ಬಯಸುತ್ತಾರೆ. ಅವರು ತಮ್ಮ ಭಾವನೆಗಳನ್ನು ಮರೆಮಾಚುವಲ್ಲಿ ಉತ್ತಮರು.
ತುಲಾ ರಾಶಿ(Libra)
ಅವರು ತಮ್ಮ ಭಾವನೆಗಳನ್ನು ತಮ್ಮೊಳಗೇ ತುಂಬಿಸಿಕೊಳ್ಳುತ್ತಾರೆ. ಸಂಬಂಧಗಳಲ್ಲಿ ಸರಿಯಾಗಿ ಸಂವಹನ ನಡೆಸುವ ಬದಲು ತಮ್ಮ ಮನದಾಳದ ಇಂಗಿತವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ, ಅವರು ಭಾವರಹಿತರೆನಿಸುತ್ತಾರೆ. ಅವರಿಗೆ ತಮ್ಮ ಹತ್ತಿರದವರಿಗೆ ಹೇಗೆ ಮತ್ತು ಏನನ್ನು ವ್ಯಕ್ತಪಡಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರಿಗೆ ಅಪರೂಪಕ್ಕೆ ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಬೇಕೆಂದು ಅನಿಸಬಹುದು. ಆದರೆ ಅವನ್ನು ಹೆಚ್ಚಾಗಿ ಮರೆ ಮಾಡುತ್ತಾರೆ.
ವೃಶ್ಚಿಕ ರಾಶಿ(Scorpio)
ಅತ್ಯಂತ ಸಂಕೀರ್ಣವಾದ ರಾಶಿಚಕ್ರ ಚಿಹ್ನೆಗಳಲ್ಲಿ ವೃಷಭವು ಒಂದಾಗಿದೆ. ಅವರು ಯಾರನ್ನೂ ನಂಬುವುದಿಲ್ಲ. ಮಾತ್ರವಲ್ಲದೆ ಅವರು ತಮ್ಮ ಆಲೋಚನೆಗಳನ್ನು ಬೇರೆಯವರಿಗೆ ಸುಲಭವಾಗಿ ಲೆಕ್ಕಾಚಾರ ಮಾಡಲು ಬಿಡುವುದಿಲ್ಲ. ವಿಶೇಷವಾದ ಯಾರಾದರೂ ತಮ್ಮ ಜೀವನದಲ್ಲಿ ಬರುವವರೆಗೂ ಅವರು ತಮ್ಮ ಭಾವನೆಗಳನ್ನು ಮರೆ ಮಾಡುತ್ತಾರೆ. ಪ್ರೀತಿ, ವಿಶ್ವಾಸ ಮತ್ತು ತಿಳುವಳಿಕೆಯಲ್ಲಿ ನಂಬಿಕೆ ಇಡುತ್ತಾರೆ.
Janmashtami 2022: ಸಂಪತ್ತು, ಸಮೃದ್ಧಿಗಾಗಿ ಈ ದಿನ ಮನೆಗೆ ತರಲೇಬೇಕಾದ ವಸ್ತುಗಳಿವು..
ಕುಂಭ ರಾಶಿ(Aquarius)
ಭಾವನೆಗಳು ಮತ್ತು ಸಂಬಂಧಗಳ ಬಗ್ಗೆ ಚರ್ಚೆಗಳು ಉದ್ಭವಿಸಿದಾಗ ಅವರು ತುಂಬಾ ಹೆದರುತ್ತಾರೆ. ಅವರು ತಮ್ಮ ವ್ಯಕ್ತಿತ್ವದ ಈ ಭಾಗವನ್ನು ಇತರರಿಂದ ಮರೆ ಮಾಡಲು ಬಯಸುತ್ತಾರೆ. ಯಾರಾದರೂ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರೂ, ಅವರು ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುತ್ತಾರೆ ಮತ್ತು ಬದಲಿಗೆ ಇತರ ವ್ಯಕ್ತಿಯ ಮೇಲೆ ವಿಷಯ ಕೇಂದ್ರೀಕರಿಸಲು ಪ್ರಯತ್ನಿಸುತ್ತಾರೆ.
ಈ ರಾಶಿಚಕ್ರ ಚಿಹ್ನೆಗಳು ತಮ್ಮ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುತ್ತವೆ..
ಮೇಷ, ಮಿಥುನ, ಕರ್ಕಾಟಕ, ಸಿಂಹ, ಧನು ರಾಶಿ, ಮಕರ ಮತ್ತು ಮೀನ ರಾಶಿಯವರು ತಮ್ಮ ಭಾವನೆಗಳನ್ನು ತಮ್ಮ ಆತ್ಮೀಯರಿಗೆ ಆರಾಮಾಗಿ ವ್ಯಕ್ತಪಡಿಸುತ್ತವೆ. ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಸಂವಹನ ಮಾಡದಿದ್ದರೆ, ಸಂಬಂಧಗಳು ಬಹಳಷ್ಟು ಹಾನಿಗೊಳಗಾಗುತ್ತವೆ ಎಂದು ನಂಬುತ್ತಾರೆ.