ಪ್ರವಾಸಕ್ಕೆ ಎಲ್ಲರೂ ಸೂಕ್ತ ಸಾಂಗತ್ಯ ನೀಡುವುದಿಲ್ಲ. ಕೆಲವರು ಮಾತ್ರವೇ ಹೊಸ ಸ್ಥಳ, ಜನ, ವಿಚಾರಗಳ ಆಸಕ್ತಿ ಹೊಂದಿರುತ್ತಾರೆ ಹಾಗೂ ಉತ್ಸಾಹದಿಂದ ಪ್ರವಾಸ ಕೈಗೊಳ್ಳುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತ, ಪ್ರವಾಸವನ್ನು ವಿನೋದಮಯ ಸಮಯವನ್ನಾಗಿ ಪರಿವರ್ತಿಸುವ ಗುಣವನ್ನು ಈ ನಾಲ್ಕು ರಾಶಿಗಳಲ್ಲಿ ಕಾಣಬಹುದು.
ಹೊಸ ವಿಷಯ, ಜನರನ್ನು ಅರಿತುಕೊಳ್ಳಲು ಪ್ರವಾಸದಷ್ಟು ಅತ್ಯುತ್ತಮ ಮಾರ್ಗ ಬೇರೊಂದಿಲ್ಲ. ಪ್ರವಾಸ ಹೋಗುವುದು ಬಹಳಷ್ಟು ಜನರಿಗೆ ಇಷ್ಟದ ಕೆಲಸ. ಮತ್ತಷ್ಟು ಜನರಿಗೆ ಅದು ಬೋರಿನ ಸಂಗತಿ. ಇನ್ನು ಕೆಲವರಿಗೆ ಪ್ರವಾಸಕ್ಕೆ ಸರಿಯಾದ ಜತೆಗಾರರು ಬೇಕು. ಯಾರೊಂದಿಗಾದರೂ ಪ್ರವಾಸಕ್ಕೆ ತೆರಳಲು ಅವರಿಂದ ಸಾಧ್ಯವಿಲ್ಲ. ಸೂಕ್ತವಾದ ಜತೆಗಾರರಿದ್ದಾಗ ಪ್ರವಾಸದ ಖುಷಿ ಮತ್ತೊಂದು ಮಜಲಿಗೆ ತಲುಪುವುದು ನಿಜ. ಸರಿಯಾದ ಸಂಗಾತಿಗಳಿದ್ದಾಗಲೇ ಪ್ರವಾಸ ಹೆಚ್ಚು ಉತ್ಸಾಹಪೂರ್ಣ, ಆಸಕ್ತಿಕರ ಹಾಗೂ ಮೋಜಿನಿಂದ ಕೂಡಿರುತ್ತದೆ. ಆದರೆ, ಎಲ್ಲರೂ ಪ್ರವಾಸಕ್ಕೆ ಒಳ್ಳೆಯ ಜೊತೆ ನೀಡಲಾರರು. ಎಲ್ಲರಿಗೂ ಪ್ರವಾಸಕ್ಕೆ ಹೋದಾಗ ಹೊಸ ಪ್ರದೇಶ, ಜನರನ್ನು ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಕೆಲವು ರಾಶಿಗಳ ಜನ ಮಾತ್ರ ಪ್ರವಾಸಕ್ಕೆ ಅತ್ಯಂತ ಸೂಕ್ತವಾದ ಸಂಗಾತಿಗಳಾಗಬಲ್ಲರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳ ಜನರು ಪ್ರವಾಸಕ್ಕೆ ಅತ್ಯಂತ ಯೋಗ್ಯರಾಗಿರುತ್ತಾರೆ. ಅವರಲ್ಲಿ ಅದಮ್ಯ ಉತ್ಸಾಹ, ಒಂದು ರೀತಿಯ ಪ್ರವಾಸದ ಹುಚ್ಚುತನ ಇರುತ್ತದೆ. ಅವರ ಪಸ್ಥಿತಿಯಿಂದಾಗಿ ನಿಮ್ಮ ಪ್ರವಾಸ ಹೆಚ್ಚು ಉಲ್ಲಾಸದಾಯಕವಾಗಿರಲು ಸಹಾಯವಾಗುತ್ತದೆ. ಆ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.
• ಮಿಥುನ (Gemini)
ಪ್ರವಾಸಕ್ಕೆ (Travel) ಅತ್ಯಂತ ಯೋಗ್ಯ ಜನರೆಂದರೆ ಮಿಥುನ ರಾಶಿಯವರು. ಮಿಥುನ ರಾಶಿಯವರು ಪ್ರವಾಸದ ಕ್ಷಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ (Enjoy) ಮಾಡಲು ಇಷ್ಟಪಡುತ್ತಾರೆ. ಹೊಸ ಜಾಗ (Place), ಹೊಸ ಜನ (New People), ಹೊಸ ಸಂಸ್ಕೃತಿ, ಆಹಾರ-ವಿಹಾರಗಳ (Food) ಕುರಿತು ಆಸಕ್ತಿ ಹೊಂದಿರುತ್ತಾರೆ. ಪ್ರವಾಸದ ಸಮಯದುದ್ದಕ್ಕೂ ಹೊಸತನ್ನು ಆವಿಷ್ಕರಿಸಲು ಇಷ್ಟಪಡುತ್ತಾರೆ. ಹಾಗೆಯೇ, ಒಳ್ಳೆಯ ಮಾತುಗಾರರೂ ಆಗಿರುವ ಇವರಿಂದಾಗಿ ಪ್ರವಾಸ ವಿನೋದದಿಂದ ಕೂಡಿರುತ್ತದೆ. ಇವರ ದೊಡ್ಡ ಗುಣವೆಂದರೆ, ಯಾವುದೇ ರಾಶಿಯ ಜನರೊಂದಿಗೆ ಸೇರಬಲ್ಲರು. ಸಾಹಸಿ ಕ್ರೀಡೆ (Sports) ಮತ್ತು ಆಟಗಳಲ್ಲಿ ಜತೆ ನೀಡಬಲ್ಲರು. ಹೀಗಾಗಿ, ಎಲ್ಲರೂ ಇವರನ್ನು ಇಷ್ಟಪಡುತ್ತಾರೆ.
• ಮೇಷ (Aries)
ಮೇಷ ರಾಶಿಯ ಜನ ಸಾಹಸಮಯ (Adventurous) ಕೃತ್ಯಗಳಲ್ಲಿ ಭಾಗಿಯಾಗಲು ಬಯಸುತ್ತಾರೆ. ಹೀಗಾಗಿ, ಪ್ರವಾಸಕ್ಕೆ ಇವರು ಅತ್ಯಂತ ಸೂಕ್ತ ವ್ಯಕ್ತಿ ಆಗಬಲ್ಲರು. ಇವರು ಯೋಜನಾಬದ್ಧವಾಗಿ (Plan) ಪ್ರವಾಸದ ರೂಪುರೇಷೆ ರೂಪಿಸುತ್ತಾರೆ. ಪ್ರವಾಸಿ ಸ್ಥಳದಲ್ಲಿರುವ ಎಲ್ಲವನ್ನೂ ಅರಿತುಕೊಳ್ಳಲು ಮುಕ್ತರಾಗಿರುತ್ತಾರೆ. ಒಂದೊಮ್ಮೆ ಪ್ರವಾಸದ ಅವಧಿಯನ್ನು ವಿಸ್ತರಣೆ ಮಾಡಬೇಕಾಗಿ ಬಂದರೂ ಇವರು ಇಲ್ಲ ಎನ್ನುವುದಿಲ್ಲ. ಇವರ ಮುಖ್ಯ ಗುರಿ ಎಂದರೆ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡುವುದಾಗಿರುತ್ತದೆ.
Color Astro: ವೃಷಭ ರಾಶಿಯವರು ಈ ಬಣ್ಣ ಬಳಸಿದ್ರೆ ವೈಫಲ್ಯ ಗ್ಯಾರಂಟಿ..
• ಕರ್ಕಾಟಕ (Cancer)
ಈ ರಾಶಿಯ ಜನ ಪ್ರವಾಸದಲ್ಲಿ ಸಿಕ್ಕಾಪಟ್ಟೆ ಥ್ರಿಲ್ (Thrill) ಬಯಸುತ್ತಾರೆ. ಜೀವನಪೂರ್ತಿ ಮರೆಯಲಾಗದಷ್ಟು ಗಾಢವಾದ, ವಿಶೇಷವಾದ ಅನುಭೂತಿ ಪಡೆಯಲು ಇಷ್ಟಪಡುತ್ತಾರೆ. ಹೀಗಾಗಿ, ಇವರಿಗೆ ಪ್ರವಾಸದ ಸಂದರ್ಭ ಸುಸ್ತೆನ್ನುವುದು ಆಗುವುದೇ ಇಲ್ಲ. ಹೊಸ ವಿಷಯ, ಜನರನ್ನು ಅರಿತುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಸುಂದರವಾದ ಸ್ಥಳಗಳನ್ನು ಅನ್ವೇಷಣೆ ಮಾಡುವುದೆಂದರೆ ಇವರಿಗೆ ಭಾರೀ ಇಷ್ಟ. ಸಾಂಪ್ರದಾಯಿಕ ಪರಂಪರೆ, ರೂಢಿ, ಹಬ್ಬಗಳು, ಆಹಾರಗಳನ್ನೂ ಇಷ್ಟಪಡುತ್ತಾರೆ. ತಮ್ಮ ಪ್ರವಾಸಿ ಸಂಗಾತಿಗಳೊಂದಿಗೆ ಚೆನ್ನಾಗಿ ಸಂವಹನ ಮಾಡುತ್ತಾರೆ. ಅವರ ಮಾತುಗಳು ಮಾಹಿತಿಪೂರ್ಣವಾಗಿಯೂ, ವಿನೋದದಿಂದಲೂ (Laugh) ಕೂಡಿರುತ್ತವೆ. ಹೀಗಾಗಿ, ಜತೆಗಾರರಿಗೆ ಇವರ ಸಾಂಗತ್ಯ ಬೋರಾಗುವುದಿಲ್ಲ.
• ಧನು (Sagittarius)
ಸಾಹಸಮಯ ಪ್ರವಾಸಗಳನ್ನು ಕೈಗೊಳ್ಳುವುದೆಂದರೆ ಧನು ರಾಶಿಯವರಿಗೆ ಎಂದಿಗೂ ಇಷ್ಟವಾದ ಕಾರ್ಯ. ಇದ್ದಕ್ಕಿದ್ದ ಹಾಗೆ ಪ್ರಯಾಣಕ್ಕೆ ಹೊರಟು ನಿಂತುಬಿಡುತ್ತಾರೆ. ಹೆಚ್ಚು ಯೋಚಿಸದೆ ಪ್ರಯಾಣದ ನೇತೃತ್ವ ವಹಿಸಬಲ್ಲರು. ಇವರ ವಿನೋದದ ಗುಣದಿಂದಾಗಿ ಪ್ರಯಾಣ ಬೇಸರವಾಗುವುದಿಲ್ಲ. ಇಡೀ ಪ್ರವಾಸವನ್ನು ಲೈವ್ಲಿ (Lively) ಆಗಿಡುತ್ತಾರೆ. ನಗುನಗುತ್ತಿರುವುದು ಇವರ ಸಾಂಗತ್ಯದ ಪ್ರಮುಖ ಪರಿಣಾಮವಾಗಿರುತ್ತದೆ. ಧನು ರಾಶಿಯ ಜನ ಸುಂದರವಾದ ನೈಸರ್ಗಿಕ ಸ್ಥಳಗಳು (Nature), ಹೂವು, ಪ್ರಾಣಿ-ಪಕ್ಷಿಗಳ ಮಧ್ಯೆ ಜಗತ್ತನ್ನೇ ಮರೆಯಬಲ್ಲರು. ಇವರಿಗೆ ಗ್ಯಾಜೆಟ್, ಮೊಬೈಲ್ ಬೇಕೆನಿಸುವುದಿಲ್ಲ. ಯಾರೊಂದಿಗಾದರೂ ಹೊಂದಿಕೊಳ್ಳುವ ಗುಣ ಹೊಂದಿದ್ದು, ಪ್ರವಾಸದಲ್ಲಿ ಸೂಕ್ತ ಜತೆ (Best Companion)ಯಾಗುತ್ತಾರೆ.
Dog Astrology: ನಾಯಿಗೆ ಬ್ರೆಡ್ ನೀಡಿದ್ರೆ 3 ಗ್ರಹಗಳ ಕಾಟದಿಂದ ಮುಕ್ತಿ!