Zodiac Signs: ಈ ರಾಶಿಗಳ ಮಕ್ಕಳಿಗೆ ಅಪ್ಪ ಅಂದ್ರೆ ಸ್ಟ್ರಾಂಗೆಸ್ಟ್‌ ಮ್ಯಾನ್

By Suvarna NewsFirst Published Jul 29, 2022, 6:49 PM IST
Highlights

ಧನು ರಾಶಿಗಳ ಹೆಣ್ಣುಮಕ್ಕಳಿಗೆ ತಂದೆಯ ಅಭಿಪ್ರಾಯವೇ ಅಂತಿಮ. ಕನ್ಯಾ ರಾಶಿಯವರಿಗೆ ತಂದೆಯಷ್ಟು ಬಲಶಾಲಿ ಯಾರೂ ಇಲ್ಲ. ಮೀನ ರಾಶಿಯವರು ಬೇರೆ ಯಾರನ್ನೂ ಗೌರವಿಸದಿದ್ದರೂ ತಂದೆಗೆ ಮಾತ್ರ ವಿಶೇಷ ಬೆಲೆ ನೀಡುತ್ತಾರೆ. 
 

ಪಾಲಕರನ್ನು ಪ್ರೀತಿಸದ, ಗೌರವಿಸದ ಮಕ್ಕಳು ಇರಲಿಕ್ಕಿಲ್ಲ. ಎಲ್ಲರಿಗೂ ಪಾಲಕರೆಂದರೆ ಅಚ್ಚುಮೆಚ್ಚು. ಆದರೆ, ಕೆಲವು ಮಕ್ಕಳು ನಿರ್ದಿಷ್ಟವಾಗಿ ತಂದೆಯೊಂದಿಗೋ ತಾಯಿಯೊಂದಿಗೋ ಹೆಚ್ಚು ನಿಕಟವಾದ ಬಾಂಧವ್ಯ ಹೊಂದಿರುತ್ತಾರೆ. ತಂದೆ-ತಾಯಿಯ ಕುರಿತು ಸಮಾನ ಗೌರವ, ಪ್ರೀತಿ ಇದ್ದರೂ ಅವರಲ್ಲೇ ಯಾರೋ ಒಬ್ಬರ ಬಗ್ಗೆ ಅವರಿಗೆ ವಿಶೇಷವಾದ ಮನ್ನಣೆ ಇರುತ್ತದೆ. ಇದು ಸಾಮಾಜಿಕ ಕಟ್ಟಳೆ ಅಥವಾ ಕುಟುಂಬದ ಪದ್ಧತಿಗಳಿಂದ ರೂಪುಗೊಂಡಿರುವುದಲ್ಲ. ಬದಲಿಗೆ ಅವರವರ ಮನೋಸ್ಥಿತಿ ಇದನ್ನು ನಿರ್ಧರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮನೋಸ್ಥಿತಿ ರೂಪುಗೊಳ್ಳುವುದು ಅವರವರ ರಾಶಿಗಳನ್ನು ಅವಲಂಬಿಸಿ. ಅಂದರೆ, ಕೆಲವು ರಾಶಿಗಳ ಜನ ತಮ್ಮ ಅಮ್ಮ ಅಥವಾ ಅಪ್ಪನೊಂದಿಗೆ ಹೆಚ್ಚು ಬಾಂಧವ್ಯ ಹೊಂದಿರುತ್ತಾರೆ. ತಂದೆಯೊಂದಿಗೆ ಕೆಲವು ರಾಶಿಗಳ ಜನ ಹೆಚ್ಚು ಆಪ್ತತೆ ಹೊಂದಿದ್ದರೆ ಕೆಲವು ರಾಶಿಗಳ ಮಕ್ಕಳು ತಾಯಿಯೊಂದಿಗೆ ಅಂತಹ ನಿಕಟತೆ ಹೊಂದಿರುತ್ತಾರೆ. ಕುಂಭ, ಧನು ಸೇರಿದಂತೆ ನಾಲ್ಕು ರಾಶಿಗಳ ಜನ ತಮ್ಮ ತಂದೆಯ ಜತೆ ಹೆಚ್ಚು ಆಪ್ತ ಸಂಬಂಧ ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅವರು ತಮ್ಮ ಜೀವನದ ಬಹುಮುಖ್ಯ ನಿರ್ಧಾರ ಕೈಗೊಳ್ಳುವ ಸಮಯದಲ್ಲೂ ತಂದೆಯ ಪ್ರಭಾವದಿಂದಲೇ ಮಾಡುತ್ತಾರೆ. 

•    ಧನು ರಾಶಿ (Sagittarius)
ಧನು ರಾಶಿಯ ಜನ ಉತ್ಸಾಹ (Enthusiasm) ಹೊಂದಿರುವ ಅಗ್ನಿ (Fire) ತತ್ವಕ್ಕೆ ಸೇರಿದವರು. ಧನು ರಾಶಿಯವರು ತಮ್ಮ ಬಾಲ್ಯಕಾಲದಲ್ಲಿ ಸರಿಯಾದ ಮಾರ್ಗದರ್ಶಕರಿಗಾಗಿ (Mentor) ಹುಡುಕಾಟ ನಡೆಸುತ್ತಾರೆ. ತಮ್ಮ ಸುತ್ತಲಿನವರನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಬಹಳಷ್ಟು ಸಮಯದಲ್ಲಿ ಅವರು ತಮ್ಮ ಹುಡುಕಾಟವನ್ನು ತಂದೆಯಲ್ಲಿ ಕೊನೆಗೊಳಿಸುತ್ತಾರೆ. ಅಂದರೆ, ತಂದೆಯ (Father) ಪ್ರಭಾವ ಇವರ ಮೇಲೆ ಅಧಿಕವಾಗಿ ಇರುತ್ತದೆ. ಹರೆಯದ ದಿನಗಳಲ್ಲೂ ತಂದೆಯ ಸಲಹೆಗಳನ್ನು ನಿರೀಕ್ಷಿಸುತ್ತಾರೆ. ಬೇರೆ ಯಾವುದೇ ರಾಶಿಯ ಮಗ (Son) ಅಥವಾ ಮಗಳು (Daughter) ಹೊಂದಿರದ ನಿಕಟತೆಯನ್ನು ಇವರು ತಮ್ಮ ತಂದೆಯೊಂದಿಗೆ ಹೊಂದಿರುತ್ತಾರೆ. ಧನು ರಾಶಿಯ ಹೆಣ್ಣುಮಕ್ಕಳಿಗೆ ತಂದೆಯೆಂದರೆ ಭಾರೀ ಅಚ್ಚುಮೆಚ್ಚು. ಈ ತಂದೆ-ಮಗಳ ಜೋಡಿ ಜತೆಯಾಗಿ ಎಲ್ಲ ಕೆಲಸಗಳನ್ನೂ ಪೂರೈಸಬಲ್ಲರು. ಧನು ರಾಶಿಯ ಮಗಳೊಂದಿಗೆ ಡೇಟ್‌ ಮಾಡಲು ಇಷ್ಟಪಡುವವರು ಅವರ ತಂದೆಯನ್ನು ಮೊದಲು ಒಲಿಸಿಕೊಳ್ಳಲು ಯತ್ನಿಸಬೇಕು. ಏಕೆಂದರೆ, ತಂದೆಯ ಅಭಿಪ್ರಾಯಗಳಿಗೆ ಇವರು ಸಿಕ್ಕಾಪಟ್ಟೆ ಬೆಲೆ ನೀಡುತ್ತಾರೆ. 

ಅಮ್ಮ ಹಾಕೋ ಲಕ್ಷ್ಮಣ ರೇಖೆ ದಾಟೋರಲ್ಲ ಈ ರಾಶಿಯವರು

•    ಕನ್ಯಾ (Vigro)
ಶಾಂತವಾಗಿ (Calm), ತೃಪ್ತಿಯಿಂದ ಇರುವ ಕನ್ಯಾ ರಾಶಿಯವರು ತಂದೆಯ ಮೇಲೆ ಅಪಾರವಾಗಿ ಡಿಪೆಂಡ್‌ (Depend) ಆಗಿರುತ್ತಾರೆ. ತಮ್ಮ ವಯೋಮಾನದ ಇತರ ಮಕ್ಕಳು ಸ್ವತಂತ್ರ ಮನೋಭಾವ ರೂಢಿಸಿಕೊಂಡರೂ ಇವರು ಮಾತ್ರ ತಂದೆಯ ನೆರಳಲ್ಲಿ ಇರಲು ಇಷ್ಟಪಡುತ್ತಾರೆ. ಮಧ್ಯವಯಸ್ಸಿನವರೆಗೂ ತಂದೆಯೇ ಅವರ “ಸ್ಟ್ರಾಂಗೆಸ್ಟ್‌ ಮ್ಯಾನ್‌ ಇನ್‌ ದ ವರ್ಲ್ಡ್‌ʼ. ಜೀವನದ ಪ್ರತಿಯೊಂದು ಪ್ರಮುಖ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ತಂದೆಯ ಪ್ರಭಾವ ಇದ್ದೇ ಇರುತ್ತದೆ. ಅವರ ಬೆಂಬಲ (Support) ನಿರೀಕ್ಷಿಸುತ್ತಾರೆ. ಒಂದೊಮ್ಮೆ ಯೌವನಾವಸ್ಥೆಯಲ್ಲೇ ತಂದೆಯನ್ನು ಕಳೆದುಕೊಂಡರೆ ಕನ್ಯಾ ರಾಶಿಯ ಮಕ್ಕಳು ತೀವ್ರವಾಗಿ ಬಾಧಿತರಾಗುತ್ತಾರೆ ಹಾಗೂ ಈ ನೋವಿನಿಂದ ಸಂಪೂರ್ಣವಾಗಿ ಎಂದಿಗೂ ಹೊರಬರುವುದಿಲ್ಲ.

•    ಕುಂಭ ರಾಶಿ (Aquarius)
ವಾಯು (Air) ತತ್ವದ ಈ ರಾಶಿಯ ಜನ ತಂದೆಗೆ ನೀಡುವ ಸ್ಥಾನಮಾನವನ್ನು ಜೀವನದಲ್ಲಿ ಬೇರೆ ಯಾರಿಗೂ ನೀಡುವುದಿಲ್ಲ. ಕುಂಭ ರಾಶಿಯವರು ತೀರ ಸೂಕ್ಷ್ಮ ಸ್ವಭಾವ ಹೊಂದಿರುವುದಿಲ್ಲ. ಹಾಗೆಯೇ, ಯಾರೊಂದಿಗೂ ಅತಿಯಾದ ನಂಟನ್ನೂ ಹೊಂದಿರುವುದಿಲ್ಲ. ಆದರೆ, ಇವರ ಹೃದಯದಲ್ಲಿ ತಂದೆಗೆ ವಿಶೇಷ ಸ್ಥಾನ ಇರುತ್ತದೆ. ಇಂತಹ ವಿಶೇಷ ಪ್ರೀತಿಯೇ ತಂದೆಯೊಂದಿಗೆ ಮುನಿಸು ಮಾಡಿಕೊಳ್ಳಲು ಕಾರಣವಾಗುತ್ತದೆ. ನಿಮಗೆ ಅಚ್ಚರಿಯಾಗಬಹುದು, ಕುಂಭ ರಾಶಿಯವರು ತಂದೆಯೊಂದಿಗೆ ಹೆಚ್ಚು ಜಗಳ ಮಾಡಿಕೊಳ್ಳುತ್ತಾರೆ. ತಂದೆಯಿಂದ ನೋವನ್ನು ಅನುಭವಿಸುತ್ತಾರೆ. ವೈವಾಹಿಕ ವಿಚಾರಕ್ಕೆ ಸಂಬಂಧಿಸಿ ತಂದೆಯೊಂದಿಗೆ ಮನಸ್ತಾಪ ಮಾಡಿಕೊಳ್ಳುತ್ತಾರೆ. 

ಈ ರಾಶಿಯ ಪುರುಷರಿಗೆ ಮಕ್ಕಳ ಭವಿಷ್ಯದ್ದೇ ಚಿಂತೆ

click me!