ದಾವಣಗೆರೆಯಲ್ಲಿ ಐತಿಹಾಸಿಕ ಸಿದ್ದರಾಮೇಶ್ವರ ರಥೋತ್ಸವ

By Ravi NayakFirst Published Jul 29, 2022, 5:43 PM IST
Highlights

ದಾವಣಗೆರೆಯಲ್ಲಿ ಆಗಸ್ಟ್ 1 ರಂದು 60 ನೇ  ಸಿದ್ದರಾಮೇಶ್ವರ ರಥೋತ್ಸವನ್ನು  ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಿದ್ದರಾಮೇಶ್ವರ ದೇವರ ರಥ ವಜ್ರ ಮಹೋತ್ಸವದಲ್ಲಿ ಚಿತ್ರದುರ್ಗ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಶ್ರೀಗಳು ಸಾನಿಧ್ಯವಹಿಸಿದ್ದಾರೆ.

ವರದಿ: ವರದರಾಜ್ ಏಷಿಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜುಲೈ29) :  ಆಗಸ್ಟ್ 1 ರಂದು 60 ನೇ  ಸಿದ್ದರಾಮೇಶ್ವರ ರಥೋತ್ಸವನ್ನು  ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಿದ್ದರಾಮೇಶ್ವರ ದೇವರ ರಥ ವಜ್ರ ಮಹೋತ್ಸವ ಶೀರ್ಷಿಕೆಯಲ್ಲಿ ರಥೋತ್ಸವ ನಡೆಯುತ್ತಿದ್ದು ಚಿತ್ರದುರ್ಗ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಶ್ರೀಗಳು ಸಾನಿಧ್ಯವಹಿಸಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಇಮ್ಮಡಿ ಸಿದ್ದರಾಮ ಶ್ರೀಗಳು ರಥೋತ್ಸವ ರೂಪುರೇಷ ಹೀಗಿರುತ್ತದೆ ಎಂದಿದ್ದಾರೆ.  ಲಿಂಗೈಕ್ಯ ಸಿದ್ದರಾಮೇಶ್ವರ ಸ್ವಾಮೀಜಿಗಳು ಸಿದ್ದರಾಮೇಶ್ವರ ಜಯಂತಿ ಪ್ರಾರಂಭ ಮಾಡಿದರು. ಧಾರ್ಮಿಕ ಕಾರ್ಯಕ್ರಮದಡಿ ಸಮಾಜ ಸಂಘಟನೆ ಉದ್ದೇಶ ನಮ್ಮದಾಗಿದ್ದು  ಕನಿಷ್ಠ 60 ಸಾವಿರದಿಂದ 1 ಲಕ್ಷ  ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

Latest Videos

Davanagere: ಹೊಲದಲ್ಲಿ ಉಳುಮೆ ಮಾಡಿದ ಶ್ವಾಸಗುರು ವಚನಾನಂದ ಶ್ರೀ
 
ಸುಮಾರು 10 ಸಾವಿರ ಮಹಿಳೆಯರಿಂದ ಕುಂಭಮೇಳವಿದ್ದು  25 ಸಾವಿರ ಮಹಿಳೆಯರಿಂದ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.  100 ಕ್ಕು ಹೆಚ್ಚು  ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.  ಮೂಢನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಸಿದ್ದರಾಮೇಶ್ವರ ವಚನವನ್ನು ಇಲ್ಲಿ ಭಿತ್ತಲಾಗುತ್ತದೆ.ಅನುಭವ ಮಂಟಪದಲ್ಲಿ ಜಾತಿ ತಾರತಮ್ಯವಿಲ್ಲದೇ ಸೇರುತ್ತಿದ್ದವರ ಶರಣ ಸಂಗಮದ ರೀತಿ 60 ಸಮುದಾಯದ ಶರಣರ ಭಾವಚಿತ್ರಗಳನ್ನು ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತಿದೆ.

ಸಿದ್ಧರಾಮೇಶ್ವರ ದೇವರ ಬೆಳ್ಳಿ ಮೂರ್ತಿಯ ರಥೋತ್ಸವ, ಲಿಂಗಕೈ ಸಿದ್ದರಾಮೇಶ್ವರ ಶ್ರೀಗಳ ಅಂಬಾರಿ ಉತ್ಸವ, ಗಜದಳ ಅಶ್ವದಳ  ಉಷ್ಟ್ರ ದಳ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ.    ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ,  ಮಧ್ಯಪ್ರದೇಶ, ಹರಿಯಾಣ, ಮೇಘಾಲಯ, ಪಂಜಾಬ್‌, ಗುಜರಾತ, ಪಾಂಡಿಚೇರಿ ಸುಮಾರು 20 ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ಭಾಗವಹಿಸಲಿವೆ. 

ಉಜ್ಜೈನಿ ಪೀಠದಲ್ಲೊಂದು  ವಿಶಿಷ್ಟ ಆಚರಣೆ, ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ ಎಣ್ಣೆ!

ಈ ಸಮಾರಂಭದಲ್ಲಿ ಚಿತ್ರದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಹಿಂದುಳಿದ ದಲಿತ  ಒಕ್ಕೂಟದ ಅಧ್ಯಕ್ಷರಾದ ಕನಕಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕುಂಚಿಟಿಗೆ ಗುರುಪೀಠದ, ಡಾ.ಶಾಂತವೀರ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ  ಚೆನ್ನಯ್ಯ  ಸ್ವಾಮೀಜಿಯವರು ಸೇರಿದಂತೆ 100ಕ್ಕೂ ಹೆಚ್ಚು ಮಠಾಧಿಪತಿಗಳು ಸಾನಿಧ್ಯವಹಿಸಿದ್ದಾರೆ.

ರಥೋತ್ಸವವನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಮಾಲೆ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು 50 ಶರಣರ ಸ್ತಬ್ದ ಚಿತ್ರಗಳ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಭೋವಿ ಸಮಾಜದ, ಶಾಸಕರಾದ ಮಹಾಶಿವರದ ಅರವಿಂದ ಲಿಂಬಾವಳಿ, ಹೊಳಲ್ಕೆರೆಯ ಎಂ ಚಂದ್ರಪ್ಪ, ಹೊಸದುರ್ಗದ ಗೂಳಿಹಟ್ಟಿ ಡಿ.ಶೇಖರ್, ಪಾವಗಡದ ವೆಂಕಟರಮಣಪ್ಪ, ಪುಲಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ ಭಾಗವಹಿಸಲಿದ್ದಾರೆ.  

ಮಾಜಿ ಸಚಿವರಾದ ಶಿವರಾಜ್‌ ತಂಗಡಗಿ(Shivaraj Tangadagi), ನಾರಾಯಣಸ್ವಾಮಿ(Narayan swami), ವೆಂಕಟಸ್ವಾಮಿ(Venkataswami), ಬಾಳಸಾಹೇಬ ವಡ್ಡರ,(balasaheb vaddar) ಇನ್ನಿತರ ಹಾಲಿ ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಹಾವೇರಿ ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಾಗೂ ಭೋವಿ ಸಮಾಜದ ಹಿರಿಯ ಕಿರಿಯ ಜನಪ್ರತಿನಿಧಿಗಳು, ರಾಜಕೀಯ ಧುರೀಣರು, ಐಎಎಸ್ ಕೆ.ಎ.ಎಸ್‌ ಸೇರಿದಂತೆ ನೌಕರ ವರ್ಗದವರು ಹಾಗೂ ನಾನಾ ರಾಜ್ಯದ ಸಂಘಟನೆಗಳು, ರಾಷ್ಟ್ರೀಯ ಸಂಘಟನೆ ಮುಖಂಡರು  ಬರುವ  ನಿರೀಕ್ಷೆ ಇದೆ.

click me!