ಪ್ರತಿಯೊಬ್ಬ ವ್ಯಕ್ತಿಯನ್ನೂ ಆತನ ಜೀವಿತಕಾಲದಲ್ಲಿ ಶನಿಯು ಎರಡು ಬಾರಿ ಅಥವಾ ಮೂರು ಬಾರಿ ಸಾಡೇಸಾತ್ ರೂಪದಲ್ಲಿ ಕಾಡಬಹುದು. ಇದಲ್ಲದೆ ಆತ ಜನ್ಮಜಾತಕನ ಮನೆಯಿಂದ ಒಂದನೇ, ಎರಡನೇ, ಮೂರನೇ- ಹೀಗೆ ಯಾವ ಮನೆಯಲ್ಲಿದ್ದರೂ ಪಂಚನಮ, ಅಷ್ಟಮ, ಸಪ್ತಮ ಹೀಗೆ ಕಾಡಬಹುದು. ಇದನ್ನು ಕಾಟವೆನ್ನಬಾರದು.
ಶನಿಯು ನಮಗೆ ದೈವದ ಬಗ್ಗೆ ನಂಬಿಕೆ, ಅಧ್ಯಾತ್ಮದ ಬಗ್ಗೆ ಒಲವನ್ನು ಮೂಡಿಸಲೆಂದೇ ತೊಂದರೆಯನ್ನು ಕೊಡುತ್ತಾನೆ. ಹಾಗೆಯೇ ಭಾಗ್ಯವನ್ನೂ ನೀಡುತ್ತಾನೆ. ಅನೇಕರು ಶನಿಯನ್ನು ಕಾಟ ಕೊಡುವವನು ಎನ್ನುತ್ತಾರೆ. ಆದರೆ ಆತ ನೀಡುವ ಭಾಗ್ಯವನ್ನು ಉಲ್ಲೇಖಿಸುವುದೇ ಇಲ್ಲ.
ಮನೆ ಮುಂದೆ ನಿಂಬೆ- ಮೆಣಸು ಕಟ್ಟುವುದು ಏಕೆ ಗೊತ್ತಾ?
ಯಾವುದೇ ರಾಶಿಗೆ ಶನಿಗ್ರಹವು ಗೋಚರದಲ್ಲಿ ರಾಶಿಯಿಂದ 12ನೇ ಮನೆಯಲ್ಲಿ ಹಾಗೂ ಅದೇ ರಾಶಿಯ ಜನ್ಮಸ್ಥಾನದಲ್ಲಿ ರಾಶಿಯಿಂದ 2ನೇ ಮನೆಯಲ್ಲಿ ಸಂಚರಿಸುವುದಕ್ಕೆ ಶನಿ ಗ್ರಹಚಾರ ಎನ್ನುವರು. ಪ್ರತಿ ರಾಶಿಯಲ್ಲಿ ಎರಡು ವರ್ಷ ಆರು ತಿಂಗಳು ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಾನೆ. ತನ್ನ ರಾಶಿಯಲ್ಲಿ ಆತ ಎರಡೂವರೆ ವರ್ಷವಿದ್ದಾಗ ಸಾಡೇಸಾತ್ ಅಥವಾ ಶನಿಕಾಟ ಎನ್ನುವರು. ಜೀವಿತಾವಧಿಯಲ್ಲಿ ಮೂರು ಅಥವಾ ನಾಲ್ಕು ಬಾರಿ ಸಾಡೇಸಾತ್ ಕಾಟವಿರುತ್ತದೆ. ಕೊನೆಯಲ್ಲಿ ಬಿಟ್ಟು ಹೋಗುವಾಗ ಶನಿ ದೇವನು ರಾಜಯೋಗ ಕೊಟ್ಟು ಹೋಗುವನು.
ಹಾಗಾದರೆ ಶನಿದೇವರು ಹೆಚ್ಚಿನ ತೊಂದರೆಯನ್ನು ಕೊಡದೆ, ಭಾಗ್ಯವನ್ನೇ ಎಚ್ಚಾಗಿ ಕೊಡುವಂತೆ ಮಾಡಬೇಕಿದ್ದರೆ ಏನು ಮಾಡಬೇಕು?
- ಪ್ರತಿ ಶನಿವಾರ ಕೋತಿಗಳಿಗೆ ಬಾಳೆಹಣ್ಣು ಹಾಗೂ ನಾಯಿಗಳಿಗೆ ಸಿಹಿ ಪದಾರ್ಥ ನೀಡಬೇಕು.
- ಆಲದ ಮರದ ಬುಡದಲ್ಲಿ ಎಳ್ಳೆಣ್ಣೆ ದೀಪವನ್ನು ಪ್ರತಿ ಶನಿವಾರ ಹಚ್ಚಬೇಕು.
- ಶ್ರೀ ಆಂಜನೇಯ ದೇವಸ್ಥಾನಕ್ಕೆ ಅಥವಾ ಶನಿ ದೇವರ ದೇವಸ್ಥಾನಕ್ಕೆ ಪ್ರತಿ ಶನಿವಾರ ಕರಿ ಎಳ್ಳು, ಕರಿ ದಾರ ಹಾಗೂ ಕರಿ ಬಟ್ಟೆಯಿಂದ ಎಳ್ಳುಗಂಟು ಅಥವಾ ಎಳ್ಳು ದೀಪ ಮಾಡಿ ಎಳ್ಳೆಣ್ಣೆಯಲ್ಲಿ ಅದ್ದಿ ಮೂರು ದೀಪ ಹಚ್ಚಬೇಕು.
- ಸಾಡೇಸಾತ್ ಶುರುವಾದಾಗ ಯಾವುದಾದರೂ ಒಂದು ಅಮಾವಾಸ್ಯೆಯಂದು ಕರಿ ಎಳ್ಳು, ಕರಿ ಬಟ್ಟೆ, ಕಬ್ಬಿಣದ ಬಾಣಲೆ, ಎಳ್ಳೆಣ್ಣೆ, ಬಾಳೆಹಣ್ಣು, ವೀಳ್ಯದೆಲೆ, ಅಡಕೆ ದಕ್ಷಿಣೆ ಸಮೇತ ಪೂಜಿಸಿ ದಾನ ಕೊಡಬೇಕು.
- ಆಂಜನೇಯ ಸ್ತೋತ್ರ ಹಾಗೂ ಶನಿ ದೇವರ ಶ್ಲೋಕವನ್ನು ತಪ್ಪದೇ ಶನಿವಾರ ಇಪ್ಪತ್ತೊಂದು ಸಲ ಪಠಿಸಬೇಕು. ಸ್ನಾನದ ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡಬೇಕು.
- ಸಾಡೇಸಾತ್ ನಡೆಯುವಾಗ ವೀರ ಬಾಹುಕ ಯಂತ್ರವನ್ನು ಪೂಜಿಸಿದಲ್ಲಿ ಶನಿ ದೇವರ ಕಾಟ ಆದಷ್ಟು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
ಈ ರಾಶಿಯವರು ಕಿರಿಕ್ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!
- ಕಾಗೆಗಳಿಗೆ ಆಹಾರ ಹಾಕಿ. ಕಾಗೆಗಳು ಏನೂ ತೊಂದರೆ ಕೊಡಬೇಡಿ. ಅವು ಬಂದು ನಿಮ್ಮ ಮೇಲೆ ಉಚ್ಚಿಷ್ಟ ಹಾಕಿದರೂ ಬಯ್ಯಬೇಡಿ. ಯಾಕೆಂದರೆ ಕಾಗೆ ಶನಿದೇವರ ವಾಹನ.
- ವಾಹನಗಳನ್ನು ಚಲಾಯಿಸುವಾಗ ತುಂಬಾ ಜಾಗರೂಕತೆಯಿರಲಿ. ವಾಹನ ಎದುರು ಕರಿ ದಾರ, ನಿಂಬೆಹಣ್ಣು, ಮೆಣಸು ಕಟ್ಟಿಕೊಳ್ಳಿ.
- ಮನೆಯಲ್ಲಿ ಒಂದು ತುಳಸಿ ಕಟ್ಟೆ, ಅದರಲ್ಲಿ ಆರೋಗ್ಯಕಳೆಯಿಂದಿರುವ ತುಳಸಿಯ ಗಿಡವಿರಲಿ. ಸಂಜೆ ಒಂದು ಬಾರಿ ಶಂಖ ಊದುವ ಕ್ರಮ ರೂಢಿಸಿಕೊಳ್ಳಿ. ನಿತ್ಯ ದೇವರಿಗೆ ದೀಪ ಹಚ್ಚಿ.
- ಕಪ್ಪು ದಾರದಿಂದ ಮಾಡಿದ ತಾಯತವನ್ನು ಶನಿ ದೇವಸ್ಥಾನದಲ್ಲಿ ಅರ್ಚಕರಿಂದ ಪಡೆದು ತೋಳಿಗೆ ಕಟ್ಟಿಕೊಳ್ಳೂವುದರಿಂದಲೂ ನೆಗೆಟಿವ್ ಪ್ರಭಾವ ದೂರವಾಗುತ್ತದೆ.
- ಹೊರಗಿನಿಂದ ಮನೆಗೆ ಬಂದ ಬಳಿಕ, ಕೈಕಾಲು ತೊಳೆಯುವಾಗ ಕಾಲಿನ ಹಿಂಬದಿ ಪೂರ್ತಿ ಒದ್ದೆಯಾಗಲಿ. ಅರೆಬರೆ ಕಾಲು ತೊಳೆಯುವುದು ಒಳ್ಳೆಯದಲ್ಲ.
ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!